Assam facts | ಅಸ್ಸಾಂ ಮೇಲೆ ಎಂಟು ಸಂಗತಿಗಳು

ನಾರ್ತ್ ಈಸ್ಟ್ ಭಾರತದ ಹೆಬ್ಬಾಗಿಲಾದ ಅಸ್ಸಾಂ ಶ್ರೀಮಂತವಾಗಿದೆ. ವೈವಿಧ್ಯಮಯ ವನ್ಯಜೀವಿಗಳು, ಅದ್ಭುತ ಸಾಂಪ್ರದಾಯಿಕ ಪದ್ಧತಿ, ರೋಮಾಂಚಕ ನೃತ್ಯ ಪ್ರಕಾರಗಳು ಮತ್ತು ಆತಿಥ್ಯಕ್ಕೆ ಅಸ್ಸಾಂ ಹೆಸರುವಾಸಿಯಾಗಿದೆ. ಜಗತ್ತಿನಾದ್ಯಂತ ತುಂಬಾ ಪ್ರವಾಸಿಗರು ಇಷ್ಟಪಡುವ ತಾಣ ಅಸ್ಸಾಂ ಪ್ರವಾಸಿ ತಾಣಕ್ಕಿಂತ ಹೆಚ್ಚಾಗಿದೆ. ಅಸ್ಸಾಂನಲ್ಲಿನ ಎಂಟು ಸಂಗತಿಗಳು ಈ ಇಲ್ಲಿದೆ. ಇದು ಭಾರತದ ಉಳಿದ ರಾಜ್ಯಗಳಿಂದ ಎದ್ದು ಕಾಣುತ್ತದೆ.


Watch Video


1. ವಿಶ್ವದ ಅತಿ ದೊಡ್ಡ ನದಿ ದ್ವೀಪ "ಮಜುಲಿ".


     ಮಜುಲಿಯನ್ನು ವಿಶ್ವದ ಅತಿದೊಡ್ಡ ನದಿ ದ್ವೀಪವೆಂದು ಗುರುತಿಸಲಾಗಿದೆ. ಇದು ಜೋಹರ್ತ್ ಬಳಿಯ ಬ್ರಹ್ಮಪುತ್ರ ನದಿಯಲ್ಲಿದೆ. ಈ ಸ್ಥಳವು ಹಚ್ಚ ಹಸಿರು ಮತ್ತು ಮಾಲಿನ್ಯ ಮುಕ್ತ ವಾತಾವರಣವನ್ನು ಹೊಂದಿದೆ. ಮಜುಲಿ ಪ್ರತಿವರ್ಷ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದಕ್ಕೆ ಕಾರಣ ಇದರ ಸೌಂದರ್ಯ, ಸಂಸ್ಕೃತಿ ಮತ್ತು ಇಲ್ಲಿ ಇರುವ ಸ್ನೇಹಪರ ಜನರು.


2. ಭಾರತದ ಅಗಲವಾದ ನದಿ "ಬ್ರಹ್ಮಪುತ್ರ".


bramaputra river in kannada, assam in kannada, info mind, infomindkannada


     ಬ್ರಹ್ಮಪುತ್ರವನ್ನು ವಿಶ್ವದ ಅತ್ಯಂತ ಭವ್ಯವಾದ ನದಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಬ್ರಹ್ಮಪುತ್ರ ನದಿ ಅರುಣಾಚಲ ಪ್ರದೇಶದಿಂದ ಭಾರತವನ್ನು ಪ್ರವೇಶಿಸುತ್ತದೆ. ಅಲ್ಲಿ ಇದಕ್ಕೆ "ಸಿಯಾಂಗ್" ಎಂದು ಕರೆಯಲಾಗುತ್ತದೆ. ಅಸ್ಸಾಂ ವ್ಯಾಲಿಯ ಮೇಲಿರುವ ದಿಬಾಂಗ್ ಮತ್ತು ಲೋಹಿತ್ ನದಿಯನ್ನು ಈ ನದಿ ಸೇರುತ್ತದೆ. ಲೋಹಿತ್ ಕೆಳಗೆ ನದಿಯನ್ನು ಬ್ರಹ್ಮಪುತ್ರ ಎಂದು ಕರೆಯಲಾಗುತ್ತದೆ. ಈ ನದಿ ಅಸ್ಸಾಂನ ಕೆಲವು ಭಾಗದಲ್ಲಿ 10 ಕಿ.ಮೀ.ನಷ್ಟು ಅಗಲವಿದೆ.


3. ಜಗತ್ತಿನ ಅತಿದೊಡ್ಡ ವೇಯಿಂಗ್ ಹಳ್ಳಿ "ಸುವಾಲ್ಕುಚಿ".


weaving village in india in kannada, assam in kannada, suvalkuchi in kannada, info mind, infomindkannada


     ಸುವಾಲ್ಕುಚಿ ಕಾಮ್ರೂಪ್ ಜಿಲ್ಲೆಯ ಒಂದು ಹಳ್ಳಿಯಾಗಿದೆ. ಇದನ್ನು "ಮ್ಯಾಂಚೆಸ್ಟರ್ ಆಫ್ ಅಸ್ಸಾಂ" ಎಂದು ಕರೆಯಲಾಗುತ್ತದೆ. ಏಕೆಂದರೆ ಇಲ್ಲಿ ಇರುವ ದೊಡ್ಡ ಕಾಟೇಜ್ ಮತ್ತು ಟೆಕ್ಸ್ಟೈಲ್ ಉದ್ಯಮ. ಅಸ್ಸಾಂನಲ್ಲಿ ಸ್ಥಳೀಯವಾಗಿರುವ ಉತ್ತಮ ಗುಣಮಟ್ಟದ ಚಾದೋರ್ಸ್ ಮತ್ತು ಗ್ಯಾಮೋಸಾಗಳನ್ನು ಉತ್ಪಾದಿಸಲು ಇದು ಪ್ರಸಿದ್ಧವಾಗಿದೆ.


4. ಏಷ್ಯಾದ ಅತ್ಯಂತ ಹಳೆಯ ಆಂಫಿಥಿಯೇಟರ್ ರಂಗಾರ್, ಸಿಬ್ಸಾಗರ್.


assam in kannada, ranghar in kannada, sibsagar in kannada, info mind, infomindkannada


     ರಂಗಾರ್, ಸಿಬ್ಸಾಗರ್ ಪಟ್ಟಣದ ಸಮೀಪದಲ್ಲಿರುವ ಐತಿಹಾಸಿಕ ಸ್ಮಾರಕವಾಗಿದೆ. ಕ್ರಿ.ಶ. 1744- 1750ರ ಸುಮಾರಿಗೆ ಈ ಸ್ಮಾರಕವನ್ನು ನಿರ್ಮಿಸಿದರು ಎಂದು ನಂಬಲಾಗಿದೆ. ಇದರಿಂದಾಗಿ ಇದು ಅತ್ಯಂತ ಹಳೆಯದಾಗಿದೆ. ಅಹೋಮ್ ರಾಜರು ರಂಗಾರನ್ನು ಎಮ್ಮೆಗಳ ಕಾದಾಟ, ಕುಸ್ತಿ ಮುಂತಾದ ಆಟಗಳಿಗೆ ಬಳಸುತ್ತಿದ್ದರು.


5. ವಿಶ್ವದ ಅತಿ ಹೆಚ್ಚು ಕೊಂಬಿನ ಖಡ್ಗಮೃಗ ಇರುವ ಜಾಗ "ಕಾಜಿರಂಗ".


khaziranga national park in kannada, assam in kannada, info mind, infomindkannada


     ಅಸ್ಸಾಂ ಕಾಜಿರಂಗ ನ್ಯಾಷನಲ್ ಪಾರ್ಕಿನೊಂದಿಗೆ ಬೇರ್ಪಡಿಸಲಾಗದಂತ ಸಂಪರ್ಕ ಹೊಂದಿದೆ. ಕಾಜಿರಂವು ವಲ್ಡ್ ಹೆರಿಟೇಜ್ ಸೈಟ್ ಆಗಿದ್ದು, ವಿಶ್ವದ 2/3ರಷ್ಟು ಒಂದು ಕೊಂಬಿನ ಖಡ್ಗಮೃಗಗಳಿಗೆ ನೆಲೆಯಾಗಿದೆ. 2015ರಲ್ಲಿ ಇಲ್ಲಿ 2,401 ಖಡ್ಗಮೃಗಗಳು ಇದ್ದವು ಎಂದು ಅಂದಾಜಿಸಲಾಗಿದೆ. ಕಾಜಿರಂಗ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದ್ದು, 2006ರಲ್ಲಿ ಟೈಗರ್ ರಿಸರ್ವ್ ಎಂದು ಘೋಷಿಸಲಾಗಿತ್ತು.


6. ವಿಶ್ವದಲ್ಲಿ ಅತಿ ಹೆಚ್ಚು ಟೀ ಬೆಳೆಯುವ ಪ್ರದೇಶ.


assam tea in kannada, tea in kannada, info mind, infomindkannada


     ವಿಶ್ವದಲ್ಲೇ ಅತಿ ಹೆಚ್ಚು ಟೀ ಬೆಳೆಯುವ ರಾಜ್ಯ ಅಸ್ಸಾಂ ಅನ್ನು, ಇಡೀ ವಿಶ್ವದ ಅತಿದೊಡ್ಡ ಟೀ ಉತ್ಪಾದಿಸುವ ರಾಜ್ಯವೆಂದು ಪರಿಗಣಿಸಲಾಗಿದೆ. ದೇಶದ ಒಟ್ಟು ಟೀ ಉತ್ಪಾದನೆಯಲ್ಲಿ ಅಸ್ಸಾಂ ಶೇಖಡ 54ರಷ್ಟು ಹೆಚ್ಚು ನೀಡುತ್ತದೆ.


7. ಭಾರತದ ದೊಡ್ಡ ನ್ಯಾಚುರಲ್ ಮೃಗಾಲಯ.


assam state zoo in kannada, assam in kannada, golden langur in kannada, info mind, infomindkannada


     "ಅಸ್ಸಾಂ ಸ್ಟೇಟ್ ಜೂ" ನಾರ್ತ್ ಈಸ್ಟ್ ಭಾರತದ ದೊಡ್ಡ ಮೃಗಾಲಯವಾಗಿದೆ. ಇದು 432 ಏರಿಯಾದಷ್ಟು ವ್ಯಾಪಿಸಿದೆ. ಇದು ಗುವಾಹಾಟಿಯಲ್ಲಿದ್ದು, ಜಗತ್ತಿನ ಸುಮಾರು 113 ಜಾತಿಯ ಪ್ರಾಣಿ ಮತ್ತು ಪಕ್ಷಿಗಳಿಗೆ ನೆಲೆಯಾಗಿದೆ. ಹುಲಿ, ಹಿಮಾಲಯದ ಕಪ್ಪು ಕರಡಿ, ಗೋಲ್ಡನ್ ಲಂಗೂರ್ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಪ್ರತಿದಿನ ನೂರಾರು ಪ್ರವಾಸಿಗರನ್ನು ಈ ಮೃಗಾಲಯ ಆಕರ್ಷಿಸುತ್ತದೆ.


8. ಭಾರತದ ಟೀ ಕ್ಯಾಪಿಟಲ್ "ಜೋಹರ್ತ್".


     ಜೋಹರ್ತ್ ಅಸ್ಸಾಂನ ಪ್ರಮುಖ ನಗರ ಮತ್ತು ಜಿಲ್ಲೆಯಾಗಿದೆ. ಇದನ್ನು ವ್ಯಾಪಕವಾಗಿ ಭಾರತದ "ಟೀ ಕ್ಯಾಪಿಟಲ್" ಎಂದು ಕರೆಯಲಾಗುತ್ತದೆ. ಇದು ಅಹೋಮ್ ರಾಜವಂಶದ ಕೊನೆಯ ರಾಜಧಾನಿಯಾಗಿತು. ಇದು ಅಸ್ಸಾಂನ ಕೆಲವು ಹಳೆಯ ಐತಿಹಾಸಿಕ ಸ್ಮಾರಕಗಳಿಗೆ ನೆಲೆಯಾಗಿದೆ. ಜೋಹರ್ತ್ ದೊಡ್ಡ ಪ್ರಮಾಣದಲ್ಲಿ ಟೀ ಉತ್ಪಾದಿಸುತ್ತದೆ. ಇದನ್ನು ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತದೆ.


ಬೋನಸ್

# ಏಷ್ಯಾದ ಹಳೆಯ ರಿಫೈನರಿ ಮತ್ತು ಕಚ್ಚಾ ತೈಲಫ ಜನ್ಮಸ್ಥಳ "ಡಿಗ್ಬಾಯ್".


     18ನೇ ಶತಮಾನದಲ್ಲಿ ರೈಲ್ವೆ ಹಳಿಗಳನ್ನು ಹಾಕಿದಾಗ, ಡಿಗ್ಬಾಯ್ನಲ್ಲಿ ತೈಲ ಕುರುಹುಗಳು ಕಂಡುಬಂದವು. ಇದು ನಗರದಲ್ಲಿ ಮೊದಲ ತೈಲ ಬಾವಿ ಅಗೆಯಲು ಕಾರಣವಾಯಿತು. ಈ ಕಾರಣದಿಂದ ದಿಗ್ಬಾಯ್ಯನ್ನು ಅಸ್ಸಾಂನ "ತೈಲ ನಗರ" ಎಂದು ಕರೆಯಲಾಗುತ್ತದೆ.

Don't forget to Comment Your Opinion on This Article.

Share and Support Us.

Info Mind

Post a Comment

0 Comments