8 Facts about Africa | ಆಫ್ರಿಕಾದ ಮೇಲೆ 8 ಫ್ಯಾಕ್ಟ್ಸ್

ಆಫ್ರಿಕಾ ಒಂದು ಅದ್ಭುತವಾದ ಕಾಂಟಿನೆಂಟ್ ಆಗಿದೆ. ತನ್ನ ಪ್ರಾರಂಭದ ಮಾನವೀಯತೆಯ ಕಾಲದಿಂದಲೂ, ಈಗ ನೂರು ಕೋಟಿ ಜನ ಇರುವ ಜನಸಂಖ್ಯೆ ಇರುವ ಸಮಯದಲ್ಲೂ. ಇಲ್ಲಿ ನಮಗೆ ಮರುಭೂಮಿ, ಕಾಡು ಅಲ್ಲದೆ ಹಿಮನದಿಗಳು ಕೂಡ ನೋಡಲು ಸಿಗುತ್ತದೆ.


Watch Video


1. ಆಫ್ರಿಕಾ ಜಗತ್ತಿನ ಎರಡನೇ ದೊಡ್ಡ ಕಾಂಟಿನೆಂಟ್ ಆಗಿದೆ.


info mind, infomindkannada
Africa Map


     ಏಷ್ಯಾದ ನಂತರ ಆಫ್ರಿಕಾ 30 ಮಿಲಿಯನ್ ಕಿಮೀ ² ಏರಿಯಾದೊಂದಿಗೆ, ಎರಡನೇ ದೊಡ್ಡ ಕಾಂಟಿನೆಂಟ್ ಆಗಿದೆ. ಆಫ್ರಿಕಾ ಹಿಂದೂ ಮಹಾಸಾಗರದಿಂದ ಅಟ್ಲಾಂಟಿಕ್ ಮಹಾಸಾಗರ ವರೆಗೂ ವ್ಯಾಪಿಸಿದೆ ಮತ್ತು ಈಕ್ವೆಡಾರಿನ ಎರಡೂ ಬದಿಯಲ್ಲಿ ವ್ಯಾಪಿಸಿದೆ. ಆಫ್ರಿಕಾ ತುಂಬಾ ದೊಡ್ಡದಿರುವ ಕಾರಣ ಇಲ್ಲಿ ವಿವಿಧ ರೀತಿಯ ಹವಾಮಾನ ಪರಿಸ್ಥಿತಿ ಅನುಭವಿಸಬಹುದು. ದಟ್ಟವಾದ ಕಾಡಿನಿಂದ ಹಿಡಿದು ಬಿಸಿಲಿನಲ್ಲಿ ತುಂಬಿರುವ ಮರುಭೂಮಿಗಳು ಇಲ್ಲಿ ಕಾಣಸಿಗುತ್ತದೆ.


2. ಜಗತ್ತಿನ ಅತ್ಯಂತ ತಾಪವಿರುವ ಕಾಂಟಿನೆಂಟ್.

     ಆಫ್ರಿಕಾ ದೊಡ್ಡ ಕಾಂಟಿನೆಟ್ ಅಷ್ಟೇ ಅಲ್ಲ, ಜಗತ್ತಿನ ಅತ್ಯಂತ ತಾಪವಿರುವ ಕಾಂಟಿನೆಂಟ್ ಕೂಡವಾಗಿದೆ. ಜಗತ್ತಿನ ಅತ್ಯಂತ ದೊಡ್ಡ ಮರುಭೂಮಿಯದ ಸಹರಾ ಇಲ್ಲೇ ಇರುವುದು. ಆಫ್ರಿಕಾದ 60% ನಷ್ಟು ಮರುಭೂಮಿಯಲ್ಲಿ ವಾರ್ಷಿಕ ಮಳೆ ತುಂಬಾ ಕಡಿಮೆ ಇದೆ. ಆಫ್ರಿಕಾದ ಉತ್ತರದಲ್ಲಿರುವ ಈಜಿಪ್ಟ್, ಲಿಬಿಯಾ ಅಲ್ಜೀರಿಯಾ, ಮಾಲಿ, ಚಾಡ್, ಸೊಮಾಲಿಯಾ ಮತ್ತು ಸುಡಾನ್ ಅತ್ಯಂತ ಹೆಚ್ಚಿನ ತಾಪವನ್ನು ಹೊಂದಿದೆ. ಆದರೆ ಕೆಲವು ದಕ್ಷಿಣ ದೇಶಗಳಾದ ನಮೀಬಿಯಾ ಮತ್ತು ಬೋಟ್ಸ್ವಾನ ಹೆಚ್ಚಿನ ತಾಪವನ್ನು ಅನುಭವಿಸುತ್ತವೆ.


3. ಆಫ್ರಿಕಾ ಜಗತ್ತಿನ ದೊಡ್ಡ ನದಿಯ ಮನೆಯಾಗಿದೆ.


nail river in kannada, info mind, infomindkannada
Nile River, Africa


     ಹನ್ನೊಂದು ದೇಶಗಳಲ್ಲಿ ಒಟ್ಟು 6,650 ಕಿಲೋಮೀಟರ್ ಹರಿಯುವ ನೈಲ್ ನದಿಯು, ಆಫ್ರಿಕಾದ ದೊಡ್ಡ ನದಿಯಲ್ಲದೆ, ಜಗತ್ತಿನ ದೊಡ್ಡ ನದಿಯಾಗಿದೆ. ದಕ್ಷಿಣ ಭಾಗದಲ್ಲಿರುವ ಉಗಾಂಡದಿಂದ ಪ್ರಾರಂಭವಾಗಿ ಉತ್ತರದಲ್ಲಿರುವ ಈಜಿಪ್ಟಿನವರೆಗೂ ಈ ನದಿ ವ್ಯಾಪಿಸಿದೆ. ಈ ನದಿ ಎಷ್ಟು ಆಫ್ರಿಕಾದ ದೇಶಗಳಿಗೆ ಪ್ರಮುಖ ನೀರಿನ ಮೂಲವಾಗಿದೆ. ಇದರಲ್ಲಿ ಈಜಿಪ್ಟ್ ಮತ್ತು ಸುಡಾನ್ ದೇಶಗಳು ಕೂಡ ಬರುತ್ತವೆ.


4. ಎಷ್ಟೋ ಇನ್ಕ್ರೆಡಿಬಲ್ ಯೂನಿಕ್ ಪ್ರಾಣಿಗಳಿಗೆ ಮನೆಯಾಗಿದೆ.


african girraffe in kannada, info mind, infomindkannada
Africa Girraffe


    ಮರುಭೂಮಿ, ಪರ್ವತ ಮತ್ತು ಕಾಡುಗಳಿಂದ ಕೂಡಿರುವ ಆಫ್ರಿಕಾದಲ್ಲಿ ನಾವು ಎಷ್ಟೋ ಯೂನಿಕ್ ಪ್ರಾಣಿಗಳನ್ನು ನೋಡಬಹುದು. ಕೆಲವು ಪ್ರಾಣಿಗಳಾದ ಜಿರಾಫೆ, ಚಿಂಪಾಂಜಿ, ಗೊರಿಲ್ಲಾ ಮತ್ತು ಹಿಪ್ಪೋಪೊಟಮಸ್ ಬೇರೆ ಭಾಗದ ಪ್ರಾಣಿಗಳಿಗೆ ಹೋಲಿಸಿದರೆ ತುಂಬಾ ವೈವಿಧ್ಯವಾಗಿರುತ್ತದೆ. ನೀವು ಆಫ್ರಿಕಾಕ್ಕೆ ಒಮ್ಮೆ ಹೋದರೆ ಇಲ್ಲಿನ ಸಫಾರಿಯನ್ನು ಮಾಡುವುದನ್ನು ಮರೆಯಬಾರದು.


5. ಆಫ್ರಿಕಾ ನಾಗರಿಕತೆಯ ತೊಟ್ಟಿಲು ಎಂದು ಭಾವಿಸಲಾಗಿದೆ.


egypt in kannada, pyramids in kannada, info mind, infomindkannada
Egypt, Africa


     ಭೂಮಿಯ ಮೇಲಿನ ಅತ್ಯಂತ ಹಳೆಯ ಜನವಸತಿ ಮತ್ತು ನಾಗರಿಕತೆಯ ತೊಟ್ಟಿಲು ಎಂದು ಆಫ್ರಿಕಾವನ್ನು ಭಾವಿಸಲಾಗಿದೆ. ಜಗತ್ತಿನಾದ್ಯಂತ ಹರಡಿರುವ ಮಾನವೀಯತೆಯು ಇಲ್ಲಿಂದ ಪ್ರಾರಂಭವಾಗಿದ್ದು ಎಂದು ಹೇಳಲಾಗುತ್ತದೆ. ಪ್ರಾಚೀನ ಈಜಿಪ್ಟ್, ಶ್ರೀಮಂತ ಎಂಪೈರುಗಳಿಗೆ ಮನೆಯಾಗಿದ್ದ ಆಫ್ರಿಕಾದ ಪರಂಪರೆ ತುಂಬಾ ಶ್ರೀಮಂತ ಮತ್ತು ವಿಸ್ತಾರವಾಗಿದೆ.


6. ಆಫ್ರಿಕಾದ ಅಪಾಯಕಾರಿ ಪ್ರಾಣಿ ಹಿಪ್ಪೋಪೊಟಮಸ್.


hippopotamus in kannada, hippopotamus attack, info mind, infomindkannada
Hippopotamus


     ಆಫ್ರಿಕಾದ ಅಪಾಯಕಾರಿ ಪ್ರಾಣಿ ಬಗ್ಗೆ ನೀವು ಕೇಳಿದಾಗ ನೀವು ಸಿಂಹ ಅಥವಾ ಚಿರತೆ ಇರಬಹುದು ಎನ್ನಬಹುದು. ಆದರೆ ಇಲ್ಲಿನ ಅಪಾಯಕಾರಿ ಪ್ರಾಣಿ ಎಂದರೆ ಹಿಪ್ಪೋಪೊಟಮಸ್ ಆಗಿದೆ. ಹಿಪ್ಪೋಪೊಟಮಸ್ ಪ್ರತಿವರ್ಷ ಸಿಂಹ ಮತ್ತು ಮೊಸಳೆಗಳ ಸಂಯೋಜನೆಯಿಂದ ಹೆಚ್ಚಿನ ಜನರನ್ನು ಕೊಲ್ಲುತ್ತದೆ. ಪ್ರತಿ ವರ್ಷ ಈ ಪ್ರಾಣಿಯಿಂದಾಗಿ 500ಕೂ ಹೆಚ್ಚಿನ ಜನ ಸಾಯುತ್ತಾರೆ. ಗುಂಪಿನಲ್ಲಿರುವ ಈ ಪ್ರಾಣಿಗಳು ತಮಗೆ ಅಪಾಯವಿದೆ ಎಂದು ಗೊತ್ತಾದಲ್ಲಿ ಯಾವುದೇ ಪ್ರಾಣಿ ಅಥವಾ ಮನುಷ್ಯನದಲ್ಲಿಯು ಸಾಯಿಸುತ್ತದೆ.


7. ಆಫ್ರಿಕಾ, ಆಸ್ಟ್ರೇಲಿಯದಂತೆ ಪ್ರತ್ಯೇಕ ಭಾಗವಾಗಿಲ್ಲ.

     ನೀವು ಯೋಚಿಸುವುದಕ್ಕಿಂತ ಆಫ್ರಿಕಾ ಕಡಿಮೆ ಪ್ರತ್ಯೇಕವಾಗಿದೆ. ಆಫ್ರಿಕಾವನ್ನು ಇತರೆ ಭಾಗಗಳಿಂದ ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ. ಆದರೆ ಆಫ್ರಿಕಾ ಏಷ್ಯಾದೊಂದಿಗೆ ಸಂಪರ್ಕವನ್ನು ಹೊಂದಿದ್ದು ಮಾತ್ರವಲ್ಲದೆ ಕೆಲವು ಭಾಗದಲ್ಲಿ ಯುರೋಪ್ ಕೆಲವು ಕಿಲೋಮೀಟರ್ ದೂರದಲ್ಲಿದೆ. ಆಫ್ರಿಕಾದ ಗಿಬ್ರಾಲ್ಟರ್ ಎಂಬ ಜಾಗದಲ್ಲಿ ನಿಮಗೆ ಯುರೋಪ್ಗೆ ಕರೆದುಕೊಂಡು ಹೋಗಲು ದೋಣಿಗಳಿತ್ತವೆ.


8. ಆಫ್ರಿಕಾ ಒಂದು ವೈವಿಧ್ಯಮಯ ಕಾಂಟಿನೆಂಟ್ ಆಗಿದೆ.


     ಆಫ್ರಿಕಾ ದೊಡ್ಡದಿರುವ ಕಾರಣ ವೈವಿಧ್ಯಮಯವಾಗಿದೆ ಎಂದರೆ ಆಶ್ಚರ್ಯವಾಗುವುದಿಲ್ಲ. ವಿವಿಧ ರೀತಿಯ ಜನಾಂಗೀಯ ಮತ್ತು ಸಾಂಸ್ಕೃತಿಕ ಗುಂಪುಗಳು ಇರುವ ಇಲ್ಲಿ ಸಾವಿರಾರು ವಿವಿಧ ಭಾಷೆಗಳನ್ನು ಮಾತನಾಡಲಾಗುತ್ತದೆ. ಮರುಭೂಮಿ, ಕಾಡುಗಳು ಮತ್ತು ಪರ್ವತಗಳಿಂದ ಪ್ರತ್ಯೇಕಿಸಲ್ಪಟ್ಟ ಆಫ್ರಿಕಾದಲ್ಲಿ ತುಂಬಾ ವೈವಿಧ್ಯಮಯ ಕಾಣುತ್ತದೆ. ಯುರೋಪ್ ಜನಗಳಿಂದಾಗಿ ಕೆಲವು ಸಂಪ್ರದಾಯ ಕಳೆದುಹೋಗಿದ್ದರೂ, ಕೆಲವು ಪೂರ್ವಜರು ಅನುಸರಿಸುತ್ತಿರುವ ಪದ್ಧತಿಯಿಂದಾಗಿ ಇನ್ನೂ ಜೀವಂತವಾಗಿದೆ.

Bonus


# 54 ದೇಶ 10 ಟೆರಿಟರಿಯ ಮನೆಯಾಗಿದೆ.


Africa Middle Countries


     ತುಂಬಾ ದೊಡ್ಡ  ಏರಿಯಾದಲ್ಲಿ ವ್ಯಾಪಿಸಿರುವ ಆಫ್ರಿಕಾ 54 ದೇಶ ಮತ್ತು 10 ವಿವಿಧ ಟೆರಿಟರಿಯಿಂದ ಭಾಗವಾಗಿದೆ. ತುಂಬಾ ಪರ್ವತ, ಮರುಭೂಮಿ, ಮಂಜಿನ ಪರ್ವತವಿರುವ ಆಫ್ರಿಕಾ ಪ್ರವಾಸ ಮಾಡಲು ಸೂಕ್ತವಾಗಿದೆ. ಇಲ್ಲಿ ಪ್ರವಾಸ ಮಾಡಲು 'ಹೀಗೆ ಸರಿ' ಎಂದು ಹೇಳಲು ಸಾಧ್ಯವಿಲ್ಲ. ಕೇವಲ ಒಂದೇ ವಿಸಿಟಿನಲ್ಲಿ ನೀವು ಆಫ್ರಿಕಾದ ಎಲ್ಲಾ ಜಾಗವನ್ನು ನೋಡಲು ಸಾಧ್ಯವಿಲ್ಲ.

Don't forget to Comment Your Opinion on This Article

Share and Support Us

Info Mind

Post a Comment

0 Comments