ಉತ್ತರ ಕೊರಿಯಾ ಒಂದು ವಿಚಿತ್ರ ದೇಶ. ಅಂದರೆ, ಆ ದೇಶದ ಬಗ್ಗೆ ಅಷ್ಟು ಯಾರಿಗೂ ಗೊತ್ತಾಗುವುದಿಲ್ಲ. ಆ ದೇಶ ತನ್ನ ಮಾಹಿತಿಯನ್ನು ಯಾವ ದೇಶಕ್ಕೂ ಬಿಟ್ಟುಕೊಡುವುದಿಲ್ಲ.
ಆದರೂ ನಾವು ಈ ಆರ್ಟಿಕಲಿನಲ್ಲಿ, ಉತ್ತರ ಕೊರಿಯಾದಲ್ಲಿ ಮಾತ್ರ ಕಾಣುವ ಹತ್ತು ನಿಷೇಧಗಳ ಬಗ್ಗೆ ಹೇಳುತ್ತಿದ್ದೇವೆ. ಕೆಲವು ನಿಷೇಧ ಮತ್ತು ನಿರ್ಬಂಧಗಳನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು.
1. ನೀಲಿ ಜೀನ್ಸ್ ಧರಿಸುವುದು ನಿಷೇಧವಾಗಿದೆ.
No Blue Jenes
ನೀವು ಉತ್ತರ ಕೊರಿಯಾದಲ್ಲಿ ಜೀನ್ಸ್ ಖರೀದಿಸಿದರೆ ಅದು ನೀಲಿ ಬಣ್ಣದಲ್ಲಿ ಇರುವುದಿಲ್ಲ. ಒಂದು ವೇಳೆ ನೀವು ಪ್ರವಾಸಿಯಾಗಿ ಹೋಗಿದ್ದರೆ, ನಿಮಗೆ ಯಾರು ಅಲ್ಲಿ ಇದರ ಬಗ್ಗೆ ಏನೂ ಹೇಳುವುದಿಲ್ಲ ಆದರೆ ಕಿಮ್ ಜಾಂಗ್ ಇಲ್ ಸ್ಮಾರಕಕ್ಕೆ ಭೇಟಿ ನೀಡಿದಾಗ ನೀವು ನಿಮ್ಮ ಜೀನ್ಸ್ ಬದಲಿಸಬೇಕಾಗುತ್ತದೆ.
2. ವಿದೇಶಿಯರು ಸ್ಥಳೀಯ ಕರೆನ್ಸಿಯನ್ನು ಬಳಸಲಾಗುವುದಿಲ್ಲ.
North Korea Money
ಉತ್ತರ ಕೊರಿಯಾದಲ್ಲಿ ಸ್ಥಳೀಯ ಕರೆನ್ಸಿಯನ್ನು ಪ್ರವಾಸಿಗರು ಬಳಸಲು ಅವಕಾಶವಿಲ್ಲ. ಈ ದೇಶದ ಅಂಗಡಿಯಲ್ಲಿ ನೀವು ರೂಪಾಯಿ ಅಥವಾ ಡಾಲರ್ಗಳೊಂದಿಗೆ ಪಾವತಿಸಬಹುದು. ಕೆಲವು ಅಂಗಡಿಯನ್ನು ವಿದೇಶಿಯರು ಪ್ರವೇಶಿಸುವುದನ್ನು ಈ ದೇಶದಲ್ಲಿ ನಿಶೇಧಿಸಲಾಗಿದೆ.
3. ವರ್ಲ್ಡ್ ವೈಡ್ ವೆಬ್ ಮತ್ತು ವೈಫೈಗೆ ಪ್ರವೇಶವಿಲ್ಲ.
Kwag Miong Website
ಉತ್ತರ ಕೊರಿಯಾದಲ್ಲಿ ಅಂತಾರಾಷ್ಟ್ರೀಯ ವೆಬ್ ಸೈಟ್ ಗಳನ್ನು ನಿಷೇಧಿಸಲಾಗಿದೆ. ಈ ದೇಶದಲ್ಲೂ ಕಂಪ್ಯೂಟರ್ ಮತ್ತು ಇಂಟರ್ನೆಟ್ ಇದೆ. ಇಲ್ಲಿನ ಒಂದೇ ಒಂದು ಆಪರೇಟಿಂಗ್ ಸಿಸ್ಟಂ ಎಂದರೆ "ರೆಡ್ ಸ್ಟಾರ್" ಮತ್ತು ಗೂಗಲ್ ನಂತೆ ಏಕೈಕ ವೆಬ್ ಸೈಟ್ ಎಂದರೆ "ಕ್ವಾಂಗ್ ಮಿಯೊಂಗ್" ಆಗಿದೆ.
4. ಹಳೆ ದಿನಪತ್ರಿಕೆ ಗ್ರಂಥಾಲಯದಲ್ಲಿ ಸಿಗುವುದಿಲ್ಲ.
News Papers in Glass Box
ಉತ್ತರ ಕೊರಿಯಾದಲ್ಲಿ ನಿಮಗೆ ದಿನಪತ್ರಿಕೆಯನ್ನು ಖರೀದಿಸಲು ಸಾಧ್ಯವಿಲ್ಲ. ದಿನಪತ್ರಿಕೆಯನ್ನು ಸಾಮಾನ್ಯವಾಗಿ ಬೀದಿಗಳಲ್ಲಿ ಮತ್ತು ಸುರಂಗಮಾರ್ಗ ನಿಲ್ದಾಣದಲ್ಲಿ ವಿಶೇಷ ಸ್ಟ್ಯಾಂಡ್ ಗಳ ಒಳಗೆ ಹಾಕಿರುತ್ತಾರೆ. ಇದರಿಂದ ಯಾರೂ ದಿನಪತ್ರಿಕೆಯನ್ನು ಖರೀದಿಸಬೇಕೆಂದೇನಿಲ್ಲ. ಅದರಿಂದಾಗಿ ನಿಮಗೆ ಇಲ್ಲಿ ಹಳೆ ದಿನಪತ್ರಿಕೆ ಸಿಗುವುದಿಲ್ಲ.
5. ಸ್ಥಳೀಯ ಸಿಮ್ ಕಾರ್ಡ್ ಗಳೊಂದಿಗೆ ನೀವು ವಿದೇಶಕ್ಕೆ ಕರೆ ಮಾಡಲು ಸಾಧ್ಯವಿಲ್ಲ.
North Korea people using Phones
ಉತ್ತರ ಕೊರಿಯಾದಲ್ಲಿ ಸೆಲ್ ಫೋನ್ಗಳನ್ನು ಬಳಸುವುದು ವಿರಳವಾಗಿಲ್ಲ. ಆದರೆ, ಅಲ್ಲಿನ ಜನರು ದೇಶದೊಳಗೆ ಮಾತ್ರ ಕರೆ ಮಾಡಲು ಬಳಸಬೇಕು. ಯಾವುದೇ ಕಾರಣಕ್ಕೂ ಜನರು ವಿದೇಶಿಗರಿಗೆ ಕರೆ ಮಾಡುವಂತಿಲ್ಲ.
6. ಕೋಕಾ ಕೋಲಾ ನಿಷೇಧವಾಗಿದೆ.
ಉತ್ತರ ಕೊರಿಯಾದ ಅಂಗಡಿಗಳಲ್ಲಿ ಕೋಕಾ ಕೋಲಾ ಸಿಗುವುದಿಲ್ಲ. 2015ಕ್ಕೂ ಮೊದಲು ಜಗತ್ತಿನಲ್ಲಿ ಎರಡು ದೇಶ ಕೋಕಾ ಕೋಲಾವನ್ನು ನಿಷೇಧಿಸಿದ್ದವು. ಅವೆಂದರೆ, ಉತ್ತರ ಕೊರಿಯಾ ಮತ್ತು ಕ್ಯೂಬಾ. ಆದರೆ, ಈಗ ಕ್ಯೂಬಾದಲ್ಲಿ ಕೋಕಾ ಕೋಲಾ ಮಾರಾಟ ಮಾಡಲು ಅನುಮತಿ ನೀಡಿದ ನಂತರ, ಉತ್ತರ ಕೊರಿಯಾ ಜಗತ್ತಿನಲ್ಲಿ ಕೋಕಕೋಲಾ ನಿಷೇಧಿಸಿದ ದೇಶವಾಗಿದೆ .
7. ಕಾರು ಖರೀದಿಸುವುದು ಬಹುತೇಕ ಅಸಾಧ್ಯ.
Number Plate in Cycle
ಉತ್ತರ ಕೊರಿಯಾದಲ್ಲಿ ಕಾರು ಹೊಂದಿದ್ದವರು ಖಂಡಿತವಾಗಿ ಶ್ರೀಮಂತರು. ನಾವು ನಮ್ಮ ದೇಶದಲ್ಲಿ ಬೈಕು ಕಾರುಗಳಿಗೆ ನೇಮ್ ಪ್ಲೇಟ್ ಹಾಕಿರುವುದನ್ನು ನೋಡುತ್ತೇವೆ ಅದೇ ರೀತಿ ಈ ಉತ್ತರ ಕೊರಿಯಾದಲ್ಲಿ ಸೈಕಲ್ಲಿಗೆ ನೇಮ್ ಪ್ಲೇಟ್ ಹಾಕಿರುತ್ತಾರೆ.
8. ಅಂತಾರಾಷ್ಟ್ರೀಯ ಪ್ರಯಾಣ ಅಸಾಧ್ಯ.
Airport in North Korea
ಉತ್ತರ ಕೊರಿಯಾದ ನಾಗರಿಕರು ಅಂತಾರಾಷ್ಟ್ರೀಯ ಪ್ರಯಾಣ ಮಾಡುವುದನ್ನು ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೆ ಅವರು ದೇಶದೊಳಗಿನ ಪಟ್ಟಣವನ್ನು ಸುತ್ತಲೂ ಅನುಮತಿಯನ್ನು ಪಡೆಯಬೇಕು. ಇನ್ನು ಚೀನಾ ಅಥವಾ ರಷ್ಯಾಕ್ಕೆ ಅಲ್ಲಿನ ನಾಗರಿಕರು ಹೋಗಬಹುದು. ಆದರೆ, ವ್ಯಾಪಾರಕ್ಕೆ ಮಾತ್ರ.
9. ನಿರ್ದಿಷ್ಟ ಅನುಮತಿ ಇಲ್ಲದೆ ವಿದೇಶಿಯರು ಫೋಟೋ ತೆಗೆಯುವಂತಿಲ್ಲ ಅಥವಾ ಸ್ಥಳೀಯರೊಂದಿಗೆ ಮಾತನಾಡುವಂತಿಲ್ಲ.
North and South Korea Border
ಸಾಮಾನ್ಯವಾಗಿ ಇಲ್ಲಿನ ಸ್ಥಳೀಯರು ವಿದೇಶಿಗರ ಜೊತೆ ಸಂಭಾಷಣೆ ನಡೆಸಿದರೆ ಜೈಲಿಗೆ ಹಾಕುವುದಿಲ್ಲ. ಆದರೂ, ನೀವು ಇಲ್ಲಿನ ಜನರೊಂದಿಗೆ ಮಾತನಾಡಲು ಅಥವಾ ಫೋಟೋ ತೆಗೆದುಕೊಳ್ಳಲು ಹೋದರೆ ಜನರು ಓಡಿಹೋಗುತ್ತಾರೆ.
10. ಸೃಜನಶೀಲ ಕ್ಷೌರವನ್ನು ಪಡೆಯುವಂತಿಲ್ಲ.
Preferred Hair Cuts
ಉತ್ತರ ಕೊರಿಯಾದ ಸಲೊನ್ನಲ್ಲಿ ನೀವು ಹೇರ್ಕಟಿಗೆ ಹೋದಾಗ, ಶಿಫಾರಸು ಮಾಡಿದ ಹೇರ್ಕಟ್ ಚಿತ್ರಗಳನ್ನು ಕಾಣಬಹುದು. ಯಾರು ಕಿಮ್ ಜಾಂಗ್ ಉನ್ ರೀತಿ ಹೇರ್ ಕಟ್ ಮಾಡಿಸಿಕೊಳ್ಳುವಂತಿಲ್ಲ. ಆದರೂ ಅಲ್ಲಿನ ಹೆಚ್ಚಿನ ಪುರುಷರು ಕಿಮ್ ಜಾಂಗ್ ಉನ್ ರೀತಿಯ ಹೇರ್ಕಟ್ ಬಯಸುತ್ತಾರೆ.
By, Krishna Kn
Don't forget to Comment Your Opinion on This Article
0 Comments