ಸೋಲು ನಮ್ಮ ಮುಂದೆ ನಿಂತು ಅಣಕಿಸುತ್ತಿರುತ್ತದೆ. ಇನ್ನು ಕೆಲವೇ ಕ್ಷಣದಲ್ಲಿ ಸೋಲುವುದು ಗ್ಯಾರಂಟಿ ಆಗಿರುತ್ತದೆ. ಅಂತಹ ಸಮಯದಲ್ಲಿ ಸೋಲನ್ನು ಎದುರಿಸುವುದು ನಿಜಕ್ಕೂ ಸವಾಲು. ಇಂಥ ಸಮಯದಲ್ಲಿ ನಾವು ಹೇಗೆ ವರ್ತಿಸುತ್ತೇವೆಂಬುದು ಸೋಲನ್ನು ಹೇಗೆ ನಿಭಾಯಿಸುತ್ತೇವೆಂಬುದನ್ನು ತಿಳಿಸುತ್ತದೆ.
Watch Video
1. ನಿಮ್ಮ ಜೀವನದ ಕಷ್ಟದಾಯಕ ಕ್ಷಣ ಯಾವುವು?
2. ಅದನ್ನು ನೀವು ಹೇಗೆ ನಿಭಾಯಿಸಿದ್ದೀರಿ?
3. ಆ ಘಟನೆಯಿಂದ ನೀವು ಕಲಿತ ಪಾಠವೇನು?
ಅವರು ಈ ಪ್ರಶ್ನೆಗಳಿಗೆ ಈ ರೀತಿ ಉತ್ತರ ನೀಡಿದರು,
ಮೊದಲನೇ ಪ್ರಶ್ನೆಗೆ ಅವರು ಚೆನ್ನೈನಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ಶಿಪಿನ ಒಂಬತ್ತನೇ ಗೇಮ್‌ನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಸೋಲುವುದು ಖಚಿತವಾಗಿತ್ತಂತೆ, ಇಷ್ಟು ದಿನದವರೆಗೆ ಅವರು ಧರಿಸಿದ್ದ ವಿಶ್ವ ಚಾಂಪಿಯನ್ ಪಟ್ಟ ಕೈತಪ್ಪುತ್ತದೆ ಎಂದು ಅವರಿಗೆ ಮನವರಿಕೆಯಾಗಿತಂತೆ.
ಇನ್ನು ಎರಡನೇ ಪ್ರಶ್ನೆಗೆ ಅವರು, ಆ ಪಂದ್ಯ ಆಡಿದ ನಂತರ ಅವರಿಗೆ ತುಂಬಾ ಹೆಮ್ಮೆ ಅನ್ನಿಸಿತ್ತಂತೆ. ಅವರು ಪಂದ್ಯ ಸೋತಿದ್ದರು, ಅವರು ಆಡುವ ಸ್ಟೈಲಿನ ರೀತಿಯೇ ಆಡಿದ್ದಾರೆ ಎಂಬ ಸಮಾಧಾನ ಅವರಿಗಿತಂತೆ.
ಇನ್ನು ಮೂರನೇ ಪ್ರಶ್ನೆಗೆ ಅವರು, ಜೀವನದಲ್ಲಿ ಬರುವ ಎಲ್ಲ ಸವಾಲುಗಳನ್ನು ಸಹಜವಾಗಿ ಸ್ವೀಕರಿಸಬೇಕು ಎಂದು ತಿಳಿದುಕೊಂಡರಂತೆ. ಅವರು ಈ ಸಲ ಸೋತರೂ ಜನ ಅವರು ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದನ್ನು ನೆನೆಸಿಕೊಳ್ಳುತ್ತಾರೆಂದು ಅವರಿಗೆ ಖುಷಿಯಿತಂತೆ
ಒಬ್ಬ ವ್ಯಕ್ತಿ ಯೋಗಿ ಹತ್ತಿರ ಹೋಗಿ 'ಸಾಮಾನ್ಯ ವ್ಯಕ್ತಿಗೆ ಅರ್ಥವಾಗುವಂತೆ ಬದುಕಿನ ಸರಳ ಸೂತ್ರಗಳೇನು? ಅವು ಏನೂ ಖರ್ಚಿಲ್ಲದೆ, ತಕ್ಷಣಕ್ಕೆ ಜಾರಿಗೊಳಿಸುವಂತಿರಬೇಕು' ಎಂದು ಕೇಳುತ್ತಾನೆ. ಅದಕ್ಕೆ ಯೋಗಿ, "ಅದು ಫಾಸ್ಟ್ ಫುಡ್ ತರ ಫಾಸ್ಟ್ ಸೂತ್ರ" ಎಂದು ತಮಾಷೆ ಮಾಡಿ. ಎಂಟು ಸುಲಭ ಸೂತ್ರವನ್ನು ತಿಳಿಸುತ್ತಾರೆ. ಈ ಸೂತ್ರಗಳ ಎಷ್ಟು ಸುಲಭವೆಂದರೆ ತತ್ಕ್ಷಣ ಅನುಷ್ಠಾನಕ್ಕೆ ತರಬಹುದು.
1. ಭೂತಕಾಲಕ್ಕೆ ವಿರಾಮ ಘೋಷಿಸಿ. ಅಂದರೆ ಹಿಂದಿನ ಕಹಿ ಘಟನೆ, ದ್ವೇಷಗಳನ್ನು ಮರೆಯಿರಿ. ಹೀಗೆ ಮಾಡುವುದರಿಂದ ಅವು ವರ್ತಮಾನದ ಸಮಯಕ್ಕೆ ತೊಂದರೆ ತರುವುದಿಲ್ಲ.
2. ಬೇರೆಯವರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಬಗ್ಗೆ ಬೇರೆಯವರು ಯೋಚಿಸಿದರೆ ಯೋಚಿಸಲಿ, ಅವರಿಗೆ ಆ ಸ್ವಾತಂತ್ರ್ಯ ಇದೆ. ಯೋಚಿಸಬೇಡಿ ಎನ್ನುವ ಸ್ವಾತಂತ್ರ್ಯ ನಿಮಗಿಲ್ಲ.
3. ಎಲ್ಲದಕ್ಕೂ ಸಮಯವೇ ಉತ್ತರ ನೀಡುತ್ತದೆ. ಎಲ್ಲಾ ಘಟನೆ, ಕಹಿ ಘಟನೆಗಳನ್ನೆಲ್ಲ ಸಮಯವೇ ವಾಸಿ ಮಾಡುತ್ತದೆ. 'ಟೈಮ್‌ಗೆ ಸ್ವಲ ಟೈಮ್ ಕೊಡಿ' ಅವಸರ ಮಾಡಬೇಡಿ.
4. ನಿಮ್ಮೊಳಗೆ ಯಾರೋ ಬಂದು ಆನಂದದ ಉದ್ಯಾನವನ್ನು ನಿರ್ಮಿಸುವುದಿಲ್ಲ. ಅಂಥವರು ಬರುತ್ತಾರೆಂದು ಕಾಯುತ್ತಾ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಆನಂದದ ಉದ್ಯಾನವನ್ನು ನಿರ್ಮಿಸುವ ಕೆಲಸ ನಿಮ್ಮದೇ.
5. ನಿಮ್ಮ ದಾರಿ ನಿಮ್ಮದು ಬೇರೆಯವರು ಎಲ್ಲಿಗೆ ಹೋಗುತ್ತಾರೆಂದು ನಿಮಗೆ ಗೊತ್ತಿರುತ್ತದೆಯೇ!!
6. ಯಾವುದಾದರೂ ವಿಷಯದ ಮೇಲೆ ತುಂಬಾ ತಲೆಕೆಡಿಸಿಕೊಳ್ಳಬೇಡಿ. ತಲೆಕೆಡಿಸಿಕೊಂಡ ಕ್ಷಣ ಎಲ್ಲವೂ ಸರಿಯಾಗುವುದಿಲ್ಲ. ಒಂದು ಪ್ರಶ್ನೆಗೆ ಈಗ ಉತ್ತರ ಸಿಕ್ಕಿಲ್ಲವೆಂದರೂ, ಮುಂದೊಂದು ದಿನ ಸಿಕ್ಕೇ ಸಿಗುತ್ತದೆ.
7. ಸಮಸ್ಯೆಯನ್ನು ಸರಳಗೊಳಿಸಿ. ಒಗಟು ಬಿಡಿಸಲು ಜಾಣ್ಮೆ ಬೇಕು ಜಾಣ್ಮೆ, ಕೌಶಲ್ಯ ಬೇಕು, ಅದಕ್ಕಾಗಿ ಚಿಂತಿಸಬೇಕಿಲ್ಲ. ನಿಮ್ಮ ಸಮಸ್ಯೆಗೆ ಒಗ್ಗಟ್ಟಿದಂತೆ. ಎಲ್ಲದಕ್ಕೂ ಕೊನೆ ಎಂಬುದಿರುತ್ತದೆ.
8. ನಿಮ್ಮ ಕಷ್ಟ ಮತ್ತು ತಾಪತ್ರಯಗಳು ಶಾಶ್ವತವಲ್ಲ. ಅವು ಇರುವಷ್ಟು ದಿನ ಇದ್ದು ನಿಮಗೆ ತಿಳಿಯದಂತೆ ಹೊರಟುಹೋಗುತ್ತವೆ. ಅವುಗಳಿರುವಷ್ಟು ದಿನ ಸಮಾಧಾನವಾಗಿರಿ.
ಈ ಎಂಟು ಸೂತ್ರಗಳನ್ನು ಅನುಸರಿಸಲು ಕಷ್ಟವಿಲ್ಲ. ಬೇಗನೆ ಅನುಸರಿಸಿರಿ.
ನಾವು ಪ್ರಕೃತಿಯಿಂದ ತುಂಬ ವಿಷಯಗಳನ್ನು ಕಲಿಯಬಹುದು. ಪ್ರಕೃತಿಯಲ್ಲಿ ಒಂದು ಇದ್ದಂತೆ ಮತ್ತೊಂದಿಲ್ಲ. ಪ್ರಕೃತಿಗೂ ಕಾಪಿಕ್ಯಾಟ್ ಗೊತ್ತಿಲ್ಲ. ಏನೇ ಇದ್ದರೂ ಎಲ್ಲ ಹೊಸದಾಗಿ, ತಾಜಾವಾಗಿ ನಿರ್ಮಿತವಾಗಿರುತ್ತದೆ. ನಾವು ಪ್ರಕೃತಿ ಎಂಬ ಗುರುವಿನಿಂದ ತುಂಬಾ ತಿಳಿದುಕೊಳ್ಳಬೇಕಿದೆ.
ಕೋಣೆಯಲ್ಲಿ ಫ್ಯಾನ್ ಯಾವಾಗಲೂ 'ತಂಪಾಗಿರಬೇಕು' ಎಂಬ ಸಂದೇಶವನ್ನು ನೀಡುತ್ತದೆ. ಗಡಿಯಾರ 'ಪ್ರತಿ ನಿಮಿಷವೂ ಅಮೂಲ್ಯ' ಎಂಬ ಸಂದೇಶವನ್ನು ನೀಡುತ್ತದೆ. ಕನ್ನಡಿ ಕೆಲಸಕ್ಕೆ ಹೋಗುವ ಮುನ್ನ 'ನಿನ್ನನ್ನು ನೀನು ನೋಡಿಕೋ' ಎಂಬ ಸಂದೇಶವನ್ನು ನೀಡುತ್ತದೆ. ಕಿಟಕಿ 'ಜಗತ್ತನ್ನು ಯಾವಾಗಲೂ ನೋಡುತ್ತಿರು' ಎಂಬ ಸಂದೇಶವನ್ನು ನೀಡುತ್ತದೆ. ಕ್ಯಾಲೆಂಡರ್ ಪ್ರತಿದಿನ 'ಅಪ್ಡೇಟ್ ಆಗಿರು' ಎಂಬ ಸಂದೇಶವನ್ನು ನೀಡುತ್ತದೆ. ಎಂಥ ಕಷ್ಟವೇ ಬಂದರೂ 'ಎದೆಗುಂದದಿರಿ' ಎಂದು ಗೋಡೆ ಸಂದೇಶ ನೀಡಿದರೆ, ಬಾಗಿಲು ಯಾವಾಗಲೂ ನಿನ್ನ 'ಮನಸ್ಸನ್ನು ತೆರೆದಿರುವ' ಎಂಬ ಸಂದೇಶ ನೀಡುತ್ತದೆ.
ಕೇವಲ ಕೋಣೆಯಲ್ಲೇ ಇಷ್ಟೊಂದು ಸಂದೇಶ ನಮಗೆ ಸಿಗುತ್ತದೆ. ಇನ್ನು ಪ್ರಕೃತಿಯ ಮುಂದೆ ನಿಂತರೆ ಎಂಥ ಅನುಭವವಾಗಬಹುದು...
Don't forget to Comment Your Opinion on This Article.
Share and Support Us.
0 Comments