ಅಧ್ಯಯನಕ್ಕೆ ಪರಿಣಾಮಕಾರಿ ಮಾರ್ಗವನ್ನು ಕಂಡುಕೊಳ್ಳುವುದು ಎಲ್ಲಾ ವಿದ್ಯಾರ್ಥಿಗಳಿಗೆ ಕಾಳಜಿಯ ವಿಷಯವಾಗಿದೆ. ಅಧ್ಯಯನ ಮಾಡಲು, ಅರ್ಥಮಾಡಿಕೊಳ್ಳಲು ಮತ್ತು ನೆನಪಿಟ್ಟುಕೊಳ್ಳಲು ತುಂಬಾ ಇರುವುದರಿಂದ ವಿದ್ಯಾರ್ಥಿಗಳಿಗೆ ಒತ್ತಡವೂ ಹೆಚ್ಚಾಗುತ್ತಿದೆ. ಪರೀಕ್ಷೆಯ ತಯಾರಿ ಬಹಳ ನಿರ್ಣಾಯಕ ಘಟ್ಟವಾಗಿದ್ದು, ಅಲ್ಲಿ ತಿಳುವಳಿಕೆ ಮತ್ತು ಮಾಹಿತಿಯನ್ನು ನೆನಪಿನಲ್ಲಿಟ್ಟುಕೊಳ್ಳುವುದು ಪ್ರಮುಖ ಪಾತ್ರ ವಹಿಸುತ್ತದೆ.
Watch Video
ಎಷ್ಟೋ ವಿದ್ಯಾರ್ಥಿಗಳು ಕಂಠಪಾಠ ಮಾಡುತ್ತಾರೆ. ಆದರೆ ಇದು ದೀರ್ಘಾವಧಿಗೆ ಒಳ್ಳೆಯದಲ್ಲ. ಶಿಕ್ಷಕರು ಪಾಠ ಅರ್ಥ ಮಾಡಿಸುವಾಗ ಟಿಪ್ಪಣಿಗಳನ್ನು ತೆಗೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳು ಕಲಿಯುವುದನ್ನು ಅರ್ಥಮಾಡಿಕೊಳ್ಳುವುದು ಒಂದು ಮಾರ್ಗವಾಗಿದೆ. ಆದರೆ ಕಲಿಕೆಯನ್ನು ಇನ್ನಷ್ಟು ಉತ್ಪಾದಕವಾಗಿಸುವ ಸಾಧ್ಯತೆ ಇದೆಯೇ!!
ಹೌದು, ಅದಕ್ಕೆ ಉತ್ತರ ಮೈಂಡ್ ಮ್ಯಾಪ್. ಆಗಿದ್ದರೆ,
1. ಮೈಂಡ್ ಮ್ಯಾಪ್ ಎಂದರೇನು?
2. ಮೈಂಡ್ ಮ್ಯಾಪ್ ಯಾಕೆ ಬಳಸಬೇಕು?
3. 5 ಹಂತಗಳಲ್ಲಿ ಮೈಂಡ್ ಮ್ಯಾಪ್ ಮಾಡುವುದು ಹೇಗೆ?
ಎಂಬುದನ್ನು ಈ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.
1. ಮೈಂಡ್ ಮ್ಯಾಪ್ ಎಂದರೇನು?
![]() |
Mind Map in Kannada |
ಸರಳವಾಗಿ ಹೇಳುವುದಾದರೆ ಮೈಂಡ್ ಮ್ಯಾಪ್ ಒಂದು ರೇಖಾಚಿತ್ರ(diagram). ಯಾವುದೇ ಮಾಹಿತಿಯನ್ನು ನೆನಪಿಟ್ಟುಕೊಳ್ಳಲು ಇದು ನಿಮಗೆ ದೃಷ್ಟಿಗೋಚರ ಕಲಿಕೆಯ ನೆರವು ನೀಡುತ್ತದೆ. ಇದು ಒಂದು ದೃಶ್ಯ ನಕ್ಷೆಯಾಗಿದ್ದು, ಅಲ್ಲಿ ಮಾಹಿತಿಯನ್ನು ಕೇಂದ್ರ ಆಲೋಚನೆಯ ಸುತ್ತ ರೇಡಿಯಲ್ ರೂಪದಲ್ಲಿ ಇಡಲಾಗುತ್ತದೆ.
ಮೈಂಡ್ ಮ್ಯಾಪ್ ಪರಿಣಾಮಕಾರಿ ಅಧ್ಯಯನ ತಂತ್ರವೆಂದು ಸಂಶೋಧನೆ ತಿಳಿಸಿದೆ. ಇದು ಮಾಹಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಕಲಿಯಲು ಸಹಾಯ ಮಾಡುತ್ತದೆ. ಒಂದು ಚಿತ್ರ ಸಾವಿರ ಪದಗಳ ಮೌಲ್ಯದ್ದಾಗಿದೆ ಎಂದು ನೀವು ಕೇಳಿರುತ್ತೀರಾ. ಇದು ಸತ್ಯ ಕೂಡ. ಮೈಂಡ್ ಮ್ಯಾಪ್ ಈ ಮಾತನ್ನು ಆಧರಿಸಿದೆ.
2. ಮೈಂಡ್ ಮ್ಯಾಪ್ ಯಾಕೆ ಬಳಸಬೇಕು.
![]() |
Normal Writing Vs Mind Map |
ಟಿಪ್ಪಣಿಯನ್ನು ತೆಗೆದುಕೊಳ್ಳುವುದರಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಚಿತನೇ ಆಗಿರುತ್ತಾನೆ. ಇದು ಮಾಹಿತಿಯನ್ನು ಅನುಕ್ರಮವಾಗಿ ಬರೆಯುವುದನ್ನು ಒಳಗೊಂಡಿರುತ್ತದೆ. ಮೈಂಡ್ ಮ್ಯಾಪ್ ಟಿಪ್ಪಣಿಗಳ ನಡುವಿನ ಸಂಬಂಧವನ್ನು ಸುಲಭವಾಗಿ ಸ್ಥಾಪಿಸುವುದರಿಂದ ಇದನ್ನು ಬಳಸಬೇಕು.
ಮೈಂಡ್ ಮ್ಯಾಪಿನ ಕೆಲವು ಪ್ರಯೋಜನಗಳು,
• ಐಡಿಯಾ ಮತ್ತು ಮಾಹಿತಿ ನಡುವೆ ಉತ್ತಮ ತಿಳಿವಳಿಕೆಗೆ ದಾರಿ ಮಾಡಿಕೊಡುತ್ತದೆ.
• ಮಾಹಿತಿಯನ್ನು ಸುಲಭವಾಗಿ ನೆನಪಿಸಿಕೊಳ್ಳಬಹುದು.
• ಐಡಿಯಾಗಳನ್ನು ಸಂಘಟಿಸುತ್ತದೆ.
• ನಿಮ್ಮ ಮೆದುಳು ಹೊಸ ಐಡಿಯಾ ಹುಡುಕಲು ಪ್ರಯತ್ನಿಸುತ್ತದೆ.
• ಸಮಯವನ್ನು ಉಳಿಸುತ್ತದೆ.
• ಕಡಿಮೆ ಬರವಣಿಗೆಯ ಅಗತ್ಯವಿದೆ.
3. ಮೈಂಡ್ ಮ್ಯಾಪ್ ಮಾಡುವುದು ಹೇಗೆ?
![]() |
Five Steps to make Mind Map |
Step 1: ಮುಖ್ಯ ಐಡಿಯಾವನ್ನು ನಿರ್ಧರಿಸಿ.
ಮುಖ್ಯ ಐಡಿಯಾ ನಕ್ಷೆಯ ಹೆಡ್ಡಿಂಗ್(heading) ರೀತಿ ಕಾರ್ಯ ನಿರ್ವಹಿಸುತ್ತದೆ. ಇದನ್ನು ಕಾಗದದ ಮಧ್ಯಭಾಗದಲ್ಲಿ ಪ್ರಾರಂಭಿಸಿ, ಅದನ್ನು ವಿವರಿಸಲು ಕನಿಷ್ಠ ಪದಗಳನ್ನು ಬಳಸಿ. ಪದದ ಸುತ್ತ ಒಂದು ವೃತ್ತವನ್ನು ಎಳೆಯಿರಿ. ಇದಕ್ಕೆ ಬಣ್ಣದ ಪೆನ್ಸಿಲ್ ಬಳಸಿದರೆ ಅದು ಎದ್ದು ಕಾಣುತ್ತದೆ.
Step 2: ಬ್ರ್ಯಾಂಚ್ ಔಟ್ ಮಾಡಿ.
ಈಗ ನಿಮ್ಮ ಮುಖ್ಯ ಐಡಿಯಾದಿಂದ ಬ್ರ್ಯಾಂಚ್ ಔಟ್(branch out) ಮಾಡಿ. ಬ್ರ್ಯಾಂಚ್ ಔಟ್ ಸಬ್ ಹೆಟ್ಟಿಂಗ್(sub heading) ರೀತಿ ಕಾರ್ಯನಿರ್ವಹಿಸುತ್ತದೆ. ಬ್ರ್ಯಾಂಚ್ ಔಟ್ ಮಾಡುವಾಗ ಗೆರೆಗಳು ನೇರವಾಗಿರುವ ಬದಲು ಕರ್ವಿರುವಂತೆ(curve) ಗಮನಿಸಿ. ಏಕೆಂದರೆ ಮೆದುಳು ಬಾಗಿದ ರೇಖೆಗಳಿಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತದೆ.
Step 3: ಸಬ್ ಬ್ರ್ಯಾಂಚ್ ಮಾಡಿ.
ಮುಖ್ಯ ಐಡಿಯಾದಿಂದ ಬರುವ ಬ್ರ್ಯಾಂಚಿನಲ್ಲಿ ಮತ್ತೆ ಬ್ರಾಂಚ್ ಮಾಡಿದರೆ ಅದು ಸಬ್ ಬ್ರ್ಯಾಂಚ್(sub branch) ಆಗಿದೆ. ಸಬ್ ಬ್ರ್ಯಾಂಚ್ ಬಳಸುವ ಮುಂಚೆ ಎಲ್ಲಾ ಬ್ರ್ಯಾಂಚಿಗೆ ಒಂದೋ ಕೀವರ್ಡ್(keyword) ಇಡಿ.
Step 4: ನೆಟ್ವರ್ಕಿಂಗ್ ಮೇಲೆ ಕೆಲಸ ಮಾಡಿ.
ಒಂದೊಂದು ಐಡಿಯಾಗಳ ನಡುವೆ ಬರುವ ರೇಖಾ ಚಿತ್ರಗಳ ಮೇಲೆ ಕಾರ್ಯನಿರ್ವಹಿಸಿ. ಅಗತ್ಯವಿದ್ದರೆ ಹೆಚ್ಚಿನ ಬ್ರ್ಯಾಂಚ್ ಮಾಡಿ.
Step 5: ಅಂತಿಮ ಚಿತ್ರ.
ನೆಟ್‌ವರ್ಕಿಂಗ್ ಮೇಲೆ ನೀವು ಕೆಲಸ ಮಾಡಿದ ನಂತರ ನಿಮ್ಮ ಮೈಂಡ್ ಮ್ಯಾಪ್ ಸಿದ್ಧ. ಇದು ಆಕರ್ಷಕವಾಗಿ ಕಾಣದಿದ್ದರೆ ದುಃಖಿಸಬೇಡಿ. ನಿಮ್ಮ ಕಲಿಕೆಗೆ ನೀಡುವ ಮೌಲ್ಯವನ್ನು ನೆನಪಿಡಿ.
ಇವುಗಳನ್ನು ನೋಡಿ,
0 Comments