20ನೇ ಶತಮಾನದ ವಿಶ್ವ ನಾಯಕರಲ್ಲಿ ಆಡಲ್ಪ್ ಹಿಟ್ಲರ್ ಕುಖ್ಯಾತ. ನಾಜಿ ಪಾರ್ಟಿಯ ಸಂಸ್ಥಾಪಕರಾದ ಹಿಟ್ಲರ್, ಎರಡನೇ ವಿಶ್ವ ಯುದ್ಧವನ್ನು ಪ್ರಾರಂಭಿಸಿದ್ದವರು. ಯುದ್ಧ ಕ್ಷೀಣಿಸುತ್ತಿರುವ ದಿನಗಳಲ್ಲಿ ತನ್ನನ್ನು ತಾನೇ ಕೊಂದುಕೊಂಡರು. ಹಿಟ್ಲರಿನ ಐತಿಹಾಸಿಕ ಪರಂಪರೆ ಈಗ ಇಪ್ಪತ್ತೊಂದನೆ ಶತಮಾನದಲ್ಲಿ ಪ್ರತಿಧ್ವನಿಸುತ್ತಿದೆ.
ರಾಷ್ಟ್ರೀಯತೆಯು ಯುರೋಪಿನ ಸುತ್ತ ಸುತ್ತುತ್ತಿದ್ದಂತೆ, ಆಸ್ಟ್ರಿಯದಲ್ಲಿದ್ದ ಯುವಕರನ್ನು ಮಿಲಿಟರಿಗೆ ಸೇರುವಂತೆ ಒತ್ತಾಯಿಸಲಾಯಿತು. ಆಸ್ಟ್ರಿಯಾದಲ್ಲೇ ಇದ್ದ ಹಿಟ್ಲರ್ ಮಿಲಿಟರಿಗೆ ಸೇರಿಕೊಳ್ಳುವುದರಿಂದ ತಪ್ಪಿಸಿಕೊಳ್ಳಲು ಮೇ 1913ಕ್ಕೆ ಜರ್ಮನಿಗೆ ಹೋದರು. ಆದರೆ, ಮುಂದೆ ಹಿಟ್ಲರ್ ಸ್ವಯಂ ಪ್ರೇರಿತರಾಗಿ ಜರ್ಮನಿ ಮಿಲಿಟರಿ ಸೇರಿಕೊಂಡರು. ಯುದ್ಧದ ಸಮಯದಲ್ಲಿ ಹಿಟ್ಲರಿಗೆ ಎರಡು ಪ್ರಮುಖ ಗಾಯವಾಯಿತು. ಒಂದು ಅಕ್ಟೋಬರ್ 1916ರಲ್ಲಿ ನಡೆದ 'ಸೋಮೇ' ಕದನದಲ್ಲಿ, ಇನ್ನೊಂದು ಅಕ್ಟೋಬರ್ 1918ರಂದು ಬ್ರಿಟಿಷರ 'ಸಾಸಿವೆ ಅನಿಲ ದಾಳಿ'ಯಿಂದ ಹಿಟ್ಲರ್ ತಾತ್ಕಾಲಿಕವಾಗಿ ಕುರುಡನಾಗಲು ಕಾರಣವಾಯಿತು.
ತನ್ನ ಪ್ರಾದೇಶಿಕ ಲಾಭ ಮತ್ತು ಜಪಾನ್ನೊಂದಿಗೆ ಇದ್ದ ಹೊಸ ಮೈತ್ರಿ ಹಿಟ್ಲರಿಗೆ ಧೈರ್ಯ ನೀಡಿತ್ತು. ಆತ 1 ಸೆಪ್ಟೆಂಬರ್ 1938ರಲ್ಲಿ, ಪೋಲೆಂಡಿನ ಪಶ್ಚಿಮ ಭಾಗವನ್ನು ಆಕ್ರಮಿಸಿದನು. ಎರಡು ದಿನಗಳ ನಂತರ ಪೋಲೆಂಡನು ರಕ್ಷಿಸುವುದಾಗಿ ವಾಗ್ದಾನ ಮಾಡಿದ್ದ ಬ್ರಿಟನ್ ಮತ್ತು ಫ್ರೆಂಚ್ ಜರ್ಮನಿಯ ವಿರುದ್ಧ ಯುದ್ಧ ಘೋಷಿಸಿತ್ತು. ಸೋವಿಯತ್ ಒಕ್ಕೂಟವು ಹಿಟ್ಲರ್ನೊಂದಿಗೆ ರಹಸ್ಯವಾದ ಹಿಂಸಾತ್ಮಕ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ನಾಜಿ ಪಾರ್ಟಿ ಪೂರ್ವ ಪೋಲೆಂಡನ್ನು ಆಕ್ರಮಿಸಿತ್ತು. ಇಲ್ಲಿಗೆ ಎರಡನೇ ವಿಶ್ವಯುದ್ಧ ಪ್ರಾರಂಭವಾಯಿತು.
Watch Video
1. ಹಿಟ್ಲರ್ ಮೊದಲನೇ ವಿಶ್ವಯುದ್ಧದಲ್ಲಿ ಸೈನಿಕರಾಗಿದ್ದರು.
2. ರಾಜಕೀಯ ಬೇರುಗಳು.
![]() |
Nazi Party |
ಮೊದಲನೇ ವಿಶ್ವದಲ್ಲಿ ವರ್ಸಲಿಸ್ ಒಪ್ಪಂದದಿಂದ ಜರ್ಮನಿ ಶರಣಾಗತಿಯಾಗಿತ್ತು. ವರ್ಸಲಿಸ್ ಒಪ್ಪಂದದಲ್ಲಿ ಇದ್ದ ಕಠಿಣ ದಂಡದ ಮೇಲೆ ಹಿಟ್ಲರ್ ಕೋಪಗೊಂಡಿದ್ದರು. ಮುನಿಚಿಗೆ ಹಿಂತಿರುಗಿದ ಅವರು 'ಜರ್ಮನ್ ವರ್ಕರ್ಸ್ ಪಾರ್ಟಿ' ಎಂಬ ರಾಜಕೀಯ ಪಾರ್ಟಿಗೆ ಸೇರಿಕೊಂಡರು. ಸೇರಿ ಸ್ವಲ್ಪ ಕಾಲದ ನಂತರ ಹಿಟ್ಲರ್ ಆ ಪಕ್ಷದ ನಾಯಕರಾದರು. ಹಿಟ್ಲರ್ ಜರ್ಮನ್ ವರ್ಕಸ್ ಪಾರ್ಟಿಯನ್ನು "ನ್ಯಾಷನಲ್ ಸೋಷಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿ" ಎಂದು ಬದಲಾಯಿಸಿದರು. ಅದೇ "ನಾಜಿ ಪಾರ್ಟಿ" ಎಂದು ಕರೆಯಲಾಗುತ್ತದೆ.
3. ಪ್ರಯತ್ನಿಸಿದ ದಂಗೆ.
1922 ಇಟಲಿಯಲ್ಲಿ ಬೆನಿಟೊ ಮುಸಲೋನಿಯ ಅಧಿಕಾರವನ್ನು ವಶಪಡಿಸಿಕೊಂಡ ಯಶಸ್ಸಿನಿಂದ ಪ್ರೇರೇಪಿತರಾಗಿದ್ದ ಹಿಟ್ಲರ್ ಮತ್ತು ಇತರೆ ನಾಜಿ ನಾಯಕರು. ಮುನಿಚ್ ಬಿಯರ್ ಹಾಲಿನಲ್ಲಿ ತಮ್ಮದೇ ಆದ ದಂಗೆಯನ್ನು ರೂಪಿಸಿದರು. 1923 ನವೆಂಬರ್ 8 ಮತ್ತು 9ರ ರಾತ್ರಿಯಲ್ಲಿ ಹಿಟ್ಲರ್ ಮತ್ತು ಅವನ ನಾಜಿ ಪಾರ್ಟಿಯವರು, ಪ್ರಾದೇಶಿಕ ಪಕ್ಷ ಉರುಳಿಸಲು ಪ್ರಯತ್ನಪಟ್ಟರು. ಈ ಮೆರವಣಿಗೆಯಲ್ಲಿ ಭಾಗವಾಗಿದ್ದ ನಾಜಿ ಜನಗಳಲ್ಲಿ ಪೊಲೀಸರು 16 ಜನರನ್ನು ಗುಂಡಿಕ್ಕಿ ಕೊಂದರು. ಹಿಟ್ಲರ್ ಅಲ್ಲಿಂದ ಪಾರಾಗಿದ್ದ, ಎರಡು ದಿನದ ನಂತರ ಅವರನ್ನು ಅರೆಸ್ಟ್ ಮಾಡಿ ಒಂಬತ್ತು ತಿಂಗಳ ಜೈಲಿನ ವಾಸದ ನಂತರ ಬಿಟ್ಟರು.
4. ಅಧಿಕಾರ ವಶಪಡಿಸಿಕೊಂಡ ನಾಜಿಗಳು.
![]() |
Election Winned by Hitler |
ಹಿಟ್ಲರ್ ಜೈಲಿನಲ್ಲಿದ್ದಾಗಲೂ ನಾಜಿ ಪಕ್ಷವು ಸ್ಥಳೀಯ ಮತ್ತು ರಾಷ್ಟ್ರೀಯ ಚುನಾವಣೆಯಲ್ಲಿ ಭಾಗವಹಿಸುವುದನ್ನು ಮುಂದುವರೆಸಿತ್ತು. 1932ರ ಹೊತ್ತಿಗೆ ಜರ್ಮನಿಯ ಆರ್ಥಿಕತೆ ಕುಸಿದಿತ್ತು. ರಾಷ್ಟ್ರದ ಬಹುಭಾಗ ಕಂಗೆಡಿಸಿದ್ದ ರಾಜಕೀಯ ಮತ್ತು ಸಾಮಾಜಿಕ ಉಗ್ರವಾದವನ್ನು ತಣಿಸಲು, ಆಡಳಿತ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. 1932ರ ಚುನಾವಣೆಯಲ್ಲಿ ಹಿಟ್ಲರ್ ನಾಜಿ ಪಕ್ಷವು 37.3ರಷ್ಟು ಮತಗಳಿಸಿ ಜರ್ಮನಿಯ ಸಂಸತ್ತಿನ ರಿಚ್ಸ್ಟ್ಯಾಗಿನಲ್ಲಿ(Reichstag) ಬಹುಮತವನ್ನು ನೀಡಿತ್ತು. 30 ಜನವರಿ 1933 ರಲ್ಲಿ ಹಿಟ್ಲರನ್ನು ಕುಲಪತಿಯಾಗಿ ನೇಮಿಸಲಾಯಿತು.
5. ಡಿಕ್ಟೇಟರ್ ಆದ ಹಿಟ್ಲರ್.
![]() |
Hitler- The Dictator |
27 ಫೆಬ್ರವರಿ 1933ರಲ್ಲಿ ರಿಚ್ಸ್ಟ್ಯಾಗನ್ನು ಸುಟ್ಟು ಹಾಕಿದ ಹಿಟ್ಲರ್, ಸುಡಲು ಬೆಂಕಿ ಕಾರಣ ಎಂದು ಹೇಳಿದ್ದರು. ಜರ್ಮನ್ ಪ್ರೆಸಿಡೆಂಟ್ ಆಗಿದ್ದ 'ಪೌಲ್ ವೊನ್ ಹಿಂಡರ್ ಬರ್ಗ್' ತನ್ನ ಆಫೀಸಿನಲ್ಲಿ 2 ಆಗಸ್ಟ್ 1934ರಲ್ಲಿ ಸತ್ತ ನಂತರ, ಹಿಟ್ಲರಿಗೆ ಸರ್ಕಾರದ ಮೇಲೆ ಡಿಕ್ಟೊರಿಯಲ್ ಕಂಟ್ರೋಲ್ ಅಧಿಕಾರ ಸಿಕ್ಕಿತು. ಅಧಿಕಾರ ಸಿಕ್ಕ ನಂತರ ಹಿಟ್ಲರ್ ವರ್ಸಲೀಸ್ ಅಗ್ರಿಮೆಂಟಿನಲ್ಲಿ ಇದ್ದ ಷರತ್ತನ್ನು ಮರೆತು, ಜರ್ಮನ್ ಮಿಲಿಟರಿ ಬಿಲ್ಟ್ ಮಾಡಿದ್ದ. 1938ರಲ್ಲಿ ಆಶ್ರಿಯದವರಿಗೆ ಹಿಟ್ಲರ್, ಜರ್ಮನ್ ಜನರಿಗೆ ಅವರ ಜಾಗ ಕೊಡಲು ಕೇಳಿದನು. ಇಷ್ಟಕ್ಕೆ ಅವನು ತೃಪ್ತಿಯಾಗಲಿಲ್ಲ, ಅವನು ಜರ್ಮನ್ ಎಕ್ಸ್ಟೆಂಡ್ ಮಾಡಲು ವೆಸ್ಟರ್ನ್ ದೇಶಗಳನ್ನು ಸ್ವಾಧೀನಪಡಿಸಿಕೊಂಡನು.
6. ಎರಡನೇ ವಿಶ್ವಯುದ್ಧದ ಪ್ರಾರಂಭ.
![]() |
War declared by Britain amd French |
9 ಏಪ್ರಿಲ್ 1940ರಂದು ಜರ್ಮನಿ ಡೆನ್ಮಾರ್ಕ್ ಮತ್ತು ನಾರ್ವೆಯ ಮೇಲೆ ಆಕ್ರಮಣ ಮಾಡಿತ್ತು. ನಾಜಿ ಪಾರ್ಟಿಯ ಯುದ್ಧ ತಂತ್ರವು, ಹಾಲೆಂಡ್ ಮತ್ತು ಬೆಲ್ಜಿಯಂ ಮೂಲಕ ದಾಟಿ ಫ್ರೆಂಚ್ ಮೇಲೆ ದಾಳಿ ಮಾಡಿತ್ತು. ನಂತರ ಹಿಟ್ಲರ್ ಉತ್ತರ ಆಫ್ರಿಕಾ, ಯುಗೊಸ್ಲಾವಿಯ ಮತ್ತು ಗ್ರೀಸ್ ಮೇಲೆ ಆಕ್ರಮಣ ಮಾಡಿದ ನಂತರ, ತನ್ನ ಅಧಿಕಾರದ ಹಸಿವು ತಿರದೇ, ಸೋವಿಯತ್ ಒಕ್ಕೂಟದ ಮೇಲೆ ದಾಳಿ ನಡೆಸಿ ಯುರೋಪಿನ ಮೇಲೆ ಪ್ರಾಬಲ್ಯ ಸಾಧಿಸಲು ನಿರ್ಧರಿಸಿದನು.
![]() |
Allied Force on Power |
7. ಯುದ್ಧದ ತಿರುವು.
7 ಡಿಸೆಂಬರ್ 1941ರಲ್ಲಿ ಜಪಾನ್ ಅಮೆರಿಕದ ಪಿಯರಲ್ ಹರ್ಬರ್ ಮೇಲೆ ದಾಳಿ ನಡೆಸಿದಾಗ, ಅಮೆರಿಕ ಎರಡನೇ ವಿಶ್ವದಲ್ಲಿ ಭಾಗವಹಿಸಿತ್ತು. ಮುಂದಿನ ಎರಡು ವರ್ಷಗಳ ನಂತರ ಬ್ರಿಟನ್, ಅಮೆರಿಕ, ರಷ್ಯಾ ಮತ್ತು ಫ್ರೆಂಚ್ ಒಗ್ಗಟ್ಟಾಗಿ ಜರ್ಮನಿ ಮಿಲಿಟರಿಯನ್ನು ಸೋಲಿಸಲು ಹೆಣಗಾಡಿದವು. ನಾಜಿ ಆಡಳಿತವು ಹೊರಗಿನಿಂದ ಮತ್ತು ಒಳಗಿನಿಂದ ಕುಸಿಯುತ್ತಿತ್ತು. 20 ಜುಲೈ 1944ರಂದು ಹಿಟ್ಲರ್ "ಜುಲೈ ಫ್ಲಾಟ್" ಎಂಬ ಹತ್ಯೆಯಿಂದ ಬದುಕುಳಿದಿದ್ದ.
8. ಅಂತಿಮ ದಿನಗಳು.
![]() |
Hitler Wife |
ಏಪ್ರಿಲ್ 1945ರ ಕ್ಷೀಣಿಸುತ್ತಿರುವ ದಿನಗಳಲ್ಲಿ ಸೋವಿಯತ್ ಟ್ರೂಪ್ ಬರ್ಲಿನ್ ತಲುಪುವಾಗ, ಹಿಟ್ಲರ್ ಮತ್ತು ಅವನ ಇತರೆ ಕಮಾಂಡರ್ಗಳು ಅಂಡರ್ಗ್ರೌಂಡ್ ಬಂಕರ್ನಲ್ಲಿ ಮರೆಮಾಚಿಕೊಂಡರು. 29 ಏಪ್ರಿಲ್ 1945ರಲ್ಲಿ ಹಿಟ್ಲರ್ ಇವಾ ಬ್ರೌನ್ ಎನ್ನುವವಳನ್ನು ಮದುವೆಯಾದ. ಅವರಿಬ್ಬರು ರಷ್ಯಾದ ಟ್ರೂಪ್ ಬರ್ಲಿನ್ ತಲುಪುವಷ್ಟರಲ್ಲಿ ಸೂಸೈಡ್ ಮಾಡಿಕೊಂಡರು. ಇನ್ನು ಉಳಿದ ಇತರೆ ನಾಜಿ ನಾಯಕರಲ್ಲಿ ಸ್ವಲ್ಪ ಜನ ಸತ್ತುಹೋದರು, ಇನ್ನೊಂದಿಷ್ಟು ಜನ ಓಡಿ ಹೋದರೂ. ಇದಾಗಿ 2 ದಿನದ ನಂತರ ಅಂದರೆ ಮೇ 2ರಂದು ಜರ್ಮನಿ ಸರೆಂಡರ್ ಆಯಿತು.
Don't forget to Comment Your Opinion on This Article
Share and Support Us
0 Comments