Motivational Thoughts by Jeff Bezos | ಜೆಫ್ ಬೆಜೋಸನ್ನು ಪ್ರೇರೇಪಿಸುವ ಎಂಟು ಗುಟ್ಟುಗಳು

Amazon.com, ಬ್ಲೂ ಆರಿಜಿನ್ ಏರೋಸ್ಪೇಸ್ ಕಂಪನಿಯ ಸಂಸ್ಥಾಪಕ, ವಾಷಿಂಗ್ಟನ್ ಪೋಸ್ಟ್ ಎಂಬ ಪತ್ರಿಕೆಯ ಮಾಲೀಕ ಮತ್ತು ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಜೆಫ್ ಬೆಜೋಸ್ ಸಾಟಿಯಿಲ್ಲದ ಎತ್ತರಕ್ಕೆ ತಲುಪಿದ್ದಾರೆ. ಆದರೆ ಈ ಸೂಪರ್ ಮಾನವನ ಯಶಸ್ಸಿನ ಗುಟ್ಟೇನು. ಅವರು ಯೋಚಿಸುವ ರೀತಿ ಅವರನ್ನು ಹೇಗೆ ಪ್ರತ್ಯೇಕಿಸುತ್ತದೆ. ಜೆಫ್ ಬೆಜೋಸ್ ಅವರ ಎಂಟು ಉಲ್ಲೇಖದ ಮೂಲಕ ಅವುಗಳನ್ನು ತಿಳಿದುಕೊಳ್ಳೋಣ.


Watch Video


1. "Big things start small. The biggest oak starts from an acorn."


     ಸಾಮ್ರಾಜ್ಯ ಕಟ್ಟಿಸಿದ ರಾಜನು ಮೊದಲಿಗೆ ತನ್ನ ಮನಸ್ಸಿನ ಪಿಸುಮಾತುಗಳಿಂದ ಪ್ರಾರಂಭಮಾಡುತ್ತಾನೆ. ಅಮೆಜಾನ್ ಪ್ರಾರಂಭಿಸುವ ಮೊದಲು ಜೆಫ್ ಬೆಜೊಸ್ ಕ್ವಾಂಟಿಟೇಟಿವ್ ಹೆಡ್ಜ್ ಫಂಡ್‌(quantitative hedge fund)ನಲ್ಲಿ ಕೆಲಸ ಮಾಡುತ್ತಿದ್ದರು. ಸಣ್ಣ ಆನ್‌ಲೈನ್ ಕಂಪನಿ ಆರಂಭಿಸಲು ಅವರ ಕೆಲಸವನ್ನು ತೊರೆದರು. ಅವರಿ ತೃಪ್ತಿ ಹೊಂದಿರುವ ಜೀವನದ ಕನಸಿನ ಪಿಸುಮಾತುಗಳನ್ನು ಆರಿಸಿಕೊಂಡರು. ಅವರಿಗೆ ಒಂದು ಗುರಿ ಇತ್ತು.


2. “Do something you’re very passionate about and don’t try to chase what is the hot passion of the day.”


amazon beginning in kannada, info mind, infomindkannada
Amazon Beginning


     ನಿಮ್ಮೊಳಗಿನ ಆ ಉತ್ಸಾಹವನ್ನು ಆಲಿಸಿ. ಅದು ಮಾರ್ಗದರ್ಶಕ ಶಕ್ತಿಯಾಗಿರಲಿ. ಆ ಉತ್ಸಾಹ ದೀರ್ಘಕಾಲೀನವಾಗಿರುತ್ತದೆ. ಆ ಉತ್ಸಾಹ ನಿಮ್ಮ ಗುರಿಗೆ ಇಂಧನವಿದ್ದ ಹಾಗೆ. ಹೀಗಾಗಿ ನಿಮ್ಮ ಗುರಿ ಹೇಗಿರಬೇಕೆಂದರೆ ಇತರರು ನಿಮ್ಮನ್ನು ಅನುಸರಿಸುವಂತಿರಬೇಕು. ನಿಮ್ಮೊಳಗಿನ ಆ ಕರೆಯನ್ನು ಅನುಸರಿಸಿ ಮತ್ತು ಮೂಲವಾಗಿರಿ.


3. “You can have a job, or you can have a career, or you can have a calling. And the best thing is to have a calling. If you find your passion, you’ll have that and all your work won’t feel like work to you.”


     ನಿಮಗೆ ರೋಮಾಂಚನಗೊಳಿಸುವ ವಿಷಯವನ್ನು ಹುಡುಕಿ. ನೀವು ಅದರ ಬಗ್ಗೆ ಯೋಚಿಸಿದಾಗ ಅದು ನಿಮ್ಮ ಬದುಕಿಗೆ ಏನು ನೀಡುತ್ತದೆ. ನಿಮ್ಮ ಜೀವನದಲ್ಲಿ ತೀವ್ರವಾದ ಭಾವನೆಯನ್ನು ತರುವಂತಹ ವಿಷಯಗಳನ್ನು ಹುಡುಕಿ. ನೀವು ಹುಡುಕಿದರೆ, ನೀವು ಆ ಕೆಲಸ ಎಷ್ಟೇ ಮಾಡಿದರೆ ನಿಮಗೆ ಅದು ಹೊರೆ ಅನಿಸುವುದಿಲ್ಲ.


4. Mission and vision of Amazon:
"Our vision is to be earth’s most customer-centric company; to build a place where people can come to find and discover anything they might want to buy online.”


amazon in kannada, info mind, infomindkannada
Jeff Bezos Amazon


     ಈ ಸರಳ ಮಿಷನ್ ಹೇಳಿಕೆಯ ಸುತ್ತ ಜೆಫ್ ಬೆಜೋಸ್ ತನ್ನ ಸಂಪೂರ್ಣ ಅಮೆಜಾನ್ ಸಾಮ್ರಾಜ್ಯವನ್ನು ನಿರ್ಮಿಸಿದ್ದಾರೆ. ನಿಮ್ಮ ಗುರಿ ಸ್ಪಷ್ಟ ದೃಷ್ಟಿಯು ನಿಮಗೆ ಆಧಾರವನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ. ಇದು ನಿಮಗೆ ನಕಾರಾತ್ಮಕ(negetive) ಭಾವನೆಯನ್ನು ಸೃಷ್ಟಿಸುವುದನ್ನು ತಪ್ಪಿಸಲು ಸಹಕರಿಸುತ್ತದೆ.



5. “I’ve made billions of dollars of failures at Amazon.com. Literally billions… They don’t matter.” “A few big successes compensate for dozens and dozens of things that didn’t work.”


     ನಿಮ್ಮ ಗುರಿಯ ಮೊದಲ ಹೊಡೆತ ತಪ್ಪಿದರೆ ಸಹ ಕನಿಷ್ಠ ಗುರಿಯನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಇದು ನಿಮಗೆ ಅಮೂಲ್ಯವಾದ ಜ್ಞಾನವನ್ನು ಪಡೆಯಲು ಸಹಕರಿಸುತ್ತದೆ ಮತ್ತು ನಿಮ್ಮ ಗುರಿಗು ಹತ್ತಿರವಾಗಿಸುತ್ತದೆ. ವೈಫಲ್ಯವನ್ನು ಮೆಟ್ಟಿ ನಿಲ್ಲಲು ಪ್ರಯತ್ನಿಸಿ. ನಿಮ್ಮ ಸಣ್ಣ ಸಣ್ಣ ಯಶಸ್ಸನ್ನು ಆಚರಿಸಿ. ಅದು ನಿಮ್ಮ ಮುಖ್ಯ ಪ್ರೇರಕ ಶಕ್ತಿಯಾಗಲಿ.



6. “If you absolutely cannot tolerate critics, don’t do anything new. Then think how wonderful your life will be.”


     ಜೆಫ್ ಬೆಜೋಸ್ ಇದರಲ್ಲಿ ಇತರರ ವಿಮರ್ಶಾತ್ಮಕ ಮಾತುಗಳನ್ನು ಲಘುವಾಗಿ ತೆಗೆದುಕೊಳ್ಳಲು ಹೇಳುತ್ತಿದ್ದಾರೆ. ನಿಮ್ಮ ಗುರಿಯ ಬಗ್ಗೆ ತಿಳಿಯಲಾಗದ ಜನ ಇದ್ದೇ ಇರುತ್ತಾರೆ. ಅವರು ನಿಮ್ಮ ಸಕಾರಾತ್ಮಕ(positive) ಯೋಚನೆಗಳನ್ನು ಕಿತ್ತುಕೊಳ್ಳುತ್ತಾರೆ. ನೀವು ಅವರ ಅಭಿಪ್ರಾಯಗಳನ್ನು ‍ಅಳೆಯುವಾಗಲೆಲ್ಲ ನೀವು ದುರ್ಬಲಗೊಳ್ಳುತ್ತ ಬರುತ್ತೀರಿ. ಹೀಗಾಗಿ ಅವುಗಳನ್ನು ಸಂಪೂರ್ಣವಾಗಿ ಬದಿಗಿರಿಸಿ.



7. “In the end, we are our choices. Build yourself a great story.”


life goal in kannada, info mind, infomindkannada
Goal Story


     ನಿಮ್ಮ ಮನಸ್ಸಿನಲ್ಲಿ ನೀವು ಅನುಮತಿಸುವ ಕಥೆ ನೀವು ತೆಗೆದುಕೊಳ್ಳುವ ಕ್ರಮಗಳಿಗೆ ಪ್ರೇರಣೆ ನೀಡುತ್ತದೆ. ನಮ್ಮ ಗುರಿಯ ಕಥೆಯನ್ನು ಮನಸ್ಸಿನಲ್ಲಿ ಮಾಡಿದರೆ ಅದು ನಮ್ಮ ಗುರಿಗೆ ಒಂದು ಮ್ಯಾಪ್ ನೀಡುತ್ತದೆ. ಹೀಗಾಗಿ ನಿಮ್ಮ ಕಥೆಯಲ್ಲಿ ಒಳ್ಳೆಯದನ್ನು ಬರೆಯಿರಿ.



8. “When I’m happy at work I come home more energized. I’m a better husband. A better Dad. And when I’m happy at home I come in a better boss and a better colleague.”


     ಮನೆಯಲ್ಲಿ ನಿಮ್ಮ ಸಂಬಂಧಗಳನ್ನು ಸುಧಾರಿಸಲು, ನಿಮ್ಮ ಕೆಲಸದ ಜೀವನವನ್ನು ಅಪಾರವಾಗಿ ಹೆಚ್ಚಿಸಲು ಸಂತೋಷ ಪ್ರಮುಖ ಅಂಶವಾಗಿದೆ. ಸಂತೋಷವು ಸ್ಪಷ್ಟತೆ, ತಾಳ್ಮೆ, ನಮ್ಯತೆ ಮತ್ತು ಚೈತನ್ಯವನ್ನು ಸೃಷ್ಟಿಸುತ್ತದೆ. ಯಶಸ್ಸಿನ ಹಾದಿಯಲ್ಲಿ ಕಂಡುಬರುವ ಸಂತೋಷವು ಜೀವನದ ನಿಜವಾದ ರಸ.

     ಆಗಿದ್ದಲ್ಲಿ ನಿಮಗೆ ಜೆಫ್ ಬೆಜೋಸ್ ಅವರ ಎಂಟು ಉಲ್ಲೇಖದಲ್ಲಿ ಯಾವುದು ಸ್ಫೂರ್ತಿ ನೀಡಿತು. ಕೆಳಗೆ ನಿಮ್ಮ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

     ಇದೇ ತರಹ ಇನ್ನಷ್ಟು ಯಶಸ್ವಿ ವ್ಯಕ್ತಿಗಳ ವೀಡಿಯೋ ಮಾಡಬೇಕಿದಲ್ಲಿ ಯಾರ ಬಗ್ಗೆ ಮಾಡಬೇಕೆಂದು ಕಮೆಂಟ್ ನಲ್ಲಿ ತಿಳಿಸಿ.

Info Mind

Post a Comment

0 Comments