What Happens if you stay in house for a year | ಒಂದು ವರ್ಷ ಹೊರಗೆ ಹೋಗಲಿಲ್ಲವೆಂದರೆ ನಿಮಗೆ ಏನಾಗುತ್ತದೆ?

ಮನುಷ್ಯರು ಪರಿಸರ ಜೀವಿಗಳು. ಮನುಷ್ಯರಿಗೆ ಸೂರ್ಯನನ್ನು ನೋಡಬೇಕು, ಪರಿಸರದ ಜೊತೆ ಇರಬೇಕು, ಅವರ ದೇಹಕ್ಕೆ ವ್ಯಾಯಾಮ ನೀಡಬೇಕು. ಆದರೆ ಇವೆಲ್ಲವನ್ನೂ ಬಿಟ್ಟು ಒಂದು ವರ್ಷ ಹೊರಗೆ ಹೋಗಲಿಲ್ಲವೆಂದರೆ ನಿಮಗೆ ಏನಾಗುತ್ತದೆ. ನಿಮ್ಮಲ್ಲಿ ತುಂಬಾ ವ್ಯತ್ಯಾಸ ಕಾಣುತ್ತದೆ. ಯಾವ ಯಾವ ವ್ಯತ್ಯಾಸ ಕಾಣುತ್ತದೆ...




ಆರ್ಟಿಕಲ್ ಓದುತ್ತೀರಿ....


1. ವಿಟಮಿನ್ ಡಿ ಕಡಿಮೆಯಾಗುತ್ತದೆ.


vitamin d in kannada, info mind, infomindkannada
85-95% Vitamin D from Sun

     2014ರ ಪ್ರಕಾರ ರಿಪೋರ್ಟ್ ಪ್ರಕಾರ ಜಗತ್ತಿನಲ್ಲಿ ನೂರು ಕೋಟಿಯಷ್ಟು ಜನರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ವಿಟಮಿನ್ ಡಿ, ನಿಮ್ಮ ದೇಹದ ಮೂಳೆ ಮತ್ತು ಮಸಲ್ ಗಟ್ಟಿ ಇರಲು,  ಸ್ಟೇಬಲ್ ರಕ್ತದೊತ್ತಡವಿರಲು, ನಿಮ್ಮ ವೇಟ್ ಲಾಸ್ ಮತ್ತು ಹೃದಯದ ಕಾಯಿಲೆ ಕಡಿಮೆ ಮಾಡಲು ಕಾರಣವಾಗಿದೆ. ನಿಮಗೆ ಸೂರ್ಯನಿಂದಲೇ ದಿನ 80 ರಿಂದ 90% ನಷ್ಟು ವಿಟಮಿನ್ ಡಿ ಸಿಗುತ್ತಿದೆ. ಒಂದು ವೇಳೆ ನೀವು ಮನೆಯಲ್ಲೇ ಇದ್ದರೆ, ವಿಟಮಿನ್ ಡಿ ಸಿಗದೆ ನಿಮ್ಮ ಮೂಳೆ ಗಟ್ಟಿತನವನ್ನು ಕಳೆದುಕೊಳ್ಳುತ್ತದೆ, ಮಸಲ್ ಪೆನ್ ತುಂಬಾ ಇರುತ್ತದೆ, ಇನ್ಫೆಕ್ಷನ್ ಗೆ ಬೇಗ ತುತ್ತಾಗುತ್ತೀರಿ, ಇಷ್ಟೇ ಅಲ್ಲದೆ ಕೂದಲು ಉದುರುವಿಕೆ ಕೂಡವಾಗುತ್ತದೆ. ಒಂದು ವೇಳೆ ನೀವು ವಿಟಮಿನ್ ಡಿ ಮಾತ್ರೆ ತೆಗೆದುಕೊಳ್ಳುತ್ತೇವೆ ಎಂದರೆ ವಿಟಮಿನ್ ಡಿ ಮಾತ್ರೆ ಅಷ್ಟು ಎಫೆಕ್ಟಿವ್ ಆಗಿರುವುದಿಲ್ಲ. ನೀವು ಮನೆಯಲ್ಲಿ ಯುವಿ ಲೈಟ್‌, ಒಂದು ವರ್ಷ ತೆಗೆದುಕೊಂಡರೆ ಒಳ್ಳೆಯದೇ, ಆದರೆ ಇದರಿಂದ ನಿಮಗೆ ಸ್ಕಿನ್ ಕ್ಯಾನ್ಸರ್ ಆಗಬಹುದು.

2. ತೂಕ ಹೆಚ್ಚಾಗುತ್ತದೆ.


weight increase in kannada, info mind, infomindkannada
Weight Increases

     ನೀವು ನಿಮಗೆ ಗೊತ್ತಿಲ್ಲದೇ ಎಷ್ಟು ಸಲ ದಿನ ವ್ಯಾಯಾಮ ಮಾಡುತ್ತೀರಾ ಎಂದು ಗೊತ್ತಿದೆಯಾ?
ನಿಮ್ಮ ಕಾರು ಹತ್ತಲು, ಸೂಪರ್ ಮಾರ್ಕೆಟಿನಲ್ಲಿ ಕಾರ್ಟನ್ನು ತಳ್ಳುವಾಗ, ಮಧ್ಯಾಹ್ನದ ಊಟದ ಸಮಯದಲ್ಲಿ ಹೊರಗೆ ಹೋಗಲು, ನಿಮ್ಮ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರಲು. ಇವೆಲ್ಲದರಲ್ಲೂ ನಿಮ್ಮ ದೇಹಕ್ಕೆ ನಿಮಗೆ ಗೊತ್ತಿಲ್ಲದೇ ವ್ಯಾಯಾಮ ನೀಡುತ್ತಿದ್ದೀರಿ. ನೀವು ಮನೆಯಲ್ಲಿ ಕೇವಲ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಹೋದರೆ ನಿಮ್ಮ ತೂಕ ಹೆಚ್ಚಾಗುತ್ತದೆ.


3. ಮಾನಸಿಕವಾಗಿ ಕುಗ್ಗುತ್ತೀರಾ.


depression in kannada, info mind, infomindkannada
Go to Depression


    ಒಂದು ದಿನ ಮನೆಯಲ್ಲಿ ಕಳೆದರೆ ನೀವು ಖುಷಿಯಿರುತ್ತಿರಾವೆಂದರೆ, ನೀವು ಒಂದು ವರ್ಷ ಮನೆಯಲ್ಲಿ ಹೇಗಿರಬೇಕೆಂದು ಗೊತ್ತಾಗಬಹುದು. ಆದರೆ ಕೆಲವು ಜನರಿಗೆ ಒಂದು ದಿನ ಮನೆಯಲ್ಲಿದ್ದರೆ, ಅವರ ಶಕ್ತಿಯೆಲ್ಲಾ ಹೋಗಿ ಡಿಪ್ರೆಶನ್ ಗೆ ಹೋಗುತ್ತಾರೆ. ತುಂಬಾ ಜನ ಮನೆಯಲ್ಲಿ ಒಬ್ಬರೇ ಇದ್ದಾಗ ಡಿಪ್ರೆಶನ್ ಗೆ ಹೋಗಲು ಕಾರಣವೂ ವಿಟಮಿನ್ ಡಿ. ಡಿಪ್ರೆಶನ್ ಬಿಟ್ಟರೆ ನೀವು ಸಮಾಜ ನಿಮ್ಮ ಬಗ್ಗೆ ಏನು ತಿಳಿದುಕೊಳ್ಳುತ್ತದೆ ಎಂದು ಹೆದರುತ್ತೀರಾ.


4. ಪರಿಸರದ ಜೊತೆ ಕನೆಕ್ಷನ್ ಕಳೆದುಕೊಳ್ಳುತ್ತೀರಿ.


nature in kannada, nature connection with human in kannada, info mind, infomindkannada
Loss Connection with Nature
 
   ಎಂಥ ತೊಂದರೆಯೇ ಇದ್ದರೂ ಒಮ್ಮೆ ಪರಿಸರದಲ್ಲಿ ಚಲಿಸಿದರೆ ತೃಪ್ತಿ ಸಿಗುತ್ತದೆ. ಪರಿಸರ ನಿಮಗೆ ಸ್ಟೇಬಲ್ ಮೂಡ್, ಹೆದರಿಕೆ ಕಡಿಮೆ ಮಾಡಲು, ಜ್ಞಾಪಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಮನೆಯಲ್ಲಿ ಎಂತ ಗಿಡ ನೆಟ್ಟರೂ ಈ ಅನುಭವ ಕೇವಲ ಪರಿಸರದಲ್ಲಿ ಸಿಗಲು ಸಾಧ್ಯ. ಹೀಗಾಗಿ ನೀವು ಪರಿಸರದ ಜೊತೆ ಕನೆಕ್ಷನ್ ಕಳೆದುಕೊಳ್ಳುತ್ತೀರಾ.


5. ನಿದ್ದೆ ಹೆಚ್ಚುತ್ತದೆ.


sleep in kannada, sleep increase in kannada, info mind, infomindkannada
Sleep Increases

     ನೀವು ಹೊರಗೆ ಹೋಗದೆ ಸುಮ್ಮನೆ ಮನೆಯಲ್ಲೇ ಇದ್ದರೆ, ನಿಮಗೆ ನಿದ್ದೆ ಹೆಚ್ಚುತ್ತದೆ. ನೀವು ದಿನ ಕೆಲಸಕ್ಕೆ ಹೋಗುವಾಗ ಒಂದು ಸಮಯ ಪಾಲಿಸುತ್ತೀರಾ. ಆದರೆ ನೀವು ಮನೆಯಲ್ಲಿ ಇದ್ದಾಗ ಸಮಯವನ್ನು ಹೇಗೆ ಪಾಲಿಸಬೇಕು ಎಂದು ಗೊತ್ತಾಗುವುದಿಲ್ಲ. ಹೀಗಾಗಿ ನಿಮಗೆ ನಿದ್ದೆ ಹೆಚ್ಚುತ್ತದೆ.

     ಒಂದು ವೇಳೆ ನಿಮಗೆ ಒಂದು ವರ್ಷ ನಿಮ್ಮ ಕಂಫರ್ಟೆಬಲ್ ಮನೆಯಲ್ಲೇ ಇರಬೇಕೆಂದಿದ್ದರೆ ದಿನಕ್ಕೆ 20 ನಿಮಿಷವಾದರೂ ಹೊರಗೆ ಹೋಗಿ. ಇದರಿಂದ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಪಿಟ್ ಇರುತ್ತೀರಾ.

Don't forget to Comment Your Opinion on This Article

Share and Support Us

Info Mind

Post a Comment

0 Comments