ಜಗತ್ತಿನ ಅತಿ ಎತ್ತರದ ಪರ್ವತವೆಂದೇ ತಕ್ಷಣ ನಮಗೆ ಮೌಂಟ್ ಎವರೆಸ್ಟ್ ನೆನಪಿಗೆ ಬರುತ್ತದೆ. ಏಷ್ಯಾ ಖಂಡದಲ್ಲೇ ಇರುವ ಮೌಂಟ್ ಎವರೆಸ್ಟ್ ಬಗ್ಗೆ ನಮಗೆ ತಿಳಿದಿದೆ. ಆದರೆ ಏಷ್ಯಾ ಖಂಡದಲ್ಲಿ ಜಗತ್ತಿನ ಹತ್ತು ಎತ್ತರದ ಪರ್ವತಗಳು ಇದೆ ಎಂಬುದು ನಿಮಗೆ ತಿಳಿದಿದೆಯೇ?
ವಿಶೇಷವಾಗಿ ಆ ಪರ್ವತಗಳೆಲ್ಲ ಹಿಮಾಲಯನ್ ವ್ಯಾಪ್ತಿಯಲ್ಲಿ ಬರುತ್ತದೆ. ನಾವು ಇಲ್ಲಿ ತಿಳಿಸುವ 10 ಪರ್ವತಗಳಲ್ಲಿ 8000 ಮೀಟರ್‌ಗೂ ಹೆಚ್ಚು ಎತ್ತರವಿರುವ 8 ಪರ್ವತಗಳು ನೇಪಾಳದ ಹಿಮಾಲಯದಲ್ಲಿದೆ.
Watch Video
ವಿಶೇಷವಾಗಿ ಆ ಪರ್ವತಗಳೆಲ್ಲ ಹಿಮಾಲಯನ್ ವ್ಯಾಪ್ತಿಯಲ್ಲಿ ಬರುತ್ತದೆ. ನಾವು ಇಲ್ಲಿ ತಿಳಿಸುವ 10 ಪರ್ವತಗಳಲ್ಲಿ 8000 ಮೀಟರ್‌ಗೂ ಹೆಚ್ಚು ಎತ್ತರವಿರುವ 8 ಪರ್ವತಗಳು ನೇಪಾಳದ ಹಿಮಾಲಯದಲ್ಲಿದೆ.
10. ಮೌಂಟ್ ಅನ್ನಪೂರ್ಣ, ನೇಪಾಳ್.
Mt. Annapurna |
ಅನ್ನಪೂರ್ಣ ಪರ್ವತವು ಜಗತ್ತಿನ 10ನೇ ಅತಿ ಎತ್ತರದ ಪರ್ವತವಾಗಿದೆ. ಅನ್ನಪೂರ್ಣ ಶಿಖರಗಳು ಸರಣಿಯಾಗಿದ್ದು, ಅದರಲ್ಲಿ 8,091 ಮೀಟರ್ನಷ್ಟು ಎತ್ತರದೊಂದಿಗೆ ಅನ್ನಪೂರ್ಣ 1 ಎತ್ತರದ ಶಿಖರವಾಗಿದೆ. ಈ ಪರ್ವತಗಳ ಶ್ರೇಣಿಯಲ್ಲಿನ ಶಿಖರಗಳನ್ನು ಏರುವುದು ಅತ್ಯಂತ ಅಪಾಯಕಾರಿಯಾಗಿದೆ. ಇಲ್ಲಿ ಸಾವಿನ ಪ್ರಮಾಣವೂ 40%ನಷ್ಟು ಇದೆ. ಅನ್ನಪೂರ್ಣ ಪರ್ವತವು ಆರು ಪ್ರಮುಖ ಶಿಖರಗಳನ್ನು ಒಳಗೊಂಡಿದೆ. ಅವುಗಳೆಂದರೆ ಅನ್ನಪೂರ್ಣ 1, ಅನ್ನಪೂರ್ಣ 2, ಅನ್ನಪೂರ್ಣ 3, ಅನ್ನಪೂರ್ಣ 4, ಗಂಗಪೂರ್ಣ ಮತ್ತು ದಕ್ಷಿಣ ಅನ್ನಪೂರ್ಣ. ಮಾರಿಸ್ ಹರ್ಜೋಗ್ ಮತ್ತು ಲೂಯಿಸ್ ಲಾಚೆನಾಲ್ 3 ಜೂನ್ 1950ರಲ್ಲಿ ಮೊದಲ ಬಾರಿಗೆ ಈ ಪರ್ವತಗಳನ್ನು ಏರಿದ್ದರು.
9. ನಂಗಾ ಪರ್ಬತ್.
Nanga Parbat |
8. ಮೌಂಟ್ ಮನಸ್ಲು, ನೇಪಾಳ್.
ಮನಸ್ಲು ಪರ್ವತವು ಜಗತ್ತಿನ 8ನೇ ಅತಿ ಎತ್ತರದ ಪರ್ವತವಾಗಿದ್ದು, 8,164 ಮೀಟರ್ನಷ್ಟು ಎತ್ತರವಿದೆ. ಇದು ನೇಪಾಳದ ಪಶ್ಚಿಮ ಮಧ್ಯ ಭಾಗದಲ್ಲಿರುವ ಮನ್ಸಿರಿ ಹಿಮಾಲ್ನಲ್ಲಿದೆ. ಈ ಪರ್ವತದ ಹೆಸರಿನ ಅರ್ಥ "ಆತ್ಮದ ಪರ್ವತ" ಆಗಿದ್ದು, ಅದು "ಬುದ್ಧಿ" ಅಥವಾ "ಆತ್ಮ" ಎಂಬ ಅರ್ಥವಿರುವ "ಮಾನಸ" ಎಂಬ ಸಂಸ್ಕೃತ ಪದದಿಂದ ಬಂದಿದೆ. ಮನಸ್ಲು ಪರ್ವತವನ್ನು ಮೊದಲ ಬಾರಿಗೆ 9 ಮೇ 1956ರಂದು ಜಪಾನಿನ ದಂಡಯಾತ್ರೆಯ ಸದಸ್ಯರಾದ ತೋಶಿಯೋ ಇಮಾನಿಶಿ ಮತ್ತು ಗಯಾಲ್ಜೆನ್ ನಾರ್ಬು ಅವರು ಏರಿದರು. 8,000 ಮೀಟರ್ ಶಿಖರವನ್ನು ಏರಲು ನೋಡುತ್ತಿರುವವರು ಸಾಮಾನ್ಯವಾಗಿ ಆರಿಸಿಕೊಳ್ಳುವ ಮೊದಲ ಆಯ್ಕೆಗೆ ಪರ್ವತವಾಗಿದೆ.7. ಮೌಂಟ್ ಧೌಲಗಿರಿ, ನೇಪಾಳ್.
Mt. Dhaulagiri |
6. ಮೌಂಟ್ ಚೋ ಒಯು.
ಮೌಂಟ್ ಚೋ ಒಯು ಜಗತ್ತಿನ 6ನೇ ಅತಿ ಎತ್ತರದ ಪರ್ವತವಾಗಿದ್ದು, 8,201 ಮೀಟರ್ನಷ್ಟು ಎತ್ತರವಿದೆ. ಈ ಪರ್ವತವು ನೇಪಾಳ ಚೀನಾ ಗಡಿಯಲ್ಲಿದೆ. ಚೋ ಒಯು ಎಂದರೆ ಟಿಬೇಟಿಯನ್ ಭಾಷೆಯಲ್ಲಿ "ವೈಢೂರ್ಯ ದೇವತೆ" ಎಂಬ ಅರ್ಥವಾಗಿದೆ. ಚೋ ಒಯು ಅದರ ಸ್ಟೈಟ್ ಫಾರ್ವರ್ಡ್ ಮತ್ತು ಅಪಾಯ ಕಡಿಮೆ ಇರುವ ಕಾರಣ 8000 ಮೀಟರ್ ಶಿಖರಗಳಲ್ಲಿ ಹತ್ತಲು ಸುಲಭವಾದ ಶಿಖರವಾಗಿದೆ. ಈ ಪರ್ವತವನ್ನು 19 ಅಕ್ಟೋಬರ್ 1954ರಂದು ಆಸ್ಟ್ರೇಲಿಯಾದ ಜೋಸೆಫ್ ಜೋಚ್ಲರ್, ಇಟಲಿಯ ಹರ್ಬರ್ಟ್ ಟಿಚಿ ಮತ್ತು ನೇಪಾಳದ ಪಸಾಂಗ್ ದಾವಾ ಲಾಮ ಏರಿದರು.5. ಮೌಂಟ್ ಮಕಾಲು, ನೇಪಾಳ್.
Mt. Makalu |
8,481 ಮೀಟರ್ ಎತ್ತರವನ್ನು ಹೊಂದಿರುವ ಮಕಾಲು ಪರ್ವತವು ಜಗತ್ತಿನ 5ನೇ ಅತಿ ಎತ್ತರದ ಪರ್ವತವಾಗಿದೆ. ಇದು ನೇಪಾಳ ಮತ್ತು ಚೀನಾ ನಡುವಿನ ಗಡಿಯಲ್ಲಿ' ಎವರೆಸ್ಟ್ ಪರ್ವತದ ಸೌತ್ ಇಸ್ಟ್ ಕಡೆಗೆ 19 ಕಿಲೋಮೀಟರ್ ದೂರದಲ್ಲಿದೆ. ಮೌಂಟ್ ಮಕಾಲುವನ್ನು ಮೊದಲ ಸಲ 1954ರಲ್ಲಿ ಅಮೆರಿಕದ ವಿಲಿಯಮ್ ಸಿರಿ ತಂಡ ಏರಿತು.
4. ಮೌಂಟ್ ಲೋಟ್ಸೆ, ನೇಪಾಳ್.
Mt. Lhotse |
ಲೋಟ್ಸೆ ಪರ್ವತವು ಜಗತ್ತಿನ 4ನೇ ಅತಿ ಎತ್ತರದ ಪರ್ವತವಾಗಿದೆ. ಸಮುದ್ರ ಮಟ್ಟದಿಂದ 8,516 ಮೀಟರ್ ಎತ್ತರದಲ್ಲಿರುವ ಮುಖ್ಯ ಮೌಂಟ್ ಲೋಟ್ಸೆ ಪರ್ವತದ ಜೊತೆಗೆa ಲೋಟ್ಸೆ ಮಿಡಲ್(8,414ಮೀ), ಲೋಟ್ಸೆ ಶಾರ್(8,383ಮೀ) ಇದ್ದು, ಟಿಬೇಟ್ ಮತ್ತು ನೇಪಾಳದ ಖುಂಬು ಪ್ರದೇಶದ ಗಡಿಯಲ್ಲಿದೆ. ಈ ಪರ್ವತವನ್ನು ಮೊದಲ ಬಾರಿಗೆ 18 ಮೇ 1956ರಂದು ಮಿಸ್ಟರ್ ಫ್ರಿಟ್ಜ್ ಲುಚ್ಸಿಂಗರ್ ಮತ್ತು ಸ್ವಿಜರ್ಲೆಂಡ್ನ ಅರ್ನ್ಸ್ಟ್ ರೀಸ್ ಏರಿದರು. ಲೋಟ್ಸೆ ಪರ್ವತವು ಅತ್ಯಂತ ಕಷ್ಟಕರವಾದ ಏರಿಕೆಯಲ್ಲಿ ಒಂದಾದ ಪರ್ವತವಾಗಿದ್ದು, ಇದನ್ನು ವಿರಳವಾಗಿ ಪ್ರಯತ್ನಿಸಲಾಗಿದೆ.
3. ಮೌಂಟ್ ಕಾಂಗ್ಚೆಂಜುಂಗಾ.
8,586 ಮೀಟರ್ನಷ್ಟು ಎತ್ತರವಿರುವ ಕಾಂಗ್ಚೆಂಜುಂಗಾ ಪರ್ವತ ಜಗತ್ತಿನ 3ನೇ ಅತಿ ಎತ್ತರದ ಪರ್ವತವಾಗಿದೆ. ಇದು ನೇಪಾಳ ಮತ್ತು ಭಾರತದ ಗಡಿಯಲ್ಲಿ ನಿಂತಿದ್ದು, ಭಾರತದ ಅತ್ಯುನ್ನತ ಶಿಖರವಾಗಿದೆ. ಕಾಂಗ್ಚೆಂಜುಂಗಾ ಭೂಮಿಯ ಪೂರ್ವದ ಅತ್ಯಂತ ಎತ್ತರದ ಶಿಖರವಾಗಿದೆ. 25 ಮೇ 1955ರಂದು ಬ್ರಿಟಿಷ್ ದಂಡಯಾತ್ರೆಯ ತಂಡದ ಮಿಸ್ಟರ್ ಜೋ ಬ್ರೌನ್ ಮತ್ತು ಜಾರ್ಜ್ ಬ್ಯಾಂಡ್ ಈ ಶಿಖರವನ್ನು ಮೊದಲ ಬಾರಿಗೆ ಏರಿದರು.
2. ಮೌಂಟ್ ಕೆ2, ಪಾಕಿಸ್ತಾನ್.
Mt. K2 |
1. ಮೌಂಟ್ ಎವರೆಸ್ಟ್, ನೇಪಾಳ್.
Mt. Everest |
Don't forget to Comment Your Opinion on This Article
Share and Support Us
0 Comments