12 Amazing facts about Electricity | ವಿದ್ಯುತ್ ಶಕ್ತಿಯ ಮೇಲೆ ಹನ್ನೆರಡು ಕೂಲ್ ಸಂಗತಿಗಳು

ನಾವು ಪ್ರತಿದಿನ ವಿದ್ಯುತ್ ಶಕ್ತಿಯನ್ನು ಬಳಸುತ್ತೇವೆ. ಆದರೆ ಹೆಚ್ಚಿನ ಜನರಿಗೆ ಭೌತಿಕ ವಿದ್ಯಮಾನಗಳ(physical phenomena) ಬಗ್ಗೆ ಬಹಳ ಕಡಿಮೆ ತಿಳಿದಿದೆ. ವಿದ್ಯುತ್ ಶಕ್ತಿಯು ನಮ್ಮ ಗ್ರಹದ ಬಹುಮುಖ್ಯ ಶಕ್ತಿ ಮೂಲವಾಗಿದೆ. ಆದರೆ ನಾವು ಅದರ ಮೇಲೆ ಕೇವಲ ನೂರು ವರ್ಷಗಳ ಹಿಂದಿನಿಂದ ಅವಲಂಬಿತರಾಗಿದ್ದೇವೆ.


Watch Video



    ವಿದ್ಯುತ್ ಎನ್ನುವುದು ಒಂದು ರೀತಿಯ ಶಕ್ತಿಯಾಗಿದೆ. ಅದು ಒಂದೇ ಸ್ಥಳದಲ್ಲಿ ನಿರ್ಮಿತವಾಗುತ್ತದೆ ಅಥವಾ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹರಿಯುತ್ತದೆ. ಒಂದೇ ಸ್ಥಳದಲ್ಲಿ ವಿದ್ಯುತ್ ಸಂಗ್ರಹಿಸಿದಾಗ ಅದನ್ನು ಸ್ಟ್ಯಾಟಿಕ್ ಕರೆಂಟ್ ಎಂದು ಕರೆಯಲಾಗುತ್ತದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುವ ವಿದ್ಯುತ್ತನ್ನು ಎಲೆಕ್ಟ್ರಿಕ್ ಕರೆಂಟ್ ಎಂದು ಕರೆಯಲಾಗುತ್ತದೆ.


static current in kannada, info mind, infomindkannada
Static Current and Electric Current


     ಸ್ಟ್ಯಾಟಿಕ್ ಕರೆಂಟ್ ಎರಡು ವಸ್ತುಗಳನ್ನು ಉಜ್ಜಿದಾಗ ಸಂಭವಿಸುತ್ತದೆ. ಅದಕ್ಕಾಗಿಯೇ ಬಲೂನನ್ನು ನಿಮ್ಮ ಬಟ್ಟೆಗಳಿಗೆ ಉಜ್ಜಿದ ನಂತರ ನಿಮಗೆ ಅಂಟಿಕೊಳ್ಳುತ್ತದೆ. ಮಿಂಚು ಸ್ಟ್ಯಾಟಿಕ್ ಕರೆಂಟ್ ಆಗಿದೆ. ಮಳೆ ಮೋಡಗಳು ಆಕಾಶದ ಮೂಲಕ ಚಲಿಸುವಾಗ ಅವು ತಮ್ಮ ಸುತ್ತಲಿನ ಗಾಳಿಯ ವಿರುದ್ಧ ಉಜ್ಜುತ್ತವೆ, ಇದರಿಂದ ಮಿಂಚು ಸೃಷ್ಟಿಯಾಗುತ್ತದೆ. ಎಲೆಕ್ಟ್ರಿಕ್ ಕರೆಂಟ್ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಿಯಲು ಎಲೆಕ್ಟ್ರಿಕ್ ತಂತಿಗಳು ಬೇಕಾಗುತ್ತದೆ. ಕಂಪ್ಯೂಟರ್, ಸ್ಮಾರ್ಟ್‌ಫೋನ್, ವಾಷಿಂಗ್ ಮಷಿನ್, ಇತ್ಯಾದಿ.. ವಸ್ತುಗಳಿಗೆ ಶಕ್ತಿ ತುಂಬುವಲ್ಲಿ ಎಲೆಕ್ಟ್ರಿಕ್ ಕರೆಂಟ್ ತೊಡಗಿವೆ.

• ವಿದ್ಯುತ್ ಉತ್ಪಾದನೆಯ ಮೂಲ ತತ್ವಗಳನ್ನು 19ನೇ ಶತಮಾನದಲ್ಲಿ ಬ್ರಿಟಿಷ್ ವಿಜ್ಞಾನಿ ಮೈಕೆಲ್ ಫ್ಯಾರಡೆ ಕಂಡುಹಿಡಿದರು.


michael faraday in kannada, info mind, infomindkannada
Michael Faraday


• ಮೊದಲ ಎಲೆಕ್ಟ್ರಿಕ್ ಕಾರನ್ನು 1891ರಲ್ಲಿ ಅಮೇರಿಕಾದ ಸಂಶೋದಕ ವಿಲಿಯಂ ಮೊರಿಸನ್(william morrison) ನಿರ್ಮಿಸಿದರು.

• ಥಾಮಸ್ ಎಡಿಸನ್ ಮೊದಲ ಪವರ್ ಪ್ಲಾಂಟ್ ನಿರ್ಮಿಸಿದರು. 1882ರಲ್ಲಿ ಅವರ Pearl Street Power Station, ನ್ಯೂಯಾರ್ಕ್ ನಗರದ 85 ಕಟ್ಟಡಗಳಿಗೆ ವಿದ್ಯುತ್ ನೀಡಿತ್ತು.


edison pearl power station in kannada, info mind, infomindkannada
Edison's Power Station


• ವಿದ್ಯುತ್ ಗಂಟೆಗೆ 1 ಕೋಟಿ 8 ಲಕ್ಷ ಕಿ.ಮೀ.ನಷ್ಟು ಚಲಿಸುತ್ತದೆ.

• ನಿಮ್ಮ ಹೃದಯವು ಕಾರ್ಯನಿರ್ವಹಿಸಲು ವಿದ್ಯುತ್ ಪ್ರಮುಖ ಪಾತ್ರ ವಹಿಸುತ್ತಿದೆ. ಎಂಬ ಮಾಂಸಖಂಡ(muscle)ಗಳು ಈ ವಿದ್ಯುತ್ ನಿಂದಾಗಿ ಕಾಂಟ್ರ್ಯಾಕ್ಟ್ ಆಗುತ್ತವೆ.

• ರೋಗಿಗಳ ಹೃದಯದ ಮೂಲಕ ಹರಿಯುವ ವಿದ್ಯುತ್ತನ್ನು ಅಳೆಯಲು ಆಸ್ಪತ್ರೆಗಳಲ್ಲಿ ಎಲೆಕ್ಟ್ರೋಕಾರ್ಡಿಯೋಗ್ರಾಮ್ ಯಂತ್ರವನ್ನು ಬಳಸಲಾಗುತ್ತದೆ.

• ವಿದ್ಯುತ್ ಶಕ್ತಿಯ ಒಂದು ಯೂನಿಟ್ಟನ್ನು ವೋಲ್ಟ್(Volt) ಎನ್ನುತ್ತಾರೆ. ಇದು ವಿದ್ಯುತ್‌ನ ಸಂಭಾವ್ಯ ಶಕ್ತಿ(potential strength) ಆಗಿದೆ.

• ಒಂದೊಂದು ಮಿಂಚುಗಳು 10 ಕೋಟಿ ವೋಲ್ಟೇಜ್ ಹೊಂದಿರುತ್ತವೆ.

• ಕಲ್ಲಿದ್ದಲು ವಿದ್ಯುತ್ ಉತ್ಪಾದಿಸುವ ವಿಶ್ವದ ಅತಿದೊಡ್ಡ ಶಕ್ತಿಯ ಮೂಲವಾಗಿದೆ. ಇದು ಹೇಗೆ ಕೆಲಸ ಮಾಡುತ್ತದೆ?



electricity by coal in kannada, info mind, infomindkannada
Electricity produced by coal


     ನೀರನ್ನು ಕುದಿಸುವ ಕುಲುಮೆ(Furnace)ಗಳಲ್ಲಿ ಕಲ್ಲಿದ್ದಲನ್ನು ಸುಡಲಾಗುತ್ತದೆ. ಕುದಿಯುವ ನೀರಿನಿಂದ ಉಂಟಾಗುವ ಸ್ಟೀಮ್, ಜನರೇಟರ್ ಅಥವಾ ಟ್ರಾನ್ಸ್‌ಫಾರ್ಮರ್ಗಳಿಗೆ ಜೋಡಿಸಲಾದ ಟರ್ಬೈನ್ಗಳನ್ನು ತಿರುಗಿಸುತ್ತದೆ. ಆಗ ವಿದ್ಯುತ್ ಉತ್ಪತ್ತಿಯಾಗುತ್ತದೆ.

• ಪಳೆಯುಳಿಕೆಯ ಇಂಧನ(fossil fuel)ಅತಿದೊಡ್ಡ ವಿದ್ಯುತ್ ಮೂಲವಾಗಿದೆ. ಆದರೆ ಗಾಳಿ, ನೀರು ಮತ್ತು ಸೂರ್ಯನಿಂದಲೂ ಸಹ ವಿದ್ಯುತ್ ಉತ್ಪಾದಿಸಬಹುದು.


electric eel in kannada, info mind, infomindkannada
Electric Eels


ಎಲೆಕ್ಟ್ರಿಕ್ ಈಲ್ ಬೇಟೆಯಾಡಲು ಅಥವಾ ಆತ್ಮರಕ್ಷಣೆಗಾಗಿ 600 ವೋಲ್ಟ್ ವರೆಗೆ ವಿದ್ಯುತ್ ನೀಡುತ್ತದೆ.

Don't forget to Comment Your Opinion on This Article.

Share and Support Us. 

Info Mind

Post a Comment

0 Comments