6 Space Myths | ಬಾಹ್ಯಾಕಾಶದ ಕೆಲವು ಅಸತ್ಯಗಳು

ಬಾಹ್ಯಾಕಾಶದ ಕೆಲವು ನಂಬಲಾಗದ ಅಸತ್ಯಗಳು.


Watch Video


1. ನಾವು ಬಾಹ್ಯಾಕಾಶದಲ್ಲಿ ಸ್ಫೋಟಗೊಳ್ಳುತ್ತೇವೆ.


     ಈ ಕಲ್ಪನೆಯನ್ನು ಹಾಲಿವುಡ್(hollywood) ಚಲನಚಿತ್ರಗಳು ರಚಿಸಿವೆ. ದೃಶ್ಯಗಳನ್ನು ಹೆಚ್ಚಾಗಿ ಆಕರ್ಷಕವಾಗಿ ತೋರಿಸಲು ಹಾಲಿವುಡ್ ಚಲನಚಿತ್ರದಲ್ಲಿ ಮನುಷ್ಯನು ರಕ್ಷಣಾತ್ಮಕ ಸೂಟ್(asteroid suit) ಇಲ್ಲದೆ ಬಾಹ್ಯಾಕಾಶದಲ್ಲಿ ತಿರುಗಾಡುತ್ತಿದ್ದರೆ ಸ್ಫೋಟಗೊಳ್ಳುವಂತೆ ತೋರಿಸುತ್ತಾರೆ. ಬಾಹ್ಯಾಕಾಶದಲ್ಲಿ ಯಾವುದೇ ವ್ಯಕ್ತಿಯ ಹತ್ತಿರ ರಕ್ಷಣಾತ್ಮಕ ಸೂಟ್ ಇಲ್ಲದೇ ಇದ್ದರೆ ಖಂಡಿತವಾಗಿಯೂ ಸಾಯುತ್ತಾನೆ. ಆದರೆ ಅದು ತಕ್ಷಣದ ಸ್ಫೋಟವನ್ನು(blast) ಒಳಗೊಂಡಿರುವುದಿಲ್ಲ. ಅವನು ಅರ್ಧ ನಿಮಿಷ ಬಾಹ್ಯಾಕಾಶದಲ್ಲಿ ಇರುತ್ತಾನೆ, ಆಮ್ಲಜನಕದ(oxygen) ಕೊರತೆಯಿಂದ ಉಸಿರುಕಟ್ಟಿ ಸಾಯುತ್ತಾನೆ.


2. ಶುಕ್ರ ಗ್ರಹ ಮತ್ತು ಭೂಮಿ ಒಂದೇ ಆಗಿರುತ್ತದೆ.


venus surface in kannada, info mind, infomindkannada
Venus Surface


     ಶುಕ್ರ ಗ್ರಹವನ್ನು ಸಾಮಾನ್ಯವಾಗಿ ನಮ್ಮ ಗ್ರಹದ ಅವಳಿ  ಕರೆಯಲಾಗುತ್ತದೆ. ಆದರೆ ಅದು ನಮ್ಮ ಭೂಮಿಯಂತೆಯೇ ಇದೆ ಎಂಬ ಅಭಿಪ್ರಾಯ ಸರಿಯಲ್ಲ. ಈ ಕಲ್ಪನೆ ನಾವು ಶುಕ್ರ ಗ್ರಹದ ಮೇಲ್ಮೈ(surface) ನಿಜವಾಗಿಯೂ ಹೇಗಿದೆ ಎಂಬುದರ ಬಗ್ಗೆ ಯಾವುದೇ ಸುಳಿವು ಇಲ್ಲದಿದ್ದಾಗ ಬಂದಿದ್ದು. ನಂಬಲಾಗದಷ್ಟು ದಪ್ಪ ವಾತಾವರಣವಿರುವ ಶುಕ್ರ(venus) ಗ್ರಹಕ್ಕೆ ನಾವು ಬಾಹ್ಯಾಕಾಶ ನೌಕೆಯನ್ನು ಕಳುಹಿಸುವವರೆಗೂ ಗ್ರಹದ ಮೇಲ್ಮೈ ಭೂಮಿಗಿಂತ ಎಷ್ಟು ಮಾರಕ ಎಂಬುದು ನಮಗೆ ತಿಳಿದಿರಲಿಲ್ಲ.


3. ಸೂರ್ಯನು ಬೆಂಕಿಯ ಚೆಂಡು.


sun shining in kannada, info mind, infomindkannada
Sun is shining not burning


     ಸೂರ್ಯ(sun) ನಿಜವಾಗಿಯೂ ಪ್ರಜ್ವಲಿಸುತ್ತಿದ್ದಾನೆ, ಆದರೆ ಉರಿಯುತ್ತಿಲ್ಲ. ಕೆಲವರಿಗೆ ಇದರಲ್ಲಿ ಅಷ್ಟು ವ್ಯತ್ಯಾಸ ತಿಳಿಯುವುದಿಲ್ಲದಂತೆ ತೋರುತ್ತದೆ. ಸೂರ್ಯನಿಂದ ಉತ್ಪತ್ತಿಯಾಗುವ ಶಾಖವು ವಾಸ್ತವವಾಗಿ ಪರಮಾಣು(nuclear fusion) ಕ್ರಿಯೆಯ ಪರಿಣಾಮವಾಗಿದೆ. ಹೀಗಾಗಿ ಅದು ರಾಸಾಯನಿಕ ಕ್ರಿಯೆ(chemical reaction) ಅಲ್ಲದ ಕಾರಣ ಸೂರ್ಯ ಉರಿಯುತ್ತಿಲ್ಲ.


4. ಸೂರ್ಯನು ಹಳದಿ ಬಣ್ಣದಲ್ಲಿ ಇದ್ದಾನೆ.


sun real color in kannada, info mind, infomindkannada
Sun is white not yellow


     ಯಾರಿಗಾದರೂ ಸೂರ್ಯನನ್ನು ಬಿಡಿಸಲು ಹೇಳಿದರೆ ಅವರು ಹಳದಿ ಬಳಪ(crayon) ಹುಡುಕುತ್ತಾರೆ. ಬಾಹ್ಯಾಕಾಶ ಸಂಸ್ಥೆಗಳು ಬಿಡುಗಡೆ ಮಾಡಿದ ಸೂರ್ಯನ ಕೆಲವು ಫೋಟೋದಲ್ಲೂ, ಸೂರ್ಯನನ್ನು ಹಳದಿ ಬಣ್ಣದಲ್ಲಿ ತೋರಿಸಲಾಗಿರುತ್ತದೆ. ಗಗನಯಾತ್ರಿಗಳು(astronomers) ಫೋಟೋ ಅರ್ಥವಾಗಲೆಂದು ಅವರು ತೆಗೆದ ಸೂರ್ಯನ ಫೋಟೋಗಳಿಗೆ ಬಣ್ಣವನ್ನು ನೀಡುತ್ತಾರೆ. ಆದರೆ ಸೂರ್ಯ ಬಿಳಿಯಾಗಿದ್ದಾನೆ. ಇದರ ಬಗ್ಗೆ ನಿಮಗೆ ಗೊತ್ತಿರುವ ಯಾವುದೇ ಗಗನಯಾತ್ರಿಗೆ(astronaut) ನೀವು ಕೇಳಬಹುದು.
 

5. ಬೇಸಿಗೆಯಲ್ಲಿ ಭೂಮಿಯು ಸೂರ್ಯನಿಗೆ ಹತ್ತಿರದಲ್ಲಿರುತ್ತದೆ.


earth season in kannada, info mind, infomindkannada
Earth Season


     ಇದು ಸಾಕಷ್ಟು ತಾರ್ಕಿಕವಾಗಿದೆ. ನಮ್ಮ ಗ್ರಹ ಸೂರ್ಯನಿಗೆ ಹತ್ತಿರವಿದ್ದಾಗ ಬಿಸಿಯಾಗಿರುತ್ತದೆ ಮತ್ತು ದೂರವಿದ್ದಾಗ ತಂಪಾಗಿರುತ್ತದೆ ಎಂದು ಕೇಳಿರುತ್ತೀರಾ. ಈ ಕಲ್ಪನೆ ಋತುಗಳಿಂದ ಉಂಟಾಗಿದೆ. ಆದರೆ ಇದು ಭೂಮಿಯ ಅಕ್ಷರೇಖೆ(axis) ಮೇಲೆ ನಿಂತಿದೆ. ಭೂಮಿಯ ಅಕ್ಷರೇಖೆ ಸೂರ್ಯನ ಕಡೆಗೆ ಇದ್ದರೆ ಅದು ಬೇಸಿಗೆಯಾಗಿದೆ, ಅದು ಸೂರ್ಯನಿಂದ ದೂರ ಹೋದಾಗ ಅದು ಚಳಿಗಾಲವಾಗಿದೆ. ಆದರೂ ಭೂಮಿಗೂ ಸೂರ್ಯನಿಗೂ ಇರುವ ದೂರ 150 ಮಿಲಿಯನ್ ಕಿ.ಮೀ ಆಗಿದೆ. ಭೂಮಿಗೂ(earth) ಸೂರ್ಯನಿಗೂ ಇರುವ ಹತ್ತಿರದ ದೂರ 145 ಮಿಲಿಯನ್ ಕಿ.ಮೀ ಆಗಿದೆ. ಹೀಗಾಗಿ ಒಂದು ವರ್ಷದಲ್ಲಿ ಸೂರ್ಯನಿಂದ ಭೂಮಿಗೆ ಇರುವ ದೂರ 5 ಮಿಲಿಯನ್ ಕಿ.ಮೀನಷ್ಟು ವ್ಯತ್ಯಾಸದಲ್ಲಿರುತ್ತದೆ.


6. ಚಂದ್ರನ ಡಾರ್ಕ್ ಸೈಡ್ ಇದೆ.


dark side of moon in kannada, info mind, infomindkannada
Dark side of moon


     ಚಂದ್ರನು ನಿರಂತರವಾಗಿ ಕತ್ತಲೆ(dark side) ಇರುವ ಭಾಗವನ್ನು ಹೊಂದಿದ್ದಾನೆ ಎಂಬ ಕಲ್ಪನೆ ಸುಳ್ಳಾಗಿದೆ. ಚಂದ್ರನು(moon) ಭೂಮಿಗೆ ಬಂಧಿಸಲ್ಪಟ್ಟಿರುವುದರಿಂದ ಅದರ ಒಂದೇ ಕಡೆ ನಮಗೆ ಯಾವಾಗಲೂ ಕಾಣುತ್ತಿರುತ್ತದೆ. ಆದರೆ ಸೂರ್ಯ ಭೂಮಿಯಿಂದ ಬಂಧಿಸಲ್ಪಟ್ಟಿಲ್ಲ. ಹೀಗಾಗಿ ಚಂದ್ರನ ಎಲ್ಲಾ ಭಾಗಗಳು ಸೂರ್ಯನ ಬೆಳಕನ್ನು ಪಡೆಯುತ್ತವೆ.

ಇವುಗಳನ್ನು ನೋಡಿ,






Info Mind

Post a Comment

0 Comments