ನಮ್ಮ ಪೂರ್ವಜರು ಶತಮಾನಗಳ ಹಿಂದೆ ಔಷಧೀಯ ಸಸ್ಯಗಳ ಬಳಕೆಯನ್ನು ಪ್ರಾರಂಭಿಸಿದ್ದಾರೆ. ಈಗಲೂ ನಮ್ಮಲ್ಲಿ ಅನೇಕರು ಇಂಥಹ ಸಾಂಪ್ರದಾಯಿಕ ಪರಿಹಾರಗಳನ್ನು ಅವಲಂಬಿಸಿದ್ದೇವೆ. ಜಗತ್ತಿನ ಹತ್ತು ಶಕ್ತಿಶಾಲಿ ಔಷಧೀಯ ಸಸ್ಯಗಳ ಪಟ್ಟಿ ಇಲ್ಲಿದೆ.
Watch Video
1. ಶುಂಠಿ.
ಏಷ್ಯಾ ಖಂಡದ ಅನೇಕ ದೇಶಗಳಲ್ಲಿ ವಿಶೇಷವಾಗಿ ನಮ್ಮ ಭಾರತದಲ್ಲಿ ಶುಂಠಿ ದೈನಂದಿನ ಆಹಾರದ ಒಂದು ಭಾಗವಾಗಿದೆ. ಶುಂಠಿ ಬ್ಯಾಕ್ಟೀರಿಯ ವಿರೋಧಿ, ಆ್ಯಂಟಿವೈರಲ್ ಮತ್ತು ಉತ್ಕರ್ಷಣ ನಿರೋಧಕ ಸೇರಿದಂತೆ ಅನೇಕ ಪರಿಹಾರ ಕ್ರಮಗಳನ್ನು ಹೊಂದಿದೆ.• ಶುಂಠಿ ರಸವು ಜೀರ್ಣಕಾರಿ ಪ್ರಕ್ರಿಯೆಯನ್ನು ಸಮತೋಲನಗೊಳಿಸುತ್ತದೆ,
• ದೇಹದ ಪೋಷಕಾಂಶಗಳನ್ನು ಹೀರಿಕೊಳ್ಳುವ ಶಕ್ತಿಯನ್ನು ಸುಧಾರಿಸುತ್ತದೆ,
• ಕ್ಯಾನ್ಸರ್, ಮಧುಮೇಹ ಮತ್ತು ಅಸ್ತಮಾದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ,
• ಕೀಲು ನೋವನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ.
2. ಲ್ಯಾವೆಂಡರ್.
ಲ್ಯಾವೆಂಡರ್ ಹೊಳೆಯುವ ಚರ್ಮಕ್ಕೆ ಉತ್ತಮ ಪರಿಹಾರಗಳಲ್ಲಿ ಒಂದಾಗಿದೆ. ತೋಟಗಳಲ್ಲಿ ಕಾಣುವ ಲ್ಯಾವೆಂಡರ್ ಅನೇಕ ಔಷಧೀಯ ಗುಣಗಳನ್ನು ಸಹ ಹೊಂದಿದೆ. ಆತಂಕ, ಒತ್ತಡ ಮತ್ತು ನಿದ್ರಾಹೀನತೆಯಂತಹ ಅನೇಕ ವೈದ್ಯಕೀಯ ಪರಿಸ್ಥಿತಿಗಳಲ್ಲಿ ಇದು ಪ್ರಯೋಜನಕಾರಿಯಾಗಿದೆ.
• ಲ್ಯಾವೆಂಡರ್ ಎಣ್ಣೆ ಡ್ಯಾಂಡ್ರಫ್ ಅಂದರೆ ತಲೆಹೊಟ್ಟನ್ನು ದೂರವಿರಿಸುತ್ತದೆ,
• ನೆತ್ತಿಯನ್ನು ತಣ್ಣಗಿರಿಸುತ್ತದ,
• ಚರ್ಮದ ತುರಿಕೆಯಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ.
3. ಬೆಳ್ಳುಳ್ಳಿ.
ಬೆಳ್ಳುಳ್ಳಿ, ಈರುಳ್ಳಿ ಕುಟುಂಬದ ಸದಸ್ಯ. ಇದು ಹಲವು ದೇಶಗಳಲ್ಲಿ ವಿವಿಧ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಬೆಳ್ಳುಳ್ಳಿ ಕಡಿಮೆ ಕ್ಯಾಲೋರಿ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಬೆಳ್ಳುಳ್ಳಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಮ್ಯಾಂಗನೀಸ್ ಮತ್ತು ಫೈಬರ್ ಇರುತ್ತದೆ.
• ಬೆಳ್ಳುಳ್ಳಿ ಕ್ಯಾನ್ಸರ್ ಸೋಂಕುಗಳ ವಿರುದ್ಧ ಉತ್ತಮ ರಕ್ಷಣೆ ನೀಡುತ್ತದೆ,
• ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ,
• ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸಮತೋಲನಗೊಳಿಸುತ್ತದೆ,
• ದೇಹದ ಪೋಷಕಾಂಶಗಳನ್ನು ಹೀರಿಕೊಳ್ಳುವ ಶಕ್ತಿಯನ್ನು ಸುಧಾರಿಸುತ್ತದೆ,
• ರಕ್ತದೊತ್ತಡ ಕಡಿಮೆ ಮಾಡುವುದರ ಜೊತೆ, ಹೃದಯ ಸಂಬಂಧಿ ಸಮಸ್ಯೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
4. ಪುದೀನಾ.
ಪುದೀನಾ ಒಂದು ಹೈಬ್ರಿಡ್ ಸಸ್ಯವಾಗಿದ್ದು, ಇದರ ಎಣ್ಣೆಯನ್ನು ಆಹಾರದ ಪರಿಮಳಕ್ಕಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಶಾಂತಗೊಳಿಸುವ ಪರಿಣಾಮವನ್ನು ಹೊಂದಿದೆ ಮತ್ತು ಇತರ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
• ಪುದೀನ ಎಣ್ಣೆಯ ಬಳಕೆಯು ಮೆಮೊರಿ ಶಕ್ತಿ ಮತ್ತು ಜಾಗರೂಕತೆಯನ್ನು ಹೆಚ್ಚಿಸುತ್ತದೆ,
• ದೇಹದ ಯಾವುದೇ ನೋವಿಗೆ ತ್ವರಿತ ಪರಿಹಾರ ನೀಡುತ್ತದೆ,
• ಜೀರ್ಣಾಂಗ ವ್ಯವಸ್ಥೆ ಮತ್ತು ದೇಹದ ಪೋಷಕಾಂಶಗಳನ್ನು ಹೀರಿಕೊಳ್ಳುವ ಶಕ್ತಿಯನ್ನು ಸುಧಾರಿಸುತ್ತದೆ,
• ಪುದೀನಾದಲ್ಲಿರುವ ಮೆತನಾಲ್ ಸಾಂದ್ರತೆಯು ಪ್ರೊಸ್ಟೇಟ್ ಕ್ಯಾನ್ಸರನ್ನು ತಡೆಯುತ್ತದೆ.
5. ಮಾರಿಗೋಲ್ಡ್.
ಮಾರಿಗೋಲ್ಡ್ ಒಂದು ಹೂಬಿಡುವ ಸಸ್ಯವಾಗಿದೆ. ಇದು ಬಣ್ಣವನ್ನು ಸೇರಿಸಲು ಅನೇಕ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಮಾರಿಗೋಲ್ಡ್ ಸಸ್ಯವು ಚರ್ಮದ ಅನೇಕ ಸಮಸ್ಯೆಗಳನ್ನು ಗುಣಪಡಿಸುತ್ತದೆ.
• ಜ್ವರದಿಂದ ತ್ವರಿತ ಪರಿಹಾರ ನೀಡುತ್ತದೆ,
• ಎಲ್ಲ ಗಾಯ ಮತ್ತು ಸುಟ್ಟ ಗಾಯಗಳಿಗೆ ಪರಿಹಾರ ನೀಡುತ್ತದೆ,
• ತಲೆನೋವು, ಹಲ್ಲುನೋವುಗಳಿಗೆ ಅತ್ಯುತ್ತಮ ಗಿಡಮೂಲಿಕೆಗಳಲ್ಲಿ ಒಂದಾಗಿದೆ,
• ಹೊಸ ರಕ್ತನಾಳ ಮತ್ತು ಹೊಸ ಚರ್ಮದ ಬೆಳವಣಿಗೆಯನ್ನು ಉತ್ತಮಗೊಳಿಸುತ್ತದೆ.
6. ಕೆಂಪುಮೆಣಸು.
ಕೆಂಪು ಮೆಣಸನ್ನು ಅನೇಕ ಖಾದ್ಯಗಳಲ್ಲಿ ರುಚಿಗಾಗಿ ಬಳಸಲಾಗುತ್ತದೆ. ಇದನ್ನು ವಿಶ್ವದ ಅನೇಕ ಭಾಗಗಳಲ್ಲಿ ಬೆಳೆಸಲಾಗುತ್ತದೆ.
• ಕೆಂಪುಮೆಣಸು ದೇಹದ ಜೀರ್ಣಕಾರಿ ಶಕ್ತಿಯನ್ನು ಸುಧಾರಿಸುತ್ತದೆ,
• ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ,
• ಲಾಲಾರಸದ ಉತ್ಪಾದನೆಯನ್ನು ಉತ್ತೇಜಿಸುತ್ತದೆ,
• ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು
• ಕೀಲು ನೋವಿಗೆ ತ್ವರಿತ ಪರಿಹಾರವಾಗಿದೆ.
7. ದಾಂಡೇಲಿಯನ್.
ದಾಂಡೇಲಿಯನ್ ಹೂಬಿಡುವ ಸಸ್ಯಗಳಾಗಿದ್ದು, ದಕ್ಷಿಣ ಅಮೇರಿಕದಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತದೆ. ಈ ಸಸ್ಯದ ಹೂವು, ಕಾಂಡ ಮತ್ತು ಎಲೆಗಳು ಎಲ್ಲವು ಔಷಧಿಯುಕ್ತ ಮೌಲ್ಯವನ್ನು ಹೊಂದಿದೆ.
• ದಾಂಡೇಲಿಯನ್ ಲಿವರ್ ಸಮಸ್ಯೆಗಳನ್ನು ಗುಣಪಡಿಸುತ್ತದೆ,
• ರಕ್ತನಾಳಗಳನ್ನು ಸ್ವಚ್ಛ ಮಾಡುತ್ತದೆ,
• ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸುತ್ತದೆ,
• ಪ್ಯಾಂಕ್ರಿಯಾದ ಕಾರ್ಯವನ್ನು ಸುಧಾರಿಸುತ್ತದೆ.
8. ಅಲೋವೆರಾ.
• ಇದನ್ನು ಮಲಬದ್ಧತೆ, ಜೀರ್ಣಕ್ರಿಯೆ ತೊಂದರೆಯನ್ನು ನಿವಾರಿಸಲು ಬಳಸಲಾಗುತ್ತದೆ,
• ಮೊಡವೆಗಳನ್ನು ತೆಗೆದುಹಾಕಲು ಅಲೋವೆರಾವನ್ನು ಬಳಸಬಹುದು.
• ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
9. ತುಳಸಿ.
ತುಳಸಿಯನ್ನು ಆಯುರ್ವೇದದಲ್ಲಿ "ಔಷಧೀಯ ಸಸ್ಯಗಳ ರಾಣಿ" ಎಂದು ಕರೆಯಲಾಗುತ್ತದೆ. ತುಳಸಿಯ ಬಲವಾದ ವಾಸನೆಯೆ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಕೊಲ್ಲುತ್ತದೆ.
• ಇದು ಒತ್ತಡದ ವಿರುದ್ಧ ಹೋರಾಡಲು ನಿಮಗೆ ಶಕ್ತಿಯನ್ನು ನೀಡುತ್ತದೆ,
• ಕೆಮ್ಮಿಗೆ ರಾಮಬಾಣವಾಗಿದೆ,
• ಕ್ಯಾನ್ಸರನ್ನು ತಡೆಯುತ್ತದೆ,
• ಕೂದಲು ಉದುರುವುದು, ಮಧುಮೇಹ ಇತ್ಯಾದಿಗಳಿಗೆ ತುಲಸಿ ಒಳ್ಳೆಯದು.
10. ಕೊತ್ತಂಬರಿ.
ಕೊತ್ತಂಬರಿ ಭಾರತೀಯ ಅಡುಗೆ ಮನೆಯ ಪ್ರಮುಖ ಅಂಶವಾಗಿದೆ. ಇದರ ಎಲೆ, ಬೀಜ ಮತ್ತು ಬೀಜಗಳ ಪುಡಿ ಎಲ್ಲವೂ ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ.
• ಇದು ನಿಮ್ಮ ಆಹಾರಕ್ಕೆ ವಿಶಿಷ್ಟವಾದ ಪರಿಮಳವನ್ನು ನೀಡುತ್ತದೆ,
• ಕೊತ್ತಂಬರಿ ಆಹಾರವನ್ನು ಹಾಳಾಗದಂತೆ ತಡೆಯುತ್ತದೆ,
• ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ,
• ಮೂತ್ರ ಧಾರಣವನ್ನು ಗುಣಪಡಿಸುತ್ತದೆ,
• ಮೊಡವೆಗಳಿಗೆ ಚಿಕಿತ್ಸೆ ನೀಡುತ್ತದೆ.
Don't forget to Comment Your Opinion on This Article.
Share and Support Us.
1 Comments
Very useful information 👍
ReplyDelete