What to do after Studying for Exams | ಪರೀಕ್ಷೆಯ ಓದಿನ ನಂತರ ಏನು ಮಾಡಬೇಕು

ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಮುಂದಕ್ಕೆ ಹಾಕಿದ್ದು ಪರೀಕ್ಷಾರ್ಥಿಗಳಿಗೂ ಅವರ ಪೋಷಕರಿಗೂ ಗಾಬರಿ ಹುಟ್ಟಿಸಿದೆ. ಮಕ್ಕಳಿಗೆ ಓದಿದ್ದು ಮರೆತು ಹೋಗುತ್ತದೆಂಬ ಸಮಸ್ಯೆಯಲ್ಲಿದೆ. "ಇನ್ನೆಷ್ಟು ಕಾಲ ಓದುವುದು" ಎಂಬ ಆತಂಕವಿದೆ. ವಿದ್ಯಾರ್ಥಿಗಳು ಇನ್ನು ಮುಂದೆ ತಮ್ಮ ಗುರಿ ಇಂಜಿನಿಯರ್ ಮತ್ತು ಡಾಕ್ಟರ್ ಮಾತ್ರವಲ್ಲ ಐಐಎಸ್, ವಿಜ್ಞಾನಿ, ಸಾಮಾಜಿಕ ಆರ್ಥಿಕ ತಜ್ಞ, ರಾಜಕೀಯ ಮುಂದಾಳು ಹೀಗೆ ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿಕೊಳ್ಳಿ. ಅದಕ್ಕಾಗಿ "ನಾನು ಪರೀಕ್ಷೆಗೆ ಓದಿದ್ದೇನೆ" ಎನ್ನುವುದನ್ನು ಬಿಟ್ಟು, "ನಾನು ನನಗಾಗಿಯೇ ಓದಿದ್ದೇನೆ, ಈ ಕಲಿಕೆ ಬದುಕಿನುದ್ದಕ್ಕೂ ನನ್ನ ಸೊತ್ತು" ಎಂದು ಹೇಳಿಕೊಳ್ಳಿ. ನಿಮ್ಮ ಪರೀಕ್ಷೆಯ ಆತಂಕ ನಿವಾರಣೆಗಾಗಿ ಕೆಲವು ಉಪಯುಕ್ತ ಸಲಹೆಗಳನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.


Watch Video



1. ಪುನಃ ಓದುವುದಕ್ಕೇ ಹೋಗಬೇಡಿ.


     ಎಷ್ಟು ಸಲ ಓದಿದರೂ ನಿಮ್ಮ ನೆನಪಿನಲ್ಲಿ ಈಗಿರುವಷ್ಟೇ ಉಳಿಯುತ್ತದೆ. ಹಾಗಾಗಿ ಮೊದಲಿಗೆ ನೀವು ಯಾವುದು ನಿಮ್ಮ ನೆನಪಿನಲ್ಲಿ ಉಳಿಯುವುದಿಲ್ಲ ಎಂಬುದರ ಲೆಕ್ಕ ತೆಗೆದುಕೊಳ್ಳಿ. ಅದಕ್ಕಾಗಿ ನಿಮ್ಮಲ್ಲಿರುವ ಮಾದರಿ ಪ್ರಶ್ನೆ ಪತ್ರಿಕೆಯನ್ನು ಹೊರ ತೆಗೆಯಿರಿ. ಅವುಗಳನ್ನು ಓದುತ್ತಿದ್ದಂತೆ ಪ್ರಶ್ನೆಪತ್ರಿಕೆಯ ಭಯ ಹೋಗುತ್ತದೆ. ನಿಮಗೆ ಸುಲಭವೆನಿಸುವ ಪ್ರಶ್ನೆಗಳಿಗೆ ಉತ್ತರಿಸುತ್ತಾ, ನಿಮಗೆ ಗೊತ್ತಿರದ ಪ್ರಶ್ನೆಗಳನ್ನು ಟಿಕ್ ಮಾಡುತ್ತಾ ಹೋಗಿ.


don't repeat, info mind, infomindkannada
don’t do repetation


     ಎಲ್ಲಾ ಆದ ಬಳಿಕ ಅಷ್ಟನ್ನು ಬರೆಯಲು ಎಷ್ಟು ಸಮಯ ಬೇಕಾಯಿತು ಎಂಬುದನ್ನು ಪರಿಶೀಲಿಸಿ. ಯಾವುದಾದರೂ ಪ್ರಶ್ನೆಯ ಉತ್ತರ ಪರಿಪೂರ್ಣವಿಲ್ಲದಿದ್ದರೆ ಅದನ್ನು ಮತ್ತೊಮ್ಮೆ ಓದಿ. ಹೀಗೆ ಸುಲಭವಾದ ಎಲ್ಲಾ ಪ್ರೆಶ್ನೆಗಳಿಗೆ ಉತ್ತರಿಸಿ. ನಿಮ್ಮಲ್ಲಿ ಆತ್ಮವಿಶ್ವಾಸ ಬಂದ ಬಳಿಕ ಸ್ವಲ್ಪ ಕಷ್ಟದ ಪ್ರಶ್ನೆ ಪತ್ರಿಕೆಗಳಿಗೆ ಹೋಗಿ.


2. ಪುನರಾವರ್ತನೆ.


memorising in kannada, info mind, infomindkannada
memorising


     ನೆನಪುಗಳು ದಿನಕಳೆದಂತೆ ಮಸುಕಾಗುತ್ತದೆ. "ನಿನ್ನೆ ಗೊತ್ತಿತ್ತು, ಆದರೆ ಈ ದಿನ ನೆನಪಿಲ್ಲ" ಎಂಬ ಸಂದರ್ಭಗಳು ಅನೇಕ ವಿದ್ಯಾರ್ಥಿಗಳಿಗೆ ಬರುತ್ತದೆ. ಆಗ ಹತಾಶೆ ಉಂಟಾಗುತ್ತದೆ. ಆದರೆ ಹತಾಶೆಗೆ ಒಳಗಾಗಬೇಕಿಲ್ಲ. ಆರಂಭದಲ್ಲಿ 2-3 ದಿನ ಪುನರಾವರ್ತನೆ ಮಾಡಿ. ನಂತರ ವಾರಕ್ಕೊಮ್ಮೆ ಓದಿದ್ದನ್ನು ಮನನ ಮಾಡಿದರೆ ಓದಿದ್ದು ನೆನಪಿನಲ್ಲಿ ಉಳಿಯುತ್ತದೆ. ಓದಿನ ರಿಪಿಟೇಶನ್ ಬಗ್ಗೆ ತಿಳಿಯಲು ಈ ಕೆಳಗಿನ ಲಿಂಕ್ ಒತ್ತಿ ಲೇಖನ ಓದಿ.

ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ?



3. ಅರಿವಿನ ಭಾರ ಹೊರಬೇಡಿ.


     ಯಾವುದೇ ವಿಷಯದೊಳಗಿನ ಪರಿಕಲ್ಪನೆಯನ್ನು ಅರ್ಥೈಸಿಕೊಂಡು ಓದಿ. ಈ ರೀತಿ ಓದುವುದರಿಂದ ಅರಿವಿನ ಹೊರೆ ಇರುವುದಿಲ್ಲ. ಅರ್ಥೈಸಿಕೊಂಡ ತಿಳುವಳಿಕೆ ಯಾವತ್ತೂ ಹೊರೆಯಾಗುವುದಿಲ್ಲ.


4. ಪರೀಕ್ಷೆಗೆ ನಾನು 'ರೆಡಿ' ಎನ್ನುವಂತಿರಬೇಕು.


exam ready in kannada, info mind, infomindkannada
always be ready for exam


     ವಿದ್ಯಾರ್ಥಿಗಳಿಗೆ ಪರೀಕ್ಷೆ ಬೇಕು ಎಂಬ ಭಾವನೆ ಇರುತ್ತದೆ. ಆದರೆ ಅವರು ರೆಡಿ ಆಗೋದೇಯಿಲ್ಲ. ಈ ಮಾನಸಿಕ ಸ್ಥಿತಿಗೆ ತಾನು ಪ್ರಥಮ ಬಾರಿಗೆ ಯಶಸ್ಸು ಸಾಧಿಸಬೇಕೆಂಬ ಆಸೆಯೇ ಕಾರಣ. ಇದರಿಂದ ಹೊರಗೆ ಬರಲು ನೀವೇ ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ಒಂದೊಂದಾಗಿ ತೆಗೆದು ಬರೆಯುತ್ತಾ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಿ.



5. ಒಮ್ಮೆಲೆ 2-3 ಕಲಿಕೆಗಳು ಬೇಡ.


     ಬಾಲ್ಯದಲ್ಲಿ ಟಿವಿ ನೋಡುತ್ತಾ ಹೋಮ್ವರ್ಕ್ ಬರೆಯುವ ಅಭ್ಯಾಸವಾದ ಮಕ್ಕಳಿಗೆ, ಕ್ರಿಕೆಟ್ ನೋಡುತ್ತಲೇ ಕೈಯಲ್ಲಿ ಪುಸ್ತಕ ಹಿಡಿದು ಓದಬಲ್ಲೆ ಎಂಬ ವಿಶ್ವಾಸ ಇರುತ್ತದೆ. ಆದರೆ ಅದು ಸರಿಯಾದ ವಿಧಾನವಲ್ಲ. ಟಿವಿಯಿಂದ ಕಣ್ಣು ಪುಸ್ತಕಕ್ಕೆ ತಿರುಗಿದರು ಮನಸ್ಸಿನಲ್ಲಿ ನೋಡಿದ ದೃಶ್ಯ ತೆವಳುತ್ತಿರುತ್ತವೆ. ಮತ್ತೆ ದೃಷ್ಟಿ ಟಿವಿಯ ಕಡೆಗೆ ಹೋಗಿ ಓದಲು ನಿಲ್ಲಿಸುತ್ತದೆ.


6. ಪಾಠಮಾಡಲು ಶುರು ಮಾಡಿ.


     ನಿಮಗೆಲ್ಲ ಪಾಠ ಅರ್ಥವಾದಲ್ಲಿ ನಿಮ್ಮ ಸ್ನೇಹಿತರಿಗೆ ಪಾಠ ಮಾಡಿ ಮತ್ತು ಅವರು ಪಾಠ ಮಾಡುವಾಗ ನೀವು ವಿದ್ಯಾರ್ಥಿಗಳಾಗಿರಿ. ಇದು ಕಲಿಯುವುದಕ್ಕೆ ಉತ್ತಮ ಮಾರ್ಗ, ಕಲಿಯುವುದರಿಂದ ಸಮಯ ಹಾಳಾಗುವುದಿಲ್ಲ. ಎಲ್ಲಾ ಶಿಕ್ಷಕರು ಸರಿಯಾಗಿ ಓದಿದ್ದು ಶಿಕ್ಷಕರಾದ ಬಳಿಕ ಎಂಬ ಮಾತಿದೆ.

Bonus,


#ಆಸಕ್ತಿಯನ್ನು ಗುರುತಿಸಿಕೊಳ್ಳಿ.


find interest in kannada, info mind, infomindkannada
find interest


     "ಯಾಕಿದನ್ನು ಕಲಿಯಬೇಕು?" ಎಂಬ ಪ್ರಶ್ನೆಯನ್ನು ಹಾಕಿಕೊಂಡು "ಕೇವಲ ಪರೀಕ್ಷೆಗಾಗಿಯೇ?" ಎಂಬುದನ್ನು ನಿಮ್ಮಲ್ಲೇ ಕೇಳಿಕೊಳ್ಳಿ. "ಹೌದು" ಎಂಬ ಉತ್ತರ ಬಂತು ಆಸಕ್ತಿಯನ್ನು ವಿಸ್ತರಿಸಿಕೊಳ್ಳಿ. ಆಸೆಗಳು ಆಸಕ್ತಿಗಳಾದಾಗ ಮಾತ್ರ ನಿಮ್ಮ ಓದುವ ಗ್ರಹಿಸುವ ಮನನ ಮಾಡುವ ಮತ್ತು ಸ್ಮರಣೆಯನ್ನು ಭದ್ರಪಡಿಸುವ ಪರಿಶ್ರಮ ಅರ್ಥಪೂರ್ಣವಾಗಿ ಜರಗುತ್ತದೆ.

Info Mind

Post a Comment

0 Comments