ಜಗತ್ತಿನ ಅತಿ ದೊಡ್ಡ ಕಾಡು ಪೂರ್ತಿ ಸುಟ್ಟೊಗಲು ಎಷ್ಟು ದಿನ ತೆಗೆದುಕೊಳ್ಳುತ್ತದೆ? ನಾವೇನಾದರೂ ಈಗಲೇ ಉಳಿಸಿಕೊಂಡಿಲ್ಲವೆಂದರೆ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ. ಅಮೆಜಾನ್ ರೈನ್ ಪಾರೆಸ್ಟ್, ಜಗತ್ತಿನಲ್ಲಿ 20% ಆಮ್ಲಜನಕ ಸೃಷ್ಟಿಸುತ್ತದೆ. 30% ಜೀವ- ಜಂತುಗಳಿಗೆ ಅಮೆಜಾನ್ ಫಾರೆಸ್ಟ್ ಮನೆಯಾಗಿದೆ. ಎಷ್ಟೋ ಕಾಯಿಲೆ ವಾಸಿ ಮಾಡುವ ಔಷಧಿ ಇಲ್ಲೇ ಸಿಗುತ್ತದೆ. ಇಡೀ ಅಮೆಜಾನ್ ಫಾರೆಸ್ಟ್ ಸುಟ್ಟೊದರೆ ಏನಾಗುತ್ತದೆ?
1. ಅದಿಲ್ಲದೆ ನಾವು ಬದುಕಬಹುದಾ?
2. ಅದರಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮ?
3. ಅದನ್ನು ಮತ್ತೆ ನಾವು ಸೃಷ್ಟಿಸಬಹುದಾ?
ಆರ್ಟಿಕಲ್ ಓದುತ್ತಿರಿ...
![]() |
| Fire in Amazon Forest |
ಈ ಸಮಯದಲ್ಲಿ (31 ಆಗಸ್ಟ್ 2019) ಅಮೆಜಾನ್ ಕಾಡಿನಲ್ಲಿ ಬೆಂಕಿ ಹತ್ತಿ ಉರಿಯುತ್ತಿದೆ. ಈಗಾಗಲೇ ಬೆಂಕಿಯಿಂದ ಮೂರು ಫುಟ್ಬಾಲ್ ಸ್ಟೇಡಿಯಂನಷ್ಟು ಅಮೆಜಾನ್ ಫಾರೆಸ್ಟ್ ನಾಶವಾಗಿದೆ. ಈಗ ನಾವೇನಾದರೂ ಮಾಡಿಲ್ಲವೆಂದರೆ ಅಮೆಜಾನ್ ಫಾರೆಸ್ಟ್ ನಾಶವಾಗುವುದರಲ್ಲಿ ಸಂಶಯವಿಲ್ಲ. ಇದರಿಂದ ನಾವು ಹವಾಮಾನದ ಯುದ್ಧದ ಜೊತೆ ಸೋಲುವುದು ನಿಶ್ಚಿತ.
![]() |
| South America |
ಅಮೆಜಾನ್ ಕಾಡು ಭೂಮಿಯಲ್ಲಿ ಒಂದು ಇಂಕ್ರೆಡಿಬಲ್ ಜಾಗವಾಗಿದ್ದು, ಸೌತ್ ಅಮೆರಿಕಾದ 40% ಭಾಗವಾಗಿದೆ. ಸೌತ್ ಅಮೆರಿಕ ಆರ್ಥಿಕತೆಗೆ ಮುಖ್ಯವಾದ ಈ ಕಾಡು 86 ಬಿಲಿಯನ್ ಟನಿನಷ್ಟು ಇಂಗಾಲದ ಡೈಆಕ್ಸೈಡನ್ನು ಹಿಡಿದುಕೊಂಡಿದೆ. ನಾವು ಈ ಕಾಡನ್ನು ಉಳಿಸಿಕೊಳ್ಳುವುದು ಸ್ವಲ್ಪ ಕಷ್ಟ. ಏಕೆಂದರೆ 1978ರಿಂದ ಸಾವಿರ ಕಿಲೋಮೀಟರಿನಷ್ಟು ರೈನ್ ಫಾರೆಸ್ಟ್‌ನ್ನು ನಾಶ ಮಾಡಲಾಗಿದೆ. ಇದಕ್ಕೆ ಮನುಷ್ಯನಿಗೆ ಧನ್ಯವಾದ ಹೇಳಲೇಬೇಕು. ಇದೇ ರೀತಿ ಮುಂದುವರಿದರೆ ಆಮೆಜಾನ್ ಕಾಡು ನೂರು ವರ್ಷದಲ್ಲೇ ನಶಿಸಿ ಹೋಗುತ್ತದೆ. ಇದರಿಂದ ನಮ್ಮ ಗ್ರಹಕ್ಕೆ ಏನಾಗುತ್ತದೆ ಬನ್ನಿ ನೋಡೋಣ.
![]() |
| Amazon Forest Animals |
ಮೊದಲು ನಾವು ಒಂದು ಜೀವಸಂಕುಲವನ್ನು ಕಳೆದುಕೊಳ್ಳುತ್ತೇವೆ. ಅಮೆಜಾನ್ ಕಾಡಿನಲ್ಲಿರುವ ಸಸ್ಯ ಮತ್ತು ಇತರೆ ಜೀವಿಗಳು ಜಗತ್ತಿನ ಬೇರೆ ಯಾವ ಕಾಡಿನಲ್ಲೂ ಇಲ್ಲ. ಅಮೆಜಾನ್ ಕಾಡನ್ನು ನಾಶ ಮಾಡುವುದರಿಂದ ಅವು ನಶಿಸುತ್ತವೆ. ನಮಗೆ ಅದರಿಂದ ಬರುತ್ತಿದ್ದ ಔಷಧಿಗಳ ಬಗ್ಗೆ ತಿಳಿಯುತ್ತದೆ. ಆಶ್ಚರ್ಯವಾದರೂ ನೂರಕ್ಕೂ ಹೆಚ್ಚು ಔಷಧಿಗಳು ಅಮೆಜಾನ್ ಕಾಡಿನಿಂದಲೇ ಬರುತ್ತದೆ. ನಾವು ಯಾವುದೋ ಹರ್ಬಸ್ ಅಲ್ಲದೆ, ಕ್ಯಾನ್ಸರ್ ವಾಸಿ ಮಾಡುವ ಔಷಧಿ ಕೂಡ ಇಲ್ಲೇ ಸಿಗುತ್ತದೆ. ವಿಜ್ಞಾನಿಗಳು ಅಮೆಜಾನ್ ಕಾಡಿನಲ್ಲಿ ಕೇವಲ 5% ಕ್ಕಿಂತ ಕಡಿಮೆ ಔಷಧಿಯುಕ್ತ ಗಿಡವನ್ನು ಕಂಡುಹಿಡಿದಿದ್ದಾರೆ. ಯಾರಿಗೆ ಗೊತ್ತು ಇದರ ನಾಶದ ಜೊತೆ ಎಷ್ಟು ಔಷಧಿಯುಕ್ತ ಗಿಡಗಳನ್ನು ಕಳೆದುಕೊಳ್ಳುತ್ತೇವೆಂದು.
![]() |
| Our Beautiful Earth |
ಅಮೆಜಾನ್ ಕಾಡು ನಾಶಿಸುವುದರಿಂದ ನಮ್ಮ ಹವಾಮಾನದಲ್ಲಿ ತುಂಬಾ ಬೇಗ ವ್ಯತ್ಯಾಸ ಕಾಣುತ್ತದೆ. ಅಮೆಜಾನ್ ಇಲ್ಲದಿದ್ದರೆ ಅದರಿಂದ ಬರುವ ಆಮ್ಲಜನಕ ಸಿಗುವುದಿಲ್ಲ. ಈ ಸಮಯದಲ್ಲಿ ಅದು ಕಾರ್ಬನ್ ನೀಡುತ್ತಾ ಹೋಗುತ್ತದೆ. ಈಗ ಅಮೆಜಾನ್ 80 ರಿಂದ 140 ಬಿಲಿಯನ್ ಟನ್ನಷ್ಟು ಇಂಗಾಲದ ಡೈಆಕ್ಸೈಡ್ ಅನಿಲವನ್ನು ಎಳೆದುಕೊಳ್ಳುತ್ತಿದೆ. ಒಂದು ವೇಳೆ ಬೆಳಗ್ಗೆ ಎದ್ದ ಕೂಡಲೇ ನಾವು ಅಮೆಜಾನ್ ಕಾಡು ಬೆಂಕಿಯಿಂದ ನಾಶವಾಗಿದ್ದ ಸುದ್ದಿ ಕೇಳಿದರೆ. ಆ ಎಲ್ಲ ಇಂಗಾಲದ ಡೈಆಕ್ಸೈಡ್ ವಾತಾವರಣದಲ್ಲಿ ತೇಲುತ್ತಿರುತ್ತದೆ.
ಕೆಲವು ಎಕ್ಸ್ಪರ್ಟ್ಸ್ ಅಮೆಜಾನ್ ಕಾಡು ನಾಶಿಸಿದರೆ, ನಾವು ಹವಾಮಾನದ ಜೊತೆಗಿನ ಯುದ್ಧದಲ್ಲಿ ಸೋಲುತ್ತೇವೆ ಎನ್ನುತ್ತಾರೆ.
ಆದರೂ ಚಿಂತೆ ಇಲ್ಲ. ಏಕೆಂದರೆ ನಾವು ಈ ಕಾಡನ್ನು ಈಗಲೂ ಉಳಿಸಿಕೊಳ್ಳಲು ಅವಕಾಶವಿದೆ. ಕೆಲವು ದಶಕಗಳ ರಿಸರ್ಚ್ ನಿಂದ ಗೊತ್ತಾಗಿರುವ ಪ್ರಕಾರ ಈ ಕಾಡುಗಳು ಮನುಷ್ಯನಿಂದ ಆಗಿರುವ ನಾಶವನ್ನು ಸರಿಪಡಿಸಿಕೊಳ್ಳಬಹುದು. ನೀವೇನು ಮಾಡಬಹುದೆಂದರೇ ಕಾಗದವನ್ನು ಬಳಸುವುದು ಕಡಿಮೆ ಮಾಡಿ ಮತ್ತು ರಿನಿವೇಬಲ್ ರಿಸೋರ್ಸ್ ಗಳನ್ನು ಹೆಚ್ಚಾಗಿ ಬೆಳೆಸಲು ಪ್ರಯತ್ನಿಸಿ. ರಿನಿವೇಬಲ್ ಶಕ್ತಿ, ಫಾಸಿಲ್ ಫುಯಲ್ ನಿಂದ ಆಗುತ್ತಿರುವ ಮಾಲಿನ್ಯವನ್ನು ತಡೆಯುತ್ತದೆ. ನಾವೆಲ್ಲ ಸೇರಿ ಒಟ್ಟಿಗೆ ಕೆಲಸ ಮಾಡಿದರೆ ಈ ಸುಂದರವಾದ ಕಾಡನ್ನು ಉಳಿಸಿಕೊಳ್ಳಬಹುದು.
Don't forget to Comment Your Opinion on This Article
Share and Support Us
ಕೆಲವು ಎಕ್ಸ್ಪರ್ಟ್ಸ್ ಅಮೆಜಾನ್ ಕಾಡು ನಾಶಿಸಿದರೆ, ನಾವು ಹವಾಮಾನದ ಜೊತೆಗಿನ ಯುದ್ಧದಲ್ಲಿ ಸೋಲುತ್ತೇವೆ ಎನ್ನುತ್ತಾರೆ.
![]() |
| Renewable Resources |

0 Comments