Mars Mysteries | ಮಂಗಳಗ್ರಹದ ಐದು ಬಗೆಹರಿಯದ ರಹಸ್ಯಗಳು

ಸೂರ್ಯನಿಂದ ನಾಲ್ಕನೇ ಗ್ರಹವಾಗಿರುವ ಮಂಗಳ ಗ್ರಹವು ಜನಪ್ರಿಯ ಕಲ್ಪನೆ ಮತ್ತು ವೈಜ್ಞಾನಿಕ ಆಸಕ್ತಿ ಎರಡನ್ನು ದೀರ್ಘಕಾಲ ಸೆರೆಹಿಡಿದಿದೆ. ದಶಕಗಳಿಂದ ಕೆಂಪು ಗ್ರಹವನ್ನು ಅನ್ವೇಷಿಸುತ್ತಿರುವ ರೋಬೋಟ್ಗಳು ವಿಚಿತ್ರ ಪ್ರಪಂಚದ ಚಿತ್ರಗಳನ್ನು ಹಿಂತಿರುಗಿಸುತ್ತಿವೆ. ಎವರೆಸ್ಟ್ ಪರ್ವತಕ್ಕಿಂತ ಮೂರು ಪಟ್ಟು ಹೆಚ್ಚು ಎತ್ತರವಿರುವ ಪರ್ವತ ಮತ್ತು ಗ್ರ್ಯಾಂಡ್ ಕ್ಯಾನ್ಯನ್ಗಿಂತ ಐದು ಪಟ್ಟು ಉದ್ದವಿರುವ ಕಣಿವೆಗಳೊಂದಿಗೆ, ಮಂಗಳ ಗ್ರಹವು ಸಾಹಸ ಮಾಡಲು ಬಯಸುವ ಪ್ರಯಾಣಿಕರ ಸ್ವರ್ಗವಾಗಿದೆ. ನಾಲ್ಕು ದಶಕಗಳ ಪರಿಶೋಧನೆಯ ನಂತರ ಕೆಂಪು ಗ್ರಹದ ಬಗ್ಗೆ ನಮಗೆ ಸಾಕಷ್ಟು ತಿಳಿದಿದೆ. ಆದರೆ ಕೆಲವು ದೊಡ್ಡ ದೊಡ್ಡ ಪ್ರಶ್ನೆಗಳಿಗೆ ಉತ್ತರಿಸಲಾಗಿಲ್ಲ.


Watch Video


1. ಇಂದು ಮಂಗಳ ಗ್ರಹದಲ್ಲಿ ದ್ರವ ನೀರು ಹರಿಯುತ್ತದೆಯೇ?


     ಮಂಗಳನ ವಾತಾವರಣ ತಂಪಾಗಿ ಮತ್ತು ತೆಳುವಾಗಿರುವುದರಿಂದ ಮೇಲ್ಮೈಯಲ್ಲಿರುವ ದ್ರವ ನೀರು ಆವಿಯಾಗುತ್ತದೆ ಅಥವಾ ಮಣ್ಣಿನಲ್ಲಿ ಹೆಪ್ಪುಗಟ್ಟುತ್ತದೆ. ಮಂಗಳ ಗ್ರಹದ ಬಾಹ್ಯಾಕಾಶ ನೌಕೆಗಳು ನೂರಾರು ಒಣಗಿದ ನದಿ ಕಾಲುವೆಗಳು ಮತ್ತು ಕಣಿವೆಯಂತೆ ಕಾಣುವ ಫೋಟೋಗಳನ್ನು ತೆಗೆದಿದ್ದು, ಅವುಗಳಲ್ಲಿ ಹಿಂದಿನ ಕಾಲದಲ್ಲಿ ನದಿಗಳು ಹರಿಯುತ್ತಿತ್ತು ಎಂದು ತಿಳಿಸುತ್ತವೆ. ಹಾಗಾದರೆ ಎಲ್ಲ ನೀರು ಎಲ್ಲಿಗೆ ಹೋಯಿತು?


mars in kannada, water on mars in kannada, water mysteries on mars in kannada, info mind, infomindkannada


     ವಿಜ್ಞಾನಿಗಳು ಅಲ್ಲಿ ನೀರು ಭೂಗರ್ಭದಲ್ಲಿ ಹಿಮ ಅಥವಾ ಆಳವಾದ ಜಲಾಶಯಗಳಾಗಿ ಲಾಕ್ ಆಗಿರಬಹುದು ಎಂದು ಭಾವಿಸುತ್ತಾರೆ. ಪರ್ವತಗಳ ಮೇಲಿರುವ ನೀರು ಬೆಚ್ಚನೆಯ ಕಾಲದಲ್ಲಿ ತಣ್ಣಗಾಗಿ ಹರಿದು, ತಣ್ಣನೆಯ ಕಾಲದಲ್ಲಿ ಮಸುಕಾಗುತ್ತದೆ ಎಂದು ವಿಜ್ಞಾನಿಗಳು ಸಂದೇಹ ವ್ಯಕ್ತಪಡಿಸಿದ್ದಾರೆ. ಮಂಗಳ ಗ್ರಹದಲ್ಲಿ ನೀರು ಧ್ರುವ ಪ್ರದೇಶದಲ್ಲಿ ಇರಬಹುದು ಎಂದು ವಿಜ್ಞಾನಿಗಳು ಸೂಚಿಸಿದ್ದಾರೆ. ಆದರೆ ಇದು ಇನ್ನೂ ರಹಸ್ಯವಾಗಿದೆ.


2. ಮಂಗಳನ ಉತ್ತರ ಗೋಳಾರ್ಧದವು ನಯವಾಗಿದ್ದು, ದಕ್ಷಿಣ ಗೋಳಾರ್ಧದವು ಏಕೆ ಹೆಚ್ಚು ಪರ್ವತಗಳಿಂದ ಕೂಡಿದೆ?


mars in kannada, mars hemisphere mysteries in kannada, info mind, infomindkannada


     1970ರ ದಶಕದಲ್ಲಿ ನಾಸಾದ ವೈಕಿಂಗ್ ಕಾರ್ಯಾಚರಣೆಗಳು ಮಂಗಳನ ಸ್ಥಳಾಕೃತಿಯ ಮೊದಲ ಸಂಪೂರ್ಣ ಸಮೀಕ್ಷೆ ಮಾಡಿತು. ಅಂದಿನಿಂದ ಮಂಗಳನ ಎರಡು ಮುಖ ಪತ್ತೆಯಾಗಿದೆ. ಆದರೆ, ಇದು ಏಕೆ ಹೊಂದಿದೆ ಎಂಬುದರ ಬಗ್ಗೆ ವಿಜ್ಞಾನಿಗಳು ಗೊಂದಲಕ್ಕೊಳಗಾಗಿದ್ದಾರೆ. ಮಂಗಳನ ಉತ್ತರ ಗೋಳಾರ್ಧವು ಹೆಚ್ಚು ಚಪ್ಪಟೆಯಾಗಿದ್ದು, ದಕ್ಷಿಣ ಗೋಳಾರ್ಧವು ಅತೀವವಾಗಿ ಹರಡಿರುವ ಎತ್ತರದ ಪ್ರದೇಶಗಳಿಗಿಂತ ಕೆಳಮಟ್ಟದಲ್ಲಿದೆ. ಮಂಗಳನ ಮ್ಯಾಂಟಲ್ ಪದರ ಮಂಗಳನ ಮೇಲ್ಮೈಯ ಈ ಸ್ಥಿತಿಗೆ ಕಾರಣ ಎಂದು ಸಿದ್ಧಾಂತಗಳು ಸೂಚಿಸಿವೆ. ಇತರ ಅಧ್ಯಯನಗಳು 3.9 ಬಿಲಿಯನ್ ವರ್ಷಗಳ ಹಿಂದೆ ಭೂಮಿಯ ಚಂದ್ರನ ಗಾತ್ರದ ಅಷ್ಟರಯಿಡ್ ಮಂಗಳ ಗ್ರಹದ ದಕ್ಷಿಣ ಧ್ರುವಕ್ಕೆ ಅಪ್ಪಳಿಸಿದ್ದರಿಂದ ಈ ರೀತಿ ಆಗಿದೆ ಎಂದು ತಿಳಿಸುತ್ತವೆ. ಆದರು ಇದು ರಹಸ್ಯವಾಗಿಯೇ ಉಳಿದಿದೆ.


3. ಮಂಗಳ ಗ್ರಹದಲ್ಲಿ ಮೀತೇನ್ ಅನಿಲ ಉತ್ಪಾದನೆಯಾಗುತ್ತಿದೆಯೇ?


mars in kannada, mars meathen mysteries in kannada, info mind, infomindkannada, curiosity rover in kannada


     ಕಳೆದ ಕೆಲವು ವರ್ಷಗಳಲ್ಲಿ ಭೂ- ಆಧರಿತ ದೂರದರ್ಶಕಗಳು ಮತ್ತು ಮಂಗಳನನ್ನು ಸುತ್ತುತ್ತಿರುವ ಸೆಟಲೈಟ್ ಮಂಗಳನಲ್ಲಿ ಮೀಥೇನ್ ಕುರುಹುಗಳನ್ನು ಪತ್ತೆ ಮಾಡಿದೆ. ನಾಸಾದ ಕ್ಯೂರಿಯಾಸಿಟಿ ರೋವರ್ ಮಂಗಳ ಗ್ರಹದಲ್ಲಿ ಕಡಿಮೆ ಮಟ್ಟದ ಮೀತೇನ್ ಹತ್ತು ಪಟ್ಟು ಹೆಚ್ಚಾಗಿರುವುದನ್ನು ಸೂಚಿಸಿದೆ. ಭೂಮಿಯ ವಾತಾವರಣದಲ್ಲಿ ಮೀಥೇನ್ ಜೈವಿಕ ಚಟುವಟಿಕೆಗಳಿಗೆ ಪರಿಣಾಮವಾಗಿದೆ. ಆದರೆ ಮಂಗಳ ಗ್ರಹದಲ್ಲಿ ಸೂಕ್ಷ್ಮಜೀವಿಗಳು ಇದೆ ಎನ್ನಲು ಇದು ಕಠಿಣ ಸಾಕ್ಷಿಯಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕ್ಯೂರಿಯಾಸಿಟಿ ರೋವರ್ ಆ ಸ್ಥಳದಿಂದ ಈಗ ದೂರವಿದ್ದು, ಆ ಸ್ಥಳವನ್ನು ಹುಡುಕುವುದು ಸದ್ಯಕ್ಕೆ ಅಸಾಧ್ಯವೆಂದು ಹೇಳಲಾಗಿದೆ.


4. ಮಂಗಳ ಗ್ರಹದಲ್ಲಿ ಜೀವವಿದೆಯೇ?


life on mars in kannada, water on mars in kannada, ultraviolet rays in mars in kannada, info mind, infomindkannada


     ನಮಗೆ ತಿಳಿದಿರುವಂತೆ ಜೀವನದ ಮುಖ್ಯ ಘಟಕ ಅಂಶವೆಂದರೆ ದ್ರವ ನೀರು. ಮಂಗಳ ಗ್ರಹದಲ್ಲಿ ನೀರಿನ ಗುರುತುಗಳಿರುವುದರಿಂದ ಅಲ್ಲಿ ಜೀವಿಗಳನ್ನು ಕಂಡುಹಿಡಿಯುವ ಭರವಸೆ ಜೀವಂತವಾಗಿದೆ. ಆದರೆ ಮಂಗಳನ ಮೇಲ್ಮೈ ಕಠಿಣ ಸ್ಥಳವಾಗಿದ್ದು, ತಾಪಮಾನ ಬದಲಾವಣೆ ಮತ್ತು ಹಾನಿಕಾರಕ ಅಲ್ಟ್ರಾವೈಲೆಟ್ ವಿಕಿರಣದಿಂದ ಕಡಿಮೆ ರಕ್ಷಣೆಯಿದೆ. ಗೇಲ್ ಕ್ರೇಟರ್ ನಂತಹ ಒಣಗಿದ ಸರೋವರದ ಸುತ್ತಲೂ ಜೀವನದ ಕುರುಹುಗಳು ಇರಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ. ಮಂಗಳ ಗ್ರಹದ ಒಳಭಾಗದಲ್ಲಿ ಸೂಕ್ಷ್ಮ ಜೀವಿಗಳು ಇರಬಹುದು ಎಂಬ ಭರವಸೆ ವಿಜ್ಞಾನಿಗಳಿಗೆ ಇದೆ.


5. ಮಾನವರು ಮಂಗಳ ಗ್ರಹದಲ್ಲಿ ಬದುಕಬಹುದೇ?


human to mars in kannada, mars in kannada, how to live on mars in kannada, nasa in kannada, isro in kannada, info mind, infomindkannada


     2030ರಲ್ಲಿ ಮಂಗಳ ಗ್ರಹದ ಮೇಲೆ ಮಾನವನನ್ನು ಕಳುಹಿಸಲು ನಾಸಾ ಅಗತ್ಯ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿದೆ. ಆದರೆ ಮಾನವರು ಅಲ್ಲಿ ಬದುಕಬೇಕಾದರೆ ಅವರು ಭೂಮಿಯಿಂದ ಸ್ವತಂತ್ರವಾಗಿ ಬದುಕಿ, ಅಲ್ಲಿ ಕೆಲಸ ಮಾಡಬೇಕು. ಕೆಂಪು ಗ್ರಹದ ನೈಸರ್ಗಿಕ ಸಂಪನ್ಮೂಲಗಳಿಂದ ಜೀವನವನ್ನು ರೂಪಿಸಬೇಕು. ಅಪಾಯಕಾರಿ ಕಾಸ್ಮಿಕ್ ವಿಕಿರಣದಿಂದ ಉಳಿಯಲು ಅಂಡರ್‌ಗ್ರೌಂಡಿನಲ್ಲಿ ವಾಸಿಸುವ ಅಗತ್ಯವಿದೆ. ಮಂಗಳನ ಮಣ್ಣು ಬರಡಾಗಿದ್ದು, ಪರ್ಕ್ಲೋರೇಟ್ಸ್ ಎಂಬ ವಿಷಕಾರಿ ಸಂಯುಕ್ತಗಳಿಂದ ತುಂಬಿದೆಯೆಂದು ರೋವರ್ ತೋರಿಸಿರುವ ಕಾರಣ ಅಲ್ಲಿ ಆಹಾರ ಬೆಳೆಯುವುದು ಸಹ ಒಂದು ಸವಾಲಾಗಿದೆ. ಇವೆಲ್ಲದರ ಬಗ್ಗೆ ವಿಜ್ಞಾನಿಗಳು ಸಂಶೋಧಿಸುತ್ತಿದ್ದು  ಬೇಗನೆ ಯಶಸ್ವಿಯಾಗುತ್ತಾರೆ ಎಂಬ ನಂಬಿಕೆ ಇದೆ.

Don't forget to Comment Your Opinion on This Article.

Share and Support Us.

Info Mind

Post a Comment

0 Comments