ಲಕ್ಷಾಂತರ ಸಂಪರ್ಕಗಳಲ್ಲಿ ಕಮ್ಯುನಿಕೇಷನ್ ಮಾಡುವ ನ್ಯೂರಾನ್‌ಗಳಿಂದ ತಯಾರಿಸಲ್ಪಟ್ಟ ನಿಮ್ಮ ಮೆದುಳು, ನಿಮ್ಮ ದೇಹದ ಅತ್ಯಂತ ಸಂಕೀರ್ಣ ಮತ್ತು ಆಕರ್ಷಕ ಅಂಗಗಳಲ್ಲಿ ಒಂದಾಗಿದೆ. ನಿಮ್ಮ ಮೆದುಳನ್ನು ಆರೋಗ್ಯಕರವಾಗಿ ಮತ್ತು ಸಕ್ರಿಯವಾಗಿ ಉಳಿಸಿಕೊಳ್ಳುವುದು ತುಂಬಾ ಮುಖ್ಯ. ಮೆದುಳು ಎಷ್ಟು ಶಕ್ತಿಯುತವಾಗಿದೆ ಎಂಬುದನ್ನು ಈ ಸಂಗತಿಗಳನ್ನು ನೋಡಿ ನೀವು ತಿಳಿದುಕೊಳ್ಳುವಿರಿ.
Watch Video
1. ಮಾನವನ ಮೆದುಳು ಕೊಬ್ಬಿನಿಂದ ಕೂಡಿದೆ.
ನಿಮ್ಮ ಮೆದುಳು 60% ನಷ್ಟು ಕೊಬ್ಬಿನಿಂದ ಕೂಡಿದೆ. ಇದು ದೇಹದ ತುಂಬಾ ಕೊಬ್ಬು ಇರುವ ಅಂಗವಾಗಿದೆ. ನಿಮ್ಮ ಮೆದುಳು ಸರಿಯಾಗಿ ಕೆಲಸ ಮಾಡಲು ಈ ಕೊಬ್ಬುಗಳು ಅವಶ್ಯಕ. ಹೀಗಾಗಿ ಆರೋಗ್ಯಯುತ ಆಹಾರವನ್ನು ನಿಮ್ಮ ಮೆದುಳಿಗಾಗಿ ತಿನ್ನುತ್ತೀರಿ.
2. ಹುಟ್ಟಿದ ತಕ್ಷಣವೇ ಮೆದುಳು ಸಂಪೂರ್ಣವಾಗಿ ರೂಪುಗೊಳ್ಳುವುದಿಲ್ಲ.
ನಿಮ್ಮ ಮೆದುಳು 25ನೇ ವಯಸ್ಸಿನವರೆಗೂ ಸಂಪೂರ್ಣವಾಗಿ ರೂಪುಗೊಳ್ಳುವುದಿಲ್ಲ. ಮೆದುಳಿನ ಬೆಳವಣಿಗೆಗೆ ಮೆದುಳಿನ ಹಿಂಭಾಗದಿಂದ ಪ್ರಾರಂಭವಾಗಿ ಮುಂಭಾಗಕ್ಕೆ ಹೋಗುತ್ತದೆ. ನಿಮ್ಮ ಪ್ಲಾನಿಂಗ್ ಮತ್ತು ಬುದ್ಧಿವಂತಿಕೆಯ ನಿಯಂತ್ರಣ ಮುಂಭಾಗದಲ್ಲಿ ಇರುವ ಕಾರಣ ಬಾಲ್ಯದಲ್ಲಿ ನಿಮ್ಮ ಬುದ್ಧಿವಂತಿಕೆ ಅಳೆಯಲು ಸ್ವಲ್ಪ ಕಷ್ಟ ಅಥವಾ ಸಾಧ್ಯವಿಲ್ಲ.
3. ವರ್ಚುಯಲಿ ಅನ್ಲಿಮಿಟೆಡ್ ಸ್ಟೋರೇಜ್.
ನಿಮ್ಮ ಮೆದುಳು ಎಷ್ಟು ಸ್ಟೋರೇಜ್ ಮಾಡಿಕೊಳ್ಳುತ್ತದೆಂದರೆ ಅದು ವರ್ಚುಯಲಿ ಅನ್ಲಿಮಿಟೆಡ್ ಆಗಿದೆ. ಮಾನವನ ಮೆದುಳು ಸುಮಾರು 86 ಬಿಲಿಯನ್ ನ್ಯೂರಾನ್‌ಗಳನ್ನು ಹೊಂದಿರುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ. ಪ್ರತಿಯೊಂದು ನ್ಯೂರಾನ್ ಇತರ ನ್ಯೂರಾನ್‌ಗಳಿಗೆ ಸಂಪರ್ಕ ರೂಪಿಸುತ್ತದೆ. ಇದು ಸಾವಿರ ಟ್ರಿಲಿಯನ್‌ನಷ್ಟು ಸಂಪರ್ಕ ಸೇರಿಸಬಹುದು. ಅನೇಕ ನ್ಯೂರಾನ್‌ಗಳು ಹಾನಿಗೊಳಗಾಗಬಹುದು. ಇದರಿಂದ ಮೆಮೊರಿ ಲಾಸ್ ಆಗುತ್ತದೆ.
4. 431 ಕಿಲೋಮೀಟರ್‌ನಷ್ಟು ಮೆದುಳಿನ ವೇಗ.
ಮೆದುಳಿನ ಮಾಹಿತಿಯು ಗಂಟೆಗೆ 431 ಕಿಲೋಮೀಟರ್‌ನಷ್ಟು ವೇಗದಲ್ಲಿ ಚಲಿಸುತ್ತದೆ. ನರಕೋಶದಲ್ಲಿ ಎಲೆಕ್ಟ್ರಿಕ್ ಇಂಪಲ್ಸ್ ಪಾಸ್ ಆದಾಗ ಅದು ಒಂದು ಕೋಶದಿಂದ ಇನ್ನೊಂದು ಕೋಶಕ್ಕೆ ಪಾಸ್ ಆಗುತ್ತದೆ. ಈ ಪ್ರಕ್ರಿಯೆ ನಿಂತಲ್ಲಿ ಇದನ್ನು ಎಪಿಲೆಪ್ಟಿಕ್ ಸಿಜ್ಯೂರ್ ಎಂದು ಕರೆಯಲಾಗುತ್ತದೆ.
5. ಸ್ಪೈನಲ್ ಕಾರ್ಡ್.
ನಿಮ್ಮ ಸ್ಪೈನಲ್ ಕಾರ್ಡ್ ಸರಾಸರಿ 4 ವರ್ಷದ ನಂತರ ಬೆಳೆಯುವುದನ್ನು ನಿಲ್ಲಿಸುತ್ತದೆ. ಇದು ಬಂಡಲ್ ನಷ್ಟು ನರ್ವಸ್ ಟಿಶೂ ಮತ್ತು ಸಪೋರ್ಟ್ ಕೋಶಗಳನ್ನು ಒಳಗೊಂಡಿದೆ. ನಿಮ್ಮ ದೇಹದ ಎಲ್ಲಾ ಭಾಗಕ್ಕೂ ಮೆದುಳಿನಿಂದ ಸಂದೇಶಗಳನ್ನು ಸ್ಪೈನಲ್ ಕಾರ್ಡ್ ಕಳಿಸುತ್ತದೆ.
6. ನೀವು ನಿಮ್ಮ ಮೆದುಳಿನ 10% ಮಾತ್ರ ಬಳಸುತ್ತೀರಾ.
ನೀವು ನಿಮ್ಮ ಮೆದುಳಿನ 10%ಮಾತ್ರ ಬಳಸುತ್ತೀರಾ ಎಂಬುದು ಸತ್ಯವಲ್ಲ. ನೀವು ನಿಮ್ಮ ಮೆದುಳಿನ ಎಲ್ಲವನ್ನು ಬಳಸುತ್ತೀರಾ, ನೀವು ನಿದ್ರೆ ಮಾಡುವಾಗಲೂ ಸಹ. ನಿಮ್ಮ ಮೆದುಳು ಯಾವಾಗಲು ಸಕ್ರಿಯವಾಗಿರುತ್ತದೆ ಎಂದು ನರ ವಿಜ್ಞಾನಿಗಳು ಖಚಿತಪಡಿಸಿದ್ದಾರೆ.
7. ಮೆದುಳಿನ ತೂಕ.
ನಿಮ್ಮ ಮೆದುಳು 1.6 ಕೆಜಿಯಷ್ಟು ತೂಕವನ್ನು ಹೊಂದಿದೆ. ನಿಮ್ಮ ಮೆದುಳಿನ ಗಾತ್ರವು ನಿಮ್ಮ ಬುದ್ಧಿವಂತಿಕೆಯನ್ನು ಸೂಚಿಸುವುದಿಲ್ಲ. ಪುರುಷರ ಮೆದಳು ಮಹಿಳೆಯರಿಗಿಂತ ದೊಡ್ಡದಿರುತ್ತದೆ.
8. ಮೆದುಳಿನ ಒಂದು ಪೀಸ್‌ನಲ್ಲಿ 1 ಲಕ್ಷ ನ್ಯೂರಾನ್ಸ್.
ಮೆದುಳಿನ ಟಿಶೂವಿನ ಮರಳಿನ ಧಾನ್ಯದ ಗಾತ್ರದಲ್ಲಿ ಒಂದು ಲಕ್ಷ ನ್ಯೂರಾನ್‌ಗಳು ಇರುತ್ತವೆ. ನಿಮ್ಮ ನ್ಯೂರಾನ್‌ಗಳಿಗೆ ಪಾರ್ಶ್ವವಾಯುವಿನಿಂದ ಡ್ಯಾಮೇಜ್ ಆಗಬಹುದು. ಉದಾಹರಣೆಗೆ, ರಕ್ತಕ್ಕೆ ಮೆದುಳಿಗೆ ಆಮ್ಲಜನಕವನ್ನು ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಇದರಿಂದ ಮೆದುಳಿನ ನ್ಯೂರಾನ್ ಸಾಯುತ್ತದೆ.
ಬೋನಸ್
#ಮಾನವನ ಮೆದುಳು ಲೈಟ್ ಬಲ್ಬ್ ಆನ್ ಮಾಡುವಷ್ಟು ಶಕ್ತಿ ಉತ್ಪಾದಿಸುತ್ತದೆ.
ಮಾನವನ ಮೆದುಳು ಸುಮಾರು 23 ವ್ಯಾಟ್ ಶಕ್ತಿಯನ್ನು ಉತ್ಪಾದಿಸಬಲ್ಲದು. ಆ ಎಲ್ಲ ಶಕ್ತಿಯೂ ನಿಮಗೆ ವಿಶ್ರಾಂತಿಗೆ ಕರೆ ನೀಡುತ್ತದೆ. ಸಾಕಷ್ಟು ನಿದ್ದೆ ನಿಮ್ಮ ಮೆದುಳಿನಲ್ಲಿನ ಮಾರ್ಗಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿದ್ದೆ ಕಡಿಮೆ ಮಾಡುವುದರಿಂದ ನಿಮ್ಮ ಮೆದುಳಿನಲ್ಲಿ ಪ್ರೋಟಿನ್ ಹೆಚ್ಚಾಗಿ ನೀವು ರೋಗಕ್ಕೆ ತುತ್ತಾಗುತ್ತೀರಾ.
Don't forget to Comment Your Opinion on This Article.
Share and Support Us.
0 Comments