Decrease Weight in One Week | ಒಂದೇ ವಾರದಲ್ಲಿ ತೂಕ ಇಳಿಸಿಕೊಳ್ಳಲು ಇದನ್ನು ಪಾಲಿಸಿ

ತೂಕವನ್ನು ಶೀಘ್ರವಾಗಿ ಇಳಿಸಬೇಕೆಂದು ನಿಮಗೆ ಇಚ್ಛೆ ಇದ್ದು. ಈ ಬಗ್ಗೆ ಪರಿಣತರಲ್ಲಿ ಕೇಳಿದರೆ ಅವರು ನೀಡುವ ಉತ್ತರವೆಂದರೆ, ಆಹಾರ ಕಡಿಮೆ ಮಾಡಿ, ವ್ಯಾಯಾಮ ಹೆಚ್ಚಿಸಿ ಎಂದು.

Watch Video


     ಅಷ್ಟೇ ಅಲ್ಲದೆ ಅಗತ್ಯವಾದ ಪರಿಣಾಮ ಪಡೆಯಬೇಕೆಂದರೆ, ನಿಮ್ಮ ಪ್ರಯತ್ನವನ್ನು ಸತತವಾಗಿ ಮತ್ತು ದೀರ್ಘಾವಧಿ ಮಾಡಬೇಕು ಎನ್ನುತ್ತಾರೆ. ಆದರೆ ಅವರು ಹೇಳಿದಷ್ಟು ಸುಲಭವಾಗಿ ತೂಕ ಅಗತ್ಯವಿದ್ದಷ್ಟು ಇಳಿಯುವುದಿಲ್ಲ. ತೂಕ ಶೀಘ್ರವಾಗಿ ಇಳಿಯಬೇಕೆಂದರೆ ಕೆಲವು ಸೂತ್ರಗಳನ್ನು ಪಾಲಿಸಬೇಕು. ಅವು ಇಲ್ಲಿದೆ.


1. ನೀರಿನ ಡಯಟ್




    ನೀರು ಕುಡಿಯುವುದನ್ನು ಹೆಚ್ಚು ರೂಢಿಸಿಕೊಳ್ಳಿ. ಇದು ದೇಹವನ್ನು ಶುದ್ಧಗೊಳಿಸುವುದರೊಂದಿಗೆ, ದೇಹದಲ್ಲಿ ಅಲ್ಲಲ್ಲಿ ಸೇರಿಕೊಂಡ ಬೊಜ್ಜನ್ನು ಕಿತ್ತೊಗೆಯುತ್ತದೆ. ಹೊಟ್ಟೆ ಸುತ್ತ ತುಂಬಿಕೊಂಡ ಬೊಜ್ಜನ್ನು ನಿವಾರಿಸುತ್ತದೆ.


2. ದಿನಕ್ಕೆ ಎರಡು ಬಾರಿ ಮಾತ್ರ ಊಟವಿರಲಿ.




    ಡಯಟ್ ಮಾಡುತ್ತಿದ್ದೀರ ಎಂದರೆ ಸಂಪೂರ್ಣ ಊಟ ಬಿಟ್ಟು ಕೊಡಬೇಕೆಂದೇನಿಲ್ಲ. ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ನೀಡಲೇಬೇಕು. ದಿನದಲ್ಲಿ ಒಂದು ಗ್ಲಾಸ್ ಹಾಲು, ಧಾನ್ಯಗಳು, ಮೊಟ್ಟೆ ಮತ್ತು ಫೈಬರ್ ಇರುವ ತರಕಾರಿಗಳು ನಿಮ್ಮ ಆಹಾರದಲ್ಲಿರಲಿ.


3. ಹಸಿವಾದಾಗಲೆಲ್ಲಾ ಗ್ರೀನ್ ಟೀ ಕುಡಿಯಿರಿ ಅಥವಾ ತರಕಾರಿ ತಿನ್ನಿ.




     ನೀವು ಊಟದ ಪ್ರಮಾಣದಲ್ಲಿ ಕಡಿಮೆ ಮಾಡುವುದರಿಂದ ಹಸಿವಾಗುವುದು ಸಹಜ. ಆ ಸಮಯದಲ್ಲಿ ತರಕಾರಿ ಸಾಲಡ್ ಅಥವಾ ಗ್ರೀನ್ ಟೀ ಕುಡಿಯಬೇಕು. ಇದು ಬೊಜ್ಜನ್ನು ಕರಗಿಸುವುದರೊಂದಿಗೆ ಚರ್ಮವನ್ನು ಸುಂದರವಾಗಿಸುತ್ತದೆ.


4. ಗ್ಯಾಸ್ ಉಂಟು ಮಾಡುವ ಆಹಾರವನ್ನು ತ್ಯಜಿಸಿ.






      ಆಲೂಗಡ್ಡೆ, ಹೂಕೋಸು, ಎಲೆಕೋಸು, ಜೋಳ ಹೊಟ್ಟೆಯಲ್ಲಿ ಗ್ಯಾಸ್ ಉಂಟು ಮಾಡುವ ಇಂತಹ ತರಕಾರಿ ಸೇವನೆಯನ್ನು ತ್ಯಜಿಸಿ. ಇದರ ಸೇವನೆಯಿಂದ ಹೊಟ್ಟೆ ಊದಿಕೊಂಡತಾಗುತ್ತದೆ.


5. ನಿರ್ದಿಷ್ಟ ಸಮಯ ಪಾಲಿಸಿ.




    ಊಟವನ್ನು ನಿಗದಿತ ಸಮಯದಲ್ಲೇ ಮಾಡಿ ಮುಗಿಸಲು ಪ್ರಯತ್ನಿಸಿ. ಹೊತ್ತಿಲ್ಲದ ಹೊತ್ತಿನಲ್ಲಿ ತಿಂಡಿ, ಊಟ ಬೇಡ. ಇಲ್ಲದಿದ್ದರೆ ಜೀರ್ಣಕ್ರಿಯೆ ವ್ಯತ್ಯಾಸಗೊಂಡು ದೇಹದಲ್ಲಿ ಅನಗತ್ಯ ಬೊಜ್ಜು ತುಂಬಿಕೊಳ್ಳುವಂತೆ ಮಾಡುತ್ತದೆ.


6. ನಡಿಗೆ, ಜಾಗಿಂಗ್ ವ್ಯಾಯಾಮ ಇರಲಿ.




     ಈ ಮೇಲೆ ಹೇಳಿರುವ ಎಲ್ಲಾ ಸಂಗತಿಯನ್ನು ಅನುಸರಿಸಿ. ಇದರೊಂದಿಗೆ ನಡಿಗೆ, ಜಾಗಿಂಗ್, ಮನೆ ಕೆಲಸಗಳು, ವ್ಯಾಯಾಮ ನಿಮ್ಮ ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ.

Don't forget to Comment Your Opinion on This Article

Share and Support Us

Info Mind

Post a Comment

0 Comments