ನಮ್ಮ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್‌ನ ಸ್ಕ್ರೀನ್ ತಯಾರಿಸುವ ವಿನ್ಯಾಸಕರು ನಂಬಲಾಗದಷ್ಟು ಶಕ್ತಿಯುತ ಬೆಳಕನ್ನು ರಚಿಸಲು ಸಮರ್ಥರಾಗಿದ್ದಾರೆ. ಈ ಸ್ಮಾರ್ಟ್‌ಫೋನ್ ಸ್ಕ್ರೀನ್ ಬಿಸಿಲಿನ ದಿನದಲ್ಲಿ ಕಾಣುವಷ್ಟು ಪ್ರಕಾಶಮಾನವಾಗಿ ಹೊಳೆಯುತ್ತವೆ. ರಾತ್ರಿಯಲ್ಲಿ ಆ ಬೆಳಕು ತುಂಬಾ ಪ್ರಕಾಶಮಾನವಾಗಿರುತ್ತದೆ, ಎಷ್ಟೆಂದರೆ ಅದು ಹಗಲಿನಲ್ಲಿ ಒಂದು ಕಿಟಕಿಯಿಂದ ಕಾಣುವ ಬೆಳಕಿನಷ್ಟೇ ಪ್ರಬಲವಾಗಿದೆ. ಹೀಗಾಗಿ ರಾತ್ರಿಯಲ್ಲಿ ನಿಮ್ಮ ಫೋನ್ ನೋಡುವುದು ಅಷ್ಟು ಒಳ್ಳೆಯದಲ್ಲ. ನಾವು ಈ ವಿಡಿಯೋದಲ್ಲಿ ಸ್ಮಾರ್ಟ್‌ಫೋನ್ ಬೆಳಕಿನಿಂದ ನಿಮ್ಮ ಮೆದುಳು ಮತ್ತು ದೇಹದ ಮೇಲೆ ಆಗುವ ಪರಿಣಾಮವನ್ನು ತಿಳಿಸುತ್ತಿದ್ದೇವೆ.
Watch Video
ಮೆಲಟೋನಿನ್ ಉತ್ಪಾದನೆ ಅಡ್ಡಿಪಡಿಸುವ ಮೂಲಕ ಸ್ಮಾರ್ಟ್‌ಫೋನ್ ಬೆಳಕು ನಿಮ್ಮ ನಿದ್ದೆಯ ಚಕ್ರವನ್ನು ಅಡ್ಡಿಪಡಿಸುತ್ತದೆ. ನಂತರ ನಿಮಗೆ ನಿದ್ದೆಯೇ ಬರುವುದಿಲ್ಲ, ನಿದ್ದೆ ಮಾಡಲು ನಿಮಗೆ ಕಷ್ಟವೆನಿಸುತ್ತದೆ. ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಈ ಸಮಸ್ಯೆಯನ್ನು ನಿವಾರಿಸಲು ನಿಮಗೆ ಸಾಕಷ್ಟು ನೈಟ್ ಮೋಡ್ ಆ್ಯಪುಗಳು ಸಿಗಬಹುದು ಅವು ನಿಮ್ಮ ಸ್ಮಾರ್ಟ್‌ಫೋನ್‍ನಿಂದ ಬರುವ ಬೆಳಕನ್ನು ಆದಷ್ಟು ಕಡಿಮೆ ಮಾಡುತ್ತವೆ. ಕಿತ್ತಳೆ ಬಣ್ಣವನ್ನು ನೀಡುವ ನೈಟ್ ಮೋಡ್ ಆ್ಯಪುಗಳು ಒಳ್ಳೆಯದು ಎಂದು ಎಕ್ಸ್ಪರ್ಟ್ ಹೇಳುತ್ತಾರೆ. ವಿಜ್ಞಾನಿಗಳು ಮಸುಕಾದ ಬೆಳಕು ನಿದ್ರೆಯ ಜಾರಿಸುತ್ತದೆ ಎಂದು ಹೇಳಿದ್ದಾರೆ. ಆದರೂ ಇದರ ಮೇಲೆ ಹೆಚ್ಚಿನ ಅಧ್ಯಯನ ನಡೆಯುವುದು ಬಾಕಿ ಇದೆ.
ನೈಟ್ ಮೋಡ್ ನಂತಹ ಬದಲಾವಣೆ ಸಹಾಯಕವಾಗಿದೆ ಎಂದು ಸಾಬೀತಾದರೂ, ನಮ್ಮ ಫೋನ್‍ಗಳೊಂದಿಗೆ ನಾವು ಮಾಡುವ ಇತರ ಅನೇಕ ಕೆಲಸಗಳು ಸಹ ನಿದ್ದೆಗೆ ಅನುಕೂಲಕರವಾಗಿಲ್ಲವೆಂದು ತಜ್ಞರು ಹೇಳುತ್ತಾರೆ. ಉದಾಹರಣೆಗೆ, ನೀವು ನಿದ್ದೆಯಲ್ಲಿದ್ದಾಗ ರಾತ್ರಿಯಲ್ಲಿ ಬರುವ ಈಮೇಲ್ ಪಾಪ್- ಆಪ್. ಇದರಿಂದಲೂ ಮೆಲಟೋನಿನ್ ಉತ್ಪಾದನೆ ನಿಂತು ನಿಮ್ಮ ನಿದ್ದೆಯನ್ನು ಹಾಳು ಮಾಡುತ್ತದೆ.
ಸ್ಮಾರ್ಟ್‌ಫೋನ್‍ನಿಂದಾಗುವ ಇನ್ನಷ್ಟು ತೊಂದರೆಗಳು:
• ನಿಮ್ಮ ಸ್ಮಾರ್ಟ್‌ಫೋನ್‍ನನ್ನು ರಾತ್ರಿಯಲ್ಲಿ ತುಂಬಾ ನೋಡುವುದರಿಂದ ನಿಮ್ಮ ಕಣ್ಣು ಮಿಟುಕಿಸುವುದು ಕಡಿಮೆಯಾಗಿ, ಕಣ್ಣಿಗೆ ಸುಸ್ತಾಗುತ್ತದೆ.
• ತುಂಬಾ ಸಮಯದವರೆಗೆ ಚೆನ್ನಾಗಿ ನಿದ್ದೆ ಮಾಡಿಲ್ಲವೆಂದರೆ ನ್ಯೂರೋ ಟ್ಯಾಕ್ಸಿನ್ ಬೆಳೆಯುತ್ತದೆ. ಇದರಿಂದ ನಿಮಗೆ ನಿದ್ದೆ ಮಾಡುವುದು ಕಷ್ಟವೆನಿಸುತ್ತದೆ.
• ನಿಮ್ಮ ನಿದ್ದೆಯ ಅವಧಿಗೆ ನೀವು ಅಡ್ಡಿಪಡಿಸಿದರೆ, ಮುಂದಿನ ದಿನ ನಿಮ್ಮ ಮೆದುಳಿನ ನೆನಪಿನ ಶಕ್ತಿ ಕುಗ್ಗುತ್ತದೆ.
• ಮೆಲಟೋನಿನ್ ಅಷ್ಟೇ ಅಲ್ಲದೆ ಸ್ಮಾರ್ಟ್‌ಫೋನ್ ಬೆಳಕು, ಹಸಿವು ನೀಡುವ ಹಾರ್ಮೋನ್ ಉತ್ಪಾದನೆಗೆ ಅಡ್ಡಿಪಡಿಸುತ್ತದೆ.
• ಸ್ಮಾರ್ಟ್‌ಫೋನ್ ನೋಡುತ್ತಾ ರಾತ್ರಿಯೆಲ್ಲ ಎಚ್ಚರವಿದ್ದರೆ ಅದು ನಿಮಗೆ ಏನನ್ನಾದರೂ ಕಲಿಯಲು ಕಷ್ಟಕರವಾಗಿರುತ್ತದೆ.
• ಯಾರ ದೇಹದಲ್ಲಿ ಮೆಲಟೋನಿನ್ ಅಂಶ ಕಡಿಮೆ ಮತ್ತು ಅವರು ನಿದ್ದೆಯ ಚಕ್ರಕ್ಕೆ ಅಡ್ಡಿಪಡಿಸುತ್ತಾರೋ, ಅವರು ಬೇಗನೆ ಒತ್ತಡಕ್ಕೆ ಒಳಗಾಗುತ್ತಾರೆ.
ಕೊನೆಯದಾಗಿ, ರಾತ್ರಿಯ ಸಮಯದಲ್ಲಿ ಫೋನ್‍ನಿಂದ ದೂರವಿರುವುದು ಒಳ್ಳೆಯದು. ಒಂದು ವೇಳೆ ರಾತ್ರಿಯ ಸಮಯದಲ್ಲಿ ನಿಮಗೆ ಫೋನ್ ನೋಡಬೇಕಿದ್ದರೆ, ಕೋಣೆಯ ಬೆಳಕನ್ನು ಆನ್ ಮಾಡಿ ನೋಡಿ. ಇದರಿಂದ ನಿಮ್ಮ ಕಣ್ಣಿಗೆ ಅಷ್ಟು ಒತ್ತಡ ಬೀಳುವುದಿಲ್ಲ.
Don't forget to Comment Your Opinion on This Article.
Share and Support Us.
0 Comments