Seven Wonders of the World | ಜಗತ್ತಿನ ಏಳು ಅದ್ಭುತಗಳು

 

ಜಗತ್ತಿನ ಏಳು ಅದ್ಭುತಗಳು ಯಾವುವು?


     ಈ ಪ್ರಶ್ನೆ ಕೇಳಿದ ತಕ್ಷಣ ಎಷ್ಟೋ ಜನರಿಗೆ ಉತ್ತರ ಗೊತ್ತೆ ಇರುವುದಿಲ್ಲ. ಜಗತ್ತಿನ ಏಳು ಅದ್ಭುತ ಎಂದ ತಕ್ಷಣ ಈಜಿಪ್ಟಿನ ಪಿರಾಮಿಡ್, ಭಾರತದ ತಾಜ್ ಮಹಲ್ ನೆನಪಿಗೆ ಬರಬಹುದು. ಆದರೆ 7 ಅದ್ಭುತಗಳು ನೆನಪಿಗೆ ಬರುವುದಿಲ್ಲ. ಜಗತ್ತಿನ ಏಳು ಅದ್ಭುತಗಳು ಎಂಬ ಪ್ರಶ್ನೆಯು "ಜಗತ್ತಿನ ಏಳು ಅದ್ಭುತಗಳು" ಎಂಬ ಪ್ರಶ್ನೆಯಾಗೆ ಉಳಿದಿದೆ.

Watch Video


     ಪ್ರಾಚೀನ ವಿಶ್ವದ ಏಳು ಅದ್ಭುತಗಳನ್ನು ಕ್ರಿ.ಶ. 250ರಲ್ಲಿ ಬೈಜಾಂಟಿಯಂನ ಪಿಲೋ ಅವರು ವರ್ಗೀಕರಿಸಿದರು ಮತ್ತು ಅಂದಿನಿಂದ ಎಲ್ಲ ಜನರು "ಏಳು ಅದ್ಭುತಗಳು" ಎಂದೇ ಹೇಳಿಕೊಂಡು ಬಂದಿದ್ದಾರೆ, ಆದರೆ ಅದು ಯಾವುದೆಂದು ಗೊತ್ತಿಲ್ಲ.

ಅದ್ಭುತಗಳಲ್ಲಿ ಮೂರು ಭಾಗಗಳಿವೆ:

ಪ್ರಾಚೀನ ಅದ್ಭುತಗಳು.
• ವಿಶ್ವದ ನೈಸರ್ಗಿಕ ಅದ್ಭುತಗಳು ಮತ್ತು
• ಪ್ರಪಂಚದ ಇಂಜಿನಿಯರಿಂಗ್ ಅದ್ಭುತಗಳು

     ಇದರಲ್ಲಿ ಗಿಜಾದ ಗ್ರೇಟ್ ಪಿರಮಿಡ್ ಪ್ರಾಚೀನ ಅದ್ಭುತಗಳಲ್ಲಿ ಒಂದಾಗಿದೆ. ತಾಜ್ ಮಹಲ್ 2007ರಲ್ಲಿ ಯುನೆಸ್ಕೊ ಗುರುತಿಸಲ್ಪಟ್ಟ ಏಳು ಅದ್ಭುತಗಳಲ್ಲಿ ಒಂದಾಗಿದೆ. ಇದರಲ್ಲಿ ಗಿಜಾದ ಗ್ರೇಟ್ ಪಿರಮಿಡ್ ಬರುವುದಿಲ್ಲ. ಯುನೆಸ್ಕೋದಿಂದ ಗುರುತಿಸಲ್ಪಟ್ಟ ಈ ತಾಣಗಳು ಹತ್ತಾರು ದಶಲಕ್ಷ ಮತಗಳ ಆನ್ಲೈನ್ ಸಮೀಕ್ಷೆಯಿಂದ ಆರಿಸಲಾಗಿದೆ. ನಿಮಗೆ ನಾವು ಈಗ ನಾವು ಹೇಳುವ ಯುನೆಸ್ಕೊದಿಂದ ಗುರುತಿಸಲ್ಪಟ್ಟ ಏಳು ಅದ್ಭುತಗಳ ಹೆಸರನ್ನು ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲವೆಂದರೆ, ನಂತರ ಹೇಳುವ ವಿಶ್ವದ ಏಳು ಪ್ರಾಚೀನ ಅದ್ಭುತಗಳ ಹೆಸರನ್ನು ನೆನಪಿಟ್ಟುಕೊಳ್ಳಲು ಇನ್ನು ಕಷ್ಟವಾಗುತ್ತದೆ.


     ಯುನೆಸ್ಕೋದಿಂದ ಗುರುತಿಸಲ್ಪಟ್ಟ ವಿಶ್ವದ ಏಳು ಅದ್ಭುತಗಳೆಂದರೆ,


taj mahal in kannada, info mind, infomindkannada


1. ಚೀನಾದಲ್ಲಿರುವ, ದಿ ಗ್ರೇಟ್ ವಾಲ್ ಆಫ್ ಚೀನಾ.
2. ಮೆಕ್ಸಿಕೋದಲ್ಲಿರುವ, ಚಿಚೆನ್ ಇಟ್ಜಾ.
3. ಬ್ರೆಜಿಲ್‌ನಲ್ಲಿರುವ, ಕ್ರೆಸ್ಟ್ ಡಿ ರಿಡೀಮರ್.
4. ಜೋರ್ಡಾನ್‌ನಲ್ಲಿರುವ, ಪೆಟ್ರಾ.
5. ಭಾರತದಲ್ಲಿರುವ, ತಾಜ್ ಮಹಲ್.
6. ಇಟಲಿಯಲ್ಲಿರುವ, ಕೊಲೋಸಿಯಂ.
7. ಪೆರುನಲ್ಲಿರುವ, ಮಚ್ಚು ಪಿಚು.


     ಇನ್ನು ವಿಶ್ವದ ಏಳು ಪ್ರಾಚೀನ ಅದ್ಭುತಗಳೆಂದರೆ,


egypt in kannada, pyramid in kannada, info mind, infomindkannada


1. ಈಜಿಪ್ಟಿನ ಗಿಜಾದ, ಗ್ರೇಟ್ ಪಿರಮಿಡ್.
2. ಗ್ರೀಸ್‌ನಲ್ಲಿರುವ, ಕೊಲೊಸಸ್ ಆಪ್ ರೋಡಸ್.
3. ಈಜಿಪ್ಟಿನಲ್ಲಿರುವ, ಲೈಟ್ ಹೌಸ್ ಆಫ್ ಅಲೆಕ್ಸಾಂಡ್ರಿಯ.
4. ಟರ್ಕಿಯ, ಹ್ಯಾಲಿಕಾರ್ನಸ್ಸಸಿನಲ್ಲಿರುವ ಸಮಾಧಿ.
5. ಗ್ರೀಸ್‌ನಲ್ಲಿರುವ, ಸ್ಟಾಚು ಆಪ್ ಜೀವ್ಸ್.
6. ಟರ್ಕಿಯ, ಆರ್ಟೆಮಿಸಿನಲ್ಲಿರುವ ಟೆಂಪಲ್.
7. ಇರಾಕ್‍ನಲ್ಲಿರುವ, ಹ್ಯಾಂಗಿಂಗ್ ಗಾರ್ಡನ್ಸ್ ಆಫ್ ಬ್ಯಾಬಿಲೋನ್.


     ಇನ್ನು ಜಗತ್ತಿನ ಏಳು ನೈಸರ್ಗಿಕ ಅದ್ಭುತಗಳೆಂದರೆ,


victoria falls in kannada, zimbabwe in kannada, info mind, infomindkannada


1. ಯುಎಸ್ಎಯ ಅರಿಜೋನಾದಲ್ಲಿರುವ, ದಿ ಗ್ರ್ಯಾಂಡ್‌ ಕ್ಯಾನ್ಯಾನ್.
2. ಮೆಕ್ಸಿಕೋದಲ್ಲಿರುವ, ಪಾರಿಕ್ಯೂಟಿನ್.
3. ನಾರ್ಥನ್ ಲೈಟ್ಸ್.
4. ಜಿಂಬಾಬ್ವೆಯಲ್ಲಿರುವ, ವಿಕ್ಟೋರಿಯಾ ಫಾಲ್ಸ್.
5. ಬ್ರೆಜಿಲ್‌ನಲ್ಲಿರುವ, ಹರ್ಬರ್ ಆಪ್ ರಿಯೊ ದಿ ಜನಯ್ರೋ.
6. ಆಸ್ಟ್ರೇಲಿಯಾದಲ್ಲಿರುವ, ಗ್ರೇಟ್ ಬ್ಯಾರಿಯರ್ ರೀಫ್.
7. ನೇಪಾಳದಲ್ಲಿರುವ, ಮೌಂಟ್ ಎವರೆಸ್ಟ್.


     ಇನ್ನು ಜಗತ್ತಿನ ಏಳು ಇಂಜಿನಿಯರಿಂಗ್ ಅದ್ಭುತವೆಂದರೆ,


akashi kaiko bridge in kannada, info mind, infomindkannada


1. ಹೂವರ್ ಡ್ಯಾಮ್.
2. ಬುರ್ಜ್ ಖಲೀಫಾ.
3. ಆಕಾಶಿ ಕೈಕೋ ಬ್ರಿಡ್ಜ್.
4. ಚಾನೆಲ್ ಟನಲ್.
5. ತ್ರಿ ಜಾರ್ಜಸ್ ಡ್ಯಾಂ.
6. ಪನಾಮಾ ಕ್ಯಾನಲ್.
7. ಲಾರ್ಜ್ ಹ್ಯಾಡ್ರಾನ್ ಕೋಲಿಡಾರ್.

Don't forget to Comment Your Opinion on This Article.

Share and Support Us.

Info Mind

Post a Comment

0 Comments