Things on Earth that can Seen from Space | ಭೂಮಿಯ ಮೇಲೆ ಇರುವ ಇವುಗಳನ್ನು ಬಾಹ್ಯಾಕಾಶದಿಂದಲೂ ನೋಡಬಹುದು.

ಭೂಮಿಯ ಮೇಲೆ ಇರುವ ಎಲ್ಲವೂ ಬಾಹ್ಯಾಕಾಶದಿಂದ ಕಾಣುವುದಿಲ್ಲ. ಬಾಹ್ಯಾಕಾಶದಿಂದಲೂ ಭೂಮಿಯ ಮೇಲೆ ಏನೇನನ್ನು ನೋಡಬಹುದೆಂದು ತಿಳಿಯಲು ಎಲ್ಲರಿಗೂ ಕುತೂಹಲವಿದೆ. ಕೆಲವು ಭೌಗೋಳಿಕ ಲಕ್ಷಣಗಳು ಮತ್ತು ಮಾನವನಿಂದ ಮಾಡಲ್ಪಟ್ಟ ಬೃಹತ್ ಕಟ್ಟಡಗಳು ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ ಎಂದು ತಿಳಿಯಲು ಈ ವಿಡಿಯೋ ನೋಡುತ್ತೀರಿ.


Watch Video


1. ರಾತ್ರಿಯ ನಗರಗಳು.


night cities from space in kannada, info mind, infomindkannada


     ಗಗನಯಾತ್ರಿಗಳು ಭೂಮಿಯ ಮೇಲಿನ ಖಂಡಗಳ ಆಕಾರಗಳನ್ನು ವಿಶ್ಲೇಷಿಸುವ ಮೂಲಕ ಬಾಹ್ಯಾಕಾಶದಿಂದ ಗುರುತಿಸಬಹುದು. ಅದರಲ್ಲೂ ಪ್ರಕಾಶಮಾನವಾಗಿ ಹೊಳೆಯುವ ನಗರಗಳ ವೀಕ್ಷಣೆ ಹೆಚ್ಚು ಪ್ರಭಾವಶಾಲಿ ದೃಶ್ಯಗಳಾಗಿವೆ. ಮುಖ್ಯವಾಗಿ ಅಮೇರಿಕಾ, ಯೂರೋಪ್ ಮತ್ತು ಭಾರತದಲ್ಲಿರುವ ಹೆಚ್ಚಿನ ನಗರಗಳು ಬಾಹ್ಯಾಕಾಶದಿಂದ ರಾತ್ರಿಯ ವೇಳೆ ಕಾಣುತ್ತದೆ.


2. ಪಾಮ್ ದ್ವೀಪ, ದುಬೈ.


palm trees in kannada, palm island from space in kannada, dubai in kannada, info mind, infomindkannada


     ಜಗತ್ತಿನ ಅತಿ ದೊಡ್ಡ ಕೃತಕ ದ್ವೀಪವಾಗಿರುವ ಪಾಮ್ ದ್ವೀಪ ಮತ್ತು ವರ್ಲ್ಡ್ ಐಲ್ಯಾಂಡ್ ಬಾಹ್ಯಾಕಾಶದಿಂದ ಕಾಣುವುದರಲ್ಲಿ ಆಶ್ಚರ್ಯವಿಲ್ಲ. ಪಾಮ್ ದ್ವೀಪ ತಾಳೆಮರದ ಆಕಾರದಲ್ಲಿ ಇದ್ದು, 1ಲಕ್ಷ ಕ್ಯೂಬಿಕ್ ಮೀಟರ್ ಪ್ರದೇಶದಲ್ಲಿ ಹರಡಿದೆ. ಮಾನವನಿಂದ ಮಾಡಲ್ಪಟ್ಟ ಈ ದ್ವೀಪಗಳಲ್ಲಿ ನೂರಾರು ಐಷಾರಾಮಿ ಹೋಟೆಲ್, ವಿಲ್ಲಾ, ಶಾಪಿಂಗ್ ಮಾಲ್ ಮತ್ತು ಉದ್ಯಾನವನಗಳನ್ನು ಭೇಟಿಮಾಡಬಹುದು.


3. ಫೈಟೊಪ್ಲಾಂಕ್ಟನ್ ಬ್ಲೂಮ್ಸ್.


phytoplankton blooms from space in kannada, plankton flowers in kannada, info mind, infomindkannada


     ಪ್ಲಾಂಕ್ಟಾನ್ ಹೂವುಗಳು ಸಾಗರಗಳಲ್ಲಿ ಸಾಮಾನ್ಯ ಮತ್ತು ಬೆರಗುಗೊಳಿಸುವ ವಿದ್ಯಮಾನವಾಗಿದೆ. ಸಮುದ್ರದ ಮೇಲ್ಮೈಯಲ್ಲಿರುವ ಲೆಕ್ಕವಿಲ್ಲದಷ್ಟು ಸೂಕ್ಷ್ಮ ಸಸ್ಯಗಳ ಸಾಂದ್ರತೆಯನ್ನು ಫೈಟೋಪ್ಲಾಂಕ್ಟನ್ ಎಂದು ಕರೆಯಲಾಗುತ್ತದೆ. ಪ್ಲಾಂಕ್ಟಾನ್ ಹೂವುಗಳು ಬೆಚ್ಚಗಿನ ಸಮುದ್ರದ ನೀರಿನಲ್ಲಿ ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಇದು ಬಾಹ್ಯಾಕಾಶದಿಂದ ಬಹುಬಣ್ಣದ ಸುಳಿಯಂತೆ ಕಂಡುಬರುತ್ತದೆ. ಇವುಗಳು ಸಣ್ಣ ಸಾಗರ ಜೀವಿಗಳಿಂದಿಡಿದು, ದೊಡ್ಡ ತಿಮಿಂಗಿಲಗಳಿಗೂ ಆಹಾರವಾಗಿದೆ. ಪ್ರಕೃತಿಯಲ್ಲಿನ ಇಂಗಾಲದ ಡೈ ಆಕ್ಸೈಡನ್ನು ಆಮ್ಲಜನಕಕ್ಕೆ ಪರಿವರ್ತಿಸುವಲ್ಲಿ ಪ್ಲಾಂಕ್ಟಾನ್ ಪ್ರಮುಖ ಪಾತ್ರ ವಹಿಸಿದೆ.


4. ಆಲ್ಮೇರಿಯಾದ ಹಸಿರುಮನೆಗಳು.


greenhouse of almeria from space in kannada, spain in kannada, info mind, infomindkannada


     ಆಲ್ಮೇರಿಯಾದ ಹಸಿರುಮನೆಗಳು 64,000 ಎಕರೆ ಪ್ರದೇಶದಲ್ಲಿ ಹರಡಿರುವ ಸ್ಪೇನ್‌ನ ಕೃಷಿಯ ಹೃದಯ ಭಾಗವಾಗಿದೆ. ಇಲ್ಲಿನ ಹಸಿರುಮನೆಗಳು ಹಗಲಿನ ವೇಳೆಯಲ್ಲಿ ಬಾಹ್ಯಾಕಾಶದಿಂದ ಕಾಣಿಸುತ್ತದೆ. ಈ ಫೋಟೋವನ್ನು 2004ರಲ್ಲಿ ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್ (ಐಎಸ್ಎಸ್) ತೆಗೆದಿತ್ತು. ಇಲ್ಲಿ ಪ್ರತಿ ವರ್ಷ ಟನ್ನುಗಳಷ್ಟು ತರಕಾರಿ ಮತ್ತು ಹಣ್ಣುಗಳನ್ನು ಉತ್ಪಾದಿಸಿ, ಯೂರೋಪಿನ ಅನೇಕ ಭಾಗಗಳಿಗೆ ರಫ್ತು ಮಾಡಲಾಗುತ್ತದೆ.


5. ಗಿಜಾದ ಪಿರಮಿಡ್.


giza pyramid from space in kannada, info mind, infomindkannada


     ಜಗತ್ತಿನ 7 ಅದ್ಭುತಗಳಲ್ಲಿ ಒಂದಾದ ಗಿಜಾದಲ್ಲಿರುವ ಪಿರಮಿಡ್ ಬಾಹ್ಯಾಕಾಶದಿಂದ ಕಾಣುತ್ತದೆ. ಈ ಪಿರಮಿಡ್ ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಇವುಗಳನ್ನು ನೋಡಲು ಐ ಫೋಕಲ್ ಲೆನ್ತ್ ಕ್ಯಾಮೆರಾ ಬೇಕು. ಐಎಸ್ ಎಸ್ ಈಗಾಗಲೇ ಗಿಜಾದ ಪಿರಮಿಡ್‌ನ ಅನೇಕ ಫೋಟೋಗಳನ್ನು ಬಾಹ್ಯಾಕಾಶದಿಂದ ತೆಗೆದಿದೆ. ಬಾಹ್ಯಾಕಾಶದಿಂದ ತೆಗೆದ ಪಿರಮಿಡ್‌ನ ಈ ಫೋಟೋದಲ್ಲಿ ಒಂದು ಭಾಗ ಪೂರ್ತಿ ಕತ್ತಲು ಆವರಿಸಿದಂತೆ ಮತ್ತು ಇನ್ನೊಂದು ಭಾಗ ಸೂರ್ಯನಿಂದ ಪ್ರಕಾಶಿಸಲ್ಪಟ್ಟಂತಹ ಕಾಣುತ್ತದೆ.


6. ಗಂಗಾ ನದಿಯ ಪ್ರದೇಶ.


ganga river delta from space in kannada, india in kannada, info mind, infomindkannada


     ಗಂಗಾ ನದಿಯ ಪ್ರದೇಶ ಜಗತ್ತಿನ ಅತಿದೊಡ್ಡ ಡೆಲ್ಟಾ ರಚನೆಯಾಗಿದ್ದು, ಭಾರತದ ಪಶ್ಚಿಮ ಬಂಗಾಳದ ಭಾಗದಲ್ಲಿರುವ ಬಂಗಾಳ ಕೊಲ್ಲಿಯಲ್ಲಿ ಗುರುತಿಸಬಹುದು. ಇದು 220 ಮೈಲಿಗಳಷ್ಟು ವಿಸ್ತೀರ್ಣವನ್ನು ಹೊಂದಿದ್ದು, ಭೂಮಿಯ ಮೇಲಿನಿಂದಲೂ ಕಾಣುತ್ತದೆ. ಇದು ಬಂಗಾಳ ಹುಲಿ ಮತ್ತು ಇತರ ವನ್ಯಜೀವಿಗಳು ಇರುವ ಸ್ಥಳವೂ ಆಗಿದೆ.


7. ಗ್ರ್ಯಾಂಡ್ ಕ್ಯಾನ್ಯನ್.


grand canyon from space in kannada, info mind, infomindkannada


     ಅರಿಜೋನಾದಲ್ಲಿರುವ 277 ಮೈಲಿ ಉದ್ದದ ಗ್ರ್ಯಾಂಡ್ ಕ್ಯಾನ್ಯನ್ ನ ಪ್ರತಿಯೊಂದು ತಾಣವನ್ನು ಆನಂದಿಸಲು ಕೆಲವು ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಭೂಮಿಯ ಮೇಲಿರುವ ಗಗನಯಾತ್ರಿಗಳು ಗ್ರ್ಯಾಂಡ್ ಕ್ಯಾನ್ಯನ್ ನನ್ನು ಒಮ್ಮೆಗೆ ನೋಡುತ್ತಾರೆ. ಗ್ರ್ಯಾಂಡ್ ಕ್ಯಾನ್ಯನ್ ನ ಈ ಫೋಟೋವನ್ನು 2011ರಲ್ಲಿ ನಾಸಾದ ಟೆರ್ಯ ಬಾಹ್ಯಾಕಾಶ ನೌಕೆ ತೆಗೆದಿತ್ತು.


8. ಅಮೆಜಾನ್ ನದಿ.


amazon river from space in kannada, info mind, infomindkannada


     4000 ಮೈಲಿ ಉದ್ದದ ಅಮೆಜಾನ್ ನದಿ ಮತ್ತು ಅದರ ಉಪನದಿಗಳನ್ನು ಬಾಹ್ಯಾಕಾಶದಿಂದ ನೋಡಬಹುದು. ಈ ಫೋಟೋವನ್ನು 2006ರಲ್ಲಿ ಐಎಸ್ಎಸಿನ ಒಬ್ಬ ಸಿಬ್ಬಂದಿ ತೆಗೆದಿದ್ದರು. ತಗ್ಗು ಪ್ರದೇಶದ ಕಾಡಿನ ಮಣ್ಣಿನಿಂದಾಗಿ ಫೋಟೋದಲ್ಲಿರುವ ನೀರಿನ ಬಣ್ಣ ಗಾಢವಾಗಿ ಕಾಣುತ್ತದೆ.


9. ಗ್ರೇಟ್ ಬ್ಯಾರಿಯರ್ ರೀಫ್ (ದೊಡ್ಡ ತಡೆಗೋಡೆ ಬಂಡೆ).


great barrier reef from space in kannada, australia in kannada, info mind, infomindkannada


     1600 ಮೈಲಿ ಉದ್ದದ ಗ್ರೇಟ್ ಬ್ಯಾರಿಯರ್ ರೀಫ್ ಭೂಮಿಯ ಮೇಲಿನ ಅತಿದೊಡ್ಡ ಹವಳದ ಬಂಡೆಯಾಗಿದ್ದು, ಬಾಹ್ಯಾಕಾಶದಿಂದಲು ಕಾಣುತ್ತದೆ. ಗ್ರೇಟ್ ಬ್ಯಾರಿಯರ್ ಆಸ್ಟ್ರೇಲಿಯಾದ ಪೂರ್ವಭಾಗದಲ್ಲಿರುವ 900ಕ್ಕೂ ಹೆಚ್ಚು ಬಂಡೆಗಳ ದೀಪಗಳನ್ನು ಪರಸ್ಪರ ಜೋಡಿಸಿದೆ. ಇದು ಯುನೆಸ್ಕೋನಿಂದ ಗುರುತಿಸಲ್ಪಟ್ಟ ವರ್ಲ್ಡ್ ಹೆರಿಟೇಜ್ ಸೈಟ್ ಆಗಿದ್ದು, 1500ಕ್ಕೂ ಹೆಚ್ಚು ಟ್ರಾಪಿಕಲ್ ಮೀನು ಪ್ರಭೇದಗಳಿಗೆ ನೆಲೆಯಾಗಿದೆ. ಸ್ಕೂಬಾ ಡೈವರ್ಗಳಿಗೆ ಮುಖ್ಯ ತಾಣವಾಗಿರುವ ಗ್ರೇಟ್ ಬ್ಯಾರಿಯರ್ ರೀಫ್, ಆಸ್ಪ್ರೇಲಿಯಾದ ಅತ್ಯುತ್ತಮ ಪ್ರವಾಸಿ ತಾಣವೂ ಆಗಿದೆ.


10. ಹಿಮಾಲಯ.


himalayas in kannada, mount everest in kannada, himalayas from space in kannada, info mind, infomindkannada


     ಜಗತ್ತಿನ ಅತಿ ಎತ್ತರದ ಶಿಖರಗಳನ್ನು ಹೊಂದಿರುವ ಸ್ಥಳವಾದ ಹಿಮಾಲಯವನ್ನು ಬಾಹ್ಯಾಕಾಶದಿಂದ ನೋಡಬಹುದು. ಈ ಅತ್ಯುನ್ನತ ಪರ್ವತ ಶ್ರೇಣಿಯು ಭಾರತವನ್ನು ಟಿಬೆಟಿಯನ್ ಪ್ರಸ್ಥ ಭೂಮಿಯಿಂದ ಬೇರ್ಪಡಿಸುತ್ತದೆ. ಇವೆರಡರ ಮಧ್ಯ ಮೌಂಟ್ ಎವರೆಸ್ಟ್ ಇದ್ದು, ಜಗತ್ತಿನ ಅತಿ ಎತ್ತರದ ಪರ್ವತವಾಗಿದೆ. ಹಿಮಾಲಯವು 7,200 ಮೀಟರ್ ಎತ್ತರವನ್ನು ಮೀರಿದ ನೂರಾರು ಪರ್ವತಗಳನ್ನು ಒಳಗೊಂಡಿದೆ.

Don't forget to Comment Your Opinion on This Article.

Share and Support Us.

Info Mind

Post a Comment

0 Comments