ಎಲ್ಲರೂ ಅವರು ಕೆಲಸ ಮಾಡುವ ಜಾಗ 'ಆದರ್ಶ ಕಚೇರಿ' ಆಗಿರಬೇಕು ಎಂದು ಬಯಸುತ್ತಾರೆ. ಜಗತ್ತಿನಾದ್ಯಂತ ಅನೇಕ ಕಚೇರಿಗಳು ಈ ರೀತಿ ಇದೆ. ನಾವೆಲ್ಲರೂ ಬಯಸಿದಂತೆ ಆ ಕಚೇರಿಯಲ್ಲಿ ಕೆಲಸ ಮಾಡಲು ಸಾಕಷ್ಟು ಅದೃಷ್ಟವನ್ನು ಹೊಂದಿಲ್ಲ. ಆದರೆ ಕೆಲವು ಅದೃಷ್ಟವಂತರು ಈ ಕಚೇರಿಗಳಲ್ಲಿ ಕೆಲಸ ಮಾಡುವಷ್ಟು ಉತ್ತಮವಾಗಿ ಕೆಲಸ ಮಾಡುತ್ತಾರೆ. ನಾವು ಇಲ್ಲಿ ತಿಳಿಸುವ ಕಚೇರಿಗಳು ನಿಮಗೆ ಇಷ್ಟವಾಗುತ್ತದೆ.
Watch Video
1. ಡ್ರಾಪ್ ಬಾಕ್ಸ್.
ಡ್ರಾಪ್ ಬಾಕ್ಸ್ ಅಮೆರಿಕದ ಕಂಪನಿಯಾಗಿದ್ದು, ಫೈಲ್ ಹೋಸ್ಟಿಂಗ್ ಸೇವೆಗಳನ್ನು ನೀಡುತ್ತದೆ. ಈ ಕಂಪನಿಯ ಒಟ್ಟು ಹನ್ನೆರಡು ಕಚೇರಿಗಳು ಜಗತ್ತಿನಾದ್ಯಂತ ಇದ್ದು, 2000ಕ್ಕೂ ಹೆಚ್ಚು ತಂಡದ ಸದಸ್ಯರನ್ನು ಹೊಂದಿದೆ. ಡ್ರಾಪ್ ಬಾಕ್ಸ್ ಜನಪ್ರಿಯ ಕಂಪನಿಯಾಗಿದೆ. ಇದರ ಪ್ರತಿಯೊಂದು ಕಚೇರಿಗಳು ತನ್ನದೇ ಆದ ಸಂಸ್ಕೃತಿಯನ್ನು ಹೊಂದಿದ್ದು, ಸ್ಥಳೀಯ ಜಾಗದೊಂದಿಗೆ ಅವರ ಕೆಲಸ ಸ್ಥಳಗಳನ್ನು ನಿರ್ಮಿಸಿದ್ದಾರೆ.
2. ಫೇಸ್‌ಬುಕ್ ಕಚೇರಿ.
ಫೇಸ್‌ಬುಕ್ ಆನ್ಲೈನ್ ಸಾಮಾಜಿಕ ನೆಟ್ವರ್ಕಿಂಗ್ ಸೇವೆಯನ್ನು ಒದಗಿಸುವ ಕಂಪನಿಯಾಗಿದೆ. ಇದು ತನ್ನ ಬಳಕೆದಾರರಿಗೆ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ಮತ್ತು ಹೊಸ ಸಂಪರ್ಕಗಳನ್ನು ಮಾಡಲು ಅನುಮತಿಸುತ್ತದೆ. ದಿನಕ್ಕೆ 180 ಕೋಟಿ ಆಕ್ಟೀವ್ ಯೂಸರ್ಸ್ ಹೊಂದಿರುವ ಫೇಸ್‌ಬುಕ್‌ನ ಕಚೇರಿ ತುಂಬಾ ದೊಡ್ಡದಿದೆ. ವಿಶ್ವದ ಅತ್ಯಂತ ಶ್ರೀಮಂತ ಕಂಪನಿಗಳಲ್ಲಿ ಒಂದಾದ ಫೇಸ್‌ಬುಕ್ ಅತ್ಯುತ್ತಮ ಕಚೇರಿಯನ್ನು ಹೊಂದಿದೆ.
3. ಸೆಲ್ಗಾಸ್ಕಾನೊ ಆರ್ಕಿಟೆಕ್ಚರ್.
ಸೆಲ್ಗಾಸ್ಕಾನೊ ಕಚೇರಿ ಕಾಡಿನ ಮಧ್ಯದಲ್ಲಿರುವ ಕಚೇರಿಯಾಗಿದೆ. ಈ ಕಚೇರಿ ಕಾಡಿನ ಮಧ್ಯದಲ್ಲಿ ಕಾಣುವ ಜಾಹೀರಾತಿನ ರೀತಿ ಇದೆ. ಇದನ್ನು ಸ್ಪ್ಯಾನಿಶ್ ವಾಸ್ತುಶಿಲ್ಪಿಗಳಾದ ಜೊಸೆ ಸೇಲ್ಗಸ್ ಮತ್ತು ಲೂಸಿಯಾ ಕಾನೊ ವಿನ್ಯಾಸಗೊಳಿಸಿದ್ದಾರೆ. ಇದು ಸ್ಪೇನ್‍ನ ಮ್ಯಡ್ರಿಡ್ ಬಳಿಯ ಕಾಡಿನಲ್ಲಿದೆ.
4. ಯೂಟ್ಯೂಬ್.
ಯೂಟ್ಯೂಬ್ ವಿಶ್ವದ ಅತಿದೊಡ್ಡ ವಿಡಿಯೋ ಶೇರಿಂಗ್ ಪ್ಲಾಟ್ಫಾರ್ಮ್ ಆಗಿದೆ. ಅದರ ಕಚೇರಿ ಸೂಪರ್ ಕೂಲ್ ಆಗಿದೆ. ಯೂಟ್ಯೂಬ್‌ನ ಕಚೇರಿಯಲ್ಲಿ ನಿಮಗೆ ಸ್ಲೈಡ್ಗಳ ಸಿಗುತ್ತವೆ. ಮೇಲಿನ ಫ್ಲೋರಿನಿಂದ ಕೆಳಗೆ ಬರಲು ಸ್ಲೈಡ್ ಬಳಸಬಹುದು. ಇದನ್ನು ನೋಡಿದರೆ ನಾವು ಕೆಲಸ ಮಾಡುವ ಕಚೇರಿಯಲ್ಲಿ ಸ್ಲೈಡ್ಗಳ ಇರಬೇಕು ಎಂದು ಅನಿಸುತ್ತದೆ.
5. ಇನ್ವೆನ್ಷನ್ ಲ್ಯಾಂಡ್ ಡಿಸೈನ್ ಫ್ಯಾಕ್ಟರಿ.
ಈ ಕಂಪನಿಯನ್ನು 2006ರಂದು ಕಟ್ಟಿಸಲಾಗಿತ್ತು. ಸೃಜನಶೀಲತೆ ಮತ್ತು ನಾವಿನ್ಯತೆಗಳ ಮೂಲಕ ಯೋಜನೆಗಳನ್ನು ಜೀವಂತಗೊಳಿಸುವ ಕಂಪನಿ ಇದಾಗಿದೆ. ಕಂಪನಿಯ ಹೆಸರು ಇನ್ವೆನ್ಷನ್ ಲ್ಯಾಂಡ್ ಆಗಿದ್ದಾಗ, ಅದರ ವಿನ್ಯಾಸವು ತುಂಬಾ ಅದ್ಭುತವಾಗಿರುತ್ತದೆ. ಇವರ ಕಚೇರಿಯ ವಿನ್ಯಾಸವು ತುಂಬಾ ಆಶ್ಚರ್ಯಕರವಾಗಿ ಕಾಣುತ್ತದೆ, ನೀವು ಮತ್ತೊಂದು ಆಯಾಮಕ್ಕೆ ಪ್ರವೇಶಿಸಿದಂತೆ ಭಾಸವಾಗುತ್ತದೆ. ಎಲ್ಲರೂ ಈ ಕಚೇರಿಗೆ ಅರ್ಹರು.
6. ವೈಟ್ ಮೌಂಟೇನ್ ಕಚೇರಿ.
ಸ್ಟಾಕ್‌ಹೋಲ್ಮ್ ವೀಟಾ ಬರ್ಜ್ 30 ಮೀಟರ್ ಅಂಡರ್‌ಗ್ರೌಂಡ್ನ ಕೆಳಗೆ, ಹಳೆಯ ಪರಮಾಣು ಬಾಂಬ್ ಆಶ್ರಯವನ್ನು ಕಚೇರಿಯ ರೀತಿ ಮಾಡಲಾಗಿದೆ. ವೈಟ್ ಮೌಂಟೇನ್ ಕಚೇರಿ ವಾಸ್ತುಶಿಲ್ಪದ ಕಚೇರಿಯಾಗಿದ್ದು, ಕಚೇರಿಯ ವಿನ್ಯಾಸದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಈ ಕಚೇರಿ ಯಾವುದೋ ಪರ್ವತಗಳಲ್ಲಿರುವಂತೆ ತೋರುತ್ತದೆ.
7. ಪೋಲೋಟಾ ಟೀಮ್‌ವರ್ಕ್ಸ್.
ಪೋಲೋಟಾ ಟೀಮ್‌ವರ್ಕ್ಸ್ ಬೆಳೆಯುತ್ತಿರುವ ಅಮೆರಿಕದ ಚಾರಿಟಿ ಕಂಪನಿಯಾಗಿದೆ. ಈ ಕಂಪನಿಯು ಶಿಪ್ಪಿಂಗ್ ಕಂಟೇನರ್ಗಳನ್ನು ಬಳಸಿ ತನ್ನ ಕಚೇರಿಯನ್ನು ನಿರ್ಮಿಸಿದೆ. ಕೆಲವು ಜನರಿಗೆ ಈ ರೀತಿಯ ಕಚೇರಿ ಇಷ್ಟವಾಗುವುದಿಲ್ಲ, ಆದರೂ ಈ ಕಚೇರಿಗಳ ಐಡಿಯಾ ತುಂಬಾ ಅದ್ಭುತವಾಗಿದೆ.
8. ಗೂಗಲ್.
ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಕೆಲಸ ಮಾಡಲು ಬಯಸುವ ಸ್ಥಳ ಗೂಗಲ್ ಆಗಿದೆ. ಗೂಗಲ್ ಜಗತ್ತಿನಾದ್ಯಂತ ಬೆರಗುಗೊಳಿಸುವ ಕಚೇರಿಗಳನ್ನು ಹೊಂದಿದ್ದು, ತುಂಬಾ ಅದ್ಭುತವಾಗಿದೆ. ಗೂಗಲ್ ತನ್ನ ಸದಸ್ಯರಿಗೆ ಕಚೇರಿಯಲ್ಲಿ ಕೆಲಸ ಮಾಡಲು ಸಂತೋಷವಿರಲೆಂದು ಸ್ಲೈಡ್ಗಳನ್ನು ಹಾಕಿದೆ.
Don't forget to Comment Your Opinion on This Article
Share and Support Us
0 Comments