ಆನ್‌ಲೈನ್‌ನಲ್ಲಿ ಕಲಿಯುವುದು ತುಂಬಾ ಜನರಿಗೆ ಅನುಕೂಲಕರವಾಗಿದೆ. ಆದರೆ ಆನ್‌ಲೈನ್‌ನಲ್ಲಿ ಹೇಳುವ ಪಾಠಗಳನ್ನು ಅರ್ಥ ಮಾಡಿಕೊಳ್ಳುವುದು ಒಂದುವದೊಡ್ಡ ಸವಾಲು. ಆನ್‌ಲೈನ್ ಕಲಿಕೆಗೆ ನೀವು ಸಮಯ ನಿರ್ವಹಣೆ, ಸ್ವಯಂಶಿಸ್ತು, ನಿಮ್ಮ ಇಚ್ಛಾಶಕ್ತಿ ಮತ್ತು ಬಲವಾದ ಪ್ರೇರಣೆಯ ಅಗತ್ಯವಿರುತ್ತದೆ. ಇಲ್ಲಿ ನಾವು ಆನ್‌ಲೈನ್ ಕಲಿಕೆಗೆ 5 ಅಧ್ಯಯನ ಸಲಹೆಗಳನ್ನು ತಿಳಿಸುತ್ತಿದ್ದೇವೆ. ಇದು ನಿಮ್ಮ ಆನ್‌ಲೈನ್ ಕಲಿಕೆಗೆ ಸಹಾಯ ಮಾಡುತ್ತದೆ.
Watch Video
1. ಆನ್‌ಲೈನ್ ಕಲಿಕೆಯ ಅಭ್ಯಾಸಗಳನ್ನು ಅರ್ಥಮಾಡಿಕೊಳ್ಳಿ.
ಮೊದಲನೆಯದಾಗಿ ಆನ್‌ಲೈನ್‌ನಲ್ಲಿ ಕಲಿಕೆ ಕಲಿಯಲು ಸುಲಭವಾದ ಮಾರ್ಗವಲ್ಲ. ಆದರೆ ಅದು ಹೆಚ್ಚು ಅನುಕೂಲಕರವಾಗಿದೆ. ಆನ್‌ಲೈನ್ ಕಲಿಕೆಗೆ ನೀವು ನಿಮ್ಮ ಸಮಯವನ್ನು ಮೀಸಲಿಡಬೇಕು. ಒಂದು ವೇಳೆ ನೀವು ಶಾಲಾ ಅಥವಾ ಕಾಲೇಜಿನಲ್ಲಿ ಓದುತ್ತಿದ್ದರೆ, ಅವರು ನೀಡುವ ಟೈಮ್ ಟೇಬಲ್‌ಗೆ ಹೊಂದಿಕೊಳ್ಳಬೇಕು. ನಿಮ್ಮ ಆಫ್‌ಲೈನ್ ತರಗತಿಯಂತೆ ನಿಮ್ಮ ಆನ್‌ಲೈನ್ ತರಗತಿಯನ್ನು ತೆಗೆದುಕೊಳ್ಳಬೇಕು. ಹೀಗಾಗಿ ಆನ್‌ಲೈನ್ ಕಲಿಕೆಯ ಅಭ್ಯಾಸ ಮಾಡಿಕೊಳ್ಳಲು ಪ್ರಯತ್ನಿಸಿ.
2. ಇಂಟರ್ನೆಟ್ ಯಾವಾಗಲೂ ಸಿಗುವ ಜಾಗವನ್ನು ಖಚಿತಪಡಿಸಿಕೊಳ್ಳಿ.
ತಂತ್ರಜ್ಞಾನದಲ್ಲಿ ತೊಂದರೆಗಳು ಸಾರ್ವಕಾಲಿಕವಾಗಿ ಸಂಭವಿಸುತ್ತದೆ. ನೀವು ಆನ್‌ಲೈನ್ ಪಾಠ ಕೇಳುವಾಗ ಈ ಇಂಟರ್ನೆಟ್ ಸಮಸ್ಯೆ ಬಾರದೆ ಇರಲು, ಇಂಟರ್ನೆಟ್ ಸರಿಯಾಗಿ ಯಾವಾಗಲು ಸಿಗುವ ಜಾಗವನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ನಿಮ್ಮ ಇಂಟರ್ನೆಟ್ ನಿಧಾನವಿದ್ದಾರೆ, ನಿಮ್ಮ ತಂತ್ರಜ್ಞಾನದಲ್ಲಿ ತೊಂದರೆಗಳು ಸಾರ್ವಕಾಲಿಕವಾಗಿ ಸಂಭವಿಸುತ್ತದೆ ನೀವು ಆನ್‌ಲೈನ್ ತರಗತಿಯನ್ನು ಆಡಿಯೋ ಮೋಡ್‌ನಲ್ಲಿ ಕೇಳಬಹುದು. ಇದು ಸ್ವಲ್ಪ ಕಷ್ಟವೆನಿಸಿದರೂ, ಪಾಠ ಕೇಳದೆ ಇರುವುದಕ್ಕಿಂತ ಉತ್ತಮವಾಗಿದೆ. ಆದರೆ ಉತ್ತಮ ಕಲಿಕೆಗೆ ಇಂಟರ್ನೆಟ್ ಯಾವಾಗಲೂ ಸಿಗುವ ಜಾಗವನ್ನು ಆರಿಸಿ.
3. ಆನ್‌ಲೈನ್ ತರಗತಿಯ ಸ್ಕ್ರೀನ್ ಶಾಟ್ ತೆಗೆದುಕೊಳ್ಳಿ.
ಆನ್‌ಲೈನ್ ತರಗತಿಯಲ್ಲಿ ನಿಮಗೆ ಪಿಡಿಎಫ್, ಲೈವ್ ಬೋರ್ಡ್ ಅಥವಾ ಆಡಿಯೋ ಮೋಡ್‌ನಲ್ಲಿ ಪಾಠ ಮಾಡುತ್ತಾರೆ. ನೀವು ಆನ್‌ಲೈನ್ ತರಗತಿಗೆ ಹಾಜರಾದಾಗ ಪುಸ್ತಕ ಮತ್ತು ಪೆನ್ನನ್ನು ತೆಗೆದುಕೊಂಡಿರಿ. ಅಲ್ಲಿ ಹೇಳುವ ಎಲ್ಲ ಮಾಹಿತಿಗಳನ್ನು ನಿಮ್ಮ ಪುಸ್ತಕದಲ್ಲಿ ಬರೆಯಿರಿ. ಒಂದು ವೇಳೆ ಆ ಸಮಯದಲ್ಲಿ ನಿಮಗೆ ಪಾಠವನ್ನಷ್ಟೆ ಕೇಳಬೇಕು ಎಂದಿದ್ದಾರೆ. ನಿಮ್ಮ ಆನ್‌ಲೈನ್ ತರಗತಿಯನ್ನು ರೆಕಾರ್ಡ್ ಮಾಡಿ ಅಥವಾ ಬರೆಯಬೇಕಾದ ವಿಷಯದ ಸ್ಕ್ರೀನ್ ಶಾಟ್ ತೆಗೆದುಕೊಳ್ಳಿ. ನೀವು ಸ್ಕ್ರೀನ್ ಶಾಟ್ ತೆಗೆದುಕೊಂಡಿರುವುದನ್ನು ತರಗತಿ ಮುಗಿದ ನಂತರ ನಿಮ್ಮ ಪುಸ್ತಕದಲ್ಲಿ ಬರೆಯಿರಿ. ನಾವು ಎಷ್ಟು ಬರೆದು ಕಲಿಯುತ್ತೇವೋ, ಅಷ್ಟು ನಮ್ಮ ನೆನಪಿನಲ್ಲಿ ಚೆನ್ನಾಗಿ ಉಳಿಯುತ್ತದೆ.
4. ಬೆಳಕು ತುಂಬಾ ಇರುವ ಜಾಗದಲ್ಲಿ ಆನ್‌ಲೈನ್ ಪಾಠವನ್ನು ಕೇಳಿ.
ಆನ್‌ಲೈನ್‌ನಲ್ಲಿ ಪಾಠ ಕೇಳುವುದರಿಂದ ನಿಮ್ಮ ಕಣ್ಣಿಗೆ ತುಂಬಾ ಒತ್ತಡ ಬೀಳುತ್ತದೆ. ಹೀಗಾಗಿ ನೀವು ಆನ್‌ಲೈನ್ ತರಗತಿಯನ್ನು ಕೇಳುವಾಗ ಆದಷ್ಟು ಬೆಳಕು ಇರುವ ಜಾಗವನ್ನು ನೋಡಿ. ಆನ್‌ಲೈನ್ ತರಗತಿಯನ್ನು ತುಂಬಾ ಕತ್ತಲಿರುವ ಅಥವಾ ಮಂದ ಬೆಳಕು ಇರುವ ಜಾಗದಲ್ಲಿ ಕೇಳಬೇಡಿ. ಆನ್‌ಲೈನ್ ಪಾಠದ ಮೇಲೆ ನಿಮಗೆ ಯಾವುದೇ ಸಮಸ್ಯೆ ಇದ್ದರೆ, ನಿಮ್ಮ ಟೀಚರ್ ಅಥವಾ ಪೋಷಕರಿಗೆ ತಿಳಿಸಿ.
5. RRR(ರಿವೀವ್, ರಿವೈಸ್, ರಿಪೀಟ್).
ಆನ್‌ಲೈನ್ ತರಗತಿಯನ್ನು ಕೇಳಿ ನೀವು ಬರೆದ ನೋಟ್ಸ್‌ಗಳನ್ನು ನೀವು ಓದುತ್ತಾ ಇರಿ. ಹಾಗೆಯೇ ಮುಂದೆ ಮಾಡುವ ಪಾಠಗಳನ್ನು ಬರೆಯುತ್ತಾ ಅವುಗಳನ್ನು ಕಲಿಯುತ್ತೀರಿ. ನಿಮ್ಮ ಆನ್‌ಲೈನ್ ತರಗತಿ ಕೇವಲ ಪಾಠ ಕೇಳಲು ಮತ್ತು ಬರೆಯಲು ಮಾತ್ರ ಸೀಮಿತಗೊಳಿಸಿ. ಪಾಠಗಳನ್ನು ಯಾವಾಗಲೂ ಓದಲು ಪುಸ್ತಕದಲ್ಲಿ ಬರೆಯುವುದು ಒಳ್ಳೆಯದು. ಇದು ತರಗತಿಯ ಪಾಠಗಳನ್ನು ಓದಬೇಕು ಅನಿಸಿದಾಗಲೆಲ್ಲ ಸ್ಮಾರ್ಟ್‌ಪೋನ್ ನೋಡುವುದನ್ನು ತಪ್ಪಿಸುತ್ತದೆ.
ಕೊನೆಯದಾಗಿ, ಆನ್‌ಲೈನ್ ತರಗತಿಯನ್ನು ಕೇಳುವಾಗ ಅಲ್ಲಿ ತಿಳಿಸುವ ವಿಷಯದ ಬಗ್ಗೆ ಯಾವುದೇ ಸಂದೇಹವಿದ್ದರೆ, ಆ ಸಮಯದಲ್ಲೇ ನಿಮ್ಮ ಟೀಚರ್ಗೆ ಕೇಳಿ. ಒಂದು ವೇಳೆ ಅಲ್ಲಿ ಅವರಿಗೆ ಕೇಳಲು ಸಾಧ್ಯವಾಗಿಲ್ಲವೆಂದರೆ, ನೀವು ಅವರಿಗೆ ನಂತರ ಕರೆ ಮಾಡಿ ಕೇಳಬಹುದು ಅಥವಾ ನಿಮ್ಮ ಗೆಳೆಯಾರಿಗಾದರೂ ಕೇಳಬಹುದು. ನೀವು ಒಮ್ಮೆ ಆನ್‌ಲೈನ್‌ನಲ್ಲಿ ಕಲಿತ ವಿಷಯಗಳನ್ನು ಪುಸ್ತಕದಲ್ಲಿ ಬರೆಯುವ ಮೂಲಕ, ಆ ವಿಷಯವನ್ನು ಆಫ್‌ಲೈನ್ ಮಾಡಿಕೊಳ್ಳಿ.
Don't forget to Comment Your Opinion on This Article.
Share and Support Us.
0 Comments