ಅಮೆರಿಕ ಅಧ್ಯಕ್ಷ ಎಂದ ಕೂಡಲೇ ಅದರ ಗತ್ತು ಬೇರೆ ರೀತಿಯಲ್ಲೇ ಇರುತ್ತದೆ. ವಿಶ್ವದ ಯಾವೊಬ್ಬ ಪ್ರಧಾನಿಗೂ ಇರದ ಸೆಕ್ಯುರಿಟಿ ಅವರಿಗಿದೆ. ಅಮೆರಿಕ ಅಧ್ಯಕ್ಷ ಎಲ್ಲಿಗೆ ಹೋದರೂ ಅವರು ಸ್ವಂತ ವಿಮಾನದಲ್ಲಿ ತೆರಳುತ್ತಾರೆ. ವಿಮಾನದ ಜೊತೆಗೆ ಅವರು ಪ್ರಯಾಣಿಸುವ ಕಾರು "ದಿ ಬೀಸ್ಟ್" ಅನ್ನು ತೆಗೆದುಕೊಂಡು ಹೋಗಬಹುದು. ಯಾವುದೇ ಉಗ್ರರ ದಾಳಿಗೆ ಜಗ್ಗದ, ಬಾಂಬ್ ದಾಳಿಗೆ ನಲುಗದ ಅಮೆರಿಕ ಅಧ್ಯಕ್ಷರ ಕಾರಿನ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಆಸಕ್ತಿದಾಯಕವಾಗಿದೆ.
ಅಮೆರಿಕ ಅಧ್ಯಕ್ಷರಿಗೆಂದೇ ಅಧಿಕೃತವಾಗಿ ವಿನ್ಯಾಸಗೊಳಿಸಿದ ಕಾರನ್ನು "ದಿ ಬೀಸ್ಟ್" ಎಂದು ಕರೆಯುತ್ತಾರೆ. ಈ ಕಾರಿನ ಈಗಿನ ಮಾಡೆಲ್ ಹೆಸರು "ಕ್ಯಾಡಿಲಾಕ್- ಒನ್". ಈ ಮಾಡೆಲ್ ಕಾರನ್ನು 24 ಸೆಪ್ಟೆಂಬರ್ 2018ರಲ್ಲಿ ಪ್ರಾರಂಭ ಮಾಡಲಾಯಿತು.
Watch Video
ಅಮೆರಿಕ ಅಧ್ಯಕ್ಷರಿಗೆಂದೇ ಅಧಿಕೃತವಾಗಿ ವಿನ್ಯಾಸಗೊಳಿಸಿದ ಕಾರನ್ನು "ದಿ ಬೀಸ್ಟ್" ಎಂದು ಕರೆಯುತ್ತಾರೆ. ಈ ಕಾರಿನ ಈಗಿನ ಮಾಡೆಲ್ ಹೆಸರು "ಕ್ಯಾಡಿಲಾಕ್- ಒನ್". ಈ ಮಾಡೆಲ್ ಕಾರನ್ನು 24 ಸೆಪ್ಟೆಂಬರ್ 2018ರಲ್ಲಿ ಪ್ರಾರಂಭ ಮಾಡಲಾಯಿತು.
1. ಕಾರಿನ ವಿಂಡೋಸ್.
ಕಾರಿನ ಕಿಟಕಿಗಳು ಐದು ಪದರಗಳ ಗಾಜು ಮತ್ತು ಪಾಲಿಕಾರ್ಬೋನೇಟಿನಿಂದ ಮಾಡಲ್ಪಟ್ಟಿದೆ. ಕಾರಿನ ವಿಂಡೋಸ್ ಗುಂಡುಗಳನ್ನು ತಡೆಯಬಹುದು. ಈ ಕಾರಿನಲ್ಲಿ ಚಾಲಕನ ವಿಂಡೋ ಮಾತ್ರ ತೆಗೆಯಬಹುದು. ಅದು ಕೂಡ ಕೇವಲ ಮೂರು ಇಂಚುಗಳವರೆಗೆ ಮಾತ್ರ.
2. ಕಾರಿನಲ್ಲಿರುವ ರಕ್ಷಣಾ ವ್ಯವಸ್ಥೆ.
![]() |
Beast is Bullet Proof |
"ದಿ ಬೀಸ್ಟ್" ಕಾರನ್ನು ಸಂಪೂರ್ಣ ರಕ್ಷಣೆಯ ಉದ್ದೇಶದಿಂದಲೇ ತಯಾರಿಸಲಾಗಿದೆ. ಕಾರಿನ ಒಳಗಿನಿಂದಲೇ ಸಿಡಿಸಬಹುದಾದ ಶಾಟ್ ಗನ್, ಫಿರಂಗಿ, ಟಿಯರ್ ಗ್ಯಾಸ್, ಬೆಂಕಿ ಹೊತ್ತಿಕೊಂಡಾಗ ಅಗ್ನಿಶಾಮಕ ವ್ಯವಸ್ಥೆ , ಹೊಗೆ ಪರದೆಗಳಿವೆ. ಜೊತೆಗೆ ಅಮೆರಿಕ ಅಧ್ಯಕ್ಷರ ಬಳಿಯಲ್ಲಿ ಸೆಟಲೈಟ್ ಫೋನ್ ಇದ್ದು, ಇದರಿಂದ ಸೀದಾ ಉಪಾಧ್ಯಕ್ಷರಿಗೆ ಕರೆ ಮಾಡಬಹುದಾಗಿದೆ. ಕೆಮಿಕಲ್ ದಾಳಿಯ ಸಂದರ್ಭದಲ್ಲಿ ಆಕ್ಸಿಜನ್ ವ್ಯವಸ್ಥೆ, ಅಶುದ್ಧ ಗಾಳಿಯನ್ನು ಹೊರಗೆ ಹಾಕಲು ಹೊಗೆ ಪರದೆ ವಿತರಕ ಮತ್ತು ತುರ್ತು ವರ್ಗಾವಣೆಯ ಸಂದರ್ಭದಲ್ಲಿ ಅಧ್ಯಕ್ಷರಿಗೆ ಹೊಂದುವ ರಕ್ತದ ಚೀಲಗಳನ್ನು ಕೂಡ ಇಡಲಾಗಿದೆ.
3. ಡ್ರೈವರ್ ಕ್ಯಾಬಿನ್.
4. ಕಾರಿನ ಬಾಡಿ ಮತ್ತು ಟಯರ್ಸ್.
ದಿ ಬೀಸ್ಟ್ ಕಾರು ಅತ್ಯಂತ ಬಲಿಷ್ಠವಾದ ಉಕ್ಕಿನಿಂದ ಮಾಡಲ್ಪಟ್ಟಿದೆ. ಸ್ಟೀಲ್, ಟೈಟಾನಿಯಂ, ಅಲ್ಯುಮಿನಿಯಂ ಮತ್ತು ಸೆರಾಮಿಕ್ಸ್ ನಂಥಹ ವಸ್ತುಗಳಿಂದ ತಯಾರಿಸಿದ ಐದು ಇಂಚು ದಪ್ಪದ ಮಿಲಿಟರಿ ದರ್ಜೆಯ ರಕ್ಷಾಕವಚ ಈ ಕಾರಿಗಿದೆ.
ವಾಹನದ ಮುಂಭಾಗದಲ್ಲಿ ಅಶ್ರುವಾಯು, ಗ್ರೆನೇಡ್ ಲಾಂಚರ್ ಮತ್ತು ರಾತ್ರಿ ಹೊತ್ತು ಸಂಚರಿಸಬಹುದಾದ ಕ್ಯಾಮೆರಾಗಳಿವೆ. ಕಾರಿನ ಕೆಳಗೆ ಐರನ್ ಶೀಟಿನಿಂದ ಬಲಪಡಿಸಲಾಗಿದೆ. ಇದು ಬಾಂಬ್ ಸ್ಫೋಟಕಗಳಿಂದ ಕಾರನ್ನು ರಕ್ಷಿಸುತ್ತದೆ.
ಇನ್ನು ಈ ಕಾರಿನ ಟಯರ್ ಗಳು ತುಂಬಾ ಸ್ಟ್ರಾಂಗ್ ಇದ್ದು, ಪಂಕ್ಚರ್ ನಿರೋಧಕವಾಗಿದೆ. ಒಂದು ವೇಳೆ ಟೈರ್ ಸ್ಫೋಟಗೊಂಡರು ವೀಲಿನಿಂದಲೇ ತೆರಳಿ ತಪ್ಪಿಸಿಕೊಳ್ಳುವ ಸಾಮರ್ಥ್ಯ ಈ ಟಯರ್ಗಳಿಗೆ ನೀಡಲಾಗಿದೆ.

5. ಕಾರಿನ ತೂಕ.
6. ಕಾರಿನ ಹಿಂದಿನ ಸೀಟುಗಳು.
![]() |
Beast Back Seats |
ಈ ಕಾರಿನಲ್ಲಿ ಯುಎಸ್ ಅಧ್ಯಕ್ಷರನ್ನು ಹೊರತುಪಡಿಸಿ ನಾಲ್ಕು ಜನರು ಕೂರಬಹುದು. ಕಾರಿನ ಒಳಗಡೆ ಗಾಜಿನಿಂದ ವಿಭಜಿಸಲಾಗಿದೆ. ಅದನ್ನು ಅಧ್ಯಕ್ಷರು ಮಾತ್ರ ಬಟನ್ ಒತ್ತಿ ತೆರೆಯಬಹುದು. ತುರ್ತು ಸಂದರ್ಭದಲ್ಲಿ ಪ್ಯಾನಿಕ್ ಬಟನ್ ಮತ್ತು ಆಕ್ಸಿಜನ್ ಪೂರೈಕೆ ಮಾಡುವ ಬಟನ್ ಇದೆ.
7. ಕಾರಿನ ಡೋರ್ ಮತ್ತು ಇಂಧನ ಟ್ಯಾಂಕ್.
![]() |
Beast Door |
ದಿ ಬೀಸ್ಟ್ ಕಾರಿನ ಡೋರುಗಳು 8 ಇಂಚು ದಪ್ಪವಿರುವ ರಕ್ಷಣಾ ಕವಚವಾಗಿದೆ. ಇದು ಬೋಯಿಂಗ್ 757 ವಿಮಾನದ ಕ್ಯಾಬಿನ್ ಡೋರ್ ತೂಕಕ್ಕೆ ಸಮವಾಗಿದೆ. ಕಾರಿನ ಬಾಗಿಲು ಪೂರ್ಣ ಪ್ರಮಾಣದಲ್ಲಿ ಲಾಕ್ ಆಗಿದ್ದರೆ ಕೆಮಿಕಲ್ ದಾಳಿಯಿಂದ ರಕ್ಷಿಸುತ್ತವೆ.
Don't forget to Comment Your Opinion on This Article
Share and Support Us
0 Comments