ಇಂದಿನ ದಿನಗಳಲ್ಲಿ ನೀವು ನಿಮ್ಮ ಸಾಮಾಜಿಕ ಮಾಧ್ಯಮದಲ್ಲಿ ಏನನ್ನು ಹಂಚಿಕೊಳ್ಳುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ. ಏಕೆಂದರೆ ನಿಮ್ಮ ಸಣ್ಣಪುಟ್ಟ ಮೋಜು ಮಸ್ತಿಗಾಗಿ ಪೋಸ್ಟ್ ಮಾಡಿದ ಯಾವುದೇ ಮಾಹಿತಿ, ನಿಮ್ಮ ನೆಮ್ಮದಿ ಕೆಡಿಸಬಹುದು. ತಂತ್ರಜ್ಞಾನ ಪ್ರತಿ ವಲಯದಲ್ಲೂ ಪ್ರಗತಿಯನ್ನು ಕಾಣುತ್ತಿದ್ದರೂ ಕೆಲವರು ಇದರ ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ನೀವೀಗಾಗಲೇ ಕೇಳಿರುತ್ತೀರಿ. ಆದ್ದರಿಂದ ಮುಖ್ಯವಾಗಿ ನಾವು ಇಲ್ಲಿ ಹೇಳುವ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಬೇಡಿ.
Watch Video
2. ನಿಮ್ಮ ಆಪ್ತರು, ಸ್ನೇಹಿತರು, ಕುಟುಂಬ ಅಥವಾ ಸಹೋದ್ಯೋಗಿಗಳೊಂದಿಗೆ ನೀವು ಮಾಡುವ ಕೆಲಸ ಅಥವಾ ಆಫೀಸಿನ ಬಗ್ಗೆ ಯಾವುದೇ ಪೋಸ್ಟ್ ಮಾಡಬೇಡಿ. ನೀವು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವ ಮುಂಚೆ "ನಿಮ್ಮ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುತ್ತಿದ್ದೀರಾ" ಎಂಬುದರ ಬಗ್ಗೆ ಪರಿಶೀಲಿಸಿಕೊಳ್ಳಿ.
3. ಕುಡಿದು ವಾಹನ ಚಲಾಯಿಸುವುದು ಒಳ್ಳೆಯದಲ್ಲ. ಹಾಗೆ ಕುಡಿದು ಫೇಸ್‌ಬುಕನ್ನು ಎಂದಿಗೂ ಬಳಸಬೇಡಿ. ಕುಡಿದು ಫೇಸ್‌ಬುಕ್ ಬಳಸುವುದರಿಂದ ನೀವು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಪೋಸ್ಟ್ ಮಾಡುತ್ತೀರಾ. ನಿಮಗೆ ಗೊತ್ತಿರದ ಜನರಿಗೆ ಮೆಸೇಜ್, ಫೋಟೋ, ವಿಡಿಯೋ ಕಳಿಸುವ ಸಾಧ್ಯತೆ ಹೆಚ್ಚಿರುತ್ತದೆ.
4. ನಿಮ್ಮ ಸ್ನೇಹಿತರ ಪಟ್ಟಿಯಲ್ಲಿ ನೀವು ಸುಮಾರು 600 ಜನರನ್ನು ಹೊಂದಿದ್ದರೆ, ನೀವು 600 ಸ್ನೇಹಿತರನ್ನು ಹೊಂದಿದ್ದೀರಿ ಎಂದರ್ಥವಲ್ಲ. ಆದ್ದರಿಂದ ನಿಮ್ಮ ಫೇಸ್‌ಬುಕ್ ಖಾತೆಗೆ ಬೇಕಾಬಿಟ್ಟಿ ಎಲ್ಲರ ಫ್ರೆಂಡ್ ರೀಕ್ವೆಸ್ ಅಕ್ಸೆಪ್ಟ್ ಮಾಡಬೇಡಿ. ಫೇಸ್‌ಬುಕ್ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿದೆ ಮತ್ತು ಯಾವುದಾದರೂ ಅಪರಿಚಿತ ವ್ಯಕ್ತಿಗೆ ಪ್ರವೇಶ ಪಡೆಯಲು ನೀವು ಅನುಮತಿಸಬಾರದು.
5. ಕೆಲವರು ನಿಮಗೆ ಫೇಸ್‌ಬುಕ್‌ನಲ್ಲಿ ಬರುವ ಕಮೆಂಟ್ ಮೂಲಕ ನಿಮ್ಮ ಮನೆಯ ವಿಳಾಸ, ಫೋನ್ ನಂಬರ್ ಬಗ್ಗೆ ಕೇಳಬಹುದು ಆ ರೀತಿ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿ. ಈ ಮಾಹಿತಿ ನಿಮ್ಮ ಹಿಂಬಾಲಕರಿಗೆ ಚಿನ್ನದ ಗಣಿ ಆಗಿರಬಹುದು.
6. ನೀವು ಹೊಸ ವಾಹನವನ್ನು ಖರೀದಿಸಿದರೆ ಅಥವಾ ಯಾವುದೇ ಲಾಟರಿ ಗೆದ್ದಿದ್ದರೆ ಅಥವಾ ಕೆಲವು ಪ್ರಮುಖ ಹೂಡಿಕೆಗಳನ್ನು ಮಾಡಿದ್ದರೆ, ಅದು ನಿಮ್ಮ ಪ್ರೈವೇಟ್ ವಿಷಯವಾಗಿರುತ್ತದೆ. ಅವುಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವುದು ಅಷ್ಟು ಒಳ್ಳೆಯದಲ್ಲ. ಫೇಸ್‌ಬುಕ್‌ನಲ್ಲಿ ಯಾರನ್ನು ಕೆಟ್ಟ ಪದಗಳಿಂದ ನಿಂದಿಸಬೇಡಿ ಜನರು ಸ್ಕ್ರೀನ್ ಶಾಟ್ ತೆಗೆದುಕೊಂಡು, ನಂತರ ಅದನ್ನು ನಿಮ್ಮ ವಿರುದ್ಧ ಬಳಸಬಹುದು.
7. ನಿಮ್ಮ ಪಾಸ್ ಪೋರ್ಟ್, ಒಟಿಪಿ ಎಂದರೆ ಒನ್ ಟೈಂ ಪಾಸ್ವರ್ಡ್, ಪದವಿಗಳು ಮುಂತಾದ ಈ ರೀತಿಯ ದಾಖಲೆಗಳನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಬೇಡಿ. ನೀವು ರಜೆಯಲ್ಲಿ ಪ್ರಯಾಣಿಸಿದ ಜಾಗದ ಹೋಟೆಲ್, ಬಸ್ ಟಿಕೆಟ್‌ಗಳ ಫೋಟೋಗಳಲ್ಲಿ ಎಂದಿಗೂ ಶೇರ್ ಮಾಡಬೇಡಿ.
8. ನಿಮ್ಮ ಫೇಸ್ ಬುಕ್ ಸ್ನೇಹಿತರ ಪಟ್ಟಿಯಲ್ಲಿ ಯಾರ್ಯಾರು ನಿಜವಾಗಿ ಇರಬೇಕು ಮತ್ತು ಇರಬಾರದು ಎಂದು ಪರಿಶೀಲಿಸಲು ನಿಮ್ಮ ಫೇಸ್‌ಬುಕ್ ಪ್ರೊಫೈಲನ್ನು ಮತ್ತೆ ಮತ್ತೆ ಪರಿಶೀಲಿಸಿಕೊಳ್ಳಿ. ಅಶ್ಲೀಲ ವಿಡಿಯೋ, ಫೋಟೋಗಳನ್ನು ಪೋಸ್ಟ್ ಮಾಡಿದಿರಿ. ಫೇಸ್‌ಬುಕ್ ಇವುಗಳನ್ನು ಹೆಚ್ಚಾಗಿ ಗಮನಿಸುತ್ತಿರುತ್ತದೆ. ಇದರಿಂದ ನಿಮ್ಮ ಖಾತೆ ಬಂದು ಸಹ ಆಗಬಹುದು.
Don't forget to Comment Your Opinion on This Article.
Share and Support Us.
0 Comments