Habits followed by Rich People | ಶ್ರೀಮಂತರಾಗಲು ಇರುವ ಎಂಟು ಮಾರ್ಗಗಳು

ಅನೇಕ ಜನರು ಶ್ರೀಮಂತರಾಗುವುದು ಎಂದರೆ ಅದೃಷ್ಟ ಪಡೆಯುವುದೆಂದು ಭಾವಿಸುತ್ತಾರೆ. ಇದು ಕುಟುಂಬದ ಹಣ ಅಥವಾ ಲಾಟರಿಯಲ್ಲಿ ಗೆಲ್ಲುವವರಿಗೆ ಅನ್ವಯಿಸಬಹುದು. ಶ್ರೀಮಂತರಾಗುವುದು ಅನೇಕ ಪರಿಣಾಮಗಳ ಮೇಲೆ ಅವಲಂಬಿಸಿದೆ. ನೀವು ಇಂದು ಉಳಿಸಿದ 1ಪೈಸೆ ನಾಳೆ 1$ ಮೌಲ್ಯದ್ದಾಗಬಹುದು. ಇವೆಲ್ಲ ಶ್ರೀಮಂತರಾದವರು ಬಳಸುವ ಮಾರ್ಗಗಳಾಗಿವೆ. ನೀವು ಈ ಮಾರ್ಗಗಳನ್ನು ಪಾಲಿಸುವುದು ನಿಮ್ಮನ್ನು ಶ್ರೀಮಂತನಾಗಿ ಮಾಡಬಹುದು.


Watch Video



1. ಜೀವನದಲ್ಲಿ ಸಾಧಿಸಬೇಕಾದ್ದನ್ನು ಬರೆಯಿರಿ.


     ನೀವು ಜೀವನದಲ್ಲಿ ಏನನ್ನು ಸಾಧಿಸಬೇಕೆಂದು ಬಯಸುತ್ತೀರಾ? ಉದಾಹರಣೆಗೆ ನಿಮಗಿಷ್ಟವಾದ ಯಾವುದೇ ಒಳ್ಳೆಯ ಕೆಲಸ ಅಥವಾ ನಿಮ್ಮ ಬದುಕಿನ ಗುರಿ(goal). ಹೀಗೆ ಹಲವುಗಳ ಬಗ್ಗೆ ಒಂದು ಪುಸ್ತಕದಲ್ಲಿ ಬರೆಯಿರಿ. ನಿಮ್ಮ ಗುರಿ ಮುಟ್ಟಲು ನೀವು ಏನನ್ನು ಮಾಡಬೇಕೆಂದು ಯೋಚಿಸಿ, ಬರೆಯುತ್ತೀರಿ. ಹೀಗೆ ಮಾಡುವುದು ನಿಮ್ಮ ಬದುಕು ಮತ್ತು ನಿಮ್ಮ ಗುರಿಗೆ ಒಂದು ದಾರಿ ನೀಡುತ್ತದೆ.


2. ಕಡಿಮೆ ಮಾತನಾಡಿ, ಹೆಚ್ಚು ಕೇಳಿ.


talk less listen more in kannada, info mind, infomindkannada
Talk Less, Listen More


     ಎಲ್ಲರಿಗೂ ಮಾತನಾಡುವುದು ಇಷ್ಟ, ಎಷ್ಟೆಂದರೆ ಬೇರೆಯವರು ಹೇಳುವುದನ್ನು ಕೇಳುವುದು ಅವರಿಗೆ ಇಷ್ಟವಾಗುವುದಿಲ್ಲ. ಇತರರ ಮಾತುಗಳನ್ನು ಕೇಳುವುದು ನಿಮ್ಮ ಕೌಶಲ್ಯ ಅಭಿವೃದ್ಧಿಗೆ(skill development) ಬಹಳ ಮುಖ್ಯವಾಗಿದೆ. ಇತರ ಜನರ ಮಾತುಗಳನ್ನು ಕೇಳುವುದು ನಿಮಗೆ ಎಷ್ಟೋ ಐಡಿಯಾಗಳನ್ನು ನೀಡಬಹುದು.



3. ನಿಮ್ಮ ಕಾಳಜಿ ನೀವೇ ವಹಿಸಿ.


take care of yourself in kannada, info mind, infomindkannada
Exercise, Yoga


     ಶ್ರೀಮಂತರಾಗುವುದು ಎಂದರೆ ಹಣ ಮಾಡುವುದಷ್ಟೆ ಅಲ್ಲ, ಸಂಪತ್ತಿಗಿಂತ ನಿಮ್ಮ ಆರೋಗ್ಯವೇ ಮುಖ್ಯ.ನಿಮ್ಮ ಆರೋಗ್ಯ(health) ಸರಿಯಿಲ್ಲದಿದ್ದರೆ ನೀವು ದುಡಿದ ಹಣ ಕೆಲವೇ ದಿನದಲ್ಲಿ ಖಾಲಿಯಾಗಬಹುದು. ಹೀಗಾಗಿ ನಿಮ್ಮ ಆರೋಗ್ಯಕ್ಕೆ ಸಮಯ ನೀಡಿ. ವ್ಯಾಯಾಮ, ಯೋಗ, ಸರಿಯಾದ ಊಟ, ನೀರು, ನಿದ್ದೆ ಇವೆಲ್ಲದರ ಬಗ್ಗೆ ಕಾಳಜಿ ವಹಿಸಿ. ಒಂದು ವಿಮಾ ಯೋಜನೆ(insurance plan) ತೆಗೆದುಕೊಂಡಿರಿ.



4. ಹೊರ ನಡೆಯಿರಿ.


     ನಿಮಗೆ ತಿಳಿಯದ ಎಷ್ಟೋ ವಿಷಯ ಇರುತ್ತದೆ. ಅಂತಹ ವಿಷಯಗಳು ನೀವು ಹೊರಗೆ ಹೋಗಿ ಜನರೊಂದಿಗೆ ಮಾತನಾಡುವುದರಿಂದ ತಿಳಿಯುತ್ತದೆ. ಹೀಗಾಗಿ ದಿನಪೂರ್ತಿ ಅಲ್ಲದಿದ್ದರೂ ನಿರ್ದಿಷ್ಟ ಸಮಯವನ್ನು ಹೊರಗೆ ಕಳೆಯಿರಿ.



5. ಹೆಚ್ಚು ಪುಸ್ತಕಗಳನ್ನು ಓದಿ.


read books in kannada, info mind, infomindkannada
Read Books


     ತುಂಬಾ ಜನ ಟಿವಿ ಪ್ರದರ್ಶನಗಳು(tv shows) ಮತ್ತು ಸಿನೆಮಾಗಳನ್ನು ನೋಡಿ ಕಾಲ ಕಳೆಯುತ್ತಾರೆ. ಆದರೆ ದಿನದಲ್ಲಿ ಪುಸ್ತಕಗಳನ್ನು ಓದಲು ಸಮಯವೇ ನೀಡುವುದಿಲ್ಲ. ಜಗತ್ತಿನ ಶ್ರೀಮಂತರಲ್ಲಿ ಶೇಕಡ 88ರಷ್ಟು ಜನರು ದಿನಕ್ಕೆ 30 ನಿಮಿಷವಾದರೂ ಪುಸ್ತಕಗಳನ್ನು ಓದುತ್ತಾರೆ ಎಂದು ಒಂದು ವರದಿ(report) ಹೇಳಿದೆ.


6. ಸಕಾರಾತ್ಮಕ ಜನರಿಂದ ಸುತ್ತುವರಿದಿರಿ.


     ನೀವು ದಿನದಲ್ಲಿ ಹೆಚ್ಚು ಸಮಯ ಕಳೆಯುವ 5 ಜನರು ಯಾರೆಂದು ಯೋಚಿಸಿ. ಅವರಲ್ಲಿ ಎಷ್ಟು ಜನ ನಿಮಗೆ ಸಲಹೆ ನೀಡುತ್ತಾರೆ... ಸಕಾರಾತ್ಮಕ ಯೋಚನೆ ಇರುವ ಜನರಿಂದ ಸುತ್ತುವರಿದರೆ ನೀವು ಯಾವಾಗಲೂ ಸಕಾರಾತ್ಮಕವಾಗಿ ಇರುತ್ತೀರಾ.  ಹೀಗಾಗಿ ನಿಮ್ಮ ಸ್ನೇಹಿತರನ್ನು ಆರಿಸುವಾಗ ಬುದ್ಧಿವಂತಿಕೆಯಿಂದ ಆರಿಸಿ.



7. ನಿಮ್ಮ ಸಮಯಕ್ಕೆ ಬೆಲೆ ನೀಡಿ.


respect your time in kannada, info mind, infomindkannada
Respect Your Time


     ಹಣಕ್ಕಿಂತ ಮುಖ್ಯವಾದ ಹಲವುಗಳಲ್ಲಿ ಸಮಯವೂ ಒಂದು. ಎಲ್ಲರಿಗೂ ಸಮಯ ನಿರ್ದಿಷ್ಟವಾಗಿದೆ. ಹೀಗಾಗಿ ಅದನ್ನು ಕೇವಲ ವೀಡಿಯೊ ಗೇಮ್ ಆಡುತ್ತಾ, ಉಪಯೋಗಕ್ಕೆ ಬಾರದ ಕೆಲಸವನ್ನು ಮಾಡುತ್ತಾ ಕಳೆಯಬಾರದು. ಶ್ರೀಮಂತ ವ್ಯಕ್ತಿಗಳು ಅವರ ಸಮಯವನ್ನು ದೀರ್ಘಕಾಲದವರೆಗೆ ಪ್ರಯೋಜನ ನೀಡುವ ಚಟುವಟಿಕೆಗಳಿಗೆ ನೀಡುತ್ತಾರೆ. ನಿಮ್ಮ ಸಮಯವನ್ನು ಏನಾದರೂ ಕಲಿಯಲು, ನಿಮ್ಮ ಆರೋಗ್ಯ ನೋಡಿಕೊಳ್ಳಲು ಬಳಸಿ.


8. ನಿಷ್ಕ್ರಿಯ ಆದಾಯ(passive income) ಹುಡುಕಿ.


passive income in kannada, info mind, infomindkannada
Stock Market, Real Estate


     ಎಷ್ಟೋ ಶ್ರೀಮಂತ ಜನರು ಕೆಲಸ ಮಾಡುವುದು ಕಡಿಮೆ. ಅವರ ಆದಾಯ ನಿಷ್ಕ್ರಿಯ ಆದಾಯದಿಂದಲೇ ಹೆಚ್ಚುತ್ತಿರುತ್ತದೆ. ನಿಷ್ಕ್ರಿಯ ಆದಾಯವೆಂದರೆ ಅಡ್ಡ ವ್ಯವಹಾರ ಪ್ರವೇಶಿಸುವುದು, ಅಂದರೆ ಸ್ಟಾಕ್ ಮಾರ್ಕೆಟ್, ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು. ಸ್ಟಾಕ್ ಮಾರ್ಕೆಟ್ ಬಗ್ಗೆ ತಿಳಿದಿಲ್ಲದಿದ್ದರೆ ನೀವು ಮ್ಯೂಚುವಲ್ ಫಂಡ್(mutual fund), ಸ್ಥಿರ ಠೇವಣಿಗೆ(fixed deposit) ಹಣ ಹಾಕಬಹುದು.

Don't forgot to Comment your opinion on this Article.

Share and Support Us. 

Info Mind

Post a Comment

0 Comments