Exercise to Improve your Eyes | ಕಣ್ಣಿನ ದೃಷ್ಟಿ ಸುಧಾರಿಸುವ ಕಣ್ಣಿನ ವ್ಯಾಯಾಮಗಳು

ನಿಯಮಿತ ವ್ಯಾಯಾಮ ದಿನಚರಿಯನ್ನು ಕಾಪಾಡಿಕೊಳ್ಳುವ ಮೂಲಕ ದೇಹವನ್ನು ಸದೃಢವಾಗಿ ಉಳಿಸಿಕೊಳ್ಳುವುದು ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ನಿಮ್ಮ ಕಣ್ಣುಗಳಿಗೂ ವ್ಯಾಯಾಮ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ? ಕಣ್ಣಿನ ವ್ಯಾಯಾಮ ನಿಮ್ಮ ಕಣ್ಣಿನ ಸ್ನಾಯುಗಳನ್ನು ಬಲಪಡಿಸಲು, ಗಮನವನ್ನು ಸುಧಾರಿಸಲು, ಕಣ್ಣಿನ ಚಲನೆಯನ್ನು ಸುಧಾರಿಸಲು ಮತ್ತು ನಿಮ್ಮ ಮೆದುಳಿನ ದೃಷ್ಟಿ ಕೇಂದ್ರವನ್ನು ಉತ್ತೇಜಿಸಲು ಸಹಕಾರಿಯಾಗಿದೆ. ಕಣ್ಣಿನ ವ್ಯಾಯಾಮವು ನಿಮ್ಮ ದೃಷ್ಟಿ ಸುಧಾರಿಸುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ, ನಿಮ್ಮ ಕಣ್ಣಿನ ದೃಷ್ಟಿ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.


Watch Video


1. ಅಂಗೈ ಉಜ್ಜಿ, ಕಣ್ಣಿನ ಮೇಲೆ ಇಡಿ.


     ಇದನ್ನು ಮಾಡುವುದರಿಂದ ನಿಮ್ಮ ಕಣ್ಣು ಮತ್ತು ಮೆದುಳಿಗೆ ಪ್ರಚೋದನೆಗಳು ಕಡಿಮೆಯಾಗುತ್ತವೆ. ನಿಮ್ಮ ಕಣ್ಣುಗಳನ್ನು ಮುಚ್ಚಿ ಲಘು ಒತ್ತಡವನ್ನು ಹೇರುವುದು ನಿಮ್ಮ ಕಣ್ಣಿಗೆ ವಿಶ್ರಾಂತಿ ನೀಡುತ್ತದೆ.




     ಇದನ್ನು ಮಾಡಲು, ಮೊದಲು ಕುರ್ಚಿಯಲ್ಲಿ ಆರಾಮವಾಗಿ ಕುಳಿತುಕೊಳ್ಳಿ. ಕೈಗಳು ಬೆಚ್ಚಗಾಗುವವರೆಗೆ ಒಟ್ಟಿಗೆ ಉಜ್ಜಿ. ಈಗ ನಿಮ್ಮ ಕಣ್ಣು ಮುಚ್ಚಿ ಅದರ ಮೇಲೆ ಅಂಗೈ ಇಡಿ. ಇದರಲ್ಲಿ ನಿಮ್ಮ ಕಣ್ಣು ಗುಡ್ಡೆಗಳಿಗೆ ಅತಿಯಾದ ಒತ್ತಡ ಹೇರುವುದನ್ನು ತಪ್ಪಿಸಿ.



2. ನಿಮ್ಮ ಕಣ್ಣುಗಳಿಗೆ ಮಸಾಜ್ ಮಾಡಿ.




     ಇದು ನಿಮ್ಮ ಕಣ್ಣು ಮತ್ತು ಮುಖದ ಸುತ್ತ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಇದು ಇತರ ಕಣ್ಣಿನ ವ್ಯಾಯಾಮಗಳಿಗೆ ಪ್ರಾರಂಭವು ಆಗಿದೆ. ಇದರಲ್ಲಿ ಬಿಸಿ ಮತ್ತು ತಣ್ಣನೆಯ ನೀರಿನಲ್ಲಿ ನೆನೆಸಿದ ಟವಲ್ ತೆಗೆದುಕೊಳ್ಳಿ. ಮೊದಲು ಬಿಸಿ ನೀರಿನಲ್ಲಿ ನೆನೆಸಿದ ಟವೆಲ್ ತೆಗೆದುಕೊಂಡು ನಿಮ್ಮ ಹುಬ್ಬು, ಮುಚ್ಚಿದ ಕಣ್ಣು ರೆಪ್ಪೆ ಮತ್ತು ಕೆನ್ನೆಗಳ ಮೇಲೆ ಇರುವಂತೆ ನೋಡಿಕೊಳ್ಳಿ. ಮೂರು ನಿಮಿಷಗಳ ನಂತರ ಬೆಚ್ಚನೆಯ ಟವೆಲ್ ತೆಗೆದು, ತಣ್ಣನೆಯ ಟವಲ್ ಮುಖದ ಮೇಲೆ ಇರಿಸಿ. ಈ ರೀತಿ ಮಾಡುವುದು ನಿಮ್ಮ ಕಣ್ಣುಗಳ ಸುತ್ತಲಿನ ಚರ್ಮವನ್ನು ಉತ್ತೇಜಿಸುತ್ತದೆ.


3. ಹತ್ತಿರ ಮತ್ತು ದೂರ ಇರುವ ವಸ್ತುಗಳನ್ನು ಗಮನಿಸಿ.


     ಇದರಲ್ಲಿ ನಿಮ್ಮ ಹೆಬ್ಬೆರಳು ನಿಮ್ಮ ಮುಖದ 25cm ಮುಂದೆ ಬರುವಂತೆ ಇರಿಸಿ. ನಿಮ್ಮ ಕಣ್ಣಿನಿಂದ ಹೆಬ್ಬೆರಳನ್ನು ಗಮನಿಸಿ. 15-20 ಸೆಕೆಂಡ್‌ಗಳ ನಂತರ ನಿಮ್ಮಿಂದ 5 ರಿಂದ 10 ಅಡಿ ದೂರ ಇರುವ ವಸ್ತುಗಳನ್ನು ನೋಡಿ. ಹೀಗೆ ಐದು ಬಾರಿ ಮಾಡಿ. ಈ ವ್ಯಾಯಾಮ ನಿಮ್ಮ ಕಣ್ಣಿನ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಇದು ದೃಷ್ಟಿ ಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಸಹಾಯಕವಾಗಿದೆ.



4. ನಿಮ್ಮ ಕಣ್ಣುಗಳಿಂದ ಝೂಮ್ ಮಾಡುವುದನ್ನು ಅಭ್ಯಾಸ ಮಾಡಿ.




     ಇದು ಉತ್ತಮ ಕಣ್ಣಿನ ಕೇಂದ್ರೀಕರಿಸುವ ವ್ಯಾಯಾಮವಾಗಿದೆ. ಇದನ್ನು ಮಾಡಲು ಆರಾಮದಾಯಕ ಸ್ಥಾನದಲ್ಲಿ ಕುಳಿತುಕೊಳ್ಳಿ. ನಿಮ್ಮ ಹೆಬ್ಬೆರಳನ್ನು ಕಣ್ಣಿನ ಮುಂದೆ ಬರುವಂತೆ ಇರಿಸಿ. ನಿಮ್ಮ ಹೆಬ್ಬೆರಳು ಕಣ್ಣಿನಿಂದ 25cm ದೂರ ಇರಲಿ. ನಿಮ್ಮ ಕಣ್ಣಿನಿಂದ ಹೆಬ್ಬೆರಳನ್ನು ಗಮನಿಸುತ್ತೀರಿ. ಈಗ ಹೆಬ್ಬೆರಳನ್ನು ಕಣ್ಣಿನ ಹತ್ತಿರ ತನ್ನಿ. ಕಣ್ಣಿನ ಹತ್ತಿರ ಹೆಬ್ಬೆರಳು 8cm ದೂರ ಇರುವಂತೆ ಗಮನಿಸಿ. ಹೆಬ್ಬೆರಳ ಮೇಲೆ ನಿಮ್ಮ ಕಣ್ಣನ್ನು ಕೇಂದ್ರೀಕರಿಸಿ. ನಂತರ ಮತ್ತೆ ನಿಮ್ಮ ಕೈಯನ್ನು ಕಣ್ಣಿನಿಂದ ದೂರ ತೆಗೆದುಕೊಂಡು ಹೋಗಿ. ಈ ವ್ಯಾಯಾಮವನ್ನು ವಾರಕ್ಕೊಮ್ಮೆ ಮೂರು ಭಾರಿ ಪುನರಾವರ್ತಿಸಿ.


5. ನಿಮ್ಮ ಕಣ್ಣುಗಳಿಂದ ಎಂಟು ಅಂಕಿಯನ್ನು ಬಿಡಿಸಿ.




     ನಿಮ್ಮ ಮುಂದೆ ಮೂರು ಮೀಟರ್ ನೆಲದ ಮೇಲೆ ಎಂಟು ಗುರುತುಗಳನ್ನು ಕಲ್ಪಿಸಿಕೊಳ್ಳಿ. ನಿಮ್ಮ ಕಣ್ಣುಗಳಿಂದ ನಿಧಾನವಾಗಿ ಎಂಟು ಅಂಕಿಯಲ್ಲಿ ಟ್ರೇಸ್ ಮಾಡಿ. ಕೆಲವು ನಿಮಿಷಗಳ ನಂತರ ಅದನ್ನು ಆಪೋಸಿಟ್ ಆಗಿ ಟ್ರೇಸ್ ಮಾಡಿ. ಇದು ನಿಮ್ಮ ಕಣ್ಣಿನ ದೈಹಿಕ ಚಲನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.


6. ದಿಕ್ಕಿನ ಕಣ್ಣಿನ ವ್ಯಾಯಾಮ.




     ನಿಮ್ಮ ಕಣ್ಣುಗಳನ್ನು ಬೇರೆ ಬೇರೆ ದಿಕ್ಕಿಗೆ ಸರಿಸುವುದು ನಿಮ್ಮ ಕಣ್ಣುಗಳಿಗೆ ಉತ್ತಮ ವ್ಯಾಯಾಮವಾಗಿದೆ. ಇದನ್ನು ಮಾಡಲು ಮೊದಲು ನೇರವಾಗಿ ಕುಳಿತುಕೊಳ್ಳಿ. ನಿಮ್ಮ ತಲೆಯನ್ನು ಚಲಿಸದೆ ಎಡಕ್ಕೆ ನೋಡಿ, ಅಲ್ಲಿ ಕೇಂದ್ರೀಕರಿಸಿ. ನಂತರ ಕಣ್ಣುಗಳನ್ನು ನಿಧಾನವಾಗಿ ಬಲಕ್ಕೆ ತಂದು, ಅಲ್ಲಿ ಕೇಂದ್ರೀಕರಿಸಿ. ಹೀಗೆ ಮೂರು ಬಾರಿ ಪುನರಾವರ್ತಿಸಿ. ಇದೇ ರೀತಿಯ ನೀವು ತಲೆಯನ್ನು ಚಲಿಸದೆ ಮೇಲೆ, ಕೆಳಗೆ ನೋಡಿ.

     ಈ ಎಲ್ಲ ವ್ಯಾಯಾಮವಾದ ನಂತರ ಅಂಗೈ ಬೆಚ್ಚಗಾಗುವಂತೆ ಉಜ್ಜಿ, ನಿಮ್ಮ ಕಣ್ಣಿನ ಮೇಲೆ ಇಟ್ಟು ವ್ಯಾಯಾಮ ಮುಗಿಸಿ.

Info Mind

Post a Comment

0 Comments