ಪ್ರಾಚೀನ ಸಾಧನಗಳಿಂದಿಡಿದು ಇತ್ತೀಚಿನ ಡಿಜಿಟಲ್ ಪ್ರಗತಿಯವರೆಗೆ, ಮಾನವನ ಆವಿಷ್ಕಾರಗಳು ಜಗತ್ತನ್ನು ಬದಲಿಸಿದ ಮತ್ತು ಭೂಮಿಯ ಮೇಲಿನ ಜೀವನವನ್ನು ಪರಿವರ್ತಿಸಿದೆ. ನಿರೀಕ್ಷೆ ಮತ್ತು ಸಾಮರ್ಥ್ಯಗಳು ವಿಕಸನಗೊಳ್ಳುತ್ತಿದ್ದಂತೆ, ಪ್ರತಿ ಹೊಸ ಜನರೇಷನ್ ತನ್ನದೇ ಆದ ಇನೊವೇಟಿವ್ ಥಿಂಕರ್ಸನ್ನು ಹೊಂದಿದೆ.
ಚಕ್ರದ ಆವಿಷ್ಕಾರದಿಂದ ಮಾರ್ಸ್ ರೋವರ್ ಅಭಿವೃದ್ಧಿಯವರೆಗೆ, ಹಲವಾರು ಆವಿಷ್ಕಾರಗಳು ಕ್ರಾಂತಿಕಾರಿ. ಹೆಚ್ಚಿನ ಪ್ರಮುಖ ಆವಿಷ್ಕಾರಗಳಲ್ಲಿ ಒಬ್ಬ ಸಂಶೋಧಕರಿಲ್ಲ. ವರ್ಷದುದ್ದಕ್ಕೂ ಅನೇಕ ನವೀನ ಆವಿಷ್ಕಾರರು, ಆವಿಷ್ಕಾರದ ಉನ್ನತಿ ಮತ್ತು ವಿಕಾಸ ಎರಡರಲ್ಲೂ ತಮ್ಮ ಕೈ ಹೊಂದಿದ್ದಾರೆ.
1. ಚಕ್ರ.
ಚಕ್ರವು ಇಂಜಿನಿಯರಿಂಗ್ ಅದ್ಭುತವಾಗಿದ್ದು, ಹಲವಾರು ಇತರ ವಸ್ತುಗಳ ಮೇಲೆ ಪ್ರಭಾವ ಬೀರಿದ ಅತ್ಯಂತ ಪ್ರಸಿದ್ಧ ಆವಿಷ್ಕಾರಗಳಲ್ಲಿ ಒಂದಾಗಿದೆ. ಈ ಪ್ರಾಚೀನ ಆವಿಷ್ಕಾರವು ನಮ್ಮೆಲ್ಲರಿಗೂ ಪ್ರಯಾಣವನ್ನು ಸುಲಭಗೊಳಿಸಿತು. ರಿಸರ್ಚ್ ಪ್ರಕಾರ ಕ್ರಿ.ಪೂ. 3500ರಲ್ಲಿ ಮೆಸಪಟೋಮಿಯಾದಲ್ಲಿ ಮೊದಲ ಚಕ್ರ ಕಂಡಿದೆ. ಚಕ್ರವು ನಮ್ಮ ಜೀವನದಲ್ಲಿ ಒಂದು ಪ್ರಮುಖ ಉದ್ದೇಶವನ್ನು ಪೂರೈಸುತ್ತದೆ. ಅದು ಇಲ್ಲದೆ ನಾವು ಜಗತ್ತನ್ನು ಊಹಿಸಲು ಸಾಧ್ಯವಿಲ್ಲ.
2. ದಿಕ್ಸೂಚಿ.
ಆಧ್ಯಾತ್ಮಿಕ ಮತ್ತು ನ್ಯಾವಿಗೇಷನ್ಗಾಗಿ ರಚಿಸಲಾದ ಆರಂಭಿಕ ದಿಕ್ಸೂಚಿಗಳನ್ನು ಕ್ರಿ.ಪೂ.1050ರಲ್ಲಿ ಚೀನಿಯರು ಕಂಡುಹಿಡಿದರು. ಇದನ್ನು ಲೋಡ್‌ಸ್ಟೋನ್ಗಳಿಂದ ಮಾಡಿದ್ದು, ಪ್ರಾಕೃತಿಕ ಮ್ಯಾಗ್ನೆಟೈಟ್ ಐರನ್ ಓರ್ ಬಳಸಲಾಗಿತ್ತು. 1825ರಲ್ಲಿ ಎಲೆಕ್ಟ್ರೊಮ್ಯಾಗ್ನೆಟ್ ಆವಿಷ್ಕಾರವು ಆಧುನಿಕ ದಿಕ್ಸೂಚಿಯ ಬೆಳವಣಿಗೆಗೆ ಕಾರಣವಾಯಿತು. ದಿಕ್ಸೂಚಿ ಆವಿಷ್ಕಾರವು ಆಧುನಿಕ ಸಂಚಾರಣೆಯಲ್ಲಿ ಜಿಪಿಎಸ್ಗಿಂತ ಹೆಚ್ಚು ಸಹಾಯ ಮಾಡುತ್ತಿದೆ.
3. ಆಟೊಮೊಬೈಲ್.
ಆಧುನಿಕ ಕಾರಿನ ಅಡಿಪಾಯವನ್ನು 1886ರಲ್ಲಿ ಜರ್ಮನ್ ಸಂಶೋಧಕ ಕಾರ್ಲ್ ಬೆಂಜ್ ಹಾಕಿದರು. ಇಪ್ಪತ್ತನೇ ಶತಮಾನದ ಆರಂಭದವರೆಗೂ ಕಾರುಗಳು ವ್ಯಾಪಕವಾಗಿ ಲಭ್ಯವಾಗಲಿಲ್ಲ. ಆಗ ಹೆನ್ರಿ ಫೋರ್ಡ್ ಸಾಮೂಹಿಕ ಉತ್ಪಾದನಾ ತಂತ್ರಗಳನ್ನು ನಾವೀನ್ಯಗೊಳಿಸಿದರು. ಆಟೋ ಮೊಬೈಲ್ ಸಾವಿರಾರು ಹೊಸ ಉದ್ಯೋಗಗಳನ್ನು ಸೃಷ್ಟಿಸಿತು. ವಾಹನ ಉತ್ಪಾದನೆ ಮತ್ತು ಮಾರಾಟವು ಆರ್ಥಿಕ ಸ್ಥಿತಿಯ ಪ್ರಮುಖ ಸೂಚಕಗಳಲ್ಲಿ ಒಂದಾಯಿತು. ಇದಲ್ಲದೆ ಇದು ಪೆಟ್ರೋಲಿಯಂ ಸಂಸ್ಕರಣೆ, ಸ್ಟೀಲ್ ತಯಾರಿಕೆ, ಬಣ್ಣ ಮತ್ತು ಪ್ಲೇಟ್ ಗ್ಲಾಸ್ ತಯಾರಿಕೆ ಮತ್ತು ಇತರ ಕೈಗಾರಿಕಾ ಪ್ರಕ್ರಿಯೆಗಳಲ್ಲಿ ತಾಂತ್ರಿಕ ಪ್ರಗತಿಯ ಮೇಲೆ ಪ್ರಭಾವ ಬೀರಿತು.
4. ಸ್ಟೀಮ್ ಇಂಜಿನ್.
ಥಾಮಸ್ ಸ್ಯಾವರಿ 1698ರಲ್ಲಿ ಪ್ರಾಯೋಗಿಕ ಸ್ಟೀಮ್ ಎಂಜಿನ್ ಪೇಟೆಂಟ್ ಪಡೆದರು. 1781ರಲ್ಲಿ ಜೇಮ್ಸ್ ವ್ಯಾಟ್ ಸುಧಾರಿತ ಸ್ಟೀಮ್ ಎಂಜಿನ್ ಮಾಡಿ ಪೇಟೆಂಟ್ ಪಡೆದು, ಮಾನವ ಇತಿಹಾಸದಲ್ಲೇ ಅತ್ಯಂತ ಮಹತ್ವದ ತಾಂತ್ರಿಕ ಚಿಮ್ಮಿಗೆ ಕಾರಣರಾದರು. 1800ರ ದಶಕದಲ್ಲೇ ಈ ಎಂಜಿನ್ಗಳು ಸಾರಿಗೆ, ಕೃಷಿ ಮತ್ತು ಉತ್ಪಾದನಾ ಉದ್ಯಮಗಳಲ್ಲಿ ಸುಧಾರಣೆಗೆ ಕಾರಣವಾಯಿತು. ಸ್ಟೀಮ್ ಇಂಜಿನ್ ಪ್ರಿನ್ಸಿಪಾಲ್ ಇಪ್ಪತ್ತನೇ ಶತಮಾನದಲ್ಲಿ ಕಾರು ಮತ್ತು ವಿಮಾನಗಳ ಏರಿಕೆಗೆ ಪ್ರೇರೇಪಿಸಿತು.
5. ಕಾಂಕ್ರೀಟ್.
ಮಾನವ ನಿರ್ಮಿತ ವಸ್ತುಗಳಲ್ಲಿ ಕಾಂಕ್ರೀಟ್ ಹೆಚ್ಚು ವ್ಯಾಪಕವಾಗಿ ಬಳಸಲ್ಪಡುತ್ತಿದೆ. ಇದು ಒರಟಾದ ಸಂಯೋಜನೆಯಿಂದ ಕೂಡಿದ ಒಂದು ಸಂಯೋಜಿತ ವಸ್ತುವಾಗಿದ್ದು, ಕಾಲಕಾಲಕ್ಕೆ ಗಟ್ಟಿಯಾಗುತ್ತದೆ. ಕಾಂಕ್ರೀಟ್‌ನ ಪ್ರಮುಖ ಅಂಶವೆಂದರೆ ಸಿಮೆಂಟ್. ಕ್ರಿ.ಪೂ. 1300ರಲ್ಲಿ ಸಿಮೆಂಟಿಗೆ ಅಡಿಪಾಯ ಹಾಕಲಾಯಿತು. ಕ್ರಿ.ಪೂ.6500ರ ಸುಮಾರಿಗೆ ಮೊದಲ ಕಾಂಕ್ರೀಟ್ ತರಹದ ರಚನೆಗಳನ್ನು ಸೌತ್ ಸಿರಿಯಾ ಮತ್ತು ನಾರ್ತ್ ಜೋರ್ಡಾನ್ ಪ್ರದೇಶಗಳಲ್ಲಿ ನಬಾಟಿಯದವರು ನಿರ್ಮಿಸಿದರು. ಕ್ರಿ.ಪೂ. 3000ದಲ್ಲಿ, ಈಜಿಪ್ಟ್‌ನವರು ಪಿರಮಿಡ್ ಮಾಡಲು ಕಾಂಕ್ರೀಟ್‌ನ ಆರಂಭಿಕ ರೂಪವನ್ನು ಬಳಸುತ್ತಿದ್ದರು. 1891ರಲ್ಲಿ ಅಮೆರಿಕದಲ್ಲಿ ಜಾರ್ಜ್ ಬರ್ತೊಲೋಮ್ ಮೊದಲ ಕಾಂಕ್ರೀಟ್ ಬೀದಿಯನ್ನು ಹಾಕಿದರು, ಅದು ಈಗಲೂ ಇದೆ. 1902ರಲ್ಲಿ ಸ್ಟೀಲ್ ರೈನ್‌ಫೋರ್ಸ್‌ಡ್ ಕಾಂಕ್ರಿಟ್ ಬಳಸಿ ಆಗಸ್ಟ್ ಪೆರೇಟ್ ಪ್ಯಾರಿಸ್ಸಿನಲ್ಲಿ ಅಪಾರ್ಟ್ಮೆಂಟ್ ಕಟ್ಟಡವನ್ನು ನಿರ್ಮಿಸಿದರು. ಈ ಕಟ್ಟಡವು ಕಾಂಕ್ರೀಟಿಗೆ ಜನಪ್ರಿಯತೆಯನ್ನು ನೀಡಿತು ಮತ್ತು ಕಾಂಕ್ರೀಟ್ ಅಭಿವೃದ್ಧಿಯ ಮೇಲೂ ಪ್ರಭಾವ ಬೀರಿತು.
6. ಪೆಟ್ರೋಲ್.
ಪೆಟ್ರೋಲ್ ಇಲ್ಲದೆ ಆಟೋಮೊಬೈಲ್ ಇಂಡಸ್ಟ್ರಿ ಇರುತ್ತಿರಲಿಲ್ಲ. ಪೆಟ್ರೋಲ್ ನೈಸರ್ಗಿಕ ಉಪ-ಉತ್ಪನ್ನವಾಗಿದೆ. 1858ರಲ್ಲಿ ಪೆನ್ಸಿಲ್ವೇನಿಯಾದಲ್ಲಿ ಎಡ್ವಿನ್ ಡ್ರೇಕ್ ಮೊದಲ ತೈಲ ಬಾವಿಯನ್ನು ಅಗೆದು, ಸೀಮೆಎಣ್ಣೆಯನ್ನು ಉತ್ಪಾದಿಸಲು ತೈಲವನ್ನು ಪರಿಷ್ಕರಿಸಿದರು. ಡಿಸ್ಟಿಲೇಷನ್ನಿಂದ ತಯಾರದ ಆ ಅನಿಲದ ಬಗ್ಗೆ ಅವರಿಗೆ ತಿಳಿದಿರಲಿಲ್ಲ. 1893ರವರೆಗೆ ಅನಿಲದ ಪ್ರಾಮುಖ್ಯತೆಯನ್ನು ಗುರುತಿಸಲಾಗಿಲ್ಲ. ಮೊದಲ ಅನಿಲ ಪಂಪನ್ನು ಸಿಲ್ವಾನ್ಸ್ ಬೌಸರ್ 5 ಸೆಪ್ಟೆಂಬರ್, 1885ರಂದು ತಯಾರಿಸಿದರು.
7. ರೈಲ್ವೆ.
ರೈಲ್ವೆ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಸುಲಭವಾಗಿ ದೂರದವರೆಗೆ ಸಾಗಿಸಬಹುದಾದ ಸಾರಿಗೆ ವಿಧಾನವಾಗಿದೆ. ಆಧುನಿಕ ರೈಲುಗಳ ಇತಿಹಾಸವೂ ಸುಮಾರು 200 ವರ್ಷಗಳಷ್ಟು ಹಳೆಯದಾಗಿದೆ. ರೈಲಿನಿಂದಾಗಿ ದೂರದ ಊರಿಗೆ ಹೋಗಲು ಸಾಧ್ಯವಾಯಿತು. ಕೈಗಾರಿಕೆಯಲ್ಲು ರೈಲ್ವೆ ಪ್ರಮುಖ ಪಾತ್ರ ವಹಿಸುತ್ತಿದೆ. ರೈಲು ಜಾಲದ ಕಮರ್ಷಿಯಲ್ ನೋಟವು 1821ರ ಕೊನೆಯಲ್ಲಿ ಬಂದಿತು. 1821ರಲ್ಲಿ ಸ್ಟ್ಯಾಕ್ಟನ್ ಮತ್ತು ಡಾರ್ಲಿಂಗ್ಟನ್ ರೈಲ್ವೆ ನಿರ್ಮಾಣಕ್ಕಾಗಿ ಸ್ಟಿಪೆನ್ಸನ್ ಅವರನ್ನು ನೇಮಿಸಲಾಯಿತು. ಇದನ್ನು 1825ರಲ್ಲಿ ಮೊದಲ ಸಾರ್ವಜನಿಕ ರೈಲ್ವೆ ಆಗಿ ತೆರೆಯಲಾಯಿತು. ಡೀಸೆಲ್ ಇಂಜಿನ್ ಆವಿಷ್ಕಾರದೊಂದಿಗೆ, ರೈಲ್ವೆ ಇತಿಹಾಸದ ಮತ್ತೊಂದು ಪ್ರಮುಖ ಅಧ್ಯಾಯವನ್ನು ತಲುಪಿತು.
8. ವಿಮಾನ.
17 ಡಿಸೆಂಬರ್ 1903ರಂದು ವಿಲ್ಬರ್ ಮತ್ತು ಆರ್ವಿಲ್ ರೈಟ್ ಮೊದಲ ಚಾಲಿತ, ನಿರಂತರ ಮತ್ತು ನಿಯಂತ್ರಿತ ವಿಮಾನವನ್ನು ಸಾಧಿಸಿದರು. ಡಾವಿನ್ಸಿಯ ಕಾಲದಿಂದಲೂ ಹಾರುವ ಯಂತ್ರಗಳ ಕನಸು ಕಾಣಲಾಗಿತು. ರೈಟ್ ಬ್ರದರ್ಸ್ ದೊಡ್ಡ ಯಶಸ್ಸನ್ನು ಗಳಿಸಿದರು. ಗ್ಲಾಯ್ಡರ್ಗಳಿಂದ ಪ್ರಾರಂಭಿಸಿ ಇವರಿಬ್ಬರು ಆಧುನಿಕ ಏರೋನಾಟಿಕಲ್ ಎಂಜಿನಿಯರಿಂಗ್‌ಗೆ ಅಡಿಪಾಯ ಹಾಕಿದರು. ಹಲವಾರು ಜನರು ವಿಮಾನಗಳನ್ನು ಹಾರಿಸುವ ತರಬೇತಿಯನ್ನು ಪಡೆಯುವುದು ವ್ಯವಹಾರವಾಯಿತು. ವಿಮಾನವನ್ನು ಆವಿಷ್ಕರಿಸದಿದ್ದರೆ, ಕಡಿಮೆ ಸಮಯದಲ್ಲಿ ಸಾವಿರಾರು ಮೈಲುಗಳಷ್ಟು ದೂರ ಹಾರಾಟ ನಡೆಸಲು ಸಾಧ್ಯವಾಗುತ್ತಿರಲಿಲ್ಲ.
9. ಬೆಂಕಿ.
ಬೆಂಕಿ ನೈಸರ್ಗಿಕ ವಿದ್ಯಮಾನವಾಗಿದ್ದರು, ಅದರ ಆವಿಷ್ಕಾರವು ಇತಿಹಾಸದ ಪುಟಗಳಲ್ಲಿ ಒಂದು ಕ್ರಾಂತಿಯನ್ನು ಗುರುತಿಸಿತು. ಪ್ರಾಚೀನ ಜನರು ನೈಸರ್ಗಿಕ ಮೂಲಗಳಿಂದ ಪಡೆದ ಬೆಂಕಿಯನ್ನು ಪರಿಚಯಿಸಿರಬಹುದು, ನಂತರ ಬೆಂಕಿಯನ್ನು ಕೃತಕವಾಗಿ ಮಾಡುವ ಪ್ರಕ್ರಿಯೆಗಳು ಬಂದವು. ಹಿಂದಿನ ಕಾಲದಿಂದ ಇಂದಿನವರೆಗೆ ಬೆಂಕಿಯು ಆಚರಣೆ, ಕೃಷಿ, ಅಡುಗೆ, ಶಾಖ ಮತ್ತು ಬೆಳಕನ್ನು ಉತ್ಪಾದಿಸುತ್ತಿದೆ. ವಿವಿಧ ಕೈಗಾರಿಕಾ ಪ್ರಕ್ರಿಯೆಗಳು ಮತ್ತು ವಿನಾಶದ ಮಾಧ್ಯಮವೂ ಆಗಿದೆ.
10. ಉಪಕರಣ(ಟೂಲ್ಸ್).
ಉಪಕರಣಗಳ ಬಳಕೆ 2.6 ದಶಲಕ್ಷ ವರ್ಷಗಳ ಹಿಂದೆಯೇ ಇಥಿಯೋಪಿಯಾದಲ್ಲಿ ಪ್ರಾರಂಭವಾಯಿತು. ಉಪಕರಣಗಳ ಬಳಕೆಯೂ ಮಾನವ ಕುಲದ ವಿಕಾಸದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಮಷಿನ್ ಉಪಕರಣಗಳು ಕೈಗಾರಿಕಾ ಕ್ರಾಂತಿಗೆ ಮುನ್ನಡೆಸಿತು. ಸುತ್ತಿಗೆಯಿಲ್ಲದೆ ನಾವು ಹೇಗೆ ತಾನೇ ಹಿಂದಿನ ಆವಿಷ್ಕಾರಗಳನ್ನು ನಿರ್ಮಿಸಲಾಗುತ್ತಿತ್ತು.
Typed By,
Krishna Kn
Don't forget to Comment Your Opinion on This Article
0 Comments