ಭೂಮಿಯು ತನ್ನ ವಾತಾವರಣವನ್ನು ಕಳೆದುಕೊಂಡರೆ ಏನಾಗಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ. ನಮ್ಮ ಭೂಮಿ ನಿಧಾನವಾಗಿ ತನ್ನ ವಾತಾವರಣವನ್ನು ಕಳೆದುಕೊಳ್ಳುತ್ತಿದೆ ಎಂದು ನಂಬಲಾಗಿದೆ. ಒಂದು ವೇಳೆ ಭೂಮಿ ತಕ್ಷಣವೇ ತನ್ನ ವಾತಾವರಣವನ್ನು ಕಳೆದುಕೊಂಡರೆ ಏನಾಗುತ್ತದೆ. ಅದು ಎಷ್ಟು ಕೆಟ್ಟದಾಗಿರುತ್ತದೆ, ಎಷ್ಟು ಜನರು ಸಾಯುತ್ತಾರೆ, ಇದರಿಂದ ಭೂಮಿ ಚೇತರಿಸಿಕೊಳ್ಳಬಹುದೇ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ವೀಡಿಯೊದಲ್ಲಿದೆ.
Watch Video
-
ಎಲ್ಲಾ ಕಡೆ ಮೌನ ಆವರಿಸುತ್ತದೆ. ಅಲೆಗಳನ್ನು ರವಾನಿಸಲು ಶಬ್ದಕ್ಕೆ ಮಾಧ್ಯಮ ಬೇಕು. ನೀವು ನೆಲದಿಂದ ಕಂಪನಗಳನ್ನು ಅನುಭವಿಸಬಹುದು. ಆದರೆ ನಿಮಗೆ ಏನೂ ಕೇಳುವುದಿಲ್ಲ.
-
ಆಕಾಶದಲ್ಲಿ ಹಾರಾಡುತ್ತಿರುವ ಪಕ್ಷಿ ಮತ್ತು ವಿಮಾನಗಳು ಕೆಳಗೆ ಬೀಳುತ್ತವೆ. ನಮಗೆ ಅದನ್ನು ನೋಡಲು ಸಾಧ್ಯವಿಲ್ಲ ಏಕೆಂದರೆ ಆಕಾಶ ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ. ಇಂದು ವಾತಾವರಣದಿಂದಲೇ ಆಕಾಶ ನೀಲಿ ಬಣ್ಣದಲ್ಲಿ ಕಾಣುತ್ತದೆ.
- ಭೂಮಿಯ ಮೇಲ್ಮೈಯಲ್ಲಿರುವ ಎಲ್ಲಾ ಅಸುರಕ್ಷಿತ ಸಸ್ಯ ಮತ್ತು ಪ್ರಾಣಿಗಳು ಸಾಯುತ್ತವೆ. ಕಿವಿಯ ಡ್ರಂ ಒಡೆದುಹೋಗುತ್ತದೆ. ಲಾವಾರಸ ಕುದಿಯುತ್ತದೆ. ನೀವು ಉಸಿರನ್ನು ಹಿಡಿದಿಟ್ಟುಕೊಂಡರೆ ನಿಮ್ಮ ಶ್ವಾಸಕೋಶ ಊದಿಕೊಂಡು ಒಡೆದು ಹೋಗುತ್ತದೆ. ಇದರಿಂದ ನೀವು ಭಾರೀ ನೋವಿನಿಂದ ಸಾಯುತ್ತೀರಾ. ಒಂದು ವೇಳೆ ನೀವು ಉಸಿರನ್ನು ಬಿಟ್ಟರೆ 15 ಸೆಕೆಂಡ್‌ನಿಂದ 3 ನಿಮಿಷಗಳವರೆಗೆ ಬದುಕುತ್ತೀರಿ. ನಿಮ್ಮ ಹತ್ತಿರ ಆಕ್ಸಿಜನ್ ಟ್ಯಾಂಕ್ ಇದ್ದರು, ಉಸಿರಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಡಯಾಫ್ರಾಮ್ ಉಸಿರಾಟವನ್ನು ಶ್ವಾಸಕೋಶದ ಒಳಗೆ ಮತ್ತು ನಿಮ್ಮ ದೇಹದ ಹೊರಗಿನ ಗಾಳಿಯ ನಡುವಿನ ಒತ್ತಡದ ವ್ಯತ್ಯಾಸದ ಮೇಲೆ ನಡೆಸುತ್ತದೆ.
-
ನೀವು ಒತ್ತಡದ ಸೂಟ್ ಮತ್ತು ಆಕ್ಸಿಜನ್ ಟ್ಯಾಂಕ್ ಹೊಂದಿದ್ದರೆ, ನೀವು ಬದುಕುತ್ತೀರಿ. ಆದರೆ ನಿಮ್ಮ ಚರ್ಮಕ್ಕೆ ಸನ್ ಬರ್ನ ಆಗುತ್ತದೆ. ಭೂಮಿಯ ವಾತಾವರಣ ಸೌರ ವಿಕಿರಣವನ್ನು ಶೋಧಿಸುತ್ತದೆ. ವಾತಾವರಣವೇ ಇಲ್ಲದಿದ್ದಾಗ ಈ ಆ ವಿಕಿರಣಗಳು ಭೂಮಿಯ ನೆಲವನ್ನು ಮುಟ್ಟುತ್ತವೆ. ನೀವು ಭೂಮಿಯ ಕತ್ತಲಿನ ಪ್ರದೇಶದಲ್ಲಿದ್ದರೆ ಎಷ್ಟು ತೊಂದರೆಗೆ ಒಳಗಾಗುತ್ತೀರಿ ಎಂದು ಹೇಳುವುದು ಕಷ್ಟ. ಆದರೆ ನೇರ ಸೂರ್ಯನ ಬೆಳಕಿನಲ್ಲಿದರೆ ಇದು ತುಂಬಾ ಅಪಾಯಕಾರಿಯಾಗಿದೆ.
-
ನದಿ, ಸರೋವರ ಮತ್ತು ಸಾಗರಗಳು ಕುದಿಯುತ್ತದೆ. ದ್ರವದ ಆವಿಯ ಒತ್ತಡ ಬಾಹ್ಯ ಒತ್ತಡವನ್ನು ಮೀರಿದಾಗಲೆಲ್ಲಾ ಕುದಿಯುವುದು ಸಂಭವಿಸುತ್ತದೆ. ವ್ಯಾಕ್ಯೂಮಿನಲ್ಲಿ ತಾಪಮಾನ ಬೆಚ್ಚಗಿದ್ದರೂ ಸಹ ನೀರು ಸುಲಭವಾಗಿ ಕುದಿಯುತ್ತದೆ.
-
ನೀರು ಕುದಿಯುತ್ತಿದ್ದರೂ ನೀರಿನ ಆವಿ ವಾತಾವರಣದ ಒತ್ತಡವನ್ನು ಸಂಪೂರ್ಣವಾಗಿ ತುಂಬುವುದಿಲ್ಲ. ಸಾಗರಗಳು ಕುದಿಯದಂತೆ ತಡೆಯಲು ಸಾಕಷ್ಟು ನೀರಿನ ಆವಿಗಳು ಸಮತೋಲನ ಹಂತವನ್ನು ತಲುಪುತ್ತವೆ. ಇದರಿಂದ ಉಳಿದ ನೀರು ಹೆಪ್ಪುಗಟ್ಟುತ್ತದೆ.
-
ಸೂರ್ಯನ ವಿಕಿರಣ ನೀರಿನಿಂದ ಆಮ್ಲಜನಕವನ್ನು ಬೇರ್ಪಡಿಸುತ್ತದೆ. ಆ ಆಮ್ಲಜನಕ ಭೂಮಿಯ ಇಂಗಾಲದ ಜೊತೆ ಬೆರೆತು ಇಂಗಾಲದ ಡೈ ಆಕ್ಸೈಡ್ ರೂಪುಗೊಳ್ಳುತ್ತದೆ. ಇದರಿಂದ ಉಸಿರಾಡಲು ತುಂಬಾ ಕಡಿಮೆ ಆಮ್ಲಜನಕವಿರುತ್ತದೆ.
-
ವಾತಾವರಣದ ಕೊರತೆಯೂ ಭೂಮಿಯ ಮೇಲ್ಮೈಯನ್ನು ತಣ್ಣಗಾಗಿಸುತ್ತದೆ. ಅದು ಸಂಪೂರ್ಣ ಶೂನ್ಯಕ್ಕೆ ಹೋಗದಿದ್ದರೂ, ಅಲ್ಲಿನ ಹತ್ತಿರದ ತಾಪಮಾನಕ್ಕೆ ಹೋಗುತ್ತದೆ.
-
ಸಾಗರಗಳಿಂದ ಬರುವ ನೀರಿನ ಆವಿ ಗ್ರೀನ್‌ಹೌಸ್ ಅನಿಲವಾಗಿ ಕಾರ್ಯನಿರ್ವಹಿಸುತ್ತವೆ. ಇದರಿಂದ ತಾಪಮಾನ ಹೆಚ್ಚುತ್ತಾ ಹೋಗುತ್ತದೆ. ಈ ಸಮಯದಲ್ಲಿ ಭೂಮಿ ಶುಕ್ರ ಗ್ರಹದ ರೀತಿ ಕಾಣುತ್ತದೆ.
-
ಉಸಿರಾಡಲು ಗಾಳಿ ಅಗತ್ಯವಿರುವ ಜೀವಿಗಳು ಸಾಯುತ್ತವೆ, ಸಸ್ಯ ಮತ್ತು ಪ್ರಾಣಿಗಳು ಸಾಯುತ್ತವೆ, ಮೀನುಗಳು ಸಾಯುತ್ತವೆ, ಹೆಚ್ಚಿನ ಜಲಚರ ಜೀವಿಗಳು ಸಾಯುತ್ತವೆ, ಆದರೂ ಕೆಲವು ಬ್ಯಾಕ್ಟೀರಿಯಾಗಳು ಬದುಕಬಲ್ಲವು. ಕೀಮೋ ಸೈಂಥೆಟಿಕ್ ಬ್ಯಾಕ್ಟೀರಿಯವು ವಾತಾವರಣದ ನಷ್ಟವನ್ನು ಗಮನಿಸುವುದಿಲ್ಲ.
- ಜ್ವಾಲಾಮುಖಿಗಳು ಇಂಗಾಲದ ಡೈ ಆಕ್ಸೈಡ್ ಮತ್ತು ಇತರ ಅನಿಲಗಳನ್ನು ನೀರಿಗೆ ಸೇರಿಸಲು ಮುಂದುವರಿಯುತ್ತವೆ. ವಾತಾವರಣ ಒಮ್ಮೆಲೆ ಹೋದರೆ, ಭೂಮಿಯ ಮೇಲಿನ ನೈಟ್ರೋಜನ್ ಕಡಿಮೆಯಾಗುತ್ತದೆ.
#ಇದರಿಂದ ಮಾನವರ ಬದುಕುಳಿಯಬಹುದೇ?
ಭೂಮಿಯ ಮೇಲೆ ರೇಡಿಯೇಷನ್ ತಡೆಯುವಂಥ ಗುಮ್ಮಟಗಳನ್ನು ನಿರ್ಮಿಸಬೇಕು. ಆ ಗುಮ್ಮಟಗಳಲ್ಲಿ ಸರಿಯಾದ ಒತ್ತಡ ಮತ್ತು ಸಸ್ಯ ಜೀವನವನ್ನು ಬೆಂಬಲಿಸುವ ವಾತಾವರಣವನ್ನು ಸೃಷ್ಟಿಸಬೇಕು. ಇದನ್ನು ಮಾಡಲು ನಮಗೆ ಸಮಯ ಬೇಕಾಗಬಹುದು. ಇದು ಒಂದು ರೀತಿ ಬೇರೆ ಗ್ರಹದಲ್ಲಿ ಬದುಕಲು ಪ್ರಯತ್ನಿಸುವುದಕ್ಕಿಂತ ಹೆಚ್ಚು ಭಿನ್ನವಾಗಿರುವುದಿಲ್ಲ.
ಇನ್ನು ಎರಡನೆಯದಾಗಿ ಗುಮ್ಮಟಗಳನ್ನು ಸಮುದ್ರದ ಕೆಳಗೆ ನಿರ್ಮಿಸುವುದು. ಸಮುದ್ರದ ನೀರು ಒತ್ತಡವನ್ನು ನೀಡುತ್ತದೆ ಮತ್ತು ಕೆಲವು ಸೌರ ವಿಕಿರಣಗಳನ್ನು ತಡೆಯುತ್ತದೆ. ನಾವು ಅಲ್ಲೇ ಸಸ್ಯಗಳನ್ನು ಬೆಳೆಸಬೇಕಾಗುತ್ತದೆ.
#ಇದು ಸಂಭವಿಸಬಹುದೇ?
ಭೂಮಿಯ ಮ್ಯಾಗ್ನೆಟಿಕ್ ಫೀಲ್ಡ್ ಸೌರ ವಿಕಿರಣದಿಂದ ವಾತಾವರಣವನ್ನು ರಕ್ಷಿಸುತ್ತದೆ. ಬಹುಶಃ ಬೃಹತ್ ಸೌರ ಚಂಡಮಾರುತ ವಾತಾವರಣವನ್ನು ಸುಡಬಹುದು. ಬೃಹತ್ ಉಲ್ಕೆ ಪ್ರಭಾವದಿಂದಾಗಿಯು ಭೂಮಿಯ ವಾತಾವರಣದ ನಷ್ಟ ಸಂಭವಿಸಬಹುದು. ಭೂಮಿ ಸೇರಿದಂತೆ ಆಂತರಿಕ ಗ್ರಹಗಳ ಮೇಲೆ ಹಲವಾರು ಬಾರಿ ಈ ರೀತಿಯ ದೊಡ್ಡ ಪರಿಣಾಮಗಳು ಸಂಭವಿಸಿದೆ. ಆದರೂ ಇದರಿಂದ ವಾತಾವರಣದ ಕೆಲವು ಭಾಗ ಮಾತ್ರ ಕಳೆದುಹೋಗುತ್ತದೆ. ಇದು ಒಂದು ರೀತಿ ಅನಿಲವನ್ನು ಇನ್ನೊಂದಕ್ಕೆ ಬದಲಾಯಿಸುವ ರಾಸಾಯನಿಕ ಕ್ರಿಯೆಯಾಗಿದೆ.
ಇದನ್ನು ಓದಿ,
Don't forget to Comment Your Opinion on This Article.
Share and Support Us.
0 Comments