ದೊಡ್ಡ ವೈಫಲ್ಯಗಳನ್ನು ಅನುಭವಿಸುವುದು ಜೀವನದ ಕೆಟ್ಟ ವಿಷಯಗಳಲ್ಲಿ ಒಂದಾಗಿದೆ. ಇದು ನಿಮ್ಮನ್ನು ನಕಾರಾತ್ಮಕ ಭಾವನೆಯಿಂದ ತುಂಬುತ್ತದೆ ಮತ್ತು ನಿರುಪಯುಕ್ತ ಭಾವನೆಯನ್ನು ನೀಡುತ್ತದೆ. ಅದಕ್ಕಾಗಿಯೇ ಹೆಚ್ಚಿನ ಜನರು ವೈಫಲ್ಯವನ್ನು ತಪ್ಪಿಸಲು ಹೊಸತನ್ನು ಎಂದಿಗೂ ಪ್ರಯತ್ನಿಸುವುದಿಲ್ಲ. ಆದರೆ ಸತ್ಯವೆಂದರೆ ವೈಫಲ್ಯ ಸಕಾರಾತ್ಮಕ ಭಾಗವನ್ನು ಹೊಂದಿದೆ.
Watch Video
ವೈಫಲ್ಯವನ್ನು ಅನುಭವಿಸುವುದು ನೀವು ಕಲಿಯದ ಪಾಠಗಳನ್ನು ಕಲಿಸುವಂತೆ ಮಾಡುತ್ತದೆ. ವಾಸ್ತವವಾಗಿ, ಜಗತ್ತಿನ ಯಶಸ್ವಿ ಜನರು ತಮ್ಮ ಹಿಂದಿನ ವೈಫಲ್ಯಗಳಿಂದ ಕಲಿತ ಪಾಠದಿಂದಲೇ ಯಶಸ್ಸನ್ನು ಸಾಧಿಸಲು ಸಾಧ್ಯವಾಯಿತು. ನೀವು ಇತ್ತೀಚೆಗೆ ದೊಡ್ಡ ವೈಫಲ್ಯವನ್ನು ಅನುಭವಿಸಿದ್ದೀರಾ. ವೈಫಲ್ಯದಿಂದ ನೀವು ಕಲಿಯಬಹುದಾದ ಆರು ಪ್ರಮುಖ ಪಾಠಗಳು ಇಲ್ಲಿವೆ.
1. ವೈಫಲ್ಯವು ಯಶಸ್ಸು ಎಂದಿಗೂ ಖಾತರಿಯಲ್ಲ ಎಂದು ನಿಮಗೆ ತಿಳಿಸುತ್ತದೆ.
ಕನಸಿನ ಕೆಲಸ, ಆನ್‌ಲೈನ್ ವ್ಯವಹಾರ ಅಥವಾ ಯಾವುದೇ ಹೊಸದನ್ನು ಪ್ರಯತ್ನಿಸುತ್ತಿರುವಾಗ ಪ್ರತಿಯೊಬ್ಬರು ಯಶಸ್ಸನ್ನು ಸಾಧಿಸಲು ಬಯಸುತ್ತಾರೆ. ದುರದೃಷ್ಟವಶಾತ್, ಯಶಸ್ಸಿನ ಈ ಬಯಕೆ ಕೆಲವೊಮ್ಮೆ ಸೀಮಿತವಾಗಬಹುದು. ಉದಾಹರಣೆಗೆ, ಕೆಲವು ಜನರು ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುತ್ತಾರೆ, ಆದರೆ ಅವರು ಅದನ್ನು ಎಂದಿಗೂ ಮಾಡುವುದಿಲ್ಲ. ಏಕೆಂದರೆ ಅವರು ಯಶಸ್ಸನ್ನು ಸಾಧಿಸುತ್ತಾರೆಯೇ ಎಂದು ಖಚಿತವಾಗಿ ತಿಳಿದಿರುವುದಿಲ್ಲ. ಇನ್ನು ಕೆಲವರು ಅವರ ಯಶಸ್ಸಿಗೆ ಸರಿಯಾದ ಸಮಯ ಬರಲು ಕಾಯುತ್ತಿರುತ್ತಾರೆ. ಆದರೆ ಆ ಸಮಯ ಬರುವುದೇ ಇಲ್ಲ. ವೈಫಲ್ಯವನ್ನು ಅನುಭವಿಸಿದವರು ಯಶಸ್ವು ಎಂದಿಗೂ ಖಾತರಿಯಿಲ್ಲ ಎಂದು ಅರ್ಥ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ನಿಮ್ಮ ನಿಯಂತ್ರಣದ ಹೊರಗಿನ ಅಂಶಗಳಿಂದ ವೈಫಲ್ಯ ಸಂಭವಿಸುತ್ತದೆ. ವೈಫಲ್ಯದಿಂದ ಹೊರಬರಲು ಪ್ರಯತ್ನಿಸುವುದು ನಿಮ್ಮ ಯಶಸ್ಸನ್ನು ಖಾತರಿಪಡಿಸುತ್ತದೆ. ಇದೇ ಯಶಸ್ಸಿಗೆ ಕಾರಣವಾಗುತ್ತದೆ.
2. ವೈಫಲ್ಯವು ಬದಲಾವಣೆಯನ್ನು ಸ್ವೀಕರಿಸಲು ನಿಮಗೆ ಕಲಿಸುತ್ತದೆ.
ಒಂದೇ ಕೆಲಸವನ್ನು ಮತ್ತೆ ಮತ್ತೆ ಮಾಡುತ್ತಾ, ವಿಭಿನ್ನ ಫಲಿತಾಂಶಗಳನ್ನು ನಿರೀಕ್ಷಿಸುವುದು ಹುಚ್ಚುತನವಾಗಿದೆ ಎಂದು ಆಲ್ಬರ್ಟ್ ಐನ್‍ಸ್ಟೈನ್ ಹೇಳಿದ್ದಾರೆ. ನೀವು ಮೊದಲಿನಂತೆ ಕೆಲಸ ಮಾಡುತ್ತಿದ್ದರೆ, ಇನ್ನು ಹೆಚ್ಚಿನ ವೈಫಲ್ಯವನ್ನು ಎದುರಿಸುತ್ತಲೇ ಇರುತ್ತೀರಿ. ನಿಮ್ಮ ವೈಫಲ್ಯವನ್ನು ನಿವಾರಿಸಲು ನಿಮ್ಮ ವಿಧಾನದಲ್ಲಿ ಏನನ್ನಾದರೂ ಬದಲಾಯಿಸಬೇಕು. ನಿಮ್ಮ ಕೆಲಸದಲ್ಲಿ ನೀವು ಮಾಡುವ ತಪ್ಪನ್ನು ತಿಳಿದು ತದನಂತರ ಅದನ್ನು ಬದಲಾಯಿಸಲು ಪ್ರಯತ್ನಿಸಿ.
3. ವೈಪಲ್ಯ ಪ್ರೇರಣೆಯ ಉತ್ತಮ ಮೂಲವಾಗಿದೆ.
4 . ವೈಫಲ್ಯ ಅಂತಿಮವಲ್ಲ.
ಕೆಲವರಿಗೆ ದೊಡ್ಡ ವೈಫಲ್ಯಗಳನ್ನು ಅನುಭವಿಸಿದ ನಂತರ ಜಗತ್ತೇ ಅಂತ್ಯಗೊಂಡಂತೆ ಭಾಸವಾಗುತ್ತದೆ. ಆದರೆ ಜಗತ್ತಿನ ಕೆಲವು ಯಶಸ್ವಿ ಜನರ ವೈಫಲ್ಯಗಳಿಂದ ನೀವು ಕಲಿಯಬಹುದಾದ ಒಂದು ವಿಷಯವೆಂದರೆ, ವೈಫಲ್ಯ ಅಂತಿಮವಲ್ಲ. ಸ್ಟೀವ್ ಜಾಬ್ಸ್ ಅವರನ್ನು ಕಂಪನಿಯಿಂದ ಹೊರ ಹಾಕಲಾಯಿತು. ಆದರೆ ಅವರು ತಮ್ಮ ಕಂಪನಿಯಾದ ಆ್ಯಪಲನ್ನು ಮಾಡಿದರು. ವಾಲ್ಟ್ ಡಿಸ್ನಿಗೆ ಯಾವುದೇ ಕ್ರಿಯೇಟಿವ್ ಐಡಿಯಾ ಇಲ್ಲವೆಂದು ನ್ಯೂಸ್ ಪೇಪರ್ ಎಡಿಟಿಂಗ್ ಕೆಲಸಕ್ಕೆ ತೆಗೆದುಕೊಳ್ಳಲಿಲ್ಲ. ಅವರು ಕೂಡ ಅವರ ಒಂದು ಕಂಪನಿ ಮಾಡಿ ಯಶಸ್ಸು ಸಾಧಿಸಿದರು.
5. ವೈಫಲ್ಯವು ನಿಮ್ಮ ದೃಷ್ಟಿಕೋನವನ್ನು ವಿಸ್ತರಿಸುತ್ತದೆ.
6. ವೈಫಲ್ಯವೂ ವಿನಮ್ರವಾಗಿರಲು ಕಲಿಸುತ್ತದೆ.
Don't forget to Comment Your Opinion on This Article.
Share and Support Us.
1 Comments
Super
ReplyDelete