How to Achieve Success in Life | ಗೆಲುವು ಎಂದರೇನು? ಅದನ್ನು ಪಡೆಯುವುದು ಹೇಗೆ

ಈ ಜಗತ್ತಿನಲ್ಲಿ ಎಲ್ಲರಿಗೂ ಬೇಕಾಗಿರುವುದು ಗೆಲುವು. "ನಾನು ಗೆಲ್ಲಬೇಕು" ಎಂಬುದೇ ಅವರ ಧ್ಯೇಯವಾಗಿರುತ್ತದೆ.


Watch Video


ಆದರೆ, ಎಷ್ಟೋ ಜನಗಳಿಗೆ ನಾವು ಯಾವುದರಲ್ಲಿ ಗೆಲ್ಲಬೇಕು ಎಂಬುದು ಸ್ಪಷ್ಟ ಇರುವುದಿಲ್ಲ. ಅಂತಹ ಜನರಲ್ಲಿ ನೀವು ಯಾವುದರಲ್ಲಿ ಸಾಧಿಸುತ್ತೀರಿ ಎಂದು ಕೇಳಿದ್ದಾರೆ, ಅವರ ಉತ್ತರ ಏನು ಇರುವುದಿಲ್ಲ. ಹೀಗಾಗಿ ನಾವು ಇಂದು ಗೆಲುವಿನ ಮೇಲೆ ಈ ಆರ್ಟಿಕಲ್ ನಲ್ಲಿ ತಿಳಿಸುತ್ತಿದ್ದೇವೆ.


option in success in kannada, info mind, infomindkannada
Options in Success


1. ಗೆಲುವು ಎಂದರೇನು?


     ನಾವು ಅಂದುಕೊಂಡಿದ್ದನ್ನು ಸಾಧಿಸುವುದೇ ಗೆಲುವು. ಇಲ್ಲಿ 'ಅಂದುಕೊಂಡಿದ್ದನ್ನು' ಎಂದು ಹೇಳಿದೆವಲ್ಲ, ಅದರಲ್ಲಿ ಯಶಸ್ಸು ಸಿಗುವುದೇ ಗೆಲುವು. ಹೀಗಾಗಿ ನೀವು ಗೆಲ್ಲಬೇಕೆಂದು ಬಯಸಿದ್ದರೆ ಮೊದಲಿಗೆ ಮುಖ್ಯವಾಗುವುದು ಯಾವುದರಲ್ಲಿ ಗೆಲ್ಲಬೇಕೆಂದು ತೀರ್ಮಾನಿಸುವುದು. ಇದನ್ನು ತೀರ್ಮಾನಿಸುವುದು ತುಂಬಾ ಸುಲಭ ನಿಮಗೆ ಯಾವುದರಲ್ಲಿ ತುಂಬಾ ಆಸಕ್ತಿ ಇರುತ್ತದೆಯೋ ಅದರಲ್ಲಿ ಗೆಲುವು ಸಾಧಿಸಲು ಪ್ರಯತ್ನಿಸಿ.


2. ಗೆಲುವು ಸಾಧಿಸುವುದು ಹೇಗೆ?


how to achieve our goals in kannada, info mind, infomindkannada
How to Achieve Our Goals


     ಯಾವುದರಲ್ಲಿ ಗೆಲುವು ಸಾಧಿಸಬೇಕು ಎಂದು ತೀರ್ಮಾನಿಸಿದ ನಂತರ ನಿಮಗೆ ಬರುವ ಪ್ರಶ್ನೆಯೇ, ಅದನ್ನು ಹೇಗೆ ಸಾಧಿಸುವುದು. ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್ ಹೇಳಿದ ಮಾತು ಇದು, " ಗೆಲುವನ್ನು ಹವ್ಯಾಸವನ್ನಾಗಿ ಮಾಡಿಕೊಳ್ಳಿ, ಗೆಲುವನ್ನು ರೂಢಿಯನ್ನಾಗಿ ಮಾಡಿಕೊಳ್ಳಿ, ಅವಳನ್ನು ಸದಾ ಒಲಿಸಿಕೊಳ್ಳಿ". ಇದನ್ನು ಕೇಳಿದ ಬಳಿಕ ಗೆಲುವು ಗರ್ಲ್ ಫ್ರೆಂಡ್ ಇದ್ದ ಹಾಗೆ ಎಂದು ಅನಿಸುತ್ತದೆ. ಅವಳನ್ನು ರಮಿಸಬೇಕು, ಆಕರ್ಷಿಸಬೇಕು, ನಿಮ್ಮ ಸಮಯವನ್ನು ಅವಳಿಗೆ ನೀಡಬೇಕು. ಬೇರೆಡೆ ಗಮನ ಹೋದಂತೆ ನಿಮ್ಮ ಗೆಲುವನ್ನು ತೆಗೆದುಕೊಂಡು ಹೋಗುವವರು ತುಂಬಾ ಜನ ಇರುತ್ತಾರೆ.


     ಸಚಿನ್ ತೆಂಡೂಲ್ಕರ್ ಹೇಳುತ್ತಾರೆ, ಅವರು ಒಂದು ಪಂದ್ಯದಲ್ಲಿ ಸೆಂಚುರಿ ಹೊಡೆದಾಗ, ಟಿವಿಯಲ್ಲಿ ದಿನವಿಡಿ ಅವರನ್ನು ತೋರಿಸುತ್ತಿದ್ದರು, ಪತ್ರಿಕೆಯಲ್ಲಿ ರಾರಾಜಿಸುತ್ತಿದ್ದರೂ, ಅಭಿಮಾನಿಗಳು ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡುತ್ತಿದ್ದರು. ಅದು ಆ ದಿನಕ್ಕೆ ಮಾತ್ರ, ಮುಂದಿನ ಪಂದ್ಯದಲ್ಲಿ ಸೆಂಚುರಿ ಹೊಡೆಯಲ್ಲಿಲವೆಂದರೆ, ಇದರ ಕಂಪ್ಲೇಂಟ್ ಆಪೋಸಿಟ್ ಆಗುತ್ತಿತ್ತಂತೆ. ಸಚಿನ್ ಅವರು ಮೊದಲ ಬಾರಿಗೆ ಸೆಂಚುರಿ ಹೊಡೆದಾಗ ಜನರು ಅದು ಕೇವಲ ಅವರ ಅದೃಷ್ಟವೆಂದಿದರಂತೆ.


amithab bacchan in kannada, rajanikanth in kannada, info mind, infomindkannada
Amithab Bachan, Rajanikanth


     ಈಗ ಫಿಲಂಗೆ ಹೋಗೋಣ, ಯಾವುದೇ ಸಿನಿಮಾ ನಟರನ್ನು ತೆಗೆದುಕೊಳ್ಳಿ. ಅವರ ಫಿಲ್ಮ್ ಎಷ್ಟು ಹಿಟ್ ಆಗುತ್ತದೆಯೋ, ಅಷ್ಟು ದಿನ ಅವರಿಗೆ "ಸ್ಟಾರ್" ಪಟ್ಟ ಕಟ್ಟಿರುತ್ತಾರೆ. ಅಮಿತಾಬ್ ಬಚ್ಚನ್, ರಜನೀಕಾಂತ್ ಇವರೆಲ್ಲ ಇಂದಿಗೂ ಹೀರೋಗಳೇ.


     ಒಮ್ಮೆ ರಿಲಯನ್ಸ್ ಕಂಪನಿ ಫೌಂಡರ್ ಆದ ಧೀರೂಭಾಯಿ ಅಂಬಾನಿ ಹೇಳಿದರು, "ಶ್ರೀಮಂತರಾಗುವುದು ದೊಡ್ಡ ಕೆಲಸವಲ್ಲ, ಯಾರು ಬೇಕಾದರೂ ಶ್ರೀಮಂತರಾಗಬಹುದು, ಆದರೆ ಶ್ರೀಮಂತಿಕೆ ಉಳಿಸಿಕೊಳ್ಳುವುದು ಕಷ್ಟ". ಒಮ್ಮೆ ಶ್ರೀಮಂತರಾದವರು ಯಾವಾಗಲೂ ಶ್ರೀಮಂತನಾಗುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ.


vines lombardi in kannada, info mind, infomindkannada
Vines Lombardi


     ಅಮೆರಿಕದ ಪ್ರಸಿದ್ಧ ಫುಟ್ಬಾಲ್ ಆಟಗಾರ ವಿನ್ಸ್ ಲೊಂಬಾರ್ಡಿ ಹೇಳಿದ ಮಾತು, "ಗೆಲುವು ಸಾಧಿಸಿದ ಮತ್ತು ಸಾಧಿಸದೇ ಇರುವ ವ್ಯಕ್ತಿಗಳಲ್ಲಿರುವ ವ್ಯತ್ಯಾಸವೆಂದರೆ ಅವರ ಶಕ್ತಿ ಮತ್ತು ಜ್ಞಾನದ ಕೊರತೆ ಅಲ್ಲ. ಅವರು ಪ್ರಾಕ್ಟೀಸನ್ನು ನಿರ್ಲಕ್ಷಿಸಿದ ಕೊರತೆಯ ಕಾರಣ". ಗೆಲುವು ಪಡೆಯಲು ಪ್ರಾಕ್ಟೀಸ್ ತುಂಬಾ ಮುಖ್ಯ. ಗೆಲುವಿಗೆ ಯಾವುದೇ ಶಾರ್ಟ್ ಕಟ್ ಇಲ್ಲ. "ಕೇವಲ ಪ್ರ್ಯಾಕ್ಟೀಸ್ ನಿಮ್ಮನ್ನು ಪರ್ಫೆಕ್ಟ್ ಮಾಡುವುದಿಲ್ಲ, ಪರ್ಫೆಕ್ಟ್ ಪ್ರ್ಯಾಕ್ಟೀಸ್ ನಿಮ್ಮನ್ನು ಪರ್ಫೆಕ್ಟ್ ಆಗಿ ಮಾಡುತ್ತದೆ" ಎಂದು ಲೊಂಬಾರ್ಡಿಯೇ ಹೇಳಿದ್ದರು.

     ಗೆಲುವನ್ನು ಸಾಧಿಸುವುದು ಹೇಗೆಂದು ಒಬ್ಬ ಪೈಲಟಿಗೆ ಹೋಲಿಸಿ ನೋಡೋಣ. ಒಬ್ಬ ಪೈಲಟ್ ಅದವನ್ನು ಏರೋಪ್ಲೇನನ್ನು ಹಾರಿಸುವಾಗ, ಸಣ್ಣಪುಟ್ಟ ಪ್ರಮಾಣದಲ್ಲಿ ಏಸುಗುವಂತಿಲ್ಲ. ಅವನ ಚಿಕ್ಕಪುಟ್ಟ ತಪ್ಪಿನಿಂದ, ಆ ಏರೋಪ್ಲೇನಲ್ಲಿದ್ದ ಎಲ್ಲರೂ ಅನುಭವಿಸಬೇಕಾಗುತ್ತದೆ. ಗೆಲ್ಲುವಲ್ಲೂ ಅಷ್ಟೇ ನಾವು ಎಚ್ಚರ ತಪ್ಪುವಂತಿಲ್ಲ, ಅದು ನಮ್ಮ ಸಾಧನೆಯಾಗಬೇಕು.


bescom lineman in kannada
Line man


     ಬೆಸ್ಕಾಂನಲ್ಲಿ ಕೆಲಸ ಮಾಡುವ ಲೈನ್‌ಮ್ಯನ್, ನಮ್ಮ ಮನೆಗಳಿಗೆ ವರ್ಷದ 350 ದಿನ ಕರೆಂಟ್ ಪೂರೈಸುತ್ತಾರೆ. ಇನ್ನುಳಿದ 15 ದಿವಸ ಏನೋ ತೊಂದರೆಯಿಂದಾಗಿ ವ್ಯತ್ಯಯವಾಗುತ್ತದೆ. ಜನರು ಅವರಿಗೆ ಬಾಯಿಗೆ ಬಂದಂತೆ ಬಯ್ಯುತ್ತಾರೆ. ಇಲ್ಲಿ ಯಾರೂ ಕೂಡ 350 ದಿನ ಕರೆಂಟ್ ಪೂರೈಸುವುದನ್ನು ನೋಡುವುದಿಲ್ಲ. 15 ದಿನವಾಗಿದ್ದ ಚಿಕ್ಕಪುಟ್ಟ ತೊಂದರೆಯನ್ನು ದೊಡ್ಡದಾಗಿ ಮಾಡುತ್ತಾರೆ. ಗೆಲುವು ಅಷ್ಟೇ, ನಾವು ವರ್ಷವಿಡೀ ಗೆಲ್ಲಬೇಕು. 15 ಸಲ ಸೋತರೆ, 350 ಸಲ ಗೆದ್ದಿದ್ದಕ್ಕಿಂತ ಅದೇ ದೊಡ್ಡದಾಗುತ್ತದೆ. 350 ಸಲ ಗೆದ್ದವನು 'ಸೋತ' ಎಂದು ಜನ ಮಾತನಾಡಿಕೊಳ್ಳುತ್ತಾರೆ.


"ಸಾವಿರ ಪಟ್ಟನ್ನು ಕರಗತ ಮಾಡಿಕೊಳ್ಳುವ ಬದಲು, ಒಂದೇ ಪಟ್ಟನ್ನು ಸಾವಿರ ಸಲ ಹೊಡೆದು ಕರಗತ ಮಾಡಿಕೊಳ್ಳುವುದೇ ಬುದ್ಧಿವಂತಿಕೆ, ಇದೆ ಗೆಲುವು".

ಗೆಲುವು ಕೈ ಹಿಡಿಯಲಿ, ನಿರಂತರ ಗೆಲುವು ನಿಮ್ಮದಾಗಲಿ.

Typed By,
                  Krishna Kn 

Don't forget to Comment Your Opinion on This Article

Share and Support Us

Info Mind

Post a Comment

0 Comments