ಜಪಾನಿನಲ್ಲಿ ಮಾರಾಟವಾಗುವ ಗ್ರಹಗಳ ಚಾಕಲೇಟ್. ದಾರಿ ತಪ್ಪಿದ ಹಸುಗಳ ಜೀವ ಉಳಿಸಲು ಮಾಡಿದ ಪ್ಲಾನ್. ಬುರ್ಜು ಖಲೀಫಾದಿಂದ ಕಾಣುವ ಎರಡು ಸೂರ್ಯಾಸ್ತ. ಚೀನಾದ ಶಾಂಗೈ ಪರ್ವತದಲ್ಲಿ ರಾತ್ರಿಯ ಕ್ಯಾಂಪಿಂಗ್. ಇನ್ನೂ ಹೆಚ್ಚು ಜಗತ್ತಿನ ಫ್ಯಾಟ್ಸ್ ಬಗ್ಗೆ ಇಲ್ಲಿ ನೀವು ನೋಡಲಿದ್ದೀರಿ.
ಫ್ಯಾಕ್ಟ್ 1,
ಸ್ಪೂನ್ ಮತ್ತು ಟಾಮಾಗೊ, ಜಪಾನೀಸ್ ಕಲೆ, ವಿನ್ಯಾಸ ಮತ್ತು ಸಂಸ್ಕೃತಿಯಾಗಿದೆ. ಜಪಾನ್‌ನಲ್ಲಿ ಗ್ರಹಗಳ ಚಾಕೊಲೇಟ್ ಮಾರಾಟವಾಗುತ್ತದೆ. ಈ ಚಾಕೊಲೇಟ್ಗಳಲ್ಲಿ, ತೆಂಗಿನಕಾಯಿ ಮಾವು ಬುಧಗ್ರಹ, ಕೆನೆ ನಿಂಬೆ ಶುಕ್ರಗ್ರಹ, ಕೋಕೊ ಬೀಜ ಭೂಮಿ, ಕಿತ್ತಳೆ ಪ್ರಲೈನ್ ಮಂಗಳ ಗ್ರಹ, ವೆನಿಲ್ಲಾದಿಂದ ಗುರುಗ್ರಹ, ಒಣ ದ್ರಾಕ್ಷಿಯಿಂದ ಶನಿ ಗ್ರಹ, ಹಾಲಿನ ಚಹಾದಿಂದ ಯುರೇನಸ್ ಮತ್ತು ಕೆಪೆಚಿನೋದಿಂದ ನೆಪ್ಚೂನ್ ಗ್ರಹವನ್ನು ಮಾಡಿರುತ್ತಾರೆ. ಇದರಲ್ಲಿ ಫ್ಲೂಟೋ ಇಲ್ಲ, ಏಕೆಂದರೆ ಅದು ಗ್ರಹವಲ್ಲ.
ಫ್ಯಾಕ್ಟ್ 2,
"ಇದು ಕೇವಲ ಒಂದು ಸಿಗರೇಟ್!"
ಕೇವಲ ಒಂದು ಸಿಗರೇಟಿನ ಧೂಳು, ಎಂಟು ಲೀಟರ್ ಸಮುದ್ರದ ನೀರನ್ನು ಕಲುಷಿತಗೊಳಿಸುತ್ತಿದೆ. ಪರಿಸರದ ವ್ಯವಸ್ಥೆಗೆ ಹಾನಿ ಮಾಡುತ್ತದೆ. ಸಣ್ಣ ಮೀನುಗಳ ಸಾವಿಗೆ ಕಾರಣವಾಗುತ್ತದೆ.
ಫ್ಯಾಕ್ಟ್ 3,
ಬುರ್ಜ್ ಖಲೀಫಾ ವಿಶ್ವದ ಅತಿದೊಡ್ಡ ಕಟ್ಟಡವಾಗಿದೆ. ಇದು ಎಷ್ಟು ಎತ್ತರವಿದೆ ಎಂದರೆ ನೀವು ಎರಡು ಬಾರಿ ಸೂರ್ಯಾಸ್ತ ನೋಡಬಹುದು. ಕಟ್ಟಡದ ಬುಡದಿಂದ ಸೂರ್ಯಾಸ್ತವನ್ನು ವೀಕ್ಷಿಸಿ, ನಂತರ ಎಲಿವೇಟರ್ ಬಳಸಿ ಮೇಲೆ ಹೋಗಿ ಸೂರ್ಯಾಸ್ತವನ್ನು ಮತ್ತೊಮ್ಮೆ ವೀಕ್ಷಿಸಬಹುದು.
ಫ್ಯಾಕ್ಟ್ 4,
ದೋಹದಲ್ಲಿರುವ ಕತಾರ್, ನೀಲಿ ರಸ್ತೆಗಳನ್ನು ಹೊಂದಿರುವ ವಿಶ್ವದ ಮೊದಲ ನಗರವಾಗಿದೆ. ಶಾಖವನ್ನು ನಿಭಾಯಿಸಲು ಮತ್ತು ರಸ್ತೆಗಳ ತಾಪಮಾನವನ್ನು 15- 20° ತಗ್ಗಿಸಲು ಈ ರೀತಿಯ ಉಪಾಯ ಮಾಡಲಾಗಿದೆ.
ಫ್ಯಾಕ್ಟ್ 5,
ಇವರು ಡಾ. ಗ್ಲಾಡಿಸ್ ವೆಸ್ಟ್, ನಮ್ಮ ಸುಲಭ ಸಂಚರಣೆಗಾಗಿ ಜಿಪಿಎಸ್ ಅನ್ನು ಕಂಡು ಹಿಡಿದ ಮಹಿಳೆ. ಗ್ಲಾಡಿಸ್ ಮೇ ವೆಸ್ಟ್ ಅಮೆರಿಕದ ಗಣಿತಜ್ಞೆ, ಭೂಮಿಯ ಆಕಾರದ ಗಣಿತದ ಮಾಡಲಿಂಗ್ಗೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದಾರೆ.
ಫ್ಯಾಕ್ಟ್ 6,
ಇವರ ಹೆಸರು ಐಸಾಕ್, ದಾರಿ ತಪ್ಪಿದ ಹಸುಗಳ ಕೊಂಬಿನ ಮೇಲೆ ರೇಡಿಯಂ ಪಟ್ಟಿಗಳನ್ನು ಹಾಕುವ ಮೂಲಕ ಅಪಘಾತದಿಂದ ರಕ್ಷಿಸುತ್ತಾರೆ. ಐಸಾಕ್ ತಮ್ಮ ಬೈಕ್‌ನಲ್ಲಿರುವ ಚೀಲದಲ್ಲಿ ಸುಮಾರು 20 ರೇಡಿಯಂ ರೋಲ್ಗಳನ್ನು ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದರು. ಈ ಸಣ್ಣ ಹೆಜ್ಜೆಯಿಂದ ಅವರು ಮಾನವ ಮತ್ತು ಪ್ರಾಣಿಗಳ ಜೀವವನ್ನು ಉಳಿಸುತ್ತಾರೆ.
ಫ್ಯಾಕ್ಟ್ 7,
ಕುಲ್ಫಿ 16 ಶತಮಾನದಲ್ಲಿ ಭಾರತೀಯ ಉಪಖಂಡದಲ್ಲಿ ಹುಟ್ಟಿದ ಹೆಪ್ಪುಗಟ್ಟಿದ ಡೈರಿ ಸಿಹಿ ತಿಂಡಿಯಾಗಿದೆ. ಇದನ್ನು ಸಾಮಾನ್ಯವಾಗಿ "ಸಾಂಪ್ರದಾಯಿಕ ಭಾರತೀಯ ಐಸ್ಕ್ರೀಂ" ಎಂದು ವಿವರಿಸಲಾಗುತ್ತದೆ. ಯಾವುದೇ ಚಾಕ್ಲೇಟ್ ಅಥವಾ ವೆನಿಲ್ಲಾ ಐಸ್ಕ್ರೀಂ ಕುಲ್ಫಿಯ ರುಚಿಗೆ ಹೊಂದಿಕೆಯಾಗುವುದಿಲ್ಲ.
ಫ್ಯಾಕ್ಟ್ 8,
ಆಸ್ಟ್ರೇಲಿಯಾದ ದಂಪತಿಗಳು ತಮ್ಮ ಮಕ್ಕಳಿಗೆ ಏನಾದರೂ ಪ್ರಭಾವ ಬೀರಲು ಬಯಸಿದ್ದರು. ಹೀಗಾಗಿ ಅವರು ಈ ಬುಕ್‌ಕೇಸ್ ತಯಾರಿಸಿದರು. ಇದನ್ನು ತಯಾರಿಸಲು ಅವರು ಹದಿನಾರು ಗಂಟೆಗಳ ಕಾಲ ಕಳೆದರು. ಇದರಲ್ಲಿ 36 ವೈಯಕ್ತಿಕ ಪೆಟ್ಟಿಗೆಗಳನ್ನು ಬಳಸಲಾಗಿದೆ. ಅವರಿಗೆ ಇದನ್ನು ಮಾಡಲು ತುಂಬಾ ಸುಲಭವಾಗಿತ್ತು, ಏಕೆಂದರೆ ಅವರು ಮನೆ ನವೀಕರಣ ಕಂಪನಿಯ ಮಾಲೀಕರಾಗಿದ್ದರು.
ಫ್ಯಾಕ್ಟ್ 9,
ಥೈಲೆಂಡ್‌ನ ಬುವೆಂಗ್ ಕಾನ್ ಪ್ರಾಂತ್ಯದ, ಬುವೆಂಗ್ ಖೊಂಗ್ ಲಾಂಗ್ ಜಿಲ್ಲೆಯಲ್ಲಿರುವ, ಫುಲಂಗ್ಕಾ ರಾಷ್ಟ್ರೀಯ ಉದ್ಯಾನವನದಲ್ಲಿ ನಾಕಾಗುಹೆ ಇದೆ. ಗುಹೆಯು ಆ ಪ್ರದೇಶದ ಕೆಲವು ಕಲ್ಲುಗಳ ವಿನ್ಯಾಸದಿಂದ ಈ ಹೆಸರನ್ನು ಪಡೆದುಕೊಂಡಿದೆ. ಇದು ಹಾವಿನ ಮಾಪಕ ಚರ್ಮವನ್ನು ಹೋಲುತ್ತದೆ. 'ನಾಕಾ' ಎಂದರೆ ಥೈಲ್ಯಾಂಡಿನ ಭಾಷೆಯಲ್ಲಿ ಹಾವು ಎಂದರ್ಥ.
ಫ್ಯಾಕ್ಟ್ 10,
ಚೀನಾದ ಭಯಾನಕ ಆಕರ್ಷಣೆಗಳಲ್ಲಿ ಒಂದು ಶಾಂಗೈ ಪರ್ವತಗಳ ಎತ್ತರದಲ್ಲಿ ಕ್ಯಾಂಪಿಂಗ್ ಮಾಡುವುದಾಗಿದೆ. ಈ ರೀತಿಯ ಪ್ರವಾಸಗಳು ತನ್ನದೇ ಆದ ಅಭಿಮಾನಿಗಳನ್ನು ಹೊಂದಿದೆ. ಪರ್ವತದ ತುದಿಯನ್ನು ತಲುಪಲು ಕಷ್ಟಕರವಾದ ಮಾರ್ಗಗಳನ್ನು ಸಹಿಸಿದ ನಂತರ, ರಾತ್ರಿಯನ್ನು ಆ ಎತ್ತರದಲ್ಲಿ ಕಳೆಯಬೇಕಾಗುತ್ತದೆ.
Don't forget to Comment Your Opinion on This Article
Share and Support Us
Don't forget to Comment Your Opinion on This Article
Share and Support Us
0 Comments