Black Hole Facts | ಬ್ಲ್ಯಾಕ್ ಹೋಲ್ ಮೇಲೆ ಎಂಟು ಮೋಜಿನ ಸಂಗತಿಗಳು

ನಮಗೆ ಬರುವ ಮೊದಲ ಪ್ರಶ್ನೆ, ಬ್ಲ್ಯಾಕ್ ಹೋಲ್ ಎಂದರೇನು?


Watch Video


     ಸರಳವಾಗಿ ಹೇಳುವುದಾದರೆ ಬ್ಲ್ಯಾಕ್ ಹೋಲ್ ಬ್ರಹ್ಮಾಂಡದಲ್ಲಿ ಒಂದು ದೊಡ್ಡ ಗುರುತ್ವಾಕರ್ಷಣೆಯ ಸ್ಥಳವಾಗಿದೆ. ಈ ಬ್ಲಾಕ್ ಹೋಲ್‌ನಿಂದ ಬೆಳಕು ಕೂಡ ಎಸ್ಕೇಪ್ ಆಗಲು ಸಾಧ್ಯವಿಲ್ಲ. ಈಗ ಇದರ ಮೇಲಿನ ಎಂಟು ಮೋಜಿನ ಸಂಗತಿಗಳನ್ನು ನೋಡೋಣ.


1. ಬ್ಲ್ಯಾಕ್ ಹೋಲನ್ನು ನೇರವಾಗಿ ನೋಡಲು ಸಾಧ್ಯವಿಲ್ಲ.




     ಬ್ಲ್ಯಾಕ್ ಹೋಲ್ ಹೆಸರಿನಂತೆ ಕಪ್ಪಗಿದೆ, ಹೀಗಾಗಿ ಅದನ್ನು ನೋಡಲು ಸಾಧ್ಯವಿಲ್ಲ. ಆದರೆ ಅದರ ಸುತ್ತಮುತ್ತಲಿನ ಪ್ರದೇಶವನ್ನು ನೋಡಿದರೆ ನಮಗೆ ಅದರ ಪರಿಣಾಮದ ಬಗ್ಗೆ ತಿಳಿಯುತ್ತದೆ. ಉದಾಹರಣೆಗೆ ಬ್ಲ್ಯಾಕ್  ಹೋಲ್‌ಗೆ ಯಾವುದೇ ನಕ್ಷತ್ರ ಹತ್ತಿರವಿದ್ದರೆ, ಅದು ಬೇರ್ಪಡುವುದು ನಾವು ನೋಡಬಹುದು.



2. ನಮ್ಮ ಮಿಲ್ಕಿ ವೇ ಬ್ಲ್ಯಾಕ್ ಹೋಲನ್ನು ಹೊಂದಿದೆ.


     ಈ ವಿಷಯವನ್ನು ಕೇಳಿ ನೀವು ಗಾಬರಿಯಾಗಬೇಕಿಲ್ಲ. ಏಕೆಂದರೆ ನಮ್ಮ ಭೂಮಿ ಅಪಾಯದಲ್ಲಿಲ್ಲ. ಖಗೋಳ ವಿಜ್ಞಾನಿಗಳು ಹೇಳಿರುವ ಬ್ಲ್ಯಾಕ್ ಹೋಲ್ ಭೂಮಿಯಿಂದ ಲೈಟ್ ಇಯರ್ನಷ್ಟು ದೂರದಲ್ಲಿದೆ.


3. ಸಾಯುತ್ತಿರುವ ನಕ್ಷತ್ರಗಳು ಸ್ಟೆಲ್ಲಾರ್ ಬ್ಲ್ಯಾಕ್ ಹೋಲ್‌ಗೆ ಕಾರಣವಾಗಿದೆ.


stellar black hole in kannada, info mind, infomindkannada


     ದೊಡ್ಡ ನಕ್ಷತ್ರಗಳ ಸಾವು ಬ್ಲ್ಯಾಕ್ ಹೋಲ್‌ನ ಸೃಷ್ಟಿಗೆ ಕಾರಣವಾಗಿದೆ. ನಕ್ಷತ್ರದ ಪರಮಾಣು ಪ್ರಕ್ರಿಯೆ ಕುಸಿದಾಗ , ನಕ್ಷತ್ರದ ಗುರುತ್ವಾಕರ್ಷಣೆಯು ಅದರ ಆಕಾರವನ್ನು ಉಳಿಸಿಕೊಳ್ಳಲು ನಕ್ಷತ್ರದ ಮೂಲವನ್ನು(core) ಮುಳುಗಿಸುತ್ತದೆ. ಈ ಸಮಯದಲ್ಲಿ ನಕ್ಷತ್ರದ ಇತರ ಪದರಗಳನ್ನು ಬಾಹ್ಯಾಕಾಶಕ್ಕೆ ಎಸೆಯಲಾಗುತ್ತದೆ. ಈ ಪ್ರಕ್ರಿಯೆಯನ್ನು ಸೂಪರ್ ನೋವಾ ಎನ್ನಲಾಗುತ್ತದೆ. ಗುರುತ್ವಾಕರ್ಷಣೆಯಿಂದ ಮೂಲ(core) ಕುಸಿಯುತ್ತಾ ಹೋಗಿ ಬ್ಲ್ಯಾಕ್ ಹೋಲ್ ಸೃಷ್ಟಿಯಾಗುತ್ತದೆ.


4. ಬ್ಲ್ಯಾಕ್ ಹೋಲ್‌ನಲ್ಲಿ ಮೂರು ವರ್ಗಗಳಿವೆ.


▪ ಪ್ರಿಮೊರ್ಡಿಯಲ್ ಬ್ಲ್ಯಾಕ್ ಹೋಲ್‌.

     ಇದು ಬ್ಲ್ಯಾಕ್ ಹೋಲ್‌ನಲ್ಲೇ ಚಿಕ್ಕದಾಗಿದೆ. ಇದರ ಗಾತ್ರ ಪರಮಾಣುವಿನಿಂದ ದೊಡ್ಡ ಪರ್ವತದಷ್ಟು ಇರಬಹುದು.


▪ ಸ್ಟೆಲ್ಲಾರ್ ಬ್ಲ್ಯಾಕ್ ಹೋಲ್.

     ಈ ರೀತಿಯ ಬ್ಲ್ಯಾಕ್ ಹೋಲ್‌ ನಮ್ಮ ಸೂರ್ಯನಿಗಿಂತ ಇಪ್ಪತ್ತು ಪಟ್ಟು ದೊಡ್ಡದಿರುತ್ತದೆ. ಮಿಲ್ಕಿ ವೇ ಈ ರೀತಿಯ ಬ್ಲ್ಯಾಕ್ ಹೋಲನ್ನು ತುಂಬಾ ಹೊಂದಿದೆ.


▪ ಸೂಪರ್ ಮ್ಯಾಸಿವ್ ಬ್ಲ್ಯಾಕ್ ಹೋಲ್‌.

     ಇದು ಬ್ಲಾಕ್ ಹೋಲ್‌ನಲ್ಲೇ ದೊಡ್ಡದಾಗಿದೆ. ಇದರ ಗಾತ್ರ ಸೂರ್ಯನಿಗಿಂತ ಹತ್ತು ಲಕ್ಷ ಪಟ್ಟು ಹೆಚ್ಚಿದೆ.



5. ಬ್ಲ್ಯಾಕ್ ಹೋಲ್‌ನಲ್ಲಿ ಸಮಯ ನಿಧಾನವಾಗಿರುತ್ತದೆ.


time in black hole in kannada, theory of relativity in kannada, albert einstein in kannada, info mind, infomindkannada


     ಒಬ್ಬ ವ್ಯಕ್ತಿ ಬ್ಲ್ಯಾಕ್ ಹೋಲ್‌ಗೆ ಬೀಳುತ್ತಾನೆ, ಇನ್ನೊಬ್ಬ ಅದನ್ನು ನೋಡುತ್ತಿರುತ್ತಾನೆ ಎಂದುಕೊಳ್ಳಿ. ಬ್ಲ್ಯಾಕ್ ಹೋಲ್‌ನಲ್ಲಿ ಬಿದ್ದ ವ್ಯಕ್ತಿಯ ಸಮಯ, ಅದನ್ನು ನೋಡುತ್ತಿರುವವನಿಗಿಂತ ನಿಧಾನವಾಗಿ ಚಲಿಸುತ್ತಿರುತ್ತದೆ. ಇದನ್ನು ಆಲ್ಬರ್ಟ್ ಐನ್‍ಸ್ಟೈನಿನ ಜನರಲ್ ರಿಲೇಟಿವಿಟಿಯಲ್ಲಿ ತಿಳಿಸಲಾಗಿದೆ. ಅದೆಂದರೆ, "ನೀವು ಬೆಳಕಿನ ಹತ್ತಿರದ ವೇಗದಲ್ಲಿರುವಾಗ ನೀವು ಎಷ್ಟು ವೇಗವಾಗಿ ಹೋಗುತ್ತಿರುವಿರ ಎಂಬುದರ ಮೇಲೆ ಸಮಯ ಪರಿಣಾಮ ಬೀರುತ್ತದೆ" ಎಂಬುದಾಗಿದೆ.


6. ಮೊದಲ ಬ್ಲ್ಯಾಕ್ ಹೋಲ್.


cygnus x1 in kannada, first black hole in kannada, info mind, infomindkannada


     ಸಿಗ್ನಸ್ ಎಕ್ಸ್ 1(Cygnus X1) 1960ರ ದಶಕದಲ್ಲಿ ಪತ್ತೆಯಾದ ಮೊದಲ ಬ್ಲ್ಯಾಕ್ ಹೋಲ್ ಆಗಿದೆ. ಇದು ನಮ್ಮ ಸೂರ್ಯನಿಗಿಂತ ಹತ್ತು ಪಟ್ಟು ಗಾತ್ರದಲ್ಲಿ ದೊಡ್ಡದಿದೆ. ವಿಶೇಷವೆಂದರೆ ಎಕ್ಸ್ ರೇಯನ್ನು ಖಗೋಳ ವಿಜ್ಞಾನದಲ್ಲಿ ಬಳಸುವವರೆಗೆ ಮೊದಲ ಬ್ಲ್ಯಾಕ್ ಹೋಲನ್ನು ಕಂಡುಹಿಡಿಯಲಾಗಿರಲಿಲ್ಲ.


7. 20,000 ಲೈಟ್ ಇಯರ್ ದೂರದಲ್ಲಿದೆ ಈ ಬ್ಲ್ಯಾಕ್ ಹೋಲ್‌.

     V4647 ಸಗಿಟಾರಿ(V4647 Sagitarrii) ಎಂಬ ಬ್ಲ್ಯಾಕ್ ಹೋಲ್‌ 1600 ಲೈಟ್ ಇಯರ್ ದೂರದಲ್ಲಿದೆ ಎಂದು ಭಾವಿಸಲಾಗಿತು. ಆದರೆ ಅದು ಸುಮಾರು 20,000 ಲೈಟ್ ಇಯರ್ ದೂರದಲ್ಲಿದೆ ಎಂದು ವಿಜ್ಞಾನಿಗಳು ಈಗ ನಂಬಿದ್ದಾರೆ.


8. ಬ್ಲ್ಯಾಕ್ ಹೋಲ್ ಹತ್ತಿರದಿಂದ ಅಪಾಯಕಾರಿ.


black hole from near in kannada, info mind, infomindkannada


     ನೀವು ಬ್ಲ್ಯಾಕ್ ಹೋಲ್‌ ಹತ್ತಿರ ಹೋದರೆ ಅದು ತುಂಬಾ ಅಪಾಯಕಾರಿಯಾಗಿದೆ. ಅವುಗಳನ್ನು ದೂರದಿಂದ ನೊಡುವುದೇ ಸುರಕ್ಷಿತವಾಗಿದೆ. ಬ್ಲ್ಯಾಕ್ ಹೋಲ್ ನಮಗೆ ಹತ್ತಿರವಿದ್ದರೆ ಅದು ನಮ್ಮ ಸೌರಮಂಡಲವನ್ನೇ ನುಂಗಬಹುದು.

Don't forget to Comment Your Opinion on This Article.

Share and Support Us.


Info Mind

Post a Comment

0 Comments