ನೀವು ಇದರಲ್ಲಿ ಗಮನಿಸುತ್ತಿರುವ ತೇಪೆಗಳು ಆಳವಾದ ಗುಂಡಿಗಳು, ಎತ್ತರದ ಶಿಖರಗಳು ಮತ್ತು ಬಂಡೆಗಳಾಗಿವೆ.
2. ಸೂರ್ಯನ ಭಯಾನಕ ಮುಖ!
|
halloween sun |
ಅಕ್ಟೋಬರ್ 2014ರಂದು ನಾಸಾದ(nasa) ಸೌರ ಡೈನಾಮಿಕ್ ಆಬ್ಸರ್ವೇಟರಿ ನಮ್ಮ ಸೂರ್ಯನ ಚಿತ್ರವನ್ನು ಸೆರೆ ಹಿಡಿದಾಗ, ಸೂರ್ಯ ಹ್ಯಾಲೋವೀನ್(halloween) ಆಗಲು ತಯಾರಾಗುತ್ತಿರುವಂತೆ ತೋರುತ್ತಿತ್ತು. ಇದು ಕುಂಬಳಕಾಯಿ ರೀತಿಯೂ ಕಾಣುತ್ತದೆ.
3. ಸ್ಪಾಗೆಟಿಫಿಕೇಷನ್ನಿಂದ ಸಾವು!
|
black hole |
ಕಪ್ಪು ಕುಳಿ(black holes) ಅತಿಯಾದ ಗುರುತ್ವಾಕರ್ಷಣೆ ಹೊಂದಿರುವ ವಸ್ತುವಾಗಿದ್ದು, ಯಾವುದೇ ಬೆಳಕು ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಕಾರಣದಿಂದಾಗಿ ನಾವು ಕಪ್ಪು ಕುಳಿಯನ್ನು ನೋಡಲಾಗುವುದಿಲ್ಲ. ಆದರೆ ಅವು ಸುತ್ತಲಿನ ನಕ್ಷತ್ರಗಳನ್ನು ಹೇಗೆ ಎಳೆಯುತ್ತಾವೆ ಎಂಬುದನ್ನು ನಾವು ನೋಡಬಹುದು. ನಮ್ಮ ಮಿಲ್ಕಿ ವೇ ನಕ್ಷತ್ರಪುಂಜದ(milkyway galaxy) ಮಧ್ಯದಲ್ಲೂ ಒಂದು ಕಪ್ಪು ಕುಳಿ ಇದೆ. ಸಿನಿಮಾಗಳಲ್ಲಿ ಕಪ್ಪುಕುಳಿಯನ್ನು ಮತ್ತೊಂದು ಜಗತ್ತಿಗೆ ಪ್ರವೇಶ ದ್ವಾರವಾಗಿ ತೋರಿಸುತ್ತಾರೆ. ನಿಜ ಜೀವನದಲ್ಲಿ ಅದು ಸಂಭವಿಸಬಹುದೇ? ಬಹುಶಃ ಇಲ್ಲ. ವಿಜ್ಞಾನಿಗಳು ಹೇಳುವ ಪ್ರಕಾರ ನೀವು ಕಪ್ಪು ಕುಳಿಗೆ ಹತ್ತಿರವಿದ್ದರೆ ಗುರುತ್ವಾಕರ್ಷಣೆ ತುಂಬಾ ಪ್ರಬಲವಾಗಿರುತ್ತವೆ. ಇದರಿಂದಾಗಿ ನೀವು ಉದ್ದವಾದ ತೆಳುವಾದ ನೂಡಲ್(noodles) ರೀತಿ ವಿಸ್ತರಿಸಲ್ಪಡುತ್ತೀರಿ.
4. ಚಂದ್ರನ ಮೇಲೆ ಕೊನೆಯಿಲ್ಲದ ಕತ್ತಲಿರುವ ಜಾಗ!
|
moon dark pole |
ಸೂರ್ಯನ ಬೆಳಕು ಇಲ್ಲದ ಸ್ಥಳವನ್ನು ಕಲ್ಪಿಸಿಕೊಳ್ಳಿ. ಅದರ ಒಂದು ಕಿರಣವೂ ಇಲ್ಲ. ನಮ್ಮದೇ ಸೌರ ಮಂಡಲದಲ್ಲಿ(solar system) ಅಂತ ಸ್ಥಳವಿದೆ ಎಂದು ನಿಮಗೆ ತಿಳಿದಿದೆಯೇ. ಪ್ರತಿ ತಿಂಗಳು ಭೂಮಿಯನ್ನು ಸುತ್ತುವಂತೆ ಚಂದ್ರನು ತಿರುಗುತ್ತಾನೆ. ಆದರೆ ಸಂಪೂರ್ಣ ಮೇಲ್ಮೈಯನ್ನು ಸೂರ್ಯನ ಬೆಳಕಿಗೆ ಒಡ್ಡುತ್ತಾನೆ. ಇದಾಗಿಯೂ ಚಂದ್ರನ ಧ್ರುವದ(pole) ಬಳಿ ಇರುವ ಗುಂಡಿಗಳು ಶತಕೋಟಿ ವರ್ಷಗಳಿಂದ ಸೂರ್ಯನನ್ನು ನೋಡಿಲ್ಲ. ನೀವು ಚಂದ್ರನ ಈ ಭಾಗಕ್ಕೆ ಹೋಗಲು ಬಯಸಿದರೆ ಟಾರ್ಚ್(torch) ತೆಗೆದುಕೊಂಡು ಹೋಗಲು ಮರೆಯದಿರಿ.
5. ಬೆನ್ನುಮೂಳೆಯನ್ನು ಜುಮ್ಮೆನಿಸುವ ಬಾಹ್ಯಾಕಾಶದ ಧ್ವನಿ.
|
jupiter sound |
ಬಾಹ್ಯಾಕಾಶದಲ್ಲಿ ಧ್ವನಿ ಇರುವುದಿಲ್ಲ ಅಂದರೆ ಮಾನವನ ಕಿವಿಗೆ ಬಾಹ್ಯಾಕಾಶ ತುಂಬಾ ಶಾಂತವಾದ ಸ್ಥಳವಾಗಿದೆ. ಆದರೆ ನಾವು ಇತರ ರೀತಿಯ ಅಲೆಗಳೊಂದಿಗೆ ಬಾಹ್ಯಾಕಾಶದಲ್ಲಿ ಶಕ್ತಿಯನ್ನು ಕಂಡು ಹಿಡಿಯಬಹುದು. ಕಾಸ್ಮಿಕ್(cosmic) ಘಟನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಾಸಾ ವಿಜ್ಞಾನಿಗಳು(scientists) ಶಕ್ತಿ ತರಂಗಗಳನ್ನು ಶಬ್ದ ತರಂಗಗಳ ಆಗಿ ಪರಿವರ್ತಿಸುತ್ತಾರೆ. ಉದಾಹರಣೆಗೆ ನೀವು ಈಗ ಕೇಳುವ ಧ್ವನಿ ನಾಸಾದ ಜುನೋ ಬಾಹ್ಯಾಕಾಶ ನೌಕೆ(juno spacecraft) ಗುರುಗ್ರಹದ(jupiter) ವಿಪರೀತ ಮ್ಯಾಗ್ನೆಟಿಕ್ ಕ್ಷೇತ್ರವನ್ನು ದಾಟಿದಾಗ ಕೇಳಿದ ತರಂಗವಾಗಿದೆ.
6. ಮಂಗಳ ಗ್ರಹದ 'ಜೇಡಗಳು'.
|
spiders on mars |
ಮಂಗಳ ಗ್ರಹದ ವಸಂತಕಾಲದಲ್ಲಿ ಜೇಡಗಳು ನೆಲದಿಂದ ಹೊರಹೊಮ್ಮುತ್ತವೆ. ಸರಿ, ಅವುಗಳು ನಿಜವಾಗಿಯೂ ಜೇಡಗಳಲ್ಲ. ಆದರೆ ಮೇಲಿನಿಂದ ನೋಡಿದರೆ ಆ ರೀತಿ ಕಾಣುತ್ತದೆ. ಗ್ರಹದ ಮೇಲ್ಮೈ ಗಿಂತ ಕೆಳಗಿರುವ ಹೆಪ್ಪುಗಟ್ಟಿದ ಇಂಗಾಲದ ಡೈ ಆಕ್ಸೈಡ್ ಸಾಕಷ್ಟು ಬೆಚ್ಚಗಾದ ಆಗ ಅದು ಘನ(solid)ದಿಂದ ಅನಿಲ(gas)ವಾಗುತ್ತದೆ. ಈ ಅನಿಲ ಮಂಗಳನ ಮೇಲ್ಮೈಯನ್ನು ಹೊಡೆಯುವಷ್ಟು ಒತ್ತಡವನ್ನು ನಿರ್ಮಿಸುತ್ತದೆ. ಆ ಅನಿಲ ಮೇಲ್ಮೈಯನ್ನು ಒಡೆದು ಹೊರ ಬಂದಾಗ ಅದರ ಕಪ್ಪು ಧೂಳು ಹರಡುತ್ತದೆ. ಅದು ಜೇಡದ ರೀತಿ ಕಾಣುವಂತೆ ಮಾಡುತ್ತದೆ.
7. ಮಾರಕ ಗಾಳಿ, ಕರಗಿದ ಗಾಜಿನ ಮಳೆ ಇರುವ ಗ್ರಹ.
|
hd 189733 b |
ನಮ್ಮ ಸೌರಮಂಡಲದ ಹೊರಗಿರುವ ಗ್ರಹಗಳನ್ನು ಎಕ್ಸೋಪ್ಲಾನೆಟ್(exoplanets) ಎಂದು ಕರೆಯಲಾಗುತ್ತದೆ. ಅಂತಹ ಎಕ್ಸೋಪ್ಲಾನೆಟಿನಲ್ಲಿ ಒಂದಾಗಿದೆ HD 189733 B. ಇದು ನೀಲಿ ಬಣ್ಣವನ್ನು ಹೊಂದಿದ್ದು ನಮ್ಮ ಭೂಮಿಯಂತೆ ಕಾಣುತ್ತದೆ. ಆದರೆ ಇದರ ಹವಾಮಾನವು ಭೂಮಿಯಂತೆ ಇಲ್ಲ. ಇಲ್ಲಿನ ಗಾಳಿ ಶಬ್ದದ ವೇಗಕ್ಕಿಂತ ಎಳು ಪಟ್ಟು ಹೆಚ್ಚಿನ ವೇಗದಲ್ಲಿ ಚಲಿಸುತ್ತದೆ ಮತ್ತು ಇಲ್ಲಿ ಕರಗಿದ ಗಾಜಿನ ಮಳೆಯಾಗುತ್ತದೆ. ಇದಕ್ಕಿಂತ ನಮ್ಮ ನೀಲಿ ಗ್ರಹವೇ ಆರಾಮದಾಯಕವಾಗಿದೆ.
8. ನಮ್ಮ ಸೌರಮಂಡಲದಲ್ಲಿರುವ ತಲೆಬುರುಡೆ.
|
tb145 asteroid |
2015ರಲ್ಲಿ TB145 ಎಂಬ ತಲೆಬುರುಡೆಯ ರೀತಿ ಕಾಣುವ ಕ್ಷುದ್ರಗ್ರಹ(asteroid) ಕಾಣಿಸಿತು. ವಿಜ್ಞಾನಿಗಳು ಅದು ಧೂಮಕೇತು(comet) ಸುಟ್ಟುಹೋಗುತ್ತಿರುವ ಸಾಧ್ಯತೆ ಎಂದು ಕಂಡುಕೊಂಡರು. ಆ ತಲೆಬುರುಡೆ ಆಕಾರದ ಕ್ಷುದ್ರಗ್ರಹ 200 ಮೀಟರ್ ಅಗಲವಿತು. ಅದು ದೈತ್ಯ ಮಾನವನ ತಲೆಬುರುಡೆ ಆಗಿದ್ದರೆ ಆ ವ್ಯಕ್ತಿಯು ಗಾತ್ರದಲ್ಲಿ 4.5 ಕಿ.ಮೀ. ಎತ್ತರವನ್ನು ಹೊಂದಿರುತ್ತಿದ!!
9. ಉಪಗ್ರಹದ ಅಂತ್ಯ ಈ ರೀತಿ ಇರುತ್ತದೆ.
|
satellite end |
ಭೂಮಿಯನ್ನು ಪರಿಭ್ರಮಿಸುವ ಉಪಗ್ರಹಗಳು(satellite) ಬಹಳ ಸಮಯದವರೆಗೆ ಕಾರ್ಯನಿರ್ವಹಿಸಬಹುದು. ಆದರೆ ಅವುಗಳು ತಮ್ಮ ಅಂತ್ಯವನ್ನು ತಲುಪಿದಾಗ ಎಲ್ಲಿಗೆ ಹೋಗುತ್ತವೆ. ಉಪಗ್ರಹ ತುಂಬ ಚಿಕ್ಕದಿದ್ದರೆ ಮತ್ತು ಸಾಕಷ್ಟು ಹತ್ತಿರದಲ್ಲಿದ್ದರೆ ಅವು ಭೂಮಿಯ ವಾತಾವರಣಕ್ಕೆ ಧುಮುಕುತ್ತವೆ ಮತ್ತು ಸುಟ್ಟು ಹೋಗುತ್ತವೆ. ಒಂದು ವೇಳೆ ಉಪಗ್ರಹ ಭೂಮಿಯಿಂದ ದೂರವಿದ್ದರೆ ಅದನ್ನು ಭೂಮಿಯಿಂದ ಹಲವು ಸಾವಿರ ಮೈಲಿ ದೂರದಲ್ಲಿರುವ 'ಸ್ಮಶಾನ ಕಕ್ಷೆಗೆ' ಕಳುಹಿಸಲಾಗುತ್ತದೆ. ಅಲ್ಲಿ ಉಪಗ್ರಹ ಸುಟ್ಟು ಹೋಗುವುದಿಲ್ಲ. ಆದರೆ ಕನಿಷ್ಠ ಕೆಲಸಮಾಡುವ ಉಪಗ್ರಹಗಳಿಂದ ದೂರವಿರುತ್ತದೆ.
0 Comments