ಇಂದಿನ ನಮ್ಮ ವಿಡಿಯೋ ಜಗತ್ತಿನ ಹತ್ತು ಅತ್ಯಂತ ಮೌಲ್ಯಯುತ ಕಂಪನಿಗಳ ಮೇಲಾಗಿದೆ. ಇಲ್ಲಿ ನಾವು ತಿಳಿಸುವ ಕಂಪನಿಗಳು ಮಾರುಕಟ್ಟೆ ಬಂಡವಾಳಿಕರಣವನ್ನು ಆಧರಿಸಿದೆ. ಇದನ್ನು ಕಂಪನಿಯು ನೀಡುವ ಷೇರುಗಳ ಸಂಖ್ಯೆಯನ್ನು ಅಂತಹ ಒಂದು ಷೇರಿನ ಮೌಲ್ಯದಿಂದ ಗುಣಿಸಿ ಲೆಕ್ಕ ಹಾಕಲಾಗಿದೆ. 6 ಸೆಪ್ಟೆಂಬರ್ 2020ರ ತನಕ ಆಧರಿಸಿ, ಈ ವಿಡಿಯೋದ ಮಾಹಿತಿ ಸಂಗ್ರಹಿಸಲಾಗಿದೆ.
Watch Video
1. ಸೌದಿ ಅರಾಮ್ಕೋ, 1,685B$.
ಸೌದಿ ಅರಾಮ್ಕೋ ತೈಲ, ಅನಿಲ ಉತ್ಪಾದನೆ ಮತ್ತು ಸಂಸ್ಕರಣೆಯ ಕಂಪನಿಯಾಗಿದೆ. ಷೇರು ವಿನಿಮಯ ಕೇಂದ್ರದಲ್ಲಿ ಷೇರುಗಳ ಯಶಸ್ವಿ ವಿತರಣೆಯ ನಂತರ, ಸೌದಿ ಅರಾಮ್ಕೋ ಅತ್ಯಂತ ದುಬಾರಿ ಕಂಪನಿಯಾಗಿದೆ. ಈ ಕಂಪನಿ ಅಧಿಕೃತವಾಗಿ ತನ್ನ ಹಣಕಾಸು ಹೇಳಿಕೆಯನ್ನು 2019ರಲ್ಲಿ ತಡವುಲ್ ಷೇರು ವಿನಿಮಯ ಕೇಂದ್ರದಲ್ಲಿ ಪ್ರಕಟಿಸಿತು. ಷೇರು ಪ್ರಕಟಿಸಿ ಸ್ವಲ್ಪ ಸಮಯದಲ್ಲೇ ಕಂಪನಿಯ ಮೌಲ್ಯವು ಸುಮಾರು 1.8 ಟ್ರಿಲಿಯನ್ ಡಾಲರ್‌ಗೆ ತಲುಪಿತು.
ಸೌದಿ ಅರಾಮ್ಕೋ ಜಗತ್ತಿನಲ್ಲಿ ಅದರ ಪ್ರಭಾವದ ವಿಸ್ತರಣೆಗಾಗಿ ಬಹುತೇಕ ಎಲ್ಲ ಲಾಭಗಳನ್ನು ಬಳಸಲಿದೆ. ನ್ಯಾಚುರಲ್ ಗ್ಯಾಸ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವುದು ಕಂಪನಿಯ ಉದ್ದೇಶವಾಗಿದೆ. ಇದು ಈಗಾಗಲೇ ಚೀನಾ, ಜಪಾನ್, ರಷ್ಯಾ, ಯುಎಇ, ಅಮೆರಿಕ, ಬ್ರಿಟನ್ ಮತ್ತು ಇತರ ದೇಶಗಳಲ್ಲಿ ಶಾಖೆ ಮತ್ತು ಅಂಗಸಂಸ್ಥೆಗಳನ್ನು ಹೊಂದಿದೆ. ಈ ಕಂಪನಿಯ ಕಚೇರಿ ದಹ್ರಾನ್ ಲಿದ್ದು, ಸೌದಿ ಅರೇಬಿಯಾ ಸರಕಾರದ ಒಡೆತನದಲ್ಲಿದೆ.
ಸಾಫ್ಟ್ವೇರ್ ಡೆವಲಪ್ಮೆಂಟ್ ಕಂಪನಿಯಾಗಿರುವ ಮೈಕ್ರೋಸಾಫ್ಟ್, ಜಗತ್ತಿನ ಎರಡನೇ ಅತ್ಯಂತ ಮೌಲ್ಯಯುತ ಕಂಪನಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾದ ಈ ಕಂಪನಿಯನ್ನು 1975ರಲ್ಲಿ ಬಿಲ್ ಗೇಟ್ಸ್ ಸ್ಥಾಪಿಸಿದರು. ಅವರು ಈಗ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಆ ಸಮಯದಲ್ಲಿ ಮೈಕ್ರೋಸಾಫ್ಟ್ ಹೋಂ ಕಂಪ್ಯೂಟರ್ಗಳಿಗೆ ಸಾಫ್ಟ್ವೇರನ್ನು ಬಳಸಲು ಸೂಚಿಸಿದ ಮೊದಲ ಡೆವಲಪರ್ ಆಗಿತ್ತು. ಇಂದು ಪಿಸಿ ಸಾಫ್ಟವೇರ್ ಮಾರುಕಟ್ಟೆಯಲ್ಲಿ ಪ್ರಮುಖ ಕಂಪನಿಗಳಲ್ಲಿ ಮೈಕ್ರೋಸಾಫ್ಟ್ ಒಂದಾಗಿದೆ. ಇದು ಹೊಸ ಪೀಳಿಗೆಯ ವಿಂಡೋಸ್ ಆಪರೇಟಿಂಗ್ ಸಿಸ್ಟಂಗಳನ್ನು ಬಿಡುಗಡೆ ಮಾಡುತ್ತಿದೆ. ಮೈಕ್ರೋಸಾಫ್ಟ್ ಆಫೀಸ್‌ನಂತೆ ಹೆಚ್ಚಿನ ಅಪ್ಲಿಕೇಷನ್ ಮಾಡುವ ಜೊತೆಗೆ, ಮೊಬೈಲ್ ಸಾಧನಗಳು, ವಿಡಿಯೊ, ಆಡಿಯೊ ಮತ್ತು ಕಚೇರಿ ಸಾಧನೆಗಳನ್ನು ಮೈಕ್ರೋಸಾಫ್ಟ್ ಕಂಪನಿ ಉತ್ಪಾದಿಸುತ್ತದೆ. ಈ ಕಂಪನಿಯ ಹೆಡ್‌ಕ್ವಾಟರ್ ಅಮೆರಿಕದ ವಾಷಿಂಗ್ಟನ್ನ ರೆಡ್‌ಮಂಡ್ನಲ್ಲಿದೆ.
ಆ್ಯಪಲ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಕಂಪನಿಯಾಗಿದೆ. ದೀರ್ಘಕಾಲದವರೆಗೆ ಆ್ಯಪಲ್ ವಿಶ್ವದ ಅತ್ಯಮೂಲ ಕಂಪನಿಯಾಗಿತ್ತು, ಆದರೆ ಐಫೋನ್ ಮಾರಾಟದ ಪರಿಸ್ಥಿತಿಯಿಂದಾಗಿ ಅದು ಪ್ರಾಮುಖ್ಯತೆಯನ್ನು ಕಳೆದುಕೊಂಡಿತು. ಆದರೂ ಈಗ ಪರಿಸ್ಥಿತಿ ಉತ್ತಮವಾಗಿದೆ, ಕಂಪನಿ ತನ್ನ ಸ್ಥಾನಗಳನ್ನು ಮರಳಿ ಪಡೆಯುತ್ತಿದೆ. ಇಂದು ಆ್ಯಪಲ್ ಜಗತ್ತಿನ ಮೂರನೇ ಅತ್ಯಂತ ಮೌಲ್ಯಯುತ ಕಂಪನಿಯಾಗಿದ್ದು, ಬ್ರಾಂಡ್‌ಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದಿದೆ. ಆ್ಯಪಲ್ ಕಂಪನಿಯ ಲೋಗೊವನ್ನು ಅನೇಕ ಜನರು ಗುರುತಿಸಿದ್ದಾರೆ. ಈ ಕಂಪನಿಯನ್ನು 1 ಏಪ್ರಿಲ್ 1976ರಂದು ಸ್ಟೀವ್ ವೋಜ್ನಿಯಾಕ್, ರೋನಾಲ್ಡ್ ವೇನೇ ಮತ್ತು ಸ್ಟೀವ್ ಜಾಬ್ಸ್ ಸ್ಥಾಪಿಸಿದರು. ಮೊದಲಿಗೆ ಈ ಮೂವರು ಹೋಂ ಕಂಪ್ಯೂಟರ್ ಜೋಡಣೆ ಮತ್ತು ಪಿಸಿ ಮಾದರಿಗಳನ್ನು ತಯಾರಿಸುವಲ್ಲಿ ತೊಡಗಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಆ್ಯಪಲ್ ತನ್ನ ಮೊಬೈಲ್ ಉತ್ಪನ್ನಗಳ ಶ್ರೇಣಿಯನ್ನು ಜಗತ್ತಿಗೆ ಪರಿಚಯಿಸಿದಾಗ ದೊಡ್ಡ ಯಶಸ್ಸು ಸಿಕ್ಕಿತು. ಆ್ಯಪಲ್ ಕಂಪನಿ ಜಗತ್ತಿನಾದ್ಯಂತ ಸುಮಾರು 1,32,000 ಉದ್ಯೋಗಿಗಳನ್ನು ಹೊಂದಿದ್ದು, ಸಾವಿರಾರು ಕಚೇರಿ, ಬ್ರ್ಯಾಂಡ್ ಮಳಿಗೆ ಮತ್ತು ಸೇವಾ ಕೇಂದ್ರಗಳನ್ನು ಹೊಂದಿದೆ. ಈ ಕಂಪನಿಯ ಹೆಡ್‌ಕ್ವಾಟರ್ ಅಮೆರಿಕದ ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೋದಲ್ಲಿದೆ.
2. ಮೈಕ್ರೋಸಾಫ್ಟ್, 1,359B$.

3. ಆ್ಯಪಲ್ ಕಂಪನಿ, 1,286B$.

4. ಅಮೆಜಾನ್, 1,233B$.
ಅಮೆಜಾನ್ ಅಮೆರಿಕದ ರಿಟೇಲ್ ಕಂಪನಿಯಾಗಿದ್ದು, ಅಂತರ್ಜಾಲದಲ್ಲಿ ವಿವಿಧ ವಸ್ತುಗಳ ಮಾರಾಟ ಮತ್ತು ತಲುಪಿಸುತ್ತದೆ. 7 ಜನವರಿ 2019ರಂದು ಅಮೆಜಾನ್ ತನ್ನ ಪ್ರತಿಸ್ಪರ್ಧಿ ಮೈಕ್ರೊಸಾಫ್ಟನ್ನು ಮೊದಲ ಬಾರಿಗೆ ಹಿಂದಿಕ್ಕಿ, ವಿಶ್ವದ ಅತ್ಯಂತ ದುಬಾರಿ ಕಂಪನಿಯಾಗಿತ್ತು. ಇಂದು ಅಮೆಜಾನ್ ನಾಲ್ಕನೇ ಸ್ಥಾನದಲ್ಲಿದೆ. ಇಂಟರ್ನೆಟ್ ಬಳಕೆದಾರರು ಮತ್ತು ಪೂರೈಕೆದಾರರು ಅಮೆಜಾನ್ ವೆಬ್‌ಸೈಟ್‌ನ್ನು ಆನ್ಲೈನ್ ಸ್ಥಳವಾಗಿ ಬಳಸಿಕೊಳ್ಳುವ ಮೂಲಕ, ಯಾವುದೇ ಸರಕುಗಳನ್ನು ಸ್ವಂತವಾಗಿ ಮಾರಾಟ ಮಾಡಬಹುದು. ಈ ಕಂಪನಿಯನ್ನು 1994ರಂದು ಜೆಫ್ ಬೆಜೋಸ್ ಸ್ಥಾಪಿಸಿದರು. ಇದರ ಹೆಡ್‌ಕ್ವಾಟರ್ ಸಿಯಾಟಲ್‌ನಲ್ಲಿದೆ. ಒಂದು ಅಂದಾಜಿನ ಪ್ರಕಾರ ಈ ಕಂಪನಿಯು 6 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ ಮತ್ತು ಇದರ ವಾರ್ಷಿಕ ವಹಿವಾಟು ಸುಮಾರು 232B ಡಾಲರ್‌ನಸ್ಟು ಇದೆ.
5. ಆಲ್ಫಾಬೆಟ್, 919B$.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾದ ಇಂಟರ್ನೆಟ್ ಕಂಪನಿ ಗೂಗಲ್, ಇತ್ತೀಚೆಗೆ ತನ್ನ ಅಧಿಕೃತ ಹೆಸರನ್ನು "ಆಲ್ಫಾಬೆಟ್" ಎಂದು ಬದಲಾಯಿಸಿತು. ಏಕೆಂದರೆ ಕಂಪನಿಯು ಗೂಗಲ್ ಸರ್ಚ್ ಇಂಜಿನ್ ವ್ಯಾಪ್ತಿಯಿಂದ ಹೊರಗಿತು. 1998ರಲ್ಲಿ ಸರ್ಗಿ ಬ್ರಿನ್ ಮತ್ತು ಲ್ಯಾರಿ ಪೇಜ್ ಈ ಕಂಪನಿಯನ್ನು ಪ್ರಾರಂಭಿಸಿದರು. ಅಲ್ಫಾಬೆಟ್ ಕಂಪನಿಯ 30ಕ್ಕೂ ಹೆಚ್ಚು ಜನಪ್ರಿಯ ಸೇವೆಗಳು ಮತ್ತು ಉಪ-ಕಂಪನಿಗಳನ್ನು ಹೊಂದಿದೆ. ಅದೆಂದರೆ, ಆ್ಯಡ್ ವರ್ಡ್ಸ್, ಆಂಡ್ರಾಯ್ಡ್, ಯೂಟ್ಯೂಬ್ ಇತ್ಯಾದಿ. ಇದರ ಹೆಡ್‌ಕ್ವಾಟರ್ ಕ್ಯಾಲಿಫೋರ್ನಿಯಾದಲ್ಲಿದೆ.
6. ಫೇಸ್‌ಬುಕ್, 584B$.
ಫೇಸ್‌ಬುಕನ್ನು ಫೆಬ್ರವರಿ 2004ರಂದು ಮಾರ್ಕ್ ಜುಕರ್ಬರ್ಗ್ ಅವರು ಅಭಿವೃದ್ಧಿಪಡಿಸಿದರು. ಆನ್ಲೈನ್ ಜಾಹೀರಾತಿನಿಂದಾಗಿ ಫೇಸ್‌ಬುಕ್ ಪ್ರತಿವರ್ಷ 22 ಬಿಲಿಯನ್ಗಿಂತಲೂ ಹೆಚ್ಚಿನ ಲಾಭವನ್ನು ಗಳಿಸುತ್ತಿದೆ. ಕಳೆದ ವರ್ಷ ಈ ಕಂಪನಿಯ ಲಾಭ ಶೇಖಡ 54ರಷ್ಟು ಹೆಚ್ಚಾಗಿದೆ. ಇದರ ಹೆಡ್‌ಕ್ವಾಟರ್ ಅಮೆರಿಕದ ಕ್ಯಾಲಿಫೋರ್ನಿಯಾದ ಮೆನ್ಲೊ ಪಾರ್ಕ್‌ನಲ್ಲಿದೆ.
7. ಅಲಿಬಾಬಾ, 545B$.
ಅಲಿಬಾಬಾ ಕಂಪನಿಯು ಚೀನಾ ಮತ್ತು ವಿಶ್ವದ ಅತಿದೊಡ್ಡ ವರ್ಚುಯಲ್ ಟ್ರೆಡಿಂಗ್ ಫ್ಲ್ಯಾಟ್ಫಾರ್ಮ್ಗಳಲ್ಲಿ ಒಂದಾಗಿದೆ. ಇದು ಕೈಗೆಟುಕುವ ಬೆಲೆ ಮತ್ತು ವ್ಯಾಪಕ ಶ್ರೇಣಿಯ ಸರಕುಗಳಿಂದ ಖರೀದಿದಾರರ ಗಮನವನ್ನು ಸೆಳೆಯುತ್ತಿದೆ. 4 ಏಪ್ರಿಲ್ 1999ರಂದು ಸ್ಥಾಪನೆಯಾದ ಈ ಕಂಪನಿಯು, ವೆಬ್ ಪೋರ್ಟಲ್ಗಳ ಮೂಲಕ ಕನ್ಸುಮರ್, ಬಿಸಿನೆಸ್- ಕನ್ಸುಮರ್ ಮತ್ತು ಬಿಸಿನೆಸ್ ಸೇವೆಗಳನ್ನು ಒದಗಿಸುತ್ತದೆ. ಇಷ್ಟೇ ಅಲ್ಲದೆ ಎಲೆಕ್ಟ್ರಾನಿಕ್ ಪಾವತಿ ಸೇವೆಗಳು, ಗ್ರಾಹಕರ ಸಹಾಯಕ್ಕೆ ಸರ್ಚ್ ಇಂಜಿನ್ ಮತ್ತು ಕ್ಲೌಡ್ ಕಂಪ್ಯೂಟಿಂಗ್ ನೀಡಿದೆ. ಇದರ ಹೆಡ್‌ಕ್ವಾಟರ್ ಚೀನಾದ ಹ್ಯಾಂಗ್‌ಜೂನಲ್ಲಿದೆ.
8. ಟೆನ್ಸೆಂಟ್, 510B$.
1998ರಲ್ಲಿ ಸ್ಥಾಪನೆಯಾದ ಚೀನಾದ ದೈತ್ಯ ಕಂಪನಿ ಟೆನ್ಸೆಂಟ್ ವಿಶ್ವದ ಅತ್ಯಂತ ದುಬಾರಿ ಕಂಪನಿಯಾಗಿದೆ. ಈ ಕಂಪನಿಯ ಸೇವೆಗಳಲ್ಲಿ ಸೋಷಿಯಲ್ ನೆಟ್‌ವರ್ಕ್, ಮೊಬೈಲ್ ಗೇಮ್ಸ್, ಸಾಂಗ್ಸ್, ವೆಬ್ ಪೋರ್ಟಲ್, ಪೇಡ್ ಸರ್ವಿಸ್, ಇ- ಕಾಮರ್ಸ್, ಸ್ಮಾರ್ಟ್ ಫೋನ್ ಮತ್ತು ಮಲ್ಟಿಪ್ಲೇಯರ್ ಗೇಮ್‌ಗಳು ಸೇರಿವೆ. ಇದರ ಹೆಡ್‌ಕ್ವಾಟರ್ ಚೀನಾದ ಶೆನ್ಜೆನಿನ, ನನ್ಶಾನ್ ಜಿಲ್ಲೆಯಲ್ಲಿದೆ.
9. ಬರ್ಕ್ಷೈರ್ ಹ್ಯಾಥ್ವೇ, 455B$.
10. ಜಾನ್ಸನ್ ಅಂಡ್ ಜಾನ್ಸನ್, 395B$.
ಜಾನ್ಸನ್ ಅಂಡ್ ಜಾನ್ಸನ್ ವೈದ್ಯಕೀಯ ಸಾಧನಗಳು, ಔಷಧ ಮತ್ತು ಗ್ರಾಹಕ ಉತ್ಪನ್ನಗಳನ್ನು ಉತ್ಪಾದಿಸುವ ಅಮೆರಿಕದ ಬಹುರಾಷ್ಟ್ರೀಯ ಕಂಪನಿಯಾಗಿದೆ. ಈ ಕಂಪನಿಯನ್ನು 1886ರಲ್ಲಿ ರಾಬರ್ಟ್ ವುಡ್ ಜಾನ್ಸನ್, ಜೇಮ್ಸ್ ವುಡ್ ಜಾನ್ಸನ್ ಮತ್ತು ಎಡ್ವರ್ಡ್ ಮೀಡ್ ಜಾನ್ಸನ್ ಎಂಬ ಮೂವರು ಸಹೋದರರು ಸ್ಥಾಪಿಸಿದರು. ಮೊದಲಿಗೆ ಬ್ಯಾಂಡೇಜ ಮತ್ತು ಪ್ಲಾಸ್ಟರ್ಗಳನ್ನು ತಯಾರಿಸುತ್ತಿದ್ದ ಈ ಕಂಪನಿ, 1893ರಲ್ಲಿ ಬೇಬಿ ಪೌಡರ್ ಉತ್ಪಾದಿಸಲು ಪ್ರಾರಂಭಿಸಿತು. ಈ ಕಂಪನಿಯು 175ಕ್ಕೂ ಹೆಚ್ಚು ದೇಶಗಳಿಗೆ ತನ್ನ ವಸ್ತುಗಳ ಮಾರಾಟ ಮಾಡುತ್ತಿದೆ. ಇದರ ಹೆಡ್‌ಕ್ವಾಟರ್ ಅಮೆರಿಕದ ನ್ಯೂಜೆರ್ಸಿಯ ಬ್ರನ್ಸ್ವಿಕ್ ನಲ್ಲಿದೆ.
Don't forget to Comment Your Opinion on This Article.
Share and Support Us.
0 Comments