8*3 ಎಂದರೆ ಏನು, 8*3 ಬಳಸಿ ಜೀವನದಲ್ಲಿ ನಿಮಗೆ ಸಮಯ ಸಾಲುತ್ತಿಲ್ಲವೆಂದರೆ. ಈ 8*3 ಸಮಯವಾಗಿದೆ. ಈ 8*3 ಮೇಲೆ ನೀವು ಈ ಹಿಂದೆಯೂ ಕೇಳಿರಬಹುದು. ಒಂದು ವೇಳೆ ಗೊತ್ತಿಲ್ಲವೆಂದರೆ ಈ ಆರ್ಟಿಕಲ್ ಓದಿ ತಿಳಿದುಕೊಳ್ಳುವಿರಿ.
ಜಗತ್ತಿನಲ್ಲಿ ಮನುಷ್ಯ ಎಷ್ಟೇ ಶ್ರೀಮಂತನಾಗಿದ್ದರೂ, ಎಷ್ಟೇ ಬಡವನಾಗಿದ್ದರೂ, ಎಲ್ಲರಿಗೂ ಸಮಾನವಾಗಿರುವುದು ಸಮಯ. ನಿಮ್ಮ ಹತ್ತಿರ ಎಷ್ಟೇ ಹಣವಿದ್ದರೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ಎಷ್ಟೊ ದೊಡ್ಡ ದೊಡ್ಡ ವ್ಯಕ್ತಿಗಳಿಗೂ ತಮ್ಮ ಜೀವನದಲ್ಲಿ ನಿಮಗೆಷ್ಟು ಸಮಯ ಇದೆಯೋ, ಅಷ್ಟೇ ಇದೆ. ಆದರೆ ಎಷ್ಟೋ ಜನ ಸಮಯ ಸಾಲುವುದಿಲ್ಲ ಎನ್ನುತ್ತಾರೆ. ಅಂಥವರು ಈ ಆರ್ಟಿಕಲ್ ಓದಿ, ಈ 8*3 ಮಾರ್ಗ ಅನುಸರಿಸಿದರೆ ತುಂಬಾ ಒಳ್ಳೆಯದು. 8*3 ಮಾರ್ಗವೆಂದರೆ ನಿಮಗೆ ಇರುವ ಇಪ್ಪತ್ತ್ನಾಲ್ಕು ಗಂಟೆಯನ್ನು ಎಂಟು ಗಂಟೆಯ ಮೂರು ಭಾಗ ಮಾಡುವುದು. ಇದರ ಅರ್ಥ 8+8+8= 24.
ಆದರೆ ಎಂಟು ಗಂಟೆಗಳ ಭಾಗ ಮಾಡುವುದರಿಂದ ಏನು ಪ್ರಯೋಜನ? ಇದರ ಪ್ರಯೋಜನವಿದೆ. ಒಬ್ಬ ಮನುಷ್ಯನಿಗೆ ಜೀವನದಲ್ಲಿ ಎಂಟು ಗಂಟೆ ನಿದ್ದೆ ಮಾಡಬೇಕು. ಹೀಗಾಗಿ ನಿಮ್ಮ ಈ 8*3 ಸೂತ್ರದಲ್ಲಿ ಮೊದಲ ಎಂಟು ಗಂಟೆ ನಿಮ್ಮ ನಿದ್ದೆಗೆ ಹೋಗುತ್ತದೆ. ನೀವು ದಿನ ಎಂಟು ಗಂಟೆ ನಿದ್ದೆ ಮಾಡಿದರೆ ನಿಮಗೆ ಸುಸ್ತಾಗುವುದು ಕಡಿಮೆ. ನಿಮ್ಮ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ಈ ಎಂಟು ಗಂಟೆಯ ನಿದ್ದೆ ನಿಮ್ಮ ಎರಡನೇ ಎಂಟು ಗಂಟೆಗೆ ಶಕ್ತಿ ನೀಡುತ್ತದೆ.
ನಿಮ್ಮ ಎರಡನೇ ಎಂಟು ಗಂಟೆಯನ್ನು ನಿಮ್ಮ ಕೆಲಸಕ್ಕೆ ನೀಡಿ. ಒಂದು ವೇಳೆ ನೀವು ವಿದ್ಯಾರ್ಥಿಯಾಗಿದ್ದರೆ ಓದಲು ನೀಡಿ. ಒಬ್ಬ ಮನುಷ್ಯ ಸಾಮಾನ್ಯವಾಗಿ ಪ್ರತಿ ದಿನ ಎಂಟು ಗಂಟೆ ದುಡಿಯುತ್ತಾನೆ. ಹೀಗಾಗಿ, ನಿಮ್ಮ ಎರಡನೇ ಎಂಟು ಗಂಟೆಯನ್ನು ಈ ಕೆಲಸಕ್ಕೆ ನೀಡಿ.
ಇನ್ನು ಕೊನೆಯ ಎಂಟು ಗಂಟೆಯನ್ನು ನಿಮ್ಮ ಮನರಂಜನೆ ಅಥವಾ ಇತರೆ ಕೆಲಸವಿದ್ದರೆ ಅದಕ್ಕೆ ನೀಡಿ. ಇದರಿಂದ ನೀವು ಸಂತೋಷದಿಂದಲು ಇರಬಹುದು. ನಿಮ್ಮ ಈ ಮನರಂಜನೆಯ ಎಂಟು ಗಂಟೆಯನ್ನು ನೀವು ಎರಡು ಭಾಗವನ್ನಾಗಿ ಮಾಡಬಹುದು. ಬೆಳಗ್ಗೆ ನಾಲ್ಕು ಗಂಟೆ, ಸಂಜೆಗೆ ನಾಲ್ಕು ಗಂಟೆ. ಆದರೆ ನೀವು ನಿಮ್ಮ ಕೆಲಸ ಮತ್ತು ನಿದ್ದೆಯ ಎಂಟು ಗಂಟೆಯನ್ನು ಭಾಗ ಮಾಡಲು ಸಾಧ್ಯವಿಲ್ಲ.
ಈ ಮೇಲೆ ಹೇಳಿದ 8*3 ಮಾರ್ಗವನ್ನು ಪಾಲಿಸಿದರೆ ನಿಮಗೆ ನಿದ್ದೆಯೂ ಚೆನ್ನಾಗಿ ಆಗುತ್ತದೆ. ನಿಮ್ಮ ಕೆಲಸವೂ ಮುಗಿಯುತ್ತದೆ. ನಿಮ್ಮ ಸಂತೋಷಕ್ಕೂ ಸಮಯ ಸಿಗುತ್ತದೆ.
Typed By,
Krishna Kn
Krishna Kn
Don't forget to Comment Your Opinion on This Article
Share and Support Us
0 Comments