ಅಣೆಕಟ್ಟು ನೀರಿನ ಹರಿವನ್ನು ತಡೆಯಲು ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಪ್ರವಾಹವನ್ನು ತಡೆಗಟ್ಟಲು ಮತ್ತು ನೀರಾವರಿ ಸೌಲಭ್ಯಗಳಿಗೆ ಸಹಾಯ ಮಾಡುತ್ತದೆ. ನಮ್ಮ ಭಾರತ ದೇಶ ಸುಮಾರು 5200 ಅಣೆಕಟ್ಟುಗಳಿಗೆ ನೆಲೆಯಾಗಿದೆ. ಇದರಲ್ಲಿ 1845 ಅಣೆಕಟ್ಟು ಮಹಾರಾಷ್ಟ್ರದಲ್ಲಿದೆ. ಅಣೆಕಟ್ಟು ಜಲವಿದ್ಯುತ್ ಉತ್ಪಾದನೆಗೆ ಮುಖ್ಯವಾಗಿದೆ. ನಾವು ಈ ವೀಡಿಯೊದಲ್ಲಿ ಭಾರತದ ಕೆಲವು ಪ್ರಮುಖ ಅಣೆಕಟ್ಟುಗಳ ಬಗ್ಗೆ ತಿಳಿಸುತ್ತಿದ್ದೇವೆ.
Watch Video
1. ಭವಾನಿ ಸಾಗರ್ ಅಣೆಕಟ್ಟು, ತಮಿಳುನಾಡು.
![]() |
Bhavani Sagar Dam |
ಈ ಅಣೆಕಟ್ಟನ್ನು 1955ರಲ್ಲಿ ಭವಾನಿ ನದಿಯಲ್ಲಿ ನಿರ್ಮಿಸಲಾಗಿತ್ತು. ಇದು ಭಾರತ ಮತ್ತು ದಕ್ಷಿಣ ಏಷ್ಯಾದ ಅತಿದೊಡ್ಡ ಹಾಗೂ ವಿಶ್ವದಲ್ಲೇ ಎರಡನೇ ಅತಿದೊಡ್ಡ ಮಣ್ಣಿನ ಅಣೆಕಟ್ಟಾಗಿದೆ. ಇದು ತಮಿಳುನಾಡಿನ ಸತ್ಯಮಂಗಲಂ(satyamangalam) ಜಿಲ್ಲೆಯಲ್ಲಿದ್ದು, ತಮಿಳುನಾಡು ಸರ್ಕಾರದ ಅಡಿಯಲ್ಲಿ ಬರುತ್ತದೆ. ಇದರ ಎತ್ತರ 130 ಅಡಿ ಇದ್ದು, ಉದ್ದ 8.4 ಕಿಲೋಮೀಟರ್ ಇದೆ. ಈ ಅಣೆಕಟ್ಟು 8 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ.
2. ತೆಹ್ರಿ ಅಣೆಕಟ್ಟು, ಉತ್ತರಾಖಂಡ.
![]() |
Tehri Dam |
ಇದು ಭಾರತದ ಅತಿ ಎತ್ತರದ ಅಣೆಕಟ್ಟು ಮತ್ತು ಜಗತ್ತಿನ ಅಗ್ರ ಹತ್ತು ಅಣೆಕಟ್ಟುಗಳಲ್ಲಿ ಬರುತ್ತದೆ. ಇದನ್ನು 2006ರಲ್ಲಿ ಭಾಗೀರಥಿ ನದಿಯಲ್ಲಿ ಎತ್ತರವಾಗಿ ನಿರ್ಮಿಸಲಾಗಿತ್ತು. ಇದು ಉತ್ತರಾಖಂಡದ ತೆಹ್ರಿ(tehri) ಜಿಲ್ಲೆಯಲ್ಲಿದೆ ಮತ್ತು ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್ ಲಿಮಿಟೆಡ್ ಅಡಿಯಲ್ಲಿ ಬರುತ್ತದೆ. ಈ ಅಣೆಕಟ್ಟಿನ ಎತ್ತರ 855 ಅಡಿ ಇದ್ದು, ಉದ್ದ 1,886 ಅಡಿ ಇದೆ.
3. ಹಿರಕುಡ್ ಅಣೆಕಟ್ಟು, ಒಡಿಶಾ.
![]() |
Hirakud Dam |
ಇದನ್ನು 1957ರಲ್ಲಿ ಮಹಾನದಿಯಲ್ಲಿ ಎತ್ತರವಾಗಿ ನಿರ್ಮಿಸಲಾಗಿತ್ತು. ಇದು ಭಾರತದ ಮೊದಲ ಮಲ್ಟಿಪರ್ಪಸ್ ರಿವರ್ ವ್ಯಾಲಿ ಪ್ರಾಜೆಕ್ಟ್ ಗಳಲ್ಲಿ ಒಂದಾಗಿದೆ. ಇದು ಒಡಿಶಾದ ಸಂಬಾಲ್ಪುರ್(sambalpur) ನಗರದಲ್ಲಿದೆ. ಒಡಿಶಾ(odisha) ಸರ್ಕಾರದ ಅಡಿಯಲ್ಲಿರುವ ಈ ಅಣೆಕಟ್ಟು ,200 ಅಡಿಗಳಷ್ಟು ಎತ್ತರ ಮತ್ತು 55 ಕಿಲೋಮೀಟರ್‌ನಷ್ಟು ಉದ್ದವಿದೆ. ಇದು ಭಾರತದ ಉದ್ದದ ಅಣೆಕಟ್ಟು ಆಗಿದೆ.
4. ಭಕ್ರ ನಂಗಲ್ ಅಣೆಕಟ್ಟು, ಹಿಮಾಚಲ ಪ್ರದೇಶ.
![]() |
Bhakra Nangal Dam |
ಇದನ್ನು 1963ರಲ್ಲಿ ಸಟ್ಲೆಜ್ ನದಿಯಲ್ಲಿ ಎತ್ತರವಾಗಿ ನಿರ್ಮಿಸಲಾಗಿತ್ತು. ಇದು ಭಾರತದ ಮೂರನೇ ಅತಿದೊಡ್ಡ ಜಲಾಶಯವಾಗಿದ್ದು, ಹಿಮಾಚಲ ಪ್ರದೇಶದ ಬಿಲಾಸ್ಪುರ್(bilaspur) ಜಿಲ್ಲೆಯಲ್ಲಿದೆ. ಇದು ಹಿಮಾಚಲ ಪ್ರದೇಶ(himachal pradesh) ರಾಜ್ಯ ಸರ್ಕಾರದ ಅಡಿಯಲ್ಲಿದೆ. ಇದರ ಎತ್ತರ 741 ಅಡಿಯಷ್ಟಿದ್ದು, ದೇಶದಲ್ಲಿ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ.
5. ನಾಗಾರ್ಜುನ ಸಾಗರ್ ಅಣೆಕಟ್ಟು, ಆಂಧ್ರಪ್ರದೇಶ.
![]() |
Nagarjuna Sagar Dam |
6. ಸರ್ದಾರ್ ಸರೋವರ್ ಅಣೆಕಟ್ಟು, ಗುಜರಾತ್.
![]() |
Sardar Sarovar Dam |
ಇದನ್ನು 2017ರಲ್ಲಿ ನರ್ಮದಾ ನದಿಯಲ್ಲಿ ಎತ್ತರವಾಗಿ ನಿರ್ಮಿಸಲಾಗಿತ್ತು. ಇದು ಗುಜರಾತ್‌ನ(gujarat) ನರ್ಮದಾ(narmada) ಜಿಲ್ಲೆಯ ಕಾಂಕ್ರೀಟ್ ಗುರುತ್ವ ಆಣೆಕಟ್ಟಾಗಿದೆ. ಇದು ಸರ್ದಾರ್ ಸರೋವರ್ ನರ್ಮದಾ ನಿಗಮ್ ಲಿಮಿಟೆಡ್ ಅಡಿಯಲ್ಲಿ ಬರುತ್ತದೆ. ನರ್ಮದಾ ಬಚಾವೋ ಆಂದೋಲನದ ಪ್ರಾರಂಭಕ್ಕೆ ಈ ಅಣೆಕಟ್ಟಿನ ನಿರ್ಮಾಣವೇ ಕಾರಣವಾಗಿದೆ.
7. ತುಂಗಭದ್ರಾ ಅಣೆಕಟ್ಟು, ಕರ್ನಾಟಕ.
![]() |
Thungabadra Dam |
ಇದನ್ನು 1953ರಲ್ಲಿ ತುಂಗಭದ್ರಾ ನದಿಯಲ್ಲಿ ಎತ್ತರವಾಗಿ ನಿರ್ಮಿಸಲಾಗಿತ್ತು. ಇದು ಕರ್ನಾಟಕದ ಬಳ್ಳಾರಿ(bellary) ಜಿಲ್ಲೆಯಲ್ಲಿದ್ದು, ಕರ್ನಾಟಕ(karnataka) ಸರ್ಕಾರದ ಅಡಿಯಲ್ಲಿ ಬರುತ್ತದೆ. ಕಾಂಕ್ರಿಟ್ ಮತ್ತು ಸಿಮೆಂಟ್ ಇಲ್ಲದೆ ನಿರ್ಮಿಸಲಾದ ಭಾರತದ ಏಕೈಕ ಅಣೆಕಟ್ಟು ಇದಾಗಿದೆ.
8. ರಿಹಾಂಡ್ ಅಣೆಕಟ್ಟು, ಉತ್ತರಪ್ರದೇಶ.
![]() |
Rihand Dam |
ಇದನ್ನು 1962ರಲ್ಲಿ ರಿಹಾಂಡ್ ನದಿಯಲ್ಲಿ ಎತ್ತರವಾಗಿ ನಿರ್ಮಿಸಲಾಗಿತ್ತು. ಇದು ಉತ್ತರಪ್ರದೇಶದ ಸೋನ್ ಭದ್ರ ಜಿಲ್ಲೆಯ ಕಾಂಕ್ರೀಟ್ ಗುರುತ್ವ ಆಣೆಕಟ್ಟಾಗಿದೆ. ಇದರ ನೀರಿನ ಸಾಮರ್ಥ್ಯ 10.6 ಶತಕೋಟಿ ಘನ ಮೀಟರ್ ಆಗಿದ್ದು, ಪರಿಮಾಣದ ಪ್ರಕಾರ ಭಾರತದ ಅತಿದೊಡ್ಡ ಅಣೆಕಟ್ಟಾಗಿದೆ. ಇದು ಉತ್ತರಪ್ರದೇಶ ಸರ್ಕಾರದ ಅಡಿಯಲ್ಲಿ ಬರುತ್ತದೆ ಮತ್ತು 300 ಅಡಿಯಷ್ಟು ಎತ್ತರವಿದೆ.
9. ಕೊಯ್ನಾ ಅಣೆಕಟ್ಟು, ಮಹಾರಾಷ್ಟ್ರ.
![]() |
Koyna Dam |
10. ಕಲ್ಲನೈ ಅಣೆಕಟ್ಟು, ತಮಿಳುನಾಡು.
![]() |
Kalanai Dam |
ಇದು ಕ್ರಿ.ಪೂ.100ರ ಭಾರತದ ಅತ್ಯಂತ ಹಳೆಯ ಅಣೆಕಟ್ಟಾಗಿದೆ. ಇದು ತಮಿಳುನಾಡಿನ ತಂಜಾವೂರು(tanjavur) ಜಿಲ್ಲೆಯಲ್ಲಿದೆ. ಈ ಅಣೆಕಟ್ಟಿನ ನಿರ್ಮಾಣದ ಜವಬ್ದಾರಿಯನ್ನು ಚೋಳ ರಾಜವಂಶ(chola dynasty) ಹೊಂದಿದೆ. ಇದು ಕಾವೇರಿ ನದಿಯಲ್ಲಿ 18 ಅಡಿ ಎತ್ತರದಲ್ಲಿದ್ದು, ತಮಿಳುನಾಡು ಸರಕಾರದ ಅಡಿಯಲ್ಲಿ ಬರುತ್ತದೆ. ಇದು ಜಗತ್ತಿನ ನಾಲ್ಕನೇ ಹಳೆಯ ನೀರಿನ ನಿಯಂತ್ರಕವಾಗಿದೆ.
Don't forgot to Comment your opinion on this Article.
Share and Support Us.
0 Comments