Watch Video
1. ಗುರುತ್ವಾಕರ್ಷಣೆ ಇನ್ನೇನು ಮಾಡುತ್ತದೆ.
ನೀವು ಜಿಗಿದಾಗ ಏಕೆ ತೇಲುವುದಿಲ್ಲ, ಬದಲಾಗಿ ನೀವು ನೆಲದ ಮೇಲೆ ಏಕೆ ಇಳಿಯುತ್ತೀರಿ? ನೀವು ಒಂದು ಚೆಂಡನ್ನು ಪೂರ್ತಿ ಶಕ್ತಿಯಿಂದ ಎಸೆದಾಗ ಅದು ಮತ್ತೆ ಕೆಳಗೆ ಬಂದು ಬೀಳುತ್ತದೆ?
ಇವುಗಳಿಗೆ ಕಾರಣ ಗುರುತ್ವ, ಅದು ವಸ್ತುಗಳನ್ನು ಪರಸ್ಪರ ಎಳೆಯುವ ಒಂದು ಅದೃಶ್ಯ ಶಕ್ತಿಯಾಗಿದೆ. ಭೂಮಿಯ ಗುರುತ್ವಾಕರ್ಷಣೆಯ ನಿಮ್ಮನ್ನು ನೆಲದ ಮೇಲೆ ಇರಿಸುತ್ತದೆ ಮತ್ತು ವಸ್ತುಗಳನ್ನು ಬೀಳುವಂತೆ ಮಾಡುತ್ತದೆ.
![]() |
Gravity |
ದ್ರವ್ಯರಾಶಿ(mass) ಹೊಂದಿರುವ ಎಲ್ಲದಕ್ಕೂ ಗುರುತ್ವವಿದೆ. ಹೆಚ್ಚು ದ್ರವ್ಯರಾಶಿ ಹೊಂದಿರುವ ವಸ್ತುಗಳು ಹೆಚ್ಚು ಗುರುತ್ವಾಕರ್ಷಣೆಯನ್ನು ಹೊಂದಿರುತ್ತವೆ. ಗುರುತ್ವಾಕರ್ಷಣೆ ದೂರ ಹೋಗುತ ದುರ್ಬಲಗೊಳ್ಳುತ್ತದೆ. ಹೀಗಾಗಿ ಭೂಮಿಯ ಮೇಲೆ ಉಪಗ್ರಹಗಳು(satellite) ಬೀಳದಂತೆ ಭೂಮಿಯನ್ನು ಸುತ್ತುತ್ತಿವೆ. ಗುರುತ್ವಾಕರ್ಷಣೆ ಹತ್ತಿರ ಹೋದಂತೆ ಹೆಚ್ಚು ಬಲವಾಗಿರುತ್ತದೆ. ಭೂಮಿಯ ಗುರುತ್ವ ಅದರ ಎಲ್ಲ ದ್ರವ್ಯರಾಶಿಯಿಂದ ಬರುತ್ತಿದೆ. ಭೂಮಿಯ ಎಲ್ಲಾ ದ್ರವ್ಯರಾಶಿ ನಿಮ್ಮ ದೇಹದ ದ್ರವ್ಯರಾಶಿ ಮೇಲೆ ಸಂಯೋಜಿತ ಗುರುತ್ವಾಕರ್ಷಣೆಯನ್ನು ಮಾಡುತ್ತದೆ. ಅದು ನಿಮಗೆ ತೂಕವನ್ನು ನೀಡುತ್ತದೆ. ನೀವು ಭೂಮಿಗಿಂತ ಕಡಿಮೆ ದ್ರವ್ಯರಾಶಿ ಹೊಂದಿರುವ ಗ್ರಹದಲ್ಲಿ ಇದ್ದರೆ, ನೀವು ಇಲ್ಲಿರುವುದಕ್ಕಿಂತ ಅಲ್ಲಿ ಕಡಿಮೆ ತೂಕವಿರುತ್ತೀರಾ.
ಉದಾಹರಣೆಗೆ, ನೀವು ಭೂಮಿಯ ಮೇಲೆ 75 ಕೆಜಿ ಇದ್ದರೆ: ಮಂಗಳನಲ್ಲಿ 28.4 ಕೆಜಿ, ಗುರುಗ್ರಹದಲ್ಲಿ 189.8 ಕೆಜಿ, ಶನಿ ಗ್ರಹದಲ್ಲಿ 79.9 ಕೆಜಿ, ಯುರೆನಸಿನಲ್ಲಿ 67.9 ಕೆಜಿ, ನೆಪ್ಚೂನ್‌ನಲ್ಲಿ 85.5 ಕೆಜಿ, ಶುಕ್ರಗ್ರಹದಲ್ಲಿ 67.9 ಕೆಜಿ ಇನ್ನೂ ಬುಧಗ್ರಹದಲ್ಲಿ 28.4 ಕೆಜಿ ಇರುತ್ತೀರಾ.
![]() |
Earth and Person |
ಭೂಮಿ ನಿಮ್ಮ ಮೇಲೆ ಬಿಡುವ ಗುರುತ್ವಾಕರ್ಷಣ ಶಕ್ತಿಯನ್ನು ನೀವು ಪ್ರಯೋಗಿಸುತ್ತೀರಿ. ಆದರೆ ಭೂಮಿಯು ನಿಮಗಿಂತ ಹೆಚ್ಚು ಬೃಹತ್ ಪ್ರಮಾಣದಲ್ಲಿ ಇರುವುದರಿಂದ ನಿಮ್ಮ ಬಲವೂ ಗ್ರಹದ ಮೇಲೆ ಪರಿಣಾಮ ಬೀರುವುದಿಲ್ಲ.
2. ನಮ್ಮ ಬ್ರಹ್ಮಾಂಡದ ಗುರುತ್ವ(universe gravity).
ಗುರುತ್ವಾಕರ್ಷಣೆಯು ಗ್ರಹಗಳನ್ನು ಸೂರ್ಯನ ಸುತ್ತ ಕಕ್ಷೆಯಲ್ಲಿ ಹಿಡಿದಿಟ್ಟುಕೊಳ್ಳುತ್ತಿದೆ ಮತ್ತು ಚಂದ್ರನನ್ನು ಭೂಮಿಯ ಸುತ್ತ ಕಕ್ಷೆಯಲ್ಲಿ ಇರಿಸುತ್ತಿದೆ. ಚಂದ್ರನ ಗುರುತ್ವಾಕರ್ಷಣೆಯು ಸಮುದ್ರಗಳನ್ನು ಅದರ ಕಡೆಗೆ ಎಳೆಯುತ್ತದೆ. ಇದರಿಂದಾಗಿ ಸಮುದ್ರದಲ್ಲಿ ಉಬ್ಬರವಿಳಿತ ಉಂಟಾಗುತ್ತದೆ. ನಕ್ಷತ್ರ ಮತ್ತು ಗ್ರಹಗಳ ಹುಟ್ಟಲು ಗುರುತ್ವಾ ಕಾರಣವಾಗಿದೆ.
![]() |
Ocean Tides |
ಗುರುತ್ವವೂ ದ್ರವ್ಯರಾಶಿ ಮಾತ್ರವಲ್ಲದೆ ಬೆಳಕನ್ನು ಎಳೆಯುತ್ತದೆ. ಇದನ್ನು ಆಲ್ಬರ್ಟ್ ಐನ್ ಸ್ಟೈನ್(albert einstein) ತಮ್ಮ ತತ್ವದಲ್ಲಿ ಕಂಡುಹಿಡಿದಿದ್ದಾರೆ. ಬ್ಯಾಟರಿ ಬೆಳಕು ಮೇಲಕ್ಕೆ ಹೊಳೆಯುತ್ತಿದ್ದರೆ ಗುರುತ್ವಾಕರ್ಷಣೆ ಅದನ್ನು ಎಳೆಯುವುದರಿಂದ ಬೆಳಕು ಗ್ರಹಿಸಲಾಗದ ಭಾಗದಲ್ಲಿ(inperceptible) ಕೆಂಪಾಗುತ್ತದೆ. ನಿಮ್ಮ ಕಣ್ಣುಗಳಿಂದ ನೀವು ಈ ಬದಲಾವಣೆಯನ್ನು ನೋಡಲು ಸಾಧ್ಯವಿಲ್ಲ. ಆದರೆ ವಿಜ್ಞಾನಿಗಳು ಅದನ್ನು ಅಳೆಯಬಹುದು.
ಕಪ್ಪು ಕುಳಿ(black holes) ತುಂಬಾ ದ್ರವ್ಯರಾಶಿಯನ್ನು ಸಣ್ಣ ಪ್ರಮಾಣದಲ್ಲಿ ಪ್ಯಾಕ್ ಮಾಡುತ್ತವೆ. ಇದರಿಂದಾಗಿ ಅದರ ಗುರುತ್ವಾಕರ್ಷಣೆ ಅತಿಯಾಗಿರುತ್ತದೆ. ಅದು ಯಾವುದನ್ನಾದರೂ ಬೆಳಕನ್ನೂ ಸಹ ತಪ್ಪಿಸಿಕೊಳ್ಳದಂತೆ ತಡೆಯುವಷ್ಟು ಬಲವಾಗಿರುತ್ತದೆ.
3. ಭೂಮಿಯ ಮೇಲಿನ ಗುರುತ್ವ(earth gravity).
ಗುರುತ್ವ ನಮಗೆ ಬಹಳ ಮುಖ್ಯ. ಅದು ಇಲ್ಲದೆ ನಾವು ಭೂಮಿಯ ಮೇಲೆ ಬದುಕಲು ಸಾಧ್ಯವಿಲ್ಲ. ಸೂರ್ಯನ ಗುರುತ್ವಾಕರ್ಷಣೆಯು ಭೂಮಿಯನ್ನು ಅದರ ಸುತ್ತಲು ಕಕ್ಷೆಯಲ್ಲಿ ಇರಿಸುತ್ತಿದೆ. ಇದು ನಾವು ಸೂರ್ಯನ ಬೆಳಕು ಮತ್ತು ಉಷ್ಣತೆಯನ್ನು ಆನಂದಿಸಲು ಅರಾಮದಾಯಕ ದೂರದಲ್ಲಿರಿಸಿದೆ. ಗುರುತ್ವ ನಮ್ಮ ವಾತಾವರಣ ಮತ್ತು ಉಸಿರಾಡಲು ಬೇಕಾದ ಗಾಳಿಯನ್ನು ಹಿಡಿದಿಟ್ಟುಕೊಳ್ಳುತ್ತದೆ. ಗುರುತ್ವವು ನಮ್ಮ ಜಗತ್ತನ್ನು ಒಟ್ಟಿಗೆ ಹಿಡಿದಿಟ್ಟುಕೊಂಡಿದೆ.
![]() |
Earth and Sun |
ಗುರುತ್ವವು ಭೂಮಿಯ ಎಲ್ಲೆಡೆ ಒಂದೇ ಆಗಿರುವುದಿಲ್ಲ. ಕಡಿಮೆ ದ್ರವ್ಯರಾಶಿ ಹೊಂದಿರುವ ಸ್ಥಳಗಳಿಗಿಂತ ಹೆಚ್ಚಿನ ದ್ರವ್ಯರಾಶಿ ಹೊಂದಿರುವ ಭೂಗತ ಸ್ಥಳಗಳಲ್ಲಿ ಗುರುತ್ವ ಸ್ವಲ್ಪ ಬಲವಾಗಿರುತ್ತದೆ. ಭೂಮಿಯ ಗುರುತ್ವಾಕರ್ಷಣೆಯಲ್ಲಿನ ಈ ವ್ಯತ್ಯಾಸವನ್ನು ಅಳೆಯಲು ನಾಸಾ ಎರಡು ಬಾಹ್ಯಾಕಾಶ ನೌಕೆಯನ್ನು ಬಳಸುತ್ತದೆ. ಈ ಬಾಹ್ಯಾಕಾಶ ನೌಕೆಗಳು gravity recovery and climate experiment(GRACE) ಕಾರ್ಯಾಚರಣೆಯ ಭಾಗವಾಗಿದೆ. GRACE ಗುರುತ್ವಾಕರ್ಷಣೆಯಲ್ಲಿನ ಸಣ್ಣ ಬದಲಾವಣೆಗಳನ್ನು ಪತ್ತೆ ಮಾಡುತ್ತದೆ. ಈ ಬದಲಾವಣೆಗಳು ನಮ್ಮ ಗ್ರಹದ ಬಗ್ಗೆ ಪ್ರಮುಖ ವಿವರಗಳನ್ನು ಬಹಿರಂಗಪಡಿಸಿವೆ. ಉದಾಹರಣೆಗೆ, GRACE ಸಮುದ್ರಮಟ್ಟದಲ್ಲಿನ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಭೂಕಂಪಗಳಿಂದ ಉಂಟಾಗುವ ಭೂಮಿಯ ಹೊರಪದರದಲ್ಲಿನ ಬದಲಾವಣೆಗಳನ್ನು ಪತ್ತೆ ಮಾಡುತ್ತದೆ.
ನೀವು ಈ ಲೇಖನದಲ್ಲಿ ಗುರುತ್ವಾಕರ್ಷಣೆ ಬಗ್ಗೆ ಏನಾದರೂ ಹೊಸತನ್ನು ತಿಳಿದಿದ್ದರೆ, ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ.
0 Comments