Future Innovations that Change the World | ಭವಿಷ್ಯದಲ್ಲಿ ಜಗತ್ತನ್ನು ಬದಲಿಸಲಿರುವ 6 ಆವಿಷ್ಕಾರಗಳು.

ನಾವು ಹೊಸತನದ ಹೊಸಯುಗದಲ್ಲಿ ಬದುಕುತ್ತಿದ್ದೇವೆ. ವಿಶ್ವಾದ್ಯಂತ ನಿಗಮಗಳು ನೀರಿನ ಕೊರತೆ ಮತ್ತು ಕ್ಯಾನ್ಸರ್‌ನಂತಹ ದೊಡ್ಡ ಸಮಸ್ಯೆಗಳನ್ನು ನಿಭಾಯಿಸುತ್ತಿದೆ. ಭವಿಷ್ಯದ ಜಗತ್ತು ಹೇಗಿರುತ್ತದೆ ಎಂಬುದು ದೊಡ್ಡ ವಿಷಯವಾಗಿದೆ. ಏಕೆಂದರೆ ಎಲ್ಲಾ ಕಡೆ ಪ್ರಗತಿಗಳು ಸಾಮಾನ್ಯವಾಗಿದೆ. ಭವಿಷ್ಯದಲ್ಲಿ ಜಗತ್ತನ್ನು ಬದಲಿಸಲಿರುವ ಆರು ಉದಯೋನ್ಮುಖ ಆವಿಷ್ಕಾರಗಳು ಇಲ್ಲಿವೆ.


Watch Video


1. ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ).


artificial intelligence in kannada, info mind, infomindkannada


     ಮಾನವನಂತೆ ಸ್ವತಂತ್ರವಾಗಿ ಕಲಿಯಬಲ್ಲ ಮತ್ತು ಕಾರ್ಯನಿರ್ವಹಿಸಬಲ್ಲ ಆರ್ಟಿಫಿಷಿಯಲ್ ಇಂಟಲಿಜೆನ್ಸ್(ಕೃತಕ ಬುದ್ಧಿಮತ್ತೆ) ಸೈನ್ಸ್ ಫಿಕ್ಷನ್ ನಂತೆ ತೋರುತ್ತದೆ. ಆದರೆ, ಇದು ಈಗ ವಾಸ್ತವವಾಗಿದೆ. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತ್ವರಿತವಾಗಿ ಕಲಿಯುತ್ತದೆ. ಇದರಿಂದ ರೋಬೋಟ್ಗಳಿಗೆ ಕೌಶಲ್ಯಗಳನ್ನು ಕಲಿಸಲು, ಕಾರ್ಯನಿರ್ವಹಿಸಲು ಮತ್ತು ಮಾಹಿತಿಯನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಮಾನವರು ಎಐ ಅನ್ನು ಇನ್ನು ಮುಂದೆ ಪ್ರೋಗ್ರಾಂ ಮಾಡಬೇಕಿಲ್ಲ, ಅದೇ ಅರ್ಥ ಮಾಡಿಕೊಂಡು ಕಾರ್ಯವಿಧಾನಗಳಲ್ಲಿ ತರುತ್ತದೆ. ಇದರಿಂದ ಅದರ ಅಭಿವೃದ್ಧಿ ಬೇಗನೆ ಸಾಗಲಿದೆ.


2. ಸ್ವಯಂಚಾಲಿತ ಕಾರುಗಳು.


autonomous vehicle in kannada, info mind, infomindkannada


     ಪ್ರತಿವಾರ ಪ್ರಯಾಣದಲ್ಲೇ ನೀವು ಎಷ್ಟು ಸಮಯವನ್ನು ಕಳೆಯುತ್ತೀರಾ?

     ಗೂಗಲ್, ಆ್ಯಪಲ್ ಅಥವಾ ಟೆಸ್ಲಾ ಬಯಸಿದರೆ ನೀವು ಶೀಘ್ರದಲ್ಲೇ ನಿಮ್ಮ ಪ್ರಯಾಣದ ಸಮಯವನ್ನು ನಿದ್ರೆ, ಓದುವಿಕೆಯಲ್ಲಿ ಕಳೆಯಬಹುದು. ಸ್ವಯಂಚಾಲಿತ ಕಾರುಗಳು ಈಗಾಗಲೇ ಅಸ್ತಿತ್ವದಲ್ಲಿದೆ ಮತ್ತು ಎಲ್ಲರೂ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಓಡುತ್ತಿದ್ದಾರೆ. ಸ್ವಯಂ ಚಾಲಿತ ಕಾರುಗಳಿಗೆ ಉಬರ್ ಮತ್ತು ಲಿಫ್ಟ್ ನಂತಹ ರೈಡ್ ಹೀಲಿಂಗ್ ಸೇವೆಗಳು ಬೃಹತ್ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿವೆ.


3. ಮರುಬಳಕೆ ಮಾಡಬಹುದಾದ ರಾಕೆಟ್‌ಗಳು.


reusable rocket in kannada, info mind, infomindkannada


     ಬಾಹ್ಯಾಕಾಶ ಪರಿಶೋಧನೆಯು ಅತ್ಯಂತ ದುಬಾರಿ ಮತ್ತು ಸಮರ್ಥವಾಗಿದೆ. ಒಂದು ಉಡಾವಣೆ 10 ರಿಂದ 30 ಕೋಟಿಯಷ್ಟು ವೆಚ್ಚವಾಗುತ್ತದೆ. ಆದರೆ, ಅದನ್ನು ಒಮ್ಮೆ ಮಾತ್ರ ಉಡಾಯಿಸಲು ಸಾಧ್ಯ. ಸ್ಪೇಸ್ ಎಕ್ಸ್, ಬ್ಲೂ ಆರಿಜಿನ್ ಮತ್ತು ಯುನೈಟೆಡ್ ಲಾಂಚ್ ಅಲಿಯನ್ಸ್ ನಂತಹ ಕಂಪನಿಗಳು ಸುರಕ್ಷಿತವಾಗಿ ಇಳಿಯಬಲ್ಲ ರಾಕೆಟ್‌ಗಳನ್ನು ತಯಾರಿಸುತ್ತಿದೆ. ಈ ರಾಕೆಟ್ ಇಂಧನ ಪರ್ಯಾಯಗಳ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಬಾಹ್ಯಾಕಾಶ ಪ್ರಯಾಣವು ಹೆಚ್ಚು ಕೈಗೆಟುಕುವಂತಾಗುತ್ತದೆ.


4. ಸ್ಮಾರ್ಟ್ ಮನೆ.


smart home in kannada, amazon echo in kannada, eco bee in kannada, info mind, infomindkannada


     ಅಂತರ್ಜಾಲ ಸಂಪರ್ಕದ ಮೂಲಕ ಸ್ಮಾರ್ಟ್‌ಪೋನ್ ಅಥವಾ ಟ್ಯಾಬ್ಲೆಟ್‌ನಿಂದಲೇ ಮನೆಯಲ್ಲಿರುವ ಯಾವುದೇ ವಸ್ತು ಮತ್ತು ಇತರ ಸಾಧನಗಳನ್ನು ನಿಯಂತ್ರಿಸಲು ಸ್ಮಾರ್ಟ್ ಮನೆ ಅನುಮತಿಸುತ್ತದೆ. ಸ್ಮಾರ್ಟ್ ಮನೆ ಮಾಡಲೆಂದೇ ಕೆಲವು ಸಾಧನಗಳು ಮಾರುಕಟ್ಟೆಯಲ್ಲಿ ಬಂದಿದೆ. ಅವೆಂದರೆ ಅಮೆಜಾನ್ ಎಕೋ, ಎಕೋ ಬೀ, ಗೂಗಲ್ ಅಸಿಸ್ಟೆಂಟ್, ಇತ್ಯಾದಿ. ಸ್ಮಾರ್ಟ್ ಮನೆಯನ್ನು ಮಾಡುವ ಖರ್ಚು ದುಬಾರಿಯಾಗಿದೆ. ಅದರ ಖರ್ಚು 70,000 ದಿಂದ 2 ಲಕ್ಷದವರೆಗೆ ಇರಬಹುದು.


5. ಹೋಲೋಗ್ರಾಂ.


hologram in kannada, hologram on smartphone screen in kannada, info mind, infomindkannada


     ಹೋಲೋಗ್ರಾಂ ನೈಜಪ್ರಪಂಚದ ರೆಕಾರ್ಡಿಂಗ್ ಆಗಿದ್ದು, ಅದು 3ಡಿ ಬೆಳಕಿನ ದೃಶ್ಯವನ್ನು ತೋರಿಸುತ್ತದೆ. ಭವಿಷ್ಯದ ತಂತ್ರಜ್ಞಾನವು 3ಡಿ ಹೊಲೊಗ್ರಾಂಗಳನ್ನು ಸ್ಮಾರ್ಟ್‌ಫೋನ್ ಸ್ಕ್ರೀನ್‌ ಮೇಲೆ ಅಥವಾ ಸುತ್ತಲಿನ ಗಾಳಿಯಲ್ಲಿ ಪ್ರಕ್ಷೇಪಿಸಲು ಸಾಧ್ಯವಾಗುತ್ತದೆ. ತೇಲುವ ಗಾಳಿಯಲ್ಲಿ 3ಡಿ ಹೊಲೊಗ್ರಾಂಗಳನ್ನು ಶಕ್ತಗೊಳಿಸುವಂತಹ ಸ್ಮಾರ್ಟ್‌ಫೋನ್ ಹೋಲೋಗ್ರಾಂ ತಂತ್ರಜ್ಞಾನವು ನಮ್ಮ ದೂರದ ಭವಿಷ್ಯದಲ್ಲಿದೆ. ಹೋಲೋಗ್ರಾಂ ಮಾರುಕಟ್ಟೆ 2020 ರಿಂದ 2024ರಲ್ಲಿ 4.48 ಬಿಲಿಯನ್ ಡಾಲರ್‌ನಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಲಾಗಿದೆ.


6. 3ಡಿ ಪ್ರಿಂಟಿಂಗ್.


3d printing in kannada, info mind, infomindkannada


     3ಡಿ ಪ್ರಿಂಟಿಂಗ್, ಡಿಜಿಟಲ್ 3ಡಿ ಮಾದರಿಯಿಂದ ಮೂರು ಆಯಾಮದ ವಸ್ತುವಿನ ನಿರ್ಮಾಣವಾಗಿದೆ. 3ಡಿ ಪ್ರಿಂಟಿಂಗ್ ಉತ್ಪಾದನೆಯು ಆಹಾರದಿಂದ ವೈದ್ಯಕೀಯ ಸರಬರಾಜುಗಳವರೆಗೆ ಪ್ರಜಾಪ್ರಭುತ್ವಿಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಭವಿಷ್ಯದಲ್ಲಿ 3ಡಿ ಪ್ರಿಂಟಿಂಗ್ ಮನೆ, ವ್ಯವಹಾರ, ವಿಪತ್ತು ತಾಣ ಮತ್ತು ಬಾಹ್ಯಾಕಾಶಕ್ಕೂ ಹೋಗಬಹುದು. 3ಡಿ ಪ್ರಿಂಟಿಂಗ್ ಗಾಗಿ ಎಬಿಎಸ್ ಪ್ಲಾಸ್ಟಿಕ್, ನೈಲಾನ್, ಎಪಾಕ್ಸಿ ರೆಸಿನ್, ಬೆಳ್ಳಿ, ಟೈಟಾನಿಯಂ, ಸ್ಟೀಲ್, ವ್ಯಾಕ್ಸ್, ಫೋಟೋಪಾಲಿಮರ್, ಪಾಲಿಕಾರ್ಬನೇಟ್ ಮುಂತಾದ ಹಲವು ವಿಭಿನ್ನ ವಸ್ತುಗಳನ್ನು ಬಳಸಬಹುದು.

Don't forget to Comment Your Opinion on This Article.

Share and Support Us.

Info Mind

Post a Comment

0 Comments