Yogasana to Stay Healthy | ಆರೋಗ್ಯಕರವಾಗಿರಲು ಪ್ರತಿದಿನ ಈ ಐದು ಯೋಗಾಸನಗಳನ್ನು ಮಾಡಿ.

ಮಾನವನ ದೇಹ ಒಂದು ಯಂತ್ರದ ರೀತಿ, ಆದ್ದರಿಂದ ಅದು ಚಲಿಸಬೇಕಾಗುತ್ತದೆ. ನಮ್ಮ ದೇಹದ ಕಾಳಜಿಯನ್ನು ನಾವು ವಹಿಸುವುದು ಬಹಳ ಮುಖ್ಯ. ತಂತ್ರಜ್ಞಾನದ ಆಗಮನದೊಂದಿಗೆ ಬಹುತೇಕ ಎಲ್ಲ ಕೆಲಸಗಳು ಬಟನ್ ಕ್ಲಿಕ್‌ನಿಂದಲೇ ಆಗುತ್ತದೆ. ಹೀಗಾಗಿ ನಾವುಗಳು ಒಂದು ರೀತಿಯಲ್ಲಿ ಸೋಮಾರಿಗಳಾಗಿದ್ದೇವೆ.


Watch Video


ನಮಗೆಲ್ಲರಿಗೂ 24 ಗಂಟೆಗಳಿವೆ, ಆದರೆ ಅದು ಕೂಡ ಕಡಿಮೆ ಅನಿಸುತ್ತದೆ. ಹೀಗಾಗಿ ನಾವು ಇಂದು ದಿನನಿತ್ಯ ನಿಮ್ಮ ಸಮಯದಲ್ಲಿ ಕೇವಲ 5 ನಿಮಿಷದಲ್ಲೇ ಮಾಡುವ ಯೋಗಾಸನಗಳನ್ನು ತಿಳಿಸುತ್ತಿದ್ದೇವೆ. ಇಲ್ಲಿ ನಾವು ತಿಳಿಸುವ 5 ಯೋಗಾಸನಗಳು ನಿಮ್ಮ ಭಾವನಾತ್ಮಕ ಮತ್ತು ದೈಹಿಕ ಆರೋಗ್ಯ, ಎರಡನ್ನು ನೋಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.


1. ತಾಡಾಸನ(ಮೌಂಟೇನ್ ಪೋಸ್).


tadasana in kannada, mountain pose in kannada, info mind, infomindkannada


     ಈ ಯೋಗಾಸನವನ್ನು ಮಾಡಲು ನಿಮ್ಮ ಪಾದದ ಜೊತೆಗೆ ನೇರವಾಗಿ ನಿಂತು, ನಿಮ್ಮ ಕೈಯನ್ನು ನಮಸ್ಕಾರ ರೀತಿಯಲ್ಲಿ ತನ್ನಿ. ಈಗ ನಿಧಾನವಾಗಿ ಉಸಿರಾಡುತ್ತಾ ನಿಮ್ಮ ದೇಹವನ್ನು ಬ್ಯಾಲೆನ್ಸ್ ಮಾಡುತ್ತಾ, ನಿಮ್ಮ ಬೆರಳುಗಳು ಹಿಗ್ಗುವಂತೆ ಮೇಲಕ್ಕೆತ್ತಿ. ಈಗ ಉಸಿರನ್ನು ನಿಧಾನವಾಗಿ ಬಿಡುತ್ತಾ ಕೈಯನ್ನು ಒಟ್ಟಿಗೆ ಜೋಡಿಸಿ. ಇದೇ ರೀತಿ ಈ ಆಸನವನ್ನು ಒಟ್ಟಾಗಿ ನಾಲ್ಕು ಸಲವಾದರೂ ಮಾಡಿ. ಈ ಆಸನದಲ್ಲಿ ಪ್ರಮುಖವಾಗಿ ನಿಮ್ಮ ಸ್ನಾಯುಗಳು ಒಳಗೊಂಡಿರುತ್ತದೆ. ಈ ಆಸನವು ಹೆಚ್ಚಿನ ಆಸನಗಳಿಗೆ ಅಡಿಪಾಯವಾಗಿದೆ.


2. ವೃಕ್ಷಾಸನ(ಟ್ರೀ ಪೋಸ್).


vrikshasana in kannada, tree pose in kannada, info mind, infomindkannada


     ಈ ಆಸನವನ್ನು ಮಾಡಲು ನಿಮ್ಮ ಬಲಗಾಲನ್ನು ನಿಮ್ಮ ಎಡತೊಡೆಯ ಮೇಲೆ ಇರಿಸಿ ಪ್ರಾರಂಭಿಸಿ. ಈಗ ನಿಮಗೆ ನಿಲ್ಲಲು ಸಾಧ್ಯವಾದರೆ ನಿಧಾನವಾಗಿ ಉಸಿರಾಡುತ್ತಾ, ನಿಮ್ಮ ಅಂಗೈಗಳನ್ನು ನಿಮ್ಮ ತಲೆಯ ಮೇಲೆ ಇರಿಸಿ. ನಿಮ್ಮ ಬೆನ್ನು ಮತ್ತು ಎಡಗಾಲು ನೇರವಾಗಿ ಇರುವಂತೆ ನೋಡಿಕೊಳ್ಳಿ. ಈಗ ಉಸಿರಾಡುತ್ತಾ ಕೈಗಳನ್ನು ಕೆಳಗೆ ತಂದು, ಬಲಗಾಲನ್ನು ಕೆಳಗೆ ತನ್ನಿ. ಈ ಆಸನವು ನಿಮಗೆ ನೆಲದ ಪ್ರಜ್ಞೆಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಕಾಲು ಮತ್ತು ಬೆನ್ನನ್ನು ಬಲಪಡಿಸುತ್ತದೆ.


3. ಕುರ್ಚಿ ಆಸನ(ಚೇರ್ ಪೋಸ್).


kurchiasana in kannada, chair pose in kannada, info mind, infomindkannada


     ಈ ಆಸನವನ್ನು ಮಾಡಲು ನಿಮ್ಮ ಎರಡು ಕಾಲುಗಳನ್ನು ಸ್ವಲ್ಪ ದೂರದಲಿರಿಸಿ, ನಿಮ್ಮ ತೋಳುಗಳನ್ನು ಹ್ಯಾಂಡ್ಸ್ ಆಪ್ ರೀತಿ ಮೇಲೆ ಎತ್ತಿ. ಈಗ ಉಸಿರಾಡುತ್ತಾ ನಿಮ್ಮ ಮೊಣಕಾಲನ್ನು ಬಗ್ಗಿಸಿ. ಕುರ್ಚಿಯ ಮೇಲೆ ಕುಳಿತಂತೆ ನಿಮ್ಮ ಸೊಂಟವನ್ನು ಕೆಳಗೆ ತಳ್ಳಿರಿ. ಇಲ್ಲಿ ನಿಮ್ಮ ಕೈಗಳು ಹ್ಯಾಂಡ್ಸ್ ಆಪ್ ರೀತಿಯೇ ಇರುವಂತೆ ನೋಡಿಕೊಳ್ಳಿ. ನಂತರ ಉಸಿರಾಡುತ್ತ ನಿಧಾನವಾಗಿ ನಿಮ್ಮ ಮಂಡಿಯನ್ನು ಸಹಜ ಸ್ಥಿತಿಗೆ ತಂದು, ನಿಮ್ಮ ಕೈಯನ್ನು ಕೆಳಗೆ ತನ್ನಿ. ಈ ಆಸನವು ಕಾಲು ಮತ್ತು ತೋಳುಗಳನ್ನು ಬಲಪಡಿಸಲು ಹೆಸರುವಾಸಿಯಾಗಿದೆ. ಇದು ದೇಹ ಮತ್ತು ಮನಸ್ಸಿನ ಮೇಲೆ ಶಕ್ತಿಯುತ ಪರಿಣಾಮವನ್ನು ಬೀರುತ್ತದೆ.


4. ಸುಖಾಸನ(ಈಜಿ ಪೋಸ್).


sukasana in kannada, easy pose in kannada, info mind, infomindkannada


     ಮೇಲಿನ ಮೂರು ಆಸನಗಳನ್ನು ಮಾಡಿದ ನಂತರ ನಮಗೆ ಸುಸ್ತಾಗುತ್ತದೆ. ಅದಕ್ಕಾಗಿಯೇ ಈ ಆಸನ. ಇದು ಸರಳವಾದ ಆಸನಗಳಲ್ಲಿ ಒಂದಾಗಿದೆ. ಈ ಆಸನವನ್ನು ಮಾಡಲು ನೀವು ಅಡ್ಡಕಾಲುಗಳನ್ನು ಹಾಕಿ ಕುಳಿತುಕೊಳ್ಳಬೇಕು. ಈಗ ನಿಮ್ಮ ಬೆನ್ನು ಮತ್ತು ಕತ್ತು ನೇರವಾಗಿರುವಂತೆ ನೋಡಿಕೊಳ್ಳಿ. ನಿಮ್ಮ ಕೈಯನ್ನು ಮೊಣಕಾಲುಗಳ ಮೇಲೆ ಇಡಿ ಅಥವಾ ನಮಸ್ಕಾರ ರೀತಿಯಲ್ಲಿ ತನ್ನಿ. ಈ ಆಸನವು ಧ್ಯಾನಕ್ಕೆ ಸೂಕ್ತವಾದ ಆಸನವಾಗಿದೆ. ಇದು ನಿಮ್ಮ ಬೆನ್ನು ಮೂಳೆಯನ್ನು ಬಲಪಡಿಸುವುದಲ್ಲದೇ, ಇಡೀ ದೇಹವನ್ನು ಸಡಿಲಗೊಳಿಸುತ್ತದೆ.


5. ಪಾಸ್ಟಿಮೋಟನಾಸನ.


pastimotanasana in kannada, info mind, infomindkannada


     ಈ ಆಸನವನ್ನು ಮಾಡಲು ಬೆನ್ನಿನೊಂದಿಗೆ ನೇರವಾಗಿ ಕುಳಿತುಕೊಂಡು, ನಿಮ್ಮ ಕಾಲಿನ ಬೆರಳನ್ನು ಚಿತ್ರದಲ್ಲಿ ತೋರಿಸಿದಂತೆ ಹೊರಗೆ ಇರಿಸಿ. ಈಗ ಉಸಿರಾಡುತ್ತಾ ಕೈಯನ್ನು ಮೇಲೆ ತಂದು, ಉಸಿರಾಡುತ್ತಲೇ ನಿಧಾನವಾಗಿ ಕೈ ಕೆಳಗೆ ತರುತ್ತಾ, ನಿಮ್ಮ ಕಾಲಿನ ಬೆರಳನ್ನು ಮುಟ್ಟಲು ಪ್ರಯತ್ನಿಸಿ. ಒಂದು ವೇಳೆ ಕಾಲಿನ ಬೆರಳನ್ನು ಮುಟ್ಟಿಸಲು ಸಾಧ್ಯವಾಗಿಲ್ಲವೆಂದರೆ, ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಕೈಗಳನ್ನು ಮುಂದೆ ತನ್ನಿ. ನಂತರ ಉಸಿರಾಡುತ್ತಾ ಸಹಜ ಸ್ಥಿತಿಗೆ ಬನ್ನಿ. ಈ ಆಸನವು ಬೆನ್ನು ಮೂಳೆಯನ್ನು ಉದ್ದಗೊಳಿಸುತ್ತದೆ ಮತ್ತು ಸೊಂಟವನ್ನು ಬಲಪಡಿಸುತ್ತದೆ.

    ಈ ಐದು ಯೋಗಾಸನಗಳನ್ನು ಮಾಡುವ ಮೂಲಕ ಆರೋಗ್ಯ ರಕ್ಷಣೆಯತ್ತ ಒಂದು ಹೆಜ್ಜೆ ಇರಿಸಿ.

Don't forget to Comment Your Opinion on This Article.

Share and Support Us.

Info Mind

Post a Comment

0 Comments