ಕನಸು ಕಾಣುವುದು ನಮ್ಮ ಜೀವನದಲ್ಲಿ ಅತ್ಯಂತ ನಿಗೂಢ ಮತ್ತು ರೋಮಾಂಚಕಾರಿ ಅನುಭವಗಳಲ್ಲಿ ಒಂದಾಗಿದೆ. ಮೆಸಪೊಟೋಮಿಯನ್ ನಾಗರಿಕತೆಯ ಹೆಚ್ಚಿನ ಆಡಳಿತದ ನಿರ್ಧಾರಗಳು ಕನಸುಗಳ ಅರ್ಥವನ್ನು ಆಧರಿಸಿದೆ. ರೋಮನ್ ಯುಗದಲ್ಲಿ ಕನಸುಗಳನ್ನು ದೇವರಿಂದ ಬಂದ ಸಂದೇಶ ಎಂದು ಭಾವಿಸಲಾಗಿತ್ತು.
ಈಗಿನ ಸಮಯದಲ್ಲಿ, ಅನೇಕ ಕಲಾವಿದರು ಮತ್ತು ವಿಜ್ಞಾನಿಗಳು ತಮ್ಮ ಕನಸುಗಳಿಂದಾಗಿ ಅತ್ಯುತ್ತಮ ವಿಚಾರಗಳನ್ನು ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಕನಸಿನ ಅರ್ಥಗಳ ಬಗ್ಗೆ ನಮಗೆ ನಿಜವಾಗಿ ಏನು ಗೊತ್ತು?
ನಿಮ್ಮ ಕನಸಿನ ಅರ್ಧದಷ್ಟು ಎಚ್ಚರಗೊಂಡ ಐದು ನಿಮಿಷಗಳಲ್ಲಿ ಮರೆತು ಹೋಗುತ್ತದೆ. ಹತ್ತು ನಿಮಿಷದಲ್ಲಿ 90%ನಷ್ಟು ನಿಮ್ಮ ಕನಸು ಮರೆತೇ ಹೋಗಿರುತ್ತದೆ.
1. 90%ನಷ್ಟು ಕನಸನ್ನು ಮರೆಯುತ್ತೀರಿ.
2. ಕುರುಡು ಜನರು ಸಹ ಕನಸು ಕಾಣುತ್ತಾರೆ.
3. ಕನಸಿನಲ್ಲಿ ನಮಗೆ ತಿಳಿದಿರುವವರ ಮುಖವನ್ನೇ ನೋಡುತ್ತೇವೆ.
4. ಕನಸುಗಳು ಸಂಕೇತಿಕವಾಗಿದೆ.
5. ಕನಸಿನ ಭಾವನೆಗಳು.
ಕನಸಿನಲ್ಲಿ ಅನುಭವಿಸುವ ಸಾಮಾನ್ಯ ಭಾವನೆ ಎಂದರೆ ಆತಂಕ. ಪಾಸಿಟಿವ್ ಭಾವನೆಗಳಿಗಿಂತ, ನೆಗೆಟಿವ್ ಭಾವನೆಗಳು ಹೆಚ್ಚು ಸಾಮಾನ್ಯವಾಗಿದೆ.6. ಪ್ರಾಣಿಗಳು ಕನಸು ಕಾಣುತ್ತವೆ.
7. ಕನಸಿನ ಸಂಯೋಜನೆ.
ನಾವು ನಿದ್ದೆ ಮಾಡುವ ಸಮಯದಲ್ಲಿ ನಾವಿದ್ದ ಸ್ಥಳದಲ್ಲಿ ಆಗುವ ಕೆಲವು ಘಟನೆಗಳು ಕನಸಿನಲ್ಲಿ ಕಾಣುತ್ತದೆ. ಉದಾಹರಣೆಗೆ, ನೀವು ನಿದ್ದೆ ಮಾಡುವ ಸಮಯದಲ್ಲಿ ಯಾರಾದರೂ ಗಿಟಾರ್ ನುಡಿಸಿದರೆ ನೀವು ಯಾವುದೋ ಮ್ಯೂಸಿಕ್ ಕಾನ್ಸರ್ಟ್ನಲ್ಲಿ ಇರುವಂತೆ ಕನಸು ಕಾಣಬಹುದು.8. ಪುರುಷರು ಮತ್ತು ಮಹಿಳೆಯರ ಕನಸು ವಿಭಿನ್ನವಾಗಿರುತ್ತದೆ.
ಬೋನಸ್
#ಎಲ್ಲರೂ ಕನಸು ಕಾಣುತ್ತಾರೆ.
ಈ ಪ್ರಶ್ನೆ ನಿಮಗೆ,
ನೀವು ಗೊರಕೆ ಹೊಡೆದರೆ ನಿಮಗೆ ಕನಸು ಕಾಣಿಸುತ್ತದೆಯೋ ಅಥವಾ ಇಲ್ಲವೋ?Don't forget to Comment Your Opinion on This Article
Share and Support Us
0 Comments