ಅಣೆಕಟ್ಟು ನೀರಿನ ಹರಿವನ್ನು ತಡೆಯಲು ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಪ್ರವಾಹವನ್ನು ತಡೆಗಟ್ಟಲು ಮತ್ತು ನೀರಾವರಿ ಸೌಲಭ್ಯಗಳಿಗೆ ಸಹಾಯ ಮಾಡುತ್ತದೆ. ನಮ್ಮ ಭಾರತ ದೇಶ ಸುಮಾರು 5200 ಅಣೆಕಟ್ಟುಗಳಿಗೆ ನೆಲೆಯಾಗಿದೆ. ಇದರಲ್ಲಿ 1845 ಅಣೆಕಟ್ಟು ಮಹಾರಾಷ್ಟ್ರದಲ್ಲಿದೆ. ಅಣೆಕಟ್ಟು ಜಲವಿದ್ಯುತ್ ಉತ್ಪಾದನೆಗೆ ಮುಖ್ಯವಾಗಿದೆ. ನಾವು ಈ ವೀಡಿಯೊದಲ್ಲಿ ಭಾರತದ ಕೆಲವು ಪ್ರಮುಖ ಅಣೆಕಟ್ಟುಗಳ ಬಗ್ಗೆ ತಿಳಿಸುತ್ತಿದ್ದೇವೆ.
Watch Video
1. ಮೇತ್ತೂರು ಅಣೆಕಟ್ಟು- ತಮಿಳುನಾಡು.
Mettur Dam
ಇದು ತಮಿಳುನಾಡಿನ(tamil nadu) ಅತಿದೊಡ್ಡ ಅಣೆಕಟ್ಟು. ಇದನ್ನು 1934ರಲ್ಲಿ ಕಾವೇರಿ ನದಿಯಲ್ಲಿ ಎತ್ತರವಾಗಿ ನಿರ್ಮಿಸಲಾಗಿತ್ತು. ಇದು ತಮಿಳುನಾಡಿನ ಸೇಲಂ(salem) ಜಿಲ್ಲೆಯ ಗ್ರ್ಯಾವಿಟಿ ಮತ್ತು ಕಲ್ಲಿನ ಆಣೆಕಟ್ಟಾಗಿದೆ. ಇದು ತಮಿಳುನಾಡು ಜನರೇಶನ್ ಮತ್ತು ಡಿಸ್ಟ್ರಿಬ್ಯೂಷನ್ ಲಿಮಿಟೆಡ್ ಅಡಿಯಲ್ಲಿ ಬರುತ್ತದೆ. ಇದು 214 ಅಡಿ ಎತ್ತರವಿದೆ.
2. ಇಂದಿರಾ ಸಾಗರ್ ಅಣೆಕಟ್ಟು- ಮಧ್ಯಪ್ರದೇಶ.
Indira Sagar Dam
ಇದನ್ನು 2005ರಲ್ಲಿ ನರ್ಮದಾ ನದಿಯಲ್ಲಿ ಎತ್ತರವಾಗಿ ನಿರ್ಮಿಸಲಾಗಿತ್ತು. ಇದು ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿದೆ. ಈ ಅಣೆಕಟ್ಟು ಮಧ್ಯಪ್ರದೇಶ(madhya pradesh) ನೀರಾವರಿ ಮತ್ತು ರಾಷ್ಟ್ರೀಯ ಜಲ ವಿದ್ಯುತ್ ನಿಗಮದ ವ್ಯಾಪ್ತಿಗೆ ಬರುತ್ತದೆ. ಇದು 12.2 ಬಿಲಿಯನ್ ಕಮ್ ನೀರಿನ ಸಾಮರ್ಥ್ಯದೊಂದಿಗೆ ಭಾರತದ ಅತಿದೊಡ್ಡ ಅಣೆಕಟ್ಟು ಆಗಿದೆ.
3. ಜಯಕ್ವಾಡಿ ಅಣೆಕಟ್ಟು- ಮಹಾರಾಷ್ಟ್ರ.
Jayakawdi Dam
ಇದನ್ನು 1976ರಲ್ಲಿ ಗೋದಾವರಿ ನದಿಯಲ್ಲಿ ಎತ್ತರವಾಗಿ ನಿರ್ಮಿಸಲಾಗಿತ್ತು. ಇದು ಮಹಾರಾಷ್ಟ್ರದ ಜಯಕ್ವಾಡಿ ಜಿಲ್ಲೆಯಲ್ಲಿದೆ. ಈ ಅಣೆಕಟ್ಟು ಮಹಾರಾಷ್ಟ್ರ(maharashtra) ಸರ್ಕಾರದ ಅಡಿಯಲ್ಲಿ ಬರುತ್ತದೆ. ಇದು 27 ನೀರಿನ ದ್ವಾರಗಳನ್ನು ಹೊಂದಿರುವ ಏಷ್ಯಾದ ಅತಿದೊಡ್ಡ ಅಣೆಕಟ್ಟುಗಳಲ್ಲಿ ಒಂದಾಗಿದೆ. ಇದು ನಾಥ್ ಸಾಗರ್ ಜಲಾಶಯವನ್ನು ಸೃಷ್ಟಿಸುತ್ತದೆ. ಅದು ಆ ಜಿಲ್ಲೆಯ ಹೆಚ್ಚಿನ ಹೊಲಗಳಿಗೆ ನೀರಾವರಿ ನೀಡುತ್ತದೆ.
4. ಸೋಮಸಿಲಾ ಅಣೆಕಟ್ಟು- ಆಂಧ್ರಪದೇಶ.
Somasila Dam
ಇದನ್ನು 1989ರಲ್ಲಿ ಪೆನ್ನಾ ನದಿಯಲ್ಲಿ ಎತ್ತರವಾಗಿ ನಿರ್ಮಿಸಲಾಗಿತ್ತು. ಈ ಅಣೆಕಟ್ಟು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿದೆ ಮತ್ತು ಆಂಧ್ರಪ್ರದೇಶ(andra pradesh) ಸರ್ಕಾರದ ಅಡಿಯಲ್ಲಿ ಬರುತ್ತದೆ. ಇದು ಗುರುತ್ವ ಆಣೆಕಟ್ಟಾಗಿದೆ.
5. ಉಜಾನಿ ಅಣೆಕಟ್ಟು- ಮಹಾರಾಷ್ಟ್ರ.
Ujani Dam
ಇದನ್ನು 1980ರಲ್ಲಿ ಭೀಮಾನದಿಯಲ್ಲಿ ನಿರ್ಮಿಸಲಾಗಿತ್ತು. ಇದು ಮಹಾರಾಷ್ಟ್ರದ ಸೋಲಾಪುರ(solapura) ಜಿಲ್ಲೆಯಲ್ಲಿದೆ. ಇದು ಗುರುತ್ವ ಅಣೆಕಟ್ಟಾಗಿದ್ದು, 185 ಅಡಿ ಎತ್ತರವಿದೆ. ಇದು ಮಹಾರಾಷ್ಟ್ರ ಸರಕಾರದ ಅಡಿಯಲ್ಲಿ ಬರುತ್ತದೆ. ಈ ಅಣೆಕಟ್ಟು ಪಕ್ಷಿವೀಕ್ಷಣೆಗೆ ಪ್ರಸಿದ್ಧಿಯಾಗಿದೆ. ಏಕೆಂದರೆ ಅನೇಕ ಫ್ಲೆಮಿಂಗೋಗಳು ಇಲ್ಲಿ ಕಾಲೋಚಿತವಾಗಿ ಕಂಡುಬರುತ್ತವೆ.
6. ಉಕೈ ಅಣೆಕಟ್ಟು- ಗುಜರಾತ್.
Ukai Dam
ಇದು ಗುಜರಾತ್‌ನ ಎರಡನೇ ಅತಿದೊಡ್ಡ ಜಲಾಶಯವಾಗಿದೆ. ಗುಜರಾತ್‌ನ ಟಾಪಿ(tapi) ಜಿಲ್ಲೆಯಲ್ಲಿ ನೀರಾವರಿ, ವಿದ್ಯುತ್ ಉತ್ಪಾದನೆ ಮತ್ತು ಪ್ರವಾಹ ನಿಯಂತ್ರಣಕ್ಕೆ ಇದು ಕಾರಣವಾಗಿದೆ. ಈ ಅಣೆಕಟ್ಟು 345 ಅಡಿ ಎತ್ತರವನ್ನು ಹೊಂದಿದ್ದು, ವಲ್ಲಭ ಸಾಗರ್ ಜಲಾಶಯವನ್ನು ಸೃಷ್ಟಿಸುತ್ತದೆ. ಇದರ ನೀರಿನ ಸಾಮರ್ಥ್ಯ ಭಕ್ರ ನಂಗಲ್ ಅಣೆಕಟ್ಟಿನಂತೆಯೇ ಇದೆ ಮತ್ತು ಇದು ಗುಜರಾತ್(gujarat) ರಾಜ್ಯ ಸರ್ಕಾರದ ಅಡಿಯಲ್ಲಿ ಬರುತ್ತದೆ.
7. ಮುಕ್ಕೊಂಬು ಅಣೆಕಟ್ಟು- ತಮಿಳುನಾಡು.
Mukkombhu Dam
ಇದು 1838ರಲ್ಲಿ ಈಸ್ಟ್ ಇಂಡಿಯಾ ಕಂಪನಿ ನಿರ್ಮಿಸಿದ ಆಣೆಕಟ್ಟಾಗಿದೆ. ಇದು ತಮಿಳುನಾಡಿನ ಜಯಪುರಂ ಗ್ರಾಮದ ಕಾವೇರಿ(kaveri) ನದಿಯಲ್ಲಿದೆ. ಇದು ಭಾರತದ ಅತ್ಯಂತ ಚಿಕ್ಕ ಅಣೆಕಟ್ಟುಗಳಲ್ಲಿ ಒಂದಾಗಿದ್ದು, ತಮಿಳುನಾಡಿನಲ್ಲಿರುವ ಕಲ್ಲನೈ(kalanai) ಅಣೆಕಟ್ಟಿನಿಂದ ಸ್ಫೂರ್ತಿ ಪಡೆದಿದೆ.
8. ಚೆರುಥೋನಿ ಅಣೆಕಟ್ಟು- ಕೇರಳ.
Cheruthoni Dam
ಇದನ್ನು 1973ರಲ್ಲಿ ಪರಿಯಾರ್ ನದಿಯಲ್ಲಿ ಎತ್ತರವಾಗಿ ನಿರ್ಮಿಸಲಾಯಿತು. ಇದು ಕೇರಳದ(kerala) ಇಡುಕಿಯಲ್ಲಿರುವ ಗುರುತ್ವ ಆಣೆಕಟ್ಟಾಗಿದೆ. ಇದರ ಎತ್ತರ 453ಅಡಿ ಇದ್ದು, ಮೂಲಾಮತ್ತಂ ವಿದ್ಯುತ್ ಕೇಂದ್ರದ ಅಡಿಯಲ್ಲಿ ಬರುತ್ತದೆ.
#ಕೃಷ್ಣರಾಜ ಸಾಗರ ಅಣೆಕಟ್ಟು(KRS)- ಕರ್ನಾಟಕ(karnataka).
Krishna Raja Sagara Dam
ಇದನ್ನು 1911ರಲ್ಲಿ ನಿರ್ಮಿಸಲು ಪ್ರಾರಂಭಿಸಲಾಯಿತು. 1932ರಲ್ಲಿ ಇದರ ನಿರ್ಮಾಣ ಪೂರ್ಣಗೊಂಡಿತ್ತು. ಇದನ್ನು ಕಾವೇರಿ ನದಿಯಲ್ಲಿ ಕಟ್ಟಿಸಲಾಗಿದೆ. ಇದು 131 ಅಡಿ ಎತ್ತರ ಮತ್ತು 8,600 ಅಡಿ ಉದ್ದವಿರುವ ಗುರುತ್ವ ಆಣೆಕಟ್ಟಾಗಿದೆ. ಇದು ಕಾವೇರಿ ನೀರಾವರಿ ನಿಗಮ ಲಿಮಿಟೆಡ್ ಅಡಿಯಲ್ಲಿ ಬರುತ್ತದೆ.
0 Comments