Programming Languages that you have to learn in 2021 | 2021ರಲ್ಲಿ ನೀವು ಕಲಿಯಬೇಕಾದ 5 ಪ್ರೋಗ್ರಾಮಿಂಗ್ ಭಾಷೆಗಳು

ಪ್ರತಿಯೊಂದು ವಲಯದಲ್ಲೂ ಹೊಸ ಮತ್ತು ನವೀನ ಆಲೋಚನೆಗಳೊಂದಿಗೆ ತಂತ್ರಜ್ಞಾನವು ಅಪಾರ ದರದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇದು ಜಗತ್ತಿನಲ್ಲೇ ಎಷ್ಟೋ ಕೆಲಸ ಆನ್‌ಲೈನ್‌ನಲ್ಲೇ ನಡೆಯುತ್ತಿದೆ. ಉದಾಹರಣೆಗೆ, ಹಣ ಪಾವತಿಸುವುದು, ಆನ್‌ಲೈನ್ ಪಾಠ, ಟ್ರೇಡಿಗ್ ಇತ್ಯಾದಿ.


Watch Video


     ಇಂತಹ ಡಿಜಿಟಲ್ ಜಗತ್ತಿನಲ್ಲಿ ಪ್ರೋಗ್ರಾಮಿಂಗ್ ಭಾಷೆಗಳನ್ನು ಕಲಿಯುವ ವ್ಯಾಮೋಹವು ಹೆಚ್ಚಿದೆ. ಈ ಡಿಜಿಟಲ್ ಜಗತ್ತಿನಲ್ಲಿ ಇನ್ನಷ್ಟು ಪ್ರಗತಿ ಕಾಣಲು ಪ್ರೋಗ್ರಾಮಿಂಗ್ ಭಾಷೆಗಳು ಅವಶ್ಯಕ. 2021ರಂದು ಪ್ರಗತಿ ಮತ್ತು ಡಿಜಿಟಲ್ ರೂಪಾಂತರ ಅಷ್ಟೇನೂ ಭಿನ್ನವಾಗಿರುವುದಿಲ್ಲ. ಹೀಗಾಗಿ 2021ರಲ್ಲಿ ನೀವು ಕಲಿಯಬೇಕಾದ 5 ಪ್ರೋಗ್ರಾಮಿಂಗ್ ಭಾಷೆಗಳನ್ನು ಇಲ್ಲಿ ತಿಳಿಸುತ್ತಿದ್ದೇವೆ.



1. ಪೈಥಾನ್.


python language in kannada, info mind, infomindkannada


     ಹಳೆಯ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಒಂದಾದ ಪೈಥಾನ್ ಉದ್ಯಮವನ್ನು ದೀರ್ಘಕಾಲದವರೆಗೆ ಆಳುತ್ತಿದೆ. ಪೈಥಾನ್ ಕಲಿಯಲು ಸುಲಭ. ಇದು ಅರ್ಥಗರ್ಭಿತ ಸಿಂಟ್ಯಾಕ್ಸ್, ಬಹುಮುಖ ಪ್ಲ್ಯಾಟ್ಫಾರ್ಮ್, ಮೊಬೈಲ್ ಮತ್ತು ವೆಬ್‌ಸೈಟ್ ಅಪ್ಲಿಕೇಶನ್‌ಗಳಲ್ಲಿ ಬ್ಯಾಕೆಂಡ್ ಆಗಿ ಬೆಂಬಲಿಸುತ್ತದೆ. ಪೈಥಾನ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಮಶೀನ್ ಲರ್ನಿಂಗ್, ಇತರ ವಿಜ್ಞಾನ ಕ್ಷೇತ್ರಗಳು ಮತ್ತು ಡೀಪ್ ಲರ್ನಿಂಗ್‌ಗೆ ಬಳಸಲಾಗುತ್ತದೆ. ಮಾರುಕಟ್ಟೆ ಬೆಳವಣಿಗೆಗೆ ಪೈಥಾನ್ ಒಳ್ಳೆಯ ವೇದಿಕೆಯಾಗಿದೆ. ಇದು ತುಂಬಾ ಲೈಬ್ರರಿಗಳನ್ನು ಹೊಂದಿರುವುದರಿಂದ ಕೋಡನ್ನು ಬೇಗನೆ ಎಕ್ಸಿಕ್ಯುಟ್ ಮಾಡಬಹುದು.


2. ಸಿ++.


c++ in kannada, info mind, infomindkannada


     ಪೈಥಾನ್ ನಂತರ ಪ್ರಸಿದ್ಧವಿರುವ ಪ್ರೋಗ್ರಾಮಿಂಗ್ ಭಾಷೆ ಸಿ++ ಆಗಿದೆ. ಡೆವಲಪರ್ಸ್ ಸುಲಭವಾದ ಸಿಂಟ್ಯಾಕ್ಸಿಗಾಗಿ ಬಳಸುವ ಪ್ರಮುಖ ಪ್ರೋಗ್ರಾಮಿಂಗ್ ಭಾಷೆ ಇದಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೈಥಾನ್ ಪ್ರಮುಖ ವೇದಿಕೆ ಎಂದು ಪರಿಗಣಿಸಿದರು, ಸಿ++ ಉತ್ತಮ ವೇದಿಕೆ ಎಂಬುದರಲ್ಲಿ ಸಂದೇಹವಿಲ್ಲ. ಡೇಟಾ ಸ್ಟ್ರಚ್ಚರ್ ವಿಷಯಕ್ಕೆ ಬಂದಾಗ ಸಿ++ ಅನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಸಿ++ ಅನೇಕ ಪ್ರಾಬ್ಲಮ್ ಸಾಲ್ವಿಂಗ್ ಅಲ್ಗಾರಿದಮ್ ಹೊಂದಿದ್ದು, ಡೆವಲಪರ್ಗಳ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುತ್ತದೆ.


3. ಕೋಟ್ಲಿನ್.


kotlin programming language in kannada, info mind, infomindkannada


     ಕೋಟ್ಲಿನ್ ಜಾವ ಪ್ರೋಗ್ರಾಮಿಂಗ್ ಭಾಷೆಯೊಂದಿಗೆ ಪರಸ್ಪರ ಕಾರ್ಯ ಸಾಧ್ಯವಾಗಿಸುವ ಪ್ರಸಿದ್ಧ ಪ್ರೋಗ್ರಾಮಿಂಗ್ ಭಾಷೆಯಾಗಿದೆ. ಕೋಟ್ಲಿನ್, ಸಿ++ ರೀತಿಯ ಆಬ್ಜೆಕ್ಟ್ ಓರಿಯೆಂಟೆಡ್ ಪ್ರೋಗ್ರಾಮಿಂಗ್ ಫೀಚರ್ ಹೊಂದಿದೆ. ಇಂದು ಡೆವಲಪರ್ಗಳು ಜಾವಾ ಅಪ್ಲಿಕೇಶನ್‌ಗಳನ್ನು ಕೋಟ್ಲಿನಿಗೆ ಪರಿವರ್ತಿಸುತ್ತಿದ್ದಾರೆ. ಈ ಪರಿವರ್ತನೆಯ ಮುಖ್ಯ ಕಾರಣವೆಂದರೆ ಕೋಟ್ಲಿನ್ ಭಾಷೆಯಲ್ಲಿ ಸಿಗುವ ಟೂಲಿಂಗ್ ಸಪೋರ್ಟ್. ಅದು ಆ್ಯಂಡ್ರಾಯ್ಡ್ ಆ್ಯಪನ್ನು ಬೆಳೆಸುವಲ್ಲಿ ಉತ್ತಮವಾಗಿ ಬೆಂಬಲಿಸುತ್ತದೆ. ಕೋಟ್ಲಿನ್ ಓಪನ್ ಸೋರ್ಸ್, ಕಲಿಯಲು ಸುಲಭ ಮತ್ತು ಶಿಫ್ಟು ಭಾಷೆಯಾಗಿದ್ದು, ವೆಬ್, ಡೆಸ್ಕ್‌ಟಾಪ್ ಮತ್ತು ಆಂಡ್ರಾಡ್ ಅಪ್ಲಿಕೇಶನ್‌ಗೆ ಉತ್ತಮ ವೇದಿಕೆಯಾಗಿದೆ. ಪ್ರಸ್ತುತ ಸಮಯದಲ್ಲಿ ಇದು ಜಾವಾಗಿಂತ ಉತ್ತಮ ವೇದಿಕೆ ಎಂದು ಪರಿಗಣಿಸಲ್ಪಟ್ಟಿದೆ.


4. ಜಾವಾ.


java programming language in kannada, info mind, infomindkannada


     1990ರ ದಶಕದಿಂದ ಅಭಿವೃದ್ಧಿ ಜಗತ್ತನ್ನು ಆಳುತ್ತಿರುವ ಹಳೆಯ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಜಾವಾ ಕೂಡ ಒಂದು. ಜಾವಾ ಬೇಡಿಕೆಯ ಕಂಪ್ಯೂಟರ್ ಪ್ರೋಗ್ರಾಮಿಂಗ್ ಭಾಷೆಯಾಗಿದ್ದು, ವಿಂಡೋಸ್, ಮ್ಯಾಕ್, ಆಂಡ್ರಾಯ್ಡ್ ಸೇರಿದಂತೆ ಹಲವಾರು ಆಪರೇಟಿಂಗ್ ಸಿಸ್ಟಂಗಳಿಗೆ ಆಬ್ಜೆಕ್ಟ್ ಓರಿಯಂಟೆಡ್ ಸ್ಟ್ರೆಚ್ಚರ್ ಅಂದರೆ ವಸ್ತು ಆಧಾರಿತ ರಚನೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಸ್ವಯಂಚಾಲಿತ ಮೆಮೊರಿ ಹಂಚಿಕೆ, ಸಾಕಷ್ಟು ಸಿಪಿಯು ಮೆಮೊರಿ, ಗಾರ್ಬೇಜ್ ಕಲೆಕ್ಷನ್, ಒಂದೇ ಕೋಡನ್ನು ಅನೇಕ ಯಂತ್ರಗಳಲ್ಲಿ ಬಳಸಲು, ಜಾವಾ ಪ್ರೋಗ್ರಾಮನ್ನು ಬಳಸಲಾಗುತ್ತದೆ. ಇದು ಸುರಕ್ಷಿತ ಕೋಡ್ ಭಾಷೆಯಾಗಿದ್ದು, ವ್ಯಾಪಕವಾದ ಎಪಿಐ, ಬಹು ಕಂಪ್ಯೂಟರ್‍ಗಳ ನಡುವಿನ ವಿನಿಮಯ, ಸೆಕ್ಯುರಿಟಿ ಮ್ಯಾನೇಜರ್ ವೈಶಿಷ್ಟಗಳನ್ನು ಒಳಗೊಂಡಿದೆ.


5. ಜಾವಾಸ್ಕ್ರಿಪ್ಟ್.


javascript in kannada, html in kannada, jquery in kannada, node.js in kannada, info mind, infomindkannada


     2021ರಲ್ಲಿ ಎತ್ತರಕ್ಕೆ ಹೋಗಲಿರುವ ಜಾವಾಸ್ಕ್ರಿಪ್ಟ್ ಸ್ಕ್ರಿಪ್ಟಿಂಗ್ ಭಾಷೆಯಾಗಿದೆ. ಜಾವಾ ಸ್ಕ್ರಿಪ್ಟ್ ಅನ್ನು ನೆಟ್‌ವರ್ಕ್ ಕೇಂದ್ರಿತ ಅಪ್ಲಿಕೇಶನ್‌ಗಳ ಅಭಿವೃದ್ಧಿಗೆ ಬಳಸಲಾಗುತ್ತದೆ. ಜಾವಾಸ್ಕ್ರಿಪ್ಟ್ HTMLನೊಂದಿಗೆ ಉತ್ತಮವಾಗಿ ಸಂಯೋಜಿಸಲ್ಪಟ್ಟಿದೆ. ಇದು ಉತ್ತಮ ಬ್ಯಾಕೆಂಡ್ ಮತ್ತು ಫ್ರಂಟ್ಎಂಡ್ ಸಾಫ್ಟ್‌ವೇರ್  ಅನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಜಾವಾಸ್ಕ್ರಿಪ್ಟ್‌ನಲ್ಲಿ  node.js ಮತ್ತು  jQueryಯಂತಹ ವಿಭಿನ್ನ ಚೌಕಟ್ಟುಗಳನ್ನು ಸೇರಿಸಬಹುದು. ಈ ವೈಶಿಷ್ಟ್ಯಗಳಿಂದಾಗಿ ಜಾವಾಸ್ಕ್ರಿಪ್ಟ್ ಮುಂಬರುವ ದಿನಗಳಲ್ಲಿ ಇನ್ನಷ್ಟು ಬೆಳೆಯುವ ಸಾಧ್ಯತೆ ಹೆಚ್ಚಿದೆ.

Don't forget to Comment Your Opinion on This Article.

Share and Support Us. 

Info Mind

Post a Comment

0 Comments