7 Earth Mysteries | ಭೂಮಿಯ ಏಳು ಅತಿದೊಡ್ಡ ಬಗೆಹರಿಯದ ರಹಸ್ಯಗಳು

ಭೂಮಿಯ ಮೇಲಿನ ನೀರಿನಿಂದ, ಭೂಮಿಯನ್ನು ಸುತ್ತುವ ಚಂದ್ರನವರೆಗೆ. ಉಸಿರಾಡುವ ಆಮ್ಲಜನಕದಿಂದ, ಭೂಕಂಪದವರೆಗೆ. ಹೀಗೆ ಭೂಮಿಯ ಮೇಲೆ ಬಗೆಹರಿಯದ ಹಲವಾರು ರಹಸ್ಯಗಳಿವೆ. ಅವುಗಳಲ್ಲಿ ಏಳನ್ನು ಇಲ್ಲಿ ತಿಳಿಸುತ್ತಿದ್ದೇವೆ.


Watch Video



1. ಭೂಮಿಯ ಮೇಲೆ ನೀರು ಎಲ್ಲಿಂದ ಬಂತು.


     ಎಲ್ಲೆಡೆ ನೀರೇ ನೀರು, ಭೂಮಿಯ ಮೇಲ್ಮೈಯ ಶೇಕಡಾ 70ರಷ್ಟು ನೀರಿನಿಂದ ಕೂಡಿದೆ. ಇದು ಭೂಮಿಯನ್ನು "ನೀಲಿ ಗ್ರಹ" ಎನ್ನಲು ಕಾರಣವಾಯಿತು, ಆದರೆ ಆ ನೀರು ಎಲ್ಲಿಂದ ಬಂತು. ನಮ್ಮ ಸೌರಮಂಡಲದ ಇತರ ಗ್ರಹಗಳಲ್ಲಿ ನೀರು ಅಸ್ತಿತ್ವದಲ್ಲಿಲ್ಲದಿದ್ದಾಗ, ನಮ್ಮ ಗ್ರಹದಲ್ಲಿ ಇಷ್ಟು ಹೇರಳವಾಗಿ ಇರಲು ಕಾರಣವೇನು. ನಾಲ್ಕೂವರೆ ಬಿಲಿಯನ್ ವರ್ಷಗಳ ಹಿಂದೆ ಭೂಮಿಯು ರೂಪುಗೊಂಡಾಗ ಅದು ಕಲ್ಲಿನ ಗ್ರಹವಾಗಿತ್ತು ಎಂದು ವಿಜ್ಞಾನಿಗಳು ನಂಬಿದ್ದಾರೆ.


water on earth in kannada, how water came on earth in kannada, info mind, infomindkannada


     ಸೈಂಟಿಫಿಕ್ ಥಿಯರಿ ಪ್ರಕಾರ ಭೂಮಿಯ ಮೇಲೆ ನೀರನ್ನು ಮಂಜುಗಡ್ಡೆಯಿಂದ ತುಂಬಿದ ಆಸ್ಟರಾಯ್ಡ್ ತಂದಿದೆ ಎಂದು ಹೇಳಲಾಗಿದೆ. ಇನ್ನೂ ಕೆಲವು ಸೌರಮಂಡಲ ರೂಪಿಸಿದ ಅನಿಲ ಮತ್ತು ಧೂಳಿನ ಮೋಡವು, ಭೂಮಿಯ ಮೇಲಿನ ನೀರಿಗೆ ಕಾರಣವೆಂದು ತಿಳಿಸುತ್ತಿವೆ. ಆದರೆ ಇದು ಇನ್ನೂ ರಹಸ್ಯವಾಗಿಯೇ ಇದೆ.


2. ಭೂಮಿಯ ವಾತಾವರಣದಲ್ಲಿನ ಆಮ್ಲಜನಕ ಸ್ಥಿರವಾಗಿರಲು ಕಾರಣವೇನು.


oxygen in kannada, oxygen on earth in kannada, how oxygen came on earth in kannada, cynobacteria in kannada, info mind, infomindkannada


     ಭೂಮಿಯ ಮೇಲೆ ವಾಸಿಸುವ ಜೀವಿಗಳಿಗೆ ಬಹಳ ಮುಖ್ಯವಾದ ಆಮ್ಲಜನಕ ಭೂಮಿಯ ಮೇಲೆ ಹೇಗೆ ಬಂತು. ಸುಮಾರು 2.4 ಬಿಲಿಯನ್ ವರ್ಷಗಳ ಹಿಂದೆ ಸೈನೋಬ್ಯಾಕ್ಟೀರಿಯಾ ಎಂದು ಕರೆಯಲ್ಪಡುವ ಸೂಕ್ಷ್ಮಜೀವಿಗಳು ಆಮ್ಲಜನಕವನ್ನು ತ್ಯಾಜ್ಯ ಉತ್ಪನ್ನವಾಗಿ ಬಿಡುತ್ತಿದ್ದವು. ಅದು ಭೂಮಿಯ ಆಮ್ಲಜನಕಕ್ಕೆ ಕಾರಣವೆಂದು ನಂಬಲಾಗಿದೆ. ಭೂಮಿಯ ವಾತಾವರಣದಲ್ಲಿನ ಆಮ್ಲಜನಕ ಮಟ್ಟವು ಸುಮಾರು 540 ಮಿಲಿಯನ್ ವರ್ಷಗಳ ಹಿಂದೆ ಸ್ಥಿರವಾಗುವವರೆಗೆ ತೀವ್ರವಾಗಿ ಮೇಲೆ ಕಡೆಗೆ ಹೋಗುತ್ತಿತ್ತು. 540 ಮಿಲಿಯನ್ ವರ್ಷಗಳಿಂದ ಭೂಮಿಯಲ್ಲಿ ಆಮ್ಲಜನಕ ಉಸಿರಾಟದ ಮಟ್ಟದಲ್ಲೇ ಉಳಿದಿದೆ. ಆದರೆ ಅದು ಸ್ಥಿರವಾಗಲು ಕಾರಣವೇನು ಎಂಬುದು ರಹಸ್ಯವಾಗಿದೆ.


3. ನಾವು ಎಂದಾದರೂ ಭೂಕಂಪಗಳನ್ನು ಊಹಿಸಲು ಸಾಧ್ಯವಾಗುವುದೇ.


earthquake in kannada, how earthquake happen on earth in kannada, info mind, infomindkannada


     ಭೂಮಿಯ ಕಾರ್ಯ ನಿರ್ವಹಿಸುವ ವಿಧಾನದ ತೀವ್ರ ಅಧ್ಯಯನದಲ್ಲಿ ಭೂಕಂಪಗಳನ್ನೇ ನಿಖರವಾಗಿ ಊಹಿಸಲು ನಮಗೆ ಇನ್ನು ಸಾಧ್ಯವಾಗಿಲ್ಲ. ಬಂಡೆಗಳ ಭೂಗರ್ಭದಲ್ಲಿ ಬಿರುಕುಬಿಟ್ಟು, ಭೂಕಂಪದ ಅಲೆಗಳು ಭೂಮಿಯ ಮೇಲ್ಮೈಗೆ ತಲುಪಿದಾಗ ಭೂಕಂಪ ಸಂಭವಿಸುತ್ತದೆ ಎಂದು ನಮಗೆ ತಿಳಿದಿದೆ. ನಮ್ಮ ಪ್ರಸ್ತುತ ತಂತ್ರಜ್ಞಾನವು ಹವಾಮಾನ ಮುನ್ಸೂಚನೆಯಷ್ಟೇ ನಿಖರತೆಯೊಂದಿಗೆ ಭೂಕಂಪವನ್ನು ಊಹಿಸಬಹುದು. ಆದರೆ ಭೂಕಂಪ ಏಕೆ ಸಂಭವಿಸುತ್ತದೆ ಅಥವಾ ಅದನ್ನು ಹೇಗೆ ಊಹಿಸಬಹುದು ಎಂಬುದನ್ನು ನಾವು ಇನ್ನಷ್ಟು ನಿಖರವಾಗಿ ಕಂಡುಹಿಡಿಯಲು ಸಾಧ್ಯವಾಗಿಲ್ಲ.


4. ಪ್ಲೇಟ್ ಟೆಕ್ಟೊನಿಕ್ಸ್ ಯಾವಾಗ ಪ್ರಾರಂಭವಾಯಿತು.


plate tectonics in kannada, plate tectonics on earth in kannada, when plate tectonics started on earth in kannada, info mind, infomindkannada


     ನಮ್ಮ ಭೂಮಿಯ ಕ್ರಸ್ಟ್ ತುಂಡಾಗಿ ಒಂದೊಂದು ಭಾಗ ಆಗಿರುವುದನ್ನು ಪ್ಲೇಟ್ ಟೆಕ್ಟೋನಿಕ್ಸ್ ಎನ್ನುತ್ತಾರೆ. ಈ ತುಂಡಾದ ಭಾಗಗಳು ಭೂಮಿಯ ಮ್ಯಾಗ್ಮ ಇಂಟೀರಿಯರ್ ಮೇಲೆ ತೇಲುತ್ತಿದೆ. ಆದರೆ ಪ್ಲೇಟ್ ಟೆಕ್ಟೋನಿಕ್ಸ್ ಪ್ರಕ್ರಿಯೆ ಯಾವಾಗ ಮತ್ತು ಹೇಗೆ ಪ್ರಾರಂಭವಾಯಿತು ಎಂಬುದರ ಬಗ್ಗೆ ಇನ್ನು ನಿಖರವಾಗಿ ತಿಳಿದಿಲ್ಲ. ವಿಜ್ಞಾನಿಗಳು ಇದು 3 ಬಿಲಿಯನ್ ವರ್ಷಗಳ ಹಿಂದೆ ಪ್ರಾರಂಭವಾಯಿತು ಎಂದು ಅಂದಾಜು ಮಾಡಿದ್ದಾರೆ. ಆದರೆ ಅದು ಹೇಗೆ ಪ್ರಾರಂಭವಾಯಿತು ಎಂಬುದು ರಹಸ್ಯವಾಗಿದೆ.


5. ಭೂಮಿಯ ಕೋರ್ ನಲ್ಲಿ ಏನಿದೆ.


earth core in kannada, what inside earth core in kannada, info mind, infomindkannada


     ಮಾನವರು ಭೂಮಿಯ ಮೇಲೆ ಎಲ್ಲವನ್ನು ಯಶಸ್ವಿಯಾಗಿ ಅನ್ವೇಷಿಸಿದ್ದಾರೆ ಎಂದು ತೋರುತ್ತದೆಯಾದರು, ನಾವು ಸತ್ಯವಾಗಿ ಮೇಲ್ಮೆಯನ್ನು ಮಾತ್ರ ಗೀಚಿದ್ದೇವೆ. ಭೂಮಿ ಮೇಲ್ಮೈ ಅಷ್ಟೇ ಅಲ್ಲದೆ ಇನ್ನು ಸಾಕಷ್ಟು ಭಾಗಗಳನ್ನು ಹೊಂದಿದೆ. ಭೂಮಿಯ ಮೇಲ್ಮೈ ಕೆಳಗಿರುವ ಪದರಗಳ ಬಗ್ಗೆ ನಮಗೆ ಇನ್ನು ಅಷ್ಟು ತಿಳಿದಿಲ್ಲ. ಭೂಮಿಯ ಕ್ರಸ್ಟ್ ಕೆಳಗೆ ಮ್ಯಾಂಟಲ್ ಪದರ ಇದ್ದು, ಅದು ಹೆಚ್ಚಾಗಿ ಘನ ಸಿಲಿಕೇಟ್ ಬಂಡೆಯಿಂದ ಕೂಡಿದೆ ಎಂದು ನಮಗೆ ತಿಳಿದಿದೆ. ಆದರೆ ನಮ್ಮ ಗ್ರಹದ ಹೃದಯಭಾಗವು ನಿಗೂಢವಾಗಿಯೇ ಉಳಿದಿದೆ. ವಿಜ್ಞಾನಿಗಳು ಅನೇಕ ವರ್ಷಗಳಿಂದ ಭೂಮಿಯ ಕೋರ್ ಕಬ್ಬಿಣ ಮತ್ತು ನಿಕ್ಕಲನ್ನು ಹೊಂದಿದೆ ಎಂದು ನಂಬಿದ್ದರು. ಆದರೆ ಕೋರಿನ ಡೆನ್ಸಿಟಿಗೆ ಹೋಲಿಸಿದರೆ ಕಬ್ಬಿಣ ಮತ್ತು ನಿಕ್ಕಲ್ ಕಡಿಮೆಯೇ ಎಂದು 1950ರ ದಶಕದಲ್ಲಿ ವಿಜ್ಞಾನಿಗಳೇ ಕಂಡುಹಿಡಿದರು. ಹೀಗಾಗಿ ಭೂಮಿಯ ಕೋರ್ ರಹಸ್ಯವಾಗಿಯೇ ಉಳಿದಿದೆ.



6. ಡೈನೋಸೋರ್ ಗಳಿಗೆ ನಿಜವಾಗಿಯೂ ಏನಾಯಿತು.


dinosaur in kannada, what happened to dinasour in kannada, info mind, infomindkannada


     ಲಕ್ಷಾಂತರ ವರ್ಷಗಳಿಂದ ಇತಿಹಾಸಪೂರ್ವದಲ್ಲಿ ಜಗತ್ತಿನಾದ್ಯಂತ ಆಳುತ್ತಿದ್ದ ಡೈನೋಸೋರ್ಗಳಿಗೆ ಏನಾಯಿತು. ಇಂದು ಅವುಗಳು ಮ್ಯೂಸಿಯಂ ಮತ್ತು ಸಿನಿಮಾದ ವಿಎಪ್ಎಕ್ಸ್‌ಗಳಲ್ಲಿ ಮಾತ್ರ ಕಾಣಲು ಸಿಗುತ್ತವೆ. ಈ ಬೃಹತ್ ಜೀವಿಗಳು 65 ಮಿಲಿಯನ್ ವರ್ಷಗಳ ಹಿಂದೆ ತಮ್ಮ ವಿಕಾಸದ ಅಂತ್ಯವನ್ನು ಪೂರೈಸಲು ಕಾರಣವೇನು. ಕೆಲವು ವಿಜ್ಞಾನಿಗಳು ಒಂದು ಆಸ್ಟರಾಯ್ಡ್ ಭೂಮಿಗೆ ಅಪ್ಪಳಿಸಿ ಎಲ್ಲಾ ಡೈನೋಸೋರ್ಗಳ ನಾಶಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ. ಇನ್ನು ಕೆಲವು ವಿಜ್ಞಾನಿಗಳು ಸರಣಿ ಜ್ವಾಲಾಮುಖಿ ಸ್ಫೋಟದಿಂದ ಇವುಗಳ ನಾಶವಾದವು ಎಂದು ಹೇಳುತ್ತಾರೆ. ಆದರೆ ಇದು ರಹಸ್ಯವಾಗಿಯೇ ಉಳಿದಿದೆ.


7. ಚಂದ್ರ ಹೇಗೆ ರೂಪುಗೊಂಡನು.


moon in kannada, how moon formed in kannada, info mind, infomindkannada


     ಭೂಮಿ ತನ್ನ ಪಾಲುದಾರ ಚಂದ್ರನನ್ನು ಹೇಗೆ ರೂಪಿಸಿತು ಎಂಬುದರ ಬಗ್ಗೆ ವಿಜ್ಞಾನಿಗಳು ಸಕಾರಾತ್ಮಕವಾಗಿಲ್ಲ. ಭೂಮಿ ಮತ್ತು ಸಣ್ಣ ಗ್ರಾತದ ನಡುವಿನ ಡಿಕ್ಕಿಯಿಂದ ಚಂದ್ರನ ರೂಪುಗೊಂಡನು ಎಂದು ಹಲವರು ನಂಬುತ್ತಾರೆ. ಚಂದ್ರನ ರಾಸಾಯನಿಕ ಸಂಯೋಜನೆಯು ಭೂಮಿಗೆ ಹೋಲುತ್ತದೆ ಎಂದು ಅಪೋಲೋ ಮಿಶನ್‌ನಿಂದ ತಿಳಿದಿದೆ. ಇದರಿಂದ ಚಂದ್ರನ್ನು ಪ್ರತ್ಯೇಕವಲ್ಲದ ಭೂಮಿಯ ಒಂದು ಭಾಗದಿಂದ ರೂಪುಗೊಂಡಿದೆ ಎಂದು ಸೂಚಿಸಬಹುದು. ಆದರೆ ಇದರ ಬಗ್ಗೆ ಇನ್ನೂ ತಿಳಿಯುವುದು ಬಾಕಿ ಇದೆ.

Don't forget to Comment Your Opinion on This Article.

Share and Support Us.

Info Mind

Post a Comment

0 Comments